ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾ.ಕಸ್ತೂರಿ ರಂಗನ್‌ ವರದಿ ತಿರಸ್ಕರಿಸಿದ ಕರ್ನಾಟಕ ಸರ್ಕಾರ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 21: ಪಶ್ಚಿಮಘಟ್ಟವನ್ನು ಜೀವಸೂಕ್ಷ್ಮ ಪ್ರದೇಶವೆಂದು ಘೋಷಣೆ ಮಾಡಿದಲ್ಲಿ ಅಲ್ಲಿರುವ ಲಕ್ಷಾಂತರ ಜನರಿಗೆ ಸಮಸ್ಯೆ ಉಂಟಾಗುತ್ತಿದೆ ಅವರನ್ನು ಒಕ್ಕಲೆಬ್ಬಿಸಬೇಕಾಗುತ್ತದೆ ಎನ್ನುವ ಕಾರಣದೊಂದಿಗೆ ಡಾ. ಕಸ್ತೂರಿ ರಂಗನ್‌ ವರದಿಯನ್ನು ರಾಜ್ಯ ಸರ್ಕಾರ ಮತ್ತೊಮ್ಮೆ ತಿರಸ್ಕರಿಸಿದೆ.

ಈ ಕುರಿತು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪತ್ರದ ಮೂಲಕ ಸ್ಪಷ್ಟೀಕರಣ ನೀಡಿದೆ. ಪಶ್ಚಿಮ ಘಟ್ಟದ ಕೆಲ ಗ್ರಾಮಗಳನ್ನು ಜೀವಸೂಕ್ಷ್ಮ ಪ್ರದೇಶಗಳೆಂದು ಮಾಡಿದರೆ ಅಲ್ಲಿನ ಜನರಿಗೆ ಸಮಸ್ಯೆ ಉಂಟಾಗಲಿದೆ, ಸಾಮಾಜಿಕ, ಆರ್ಥಿಕ ಅಸಮತೋಲನವಾಗಲಿದೆ ಹಾಗಾಗಿ ಸೂಕ್ಷ್ಮ ಪರಿಸರ ಹಾಗೂ ಜೀವವೈವಿಧ್ಯ ತಾಣವಾದ ಪಶ್ಚಿಮಘಟ್ಟ ಸಂರಕ್ಷಣೆ ಕುರಿತು ಡಾ. ಕಸ್ತೂರಿ ರಂಗನ್‌ ಸಮಿತಿ ನೀಡಿದ ಶಿಫಾರಸ್ಸುಗಳಿಗೆ ಸಮ್ಮತಿ ಇಲ್ಲ ಎಂದು ಕರ್ನಾಟಕ ಸರ್ಕಾರ ಮತ್ತೊಮ್ಮೆ ಕೇಂದ್ರಕ್ಕೆ ಸ್ಪಷ್ಟಪಡಿಸಿದೆ.

ಡಾ.ಕಸ್ತೂರಿ ರಂಗನ್ ವರದಿಗೆ ಕೊಡವರ ವಿರೋಧ ಡಾ.ಕಸ್ತೂರಿ ರಂಗನ್ ವರದಿಗೆ ಕೊಡವರ ವಿರೋಧ

ಈ ಹಿಂದೆಯೇ ಕಾಂಗ್ರೆಸ್‌ ಸರ್ಕಾರವೂ ಕೂಡ ಈ ವರದಿಯನ್ನು ತಿರಸ್ಕರಿಸಿತ್ತು. ಸಮಿತಿಯ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಮೂರನೇ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಆಗಸ್ಟ್ 25 ಕೊನೆ ದಿನವಾಗಿದೆ ಈ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಪತ್ರ ರವಾನಿಸಿದ್ದು, ತಮ್ಮ ಅಭಿಪ್ರಾಯ ತಿಳಿಸಿದೆ.

ಕಸ್ತೂರಿ ರಂಗನ್ ವರದಿ: ಕೇಂದ್ರದ ಅಧಿಸೂಚನೆಗೆ ಕರ್ನಾಟಕದ ವಿರೋಧ ಕಸ್ತೂರಿ ರಂಗನ್ ವರದಿ: ಕೇಂದ್ರದ ಅಧಿಸೂಚನೆಗೆ ಕರ್ನಾಟಕದ ವಿರೋಧ

ಈ ಕುರಿತು ರಾಜ್ಯ ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಸಂದೀಪ್‌ ಆಗಸ್ಟ್ 16ರಂದು ಕೇಂದ್ರ ಪರಿಸರ , ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಕಾರ್ಯದರ್ಶಿ ಸಿಕೆ ಮಿಶ್ರಾ ಅವರಿಗೆ ಪತ್ರ ಬರೆದಿದ್ದಾರೆ. ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಏನಿದು ಕಸ್ತೂರಿ ರಂಗನ್‌ ವರದಿ?

ಏನಿದು ಕಸ್ತೂರಿ ರಂಗನ್‌ ವರದಿ?

ಸುಪ್ರೀಂಕೋರ್ಟ್‌ ಪಶ್ಚಿಮ ಘಟ್ಟದ ರಕ್ಷಣೆಗೆಂದು ಕೇಂದ್ರ ಸರ್ಕಾರಕ್ಕೆ ಒತ್ತಡ ತಂದ ಹಿನ್ನೆಲೆಯಲ್ಲಿ 2010ರಲ್ಲಿ ಮಾಧವನ್‌ ಗಾಡ್ಗೀಳ್‌ ಸಮಿತಿ ರಚನೆ ಮಾಡಿತು. ಈ ಸಮಿತಿ ನೀಡಿದ ವರದಿ ಕೇಂದ್ರ ಸರ್ಕಾರಕ್ಕೆ ಇಷ್ಟವಾಗದ ಹಿನ್ನೆಲೆಯಲ್ಲಿ ಅಂದಿನ ಮಂತ್ರಿ ನಟರಾಜ್‌ ಬಾಹ್ಯಾಕಾಶ ವಿಜ್ಞಾನಿ ಡಾ. ಕಸ್ತೂರಿ ರಂಗನ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿತು. ಈ ಸಮಿತಿ 173 ಪುಟಗಳ ವರದಿ ಹಾಗೂ 407 ಪುಟಗಳ ವಿಸ್ತೃತ ವರದಿ ಒಟ್ಟು 580ಪುಟಗಳ ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಿತ್ತು.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಜೀವಿ ಪರಿಸರಾತ್ಮಕ ಸೂಕ್ಷ್ಮ ಪ್ರದೇಶವೆಂದು ಗುರುತಿಸಲು ವೈಕ್ಞಾನಿಕ, ವಸ್ತುನಿಷ್ಠ, ಕಾರ್ಯಸಾಧ್ಯವಾದ ಮಾರ್ಗ ವಿಕಾಸಪಡಿಸಲು ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸಹಾಯ ಪಡೆದು ಜೈವಿಕ ಶ್ರೀಮಂತಿಕೆ, ಛಿದ್ರೀಕರಣ, ಜನಸಾಂದ್ರತೆಮ, ಸಂರಕ್ಷಿತ ಪ್ರದೇಶ ದತ್ತಾಂಶವನ್ನು ವರದಿಯಲ್ಲಿ ಉಲ್ಲೇಖಿಸಿತು.

 ಈ ವರದಿ ಅನುಷ್ಠಾನವಾದರೆ ಸಮಸ್ಯೆಯೇನು?

ಈ ವರದಿ ಅನುಷ್ಠಾನವಾದರೆ ಸಮಸ್ಯೆಯೇನು?

ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಹೊಂದಿಕೊಂಡಂತೆ ವರದಿಯ ಆಧಾರದಲ್ಲಿ ಅನೇಕ ನಿಬಂಧನೆಗಳು ಕಂಡುಬರುತ್ತದೆ. ಇಲ್ಲಿ ಯಾವುದೇ ದೂರವಾಣಿ ಸಂಪರ್ಕ ಇಲ್ಲ, ಜೊತೆಗೆ ಮೊಬೈಲ್‌ ಸಿಗ್ನಲ್ ಇರುವುದಿಲ್ಲ, ಕುಡಿಯುವ ನೀರಿನ ವ್ಯವಸ್ಥೆ, ಹಕ್ಕುಪತ್ರ ಸಿಗುವುದಿಲ್ಲ, ಸರ್ಕಾರದ ಮನೆ, ಪರಿಹಾರ, ಧನಸಹಾಯ ಸಿಗುವುದಿಲ್ಲ, ಡಾಂಬರು ರಸ್ತೆ ಮಾಡುವಂತಿಲ್ಲ, ಕೃಷಿ ಚಟುವಟಿಕೆಗಳಿಗೆ ಕೀಟನಾಶಕಗಳನ್ನು ಬಳಸುವಂತಿಲ್ಲ ಮೊದಲಾದ ನಿಬಂಧನೆಗಳು ಬರಲಿವೆ.

ಕೇರಳ, ಕರ್ನಾಟಕದ ಪ್ರವಾಹದ ನೈಜ ಕಾರಣ ಬಹಿರಂಗಕೇರಳ, ಕರ್ನಾಟಕದ ಪ್ರವಾಹದ ನೈಜ ಕಾರಣ ಬಹಿರಂಗ

ಕಸ್ತೂರಿ ರಂಗನ್‌ ವರದಿ ಮುಖ್ಯಾಂಶಗಳು

ಕಸ್ತೂರಿ ರಂಗನ್‌ ವರದಿ ಮುಖ್ಯಾಂಶಗಳು

ಪಶ್ಚಿಮ ಘಟ್ಟ ವ್ಯಾಪ್ತಿಯ ಶೇ.63 ಭಾಗದಲ್ಲಿ ಈಗಾಗಲೇ ಜನ ವಸತಿ ಹೆಚ್ಚಾಗಿದ್ದು, ನೈಸರ್ಗಿಕ ಪರಿಸರ ಹಾಳಾಗಿರುವುದರಿಂದ ಇಲ್ಲಿ ಯಾವುದೇ ಸಂರಕ್ಷಣಾ ಕಾರ್ಯದ ಅಗತ್ಯವಿಲ್ಲ. ಉಳಿದ ಶೇ 37 ಭಾಗದಲ್ಲಿ ಮಾತ್ರ ಸಂರಕ್ಷಣಾ ಕಾರ್ಯ ಕೈಗೊಳ್ಳಬಹುದು, 4156 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಗ್ರಾಮಗಳೆಂದು ವರದಿ ಗುರುತಿಸಿದೆ. ಗ್ರಾಮಗಳಲ್ಲಿ ಮರಳು ತೆಗೆದಯುವುದು, ಕಲ್ಲು ಕ್ವಾರಿ ನಡೆಸುವುದು, ಯಾವ ಬಗೆಯ ಗಣಿಗಾರಿಕೆಗೂ ಅವಕಾಶವಿರುವುದಿಲ್ಲ ಉಷ್ಣ ವಿದ್ಯುತ್‌ ಸ್ಥಾವರ ಸ್ಥಾಪಿಸುವಂತಿಲ್ಲ, ಅತಿ ಹೆಚ್ಚು ಪರಿಸರ ಮಾಲಿನ್ಯ ಉಂಟು ಮಾಡುವ 45 ರೆಡ್‌ ಕೆಟಗರಿ ಸೇರಿದ ಕೈಗಾರಿಕೆಗಳನ್ನು ಸ್ಥಾಪಿಸುವಂತಿಲ್ಲ

ಕಸ್ತೂರಿ ರಂಗನ್ ವರದಿ: 1576 ಗ್ರಾಮಗಳು ಸೂಕ್ಷ್ಮ ಪ್ರದೇಶ

ಕಸ್ತೂರಿ ರಂಗನ್ ವರದಿ: 1576 ಗ್ರಾಮಗಳು ಸೂಕ್ಷ್ಮ ಪ್ರದೇಶ

ಉಡುಪಿ ಜಿಲ್ಲೆಯ ಕಾರ್ಕಳದ 13, ಕುಂದಾಪುರದ 24 ಗ್ರಾಮಗಳು ಸೇರಿ ಕರ್ನಾಟಕದಲ್ಲಿ ಒಟ್ಟು 1,576 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ಕುಂದಾಪುರ ಹಾಗೂ ಕಾರ್ಕಳ ತಾಲೂಕಿನಲ್ಲಿ ನಕ್ಸಲ್‌ ಪೀಡಿತ ಪ್ರದೇಶಗಳ ವ್ಯಾಪ್ತಿಗೆ ಬರುತ್ತದೆ. ಕುಂದಾಪುರ ತಾಲೂಕಿನ ವಂಡ್ಸೆ, ಚಿತ್ತೂರು, ಆಲೂರು, ಕೊಲ್ಲೂರು, ಬೈಂದೂರು, ಗೋಳಿಹೊಳೆ ಕೆರಾಡಿ, ಹಳ್ಳಿಹೊಳೆ, ಎಡಮೊಗೆ, ಬೆಳ್ಳಾಲ, ಹೊಸಂಗಡಿ, ಮಚ್ಚಟ್ಟು, ಅಮಸೆಬೈಲು, ಶೇಡಿಮನೆ, ಮಡಾಮಕ್ಕಿ ಬೆಳ್ವೆ

English summary
State government has rejected proposal of declaring eco-sensitive zone in western ghats recommend by Dr. Kasturi Rangan report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X