ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಆರ್ಥಿಕ ಸಂಕಷ್ಟ ಜನರಿಗೆ ಮಾತ್ರ, ಸಚಿವರ ಹೊಸ ಕಾರು ಖರೀದಿಗೆ ಸರ್ಕಾರದ ಕೋಟಿ ಕೋಟಿ ಹಣ!

|
Google Oneindia Kannada News

ಬೆಂಗಳೂರು, ಫೆ. 24: ಕೊರೊನಾದಿಂದ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಹೀಗಾಗಿ ಅನೇಕ ಮೂಲಭೂತ ಅಭಿವೃದ್ಧಿ ಕಾರ್ಯಗಳಿಗೂ ಕೂಡ ಅನುದಾನವನ್ನು ಕಡಿತಗೊಳಿಸಲಾಗಿದೆ. ಆದರೆ ನಮ್ಮ ಜನಪ್ರತಿನಿಧಿಗಳ ದುಂದುವೆಚ್ಚಕ್ಕೆ ಮಾತ್ರ ಕಡಿವಾಣ ಬಿದ್ದಿಲ್ಲ. ಕೊರೊನಾ ವೈರಸ್ ಆರ್ಥಿಕ ಸಂಕಷ್ಟದ ಮಧ್ಯೆ ರಾಜ್ಯದ ಸಚಿವರು ಹಾಗೂ ಸಂಸದರು ಐಷಾರಾಮಿ ಹೊಸ ಕಾರು ಕೊಳ್ಳಲು ಖರೀದಿಯ ಮೊತ್ತವನ್ನು ಹೆಚ್ಚಳ ಮಾಡಿ ಸರ್ಕಾರ ಆದೇಶ ಮಾಡಿದೆ. ಆ ಮೂಲಕ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನರಳುತ್ತಿದ್ದರೂ, ಜನ ಸಾಮಾನ್ಯರ ಕಷ್ಟ ನಮಗೇನು ಸಂಬಂಧವೇ ಇಲ್ಲ ಎಂಬಂತೆ ಸರ್ಕಾರ ಹೊಸ ಆದೇಶ ಮಾಡಿದೆ.

ಸಚಿವರು ಹಾಗೂ ರಾಜ್ಯದ ಎಲ್ಲ ಸಂಸದರು ಹೊಸ ಕಾರು ಖರೀದಿ ಮಾಡಲು 23 ಲಕ್ಷ ರೂಪಾಯಿ ನೀಡಲು ಸರ್ಕಾರ ಸಮ್ಮತಿಸಿದೆ. ಹೀಗಾಗಿ ರಾಜ್ಯದ ಎಲ್ಲಾ ಸಚಿವರು, ಸಂಸದರು ಕಾರು ಖರೀದಿ ಮಾಡಲು ಇನ್ಮುಂದೆ ಸರ್ಕಾರದಿಂದ 23 ಲಕ್ಷ ರೂ. ಗಳನ್ನು ಪಡೆಯಲು ಅವಕಾಶವಿದೆ. ಈ ಹಿಂದೆ ಕಾರು ಖರೀದಿಗೆ ನೀಡುತ್ತಿದ್ದ ಮೊತ್ತವನ್ನು ಹೆಚ್ಚಳ ಮಾಡಲು ಸಚಿವರು ಹಾಗೂ ಸಂಸದರಿಂದ ಒತ್ತಡ ಬಂದಿತ್ತು. ಅವರ ಒತ್ತಡಕ್ಕೆ ಮಣಿದ ಸರ್ಕಾರ ಹೊಸ ಕಾರು ಖರೀದಿಗೆ 23 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲು ಒಪ್ಪಿಕೊಂಡಿದೆ. ಈ ಮೊದಲು ಹೊಸ ಕಾರು ಖರೀದಿಗೆ 22 ಲಕ್ಷ ರೂ. ಗಳನ್ನು ರಾಜ್ಯ ಸರ್ಕಾರ ನೀಡುತ್ತಿತ್ತು.

State Govt Increased Purchase Price Of New Car To Rs 23 Lakh For Ministers And MPs

ಇದೀಗ ರಾಜ್ಯದ 33 ಸಚಿವರು (ಸಿಎಂ ಹೊರತು ಪಡಿಸಿ) ಹಾಗೂ 28 ಸಂಸದರು ಹೊಸ ಐಷಾರಾಮಿ ಕಾರುಗಳನ್ನು ಕೊಳ್ಳಬಹುದಾಗಿದೆ. ಅದಕ್ಕೆ ಸರ್ಕಾರ ತಲಾ 23 ಲಕ್ಷ ರೂಪಾತಿಗಳನ್ನು ಒದಗಿಸಲಿದೆ. ಒಮ್ಮೆಲೆ ಎಲ್ಲ ಸಚಿವರು ಹಾಗೂ ಸಂಸದರು ಐಶಾರಾಮಿ ಕಾರುಗಳನ್ನು ಖರೀದಿ ಮಾಡಿದಲ್ಲಿ ಸುಮಾರು 14 ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು ವ್ಯಯಿಸಲಬೇಕಾಗುತ್ತದೆ.

State Govt Increased Purchase Price Of New Car To Rs 23 Lakh For Ministers And MPs

Recommended Video

ಗುಜರಾತ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು-ಕೇಂದ್ರ ಗೃಹಸಚಿವ ಅಮಿತ್ ಶಾ ಸಂತಸ | Oneindia Kannada

ಮೊದಲೇ ಕೊರೊನಾ ವೈರಸ್ ಸಂಕಷ್ಟದಿಂದ ಮಕ್ಕಳ ಶಾಲಾ ಶುಲ್ಕವನ್ನು ಕಟ್ಟಲು ಜನರು ಪರದಾಡುತ್ತಿದ್ದಾರೆ. ಆದರೆ ನಮ್ಮ ಜನಪ್ರತಿನಿಧಿಗಳು ಮಾತ್ರ ತಮ್ಮ ಐಷಾರಾಮಿ ಬದುಕಿನಿಂದ ಹೊರಗೆ ಬರಲು ಒಪ್ಪಿಲ್ಲ. ಒಂದು ವರ್ಷದ ಮಟ್ಟಿಗೆ ಕಾರು ಖರೀದಿ ಮುಂದಕ್ಕೆ ಹಾಕಿದ್ದರೆ ಏನೂ ಆಗುತ್ತಿರಲಿಲ್ಲ ಎಂಬುದು ಜನರ ಹೇಳಿಕೆಯಾಗಿದೆ. ಆದರೆ ಅದನ್ನು ಕೇಳಿಸಕೊಳ್ಳುವವರು ಯಾರು?

English summary
Amidst the financial woes of Coronavirus state governmnet increased the purchase price of a new car to Rs 23 lakh for ministers and MPs. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X