ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಜನತೆಗೆ ಶುಭ ಸುದ್ದಿ: ಇನ್ಮುಂದೆ ದಿನದ 24 ಗಂಟೆ ಈ ಸೇವೆ ಲಭ್ಯ!

|
Google Oneindia Kannada News

ಬೆಂಗಳೂರು, ಜ. 04: ಕಾರ್ಮಿಕ ಕಾಯ್ದೆ ತಿದ್ದುಪಡಿ ವಿರೋಧಿಸಿ ದೇಶಾದ್ಯಂತ ವಿರೋಧ ವ್ಯಕ್ತವಾಗಿರುವ ಸಂದರ್ಭದಲ್ಲಿಯೇ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಆದೇಶ ಹೊರಡಿಸಿದೆ. 10ಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ವಾಣಿಜ್ಯ ಮಳಿಗೆಗಳು ಹಾಗೂ ಅಂಗಡಿಗಳು ವಾರದ ಏಳೂ ದಿನ, ದಿನದ 24 ಗಂಟೆಯೂ ತೆರದಿರಲು ಅನುಕೂಲವಾಗುವಂತೆ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಕಡೆ ಈ ಆದೇಶ ಅನ್ವವಾಗುತ್ತದೆ. ಆದರೆ ಅದಕ್ಕೆ ಹಲವು ಕಟ್ಟು ನಿಟ್ಟಿನ ನಿಯಮಗಳನ್ನು ರೂಪಿಸಿದೆ.

ಈ ಕುರಿತು ಕಾರ್ಮಿಕ ಇಲಾಖೆ ಮೂಲಕ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಮುಂದಿನ ಮೂರು ವರ್ಷ ಈ ಅಧಿಸೂಚನೆ ಅಸ್ತಿತ್ವದಲ್ಲಿರುತ್ತದೆ. ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳು ತಮ್ಮ ನೌಕರರಿಗೆ ಕಡ್ಡಾಯವಾಗಿ ವಾರದಲ್ಲಿ ಒಂದು ದಿನ ರಜೆ ನೀಡಬೇಕು. ಅದನ್ನು ಅಂಗಡಿಯಲ್ಲಿ ಎಲ್ಲರಿಗೂ ಕಾಣುವಂತೆ ಪ್ರದರ್ಶಿಸಬೇಕು.

ರಜೆ ಹಾಗು ವಾರದ ರಜೆಯಲ್ಲಿರುವ ಉದ್ಯೋಗಿಯ ಮಾಹಿತಿಯನ್ನು ಎಲ್ಲರಿಗೂ ಕಾಣಿಸುವಂತೆ ಪ್ರದರ್ಶನ ಮಾಡಬೇಕು. ಕಾರ್ಮಿಕರ ಸಂಬಳ ಮತ್ತು ಹೆಚ್ಚುವರಿ ಅವಧಿಯ ಭತ್ಯೆೆಯನ್ನು 1963ರ ಸಂಬಳ ಮತ್ತು ಭತ್ಯೆೆ ಕಾಯ್ದೆ ಅನ್ವಯ ಕೊಡಬೇಕು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಕೆಲಸದ ಅವಧಿ

ಕೆಲಸದ ಅವಧಿ

24×7 ಅವಧಿಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟರೂ ಹಲವು ಕಟ್ಟುನಿಟ್ಟಿನ ನಿಯಮಾವಳಿಯನ್ನು ಕಾರ್ಮಿಕ ಇಲಾಖೆ ನಿಗದಿ ಪಡಿಸಿದೆ. ಪ್ರತಿಯೊಬ್ಬ ಕಾರ್ಮಿಕರಿಂದ 8 ಗಂಟೆಗೂ ಅಧಿಕ ಅವಧಿಗೆ ಕೆಲಸ ಮಾಡಿಸಿಕೊಳ್ಳುವಂತಿಲ್ಲ. ಹೆಚ್ಚುವರಿ ಅವಧಿ (Over Duty) ಕೆಲಸ ಮಾಡಿದರೂ, ಅದು ದಿನಕ್ಕೆ ಗರಿಷ್ಠ 2 ಗಂಟೆ ಹಾಗೂ ಮೂರು ತಿಂಗಳಲ್ಲಿ 50 ಗಂಟೆ ಹೆಚ್ಚುವರಿ ಅವಧಿ (Over Duty) ಮೀರುವಂತಿಲ್ಲ.

ಕಾರ್ಮಿಕರನ್ನು ರಜೆಯ ದಿನ ಅಥವಾ ಕೆಲಸದ ಅವಧಿ ಮುಗಿದ ಮೇಲೆ ನಿರ್ದಿಷ್ಟ ಸೂಚನೆಲ್ಲದೇ ಹೆಚ್ಚುವರಿ ಅವಧಿ ಕೆಲಸ ಮಾಡಿಸುವುದು ಕಂಡು ಬಂದರೆ ಅಂತಹ ಅಂಗಡಿ ಅಥವಾ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಲಾಗಿದೆ.

ಮಹಿಳಾ ಕೆಲಸಗಾರರು

ಮಹಿಳಾ ಕೆಲಸಗಾರರು

ಸಾಮಾನ್ಯ ಸಂದರ್ಭದಲ್ಲಿ ರಾತ್ರಿ 8 ಗಂಟೆ ನಂತರ ಮಹಿಳಾ ಕಾರ್ಮಿಕರನ್ನು ಕೆಲಸ ಮಾಡಿಸಿಕೊಳ್ಳುವಂತಿಲ್ಲ. ಒಂದು ವೇಳೆ ಮಹಿಳಾ ಕಾರ್ಮಿಕರು ಲಿಖಿತ ಒಪ್ಪಿಗೆ ನೀಡಿದರೆ ಮಾತ್ರ ರಾತ್ರಿ 8 ರಿಂದ ಬೆಳಗಿನ 6 ಗಂಟೆಯ ತನಕ ಅವರ ಗೌರವಕ್ಕೆೆ ಧಕ್ಕೆೆ ಬಾರದಂತೆ, ರಕ್ಷಣೆ ನೀಡಿ, ಕೆಲಸ ಮಾಡಲು ಅವಕಾಶವಿದೆ.

ಎಲ್ಲ ಮಹಿಳಾ ಸಿಬ್ಬಂದಿಗೆ ಶಿಫ್ಟ್ ಆಧಾರದಲ್ಲಿಯೇ ಸಾರಿಗೆ ವ್ಯವಸ್ಥೆೆ ಕಲ್ಪಿಸಬೇಕು. ಈ ಬಗ್ಗೆೆ ಅಂಗಡಿಯ ಬೋರ್ಡ್‌ನಲ್ಲಿ ಮಾಹಿತಿ ಪ್ರದರ್ಶನ ಮಾಡಬೇಕು. ಅಂಗಡಿ ಮಳಿಗೆಗಳಲ್ಲಿ ಕಾರ್ಮಿಕರಿಗೆ ಅಗತ್ಯ ಶೌಚಾಲಯ, ವಿಶ್ರಾಂತಿ ಕೊಠಡಿ, ಸೇಫ್ಟಿ ಲಾಕರ್ ಒದಗಿಸಬೇಕು.

ಲೈಂಗಿಕ ದೌರ್ಜನ್ಯ ಆಂತರಿಕ ಸಮಿತಿ

ಲೈಂಗಿಕ ದೌರ್ಜನ್ಯ ಆಂತರಿಕ ಸಮಿತಿ

2013ರ ಲೈಂಕಿಕ ದೌರ್ಜನ್ಯ ಜಾರಿಗೆ ಬಂದಿರುವ 'ಪಾಶ್' ಕಾಯ್ದೆ ಎಂದೇ ಕರೆಯಲ್ಪಡುವ ಕೆಲಸ ಮಾಡುವ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ (ತಡೆ, ನಿಷೇಧ ಮತ್ತು ಪರಿಹಾರ) ಕಾಯ್ದೆ ಅನ್ವಯ ಮಹಿಳಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಅಂಗಡಿ ಮಳಿಗೆಗಳು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವವರ ವಿರುದ್ದ ದೂರು ಸಲ್ಲಿಸಲು ಆಂತರಿಕ ಸಮಿತಿ ರಚನೆ ಮಾಡಬೇಕು. ಆ ಸಮಿತಿ ಸಕ್ರೀಯವಾಗಿರುವಂತೆ ನೋಡಿಕೊಳ್ಳಬೇಕು.

Recommended Video

ರೋಹಿತ್ ಶರ್ಮಾ ವಿರುದ್ಧ ನಮ್ಮ ಯೋಜನೆ ಸಿದ್ಧವಾಗಿದೆ ಎಂದ ಆಸಿಸ್ ಸ್ಪಿನ್ನರ್ | Oneindia Kannada
ಕಠಿಣ ಕ್ರಮದ ಕಾನೂನು ಕ್ರಮ

ಕಠಿಣ ಕ್ರಮದ ಕಾನೂನು ಕ್ರಮ

ದಿನದ 24 ಗಂಟೆಯೂ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದರೂ ಕೂಡ ಈ ಎಲ್ಲ ನಿಯಮಗಳ ಪಾಲನೆ ಮಾಡುವುದು ಅಗತ್ಯವಾಗಿದೆ. ಹೀಗಾಗಿ ಈ ನಿಯಮಗಳ ಉಲ್ಲಂಘನೆ ಮಾಡುವ ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳ ವಿರುದ್ದ 1961 ವಾಣಿಜ್ಯ ಅಂಗಡಿಗಳು ಮತ್ತು ಮಳಿಗೆಗಳ ಕಾಯ್ದೆ ಪ್ರಕಾರ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

English summary
The state government has issued orders to allow the shops and shopping complex with more than 10 workers to operate seven days a week, 24 hours a day. This order is applicable in all parts of the state including Bengaluru. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X