ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೀಸಲಾತಿ ಬೇಡಿಕೆ ಪರಿಶೀಲನೆಗೆ ತ್ರಿಸದಸ್ಯ ಉನ್ನತ ಸಮಿತಿ ರಚನೆ

|
Google Oneindia Kannada News

ಬೆಂಗಳೂರು, ಮಾರ್ಚ್ 11: ಮೀಸಲಾತಿಗಾಗಿ ಅನೇಕ ಸಮುದಾಯಗಳು ಬೇಡಿಕೆ ಇರಿಸಿರುವ ಹಿನ್ನೆಲೆಯಲ್ಲಿ ಅದರ ಬಗ್ಗೆ ಪರಿಶೀಲನೆ ನಡೆಸಿ, ಮೀಸಲಾತಿ ಹೆಚ್ಚಳ, ಒಳ ಮೀಸಲಾತಿ, ಹೊಸ ಮೀಸಲಾತಿಗಳ ಬೇಡಿಕೆಗಳನ್ನು ಪರಿಗಣಿಸುವ ಸಂಬಂಧ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸುಭಾಷ್ ಅಡಿ ನೇತೃತ್ವದಲ್ಲಿ ತ್ರಿಸದಸ್ಯರ ಉನ್ನತ ಮಟ್ಟದ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.

ವಿವಿಧ ಸಮುದಾಯಗಳು ಮುಂದಿರಿಸಿರುವ ಮೀಸಲಾತಿ ಬೇಡಿಕೆ ಸಂಬಂಧ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿರುವಂತೆ ಸುಭಾಷ್ ಅಡಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಮತ್ತು ಮಹಾರಾಣಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಬಿ.ವಿ. ವಸಂತ್ ಕುಮಾರ್ ಈ ಸಮಿತಿಯ ಸದಸ್ಯರಾಗಿರಲಿದ್ದಾರೆ.

ಪಂಚಮಸಾಲಿ ಮೀಸಲಾತಿ ಪ್ರತಿಭಟನಾ ಸ್ಥಳದ ಕಡೆ ತಲೆಯೂ ಹಾಕದ ಯತ್ನಾಳ್: ಇದರ ಹಿಂದಿದೆ 'ಆ' ಎಚ್ಚರಿಕೆ?ಪಂಚಮಸಾಲಿ ಮೀಸಲಾತಿ ಪ್ರತಿಭಟನಾ ಸ್ಥಳದ ಕಡೆ ತಲೆಯೂ ಹಾಕದ ಯತ್ನಾಳ್: ಇದರ ಹಿಂದಿದೆ 'ಆ' ಎಚ್ಚರಿಕೆ?

ಪಂಚಮಸಾಲಿ ಸಮುದಾಯವು 2 ಎ ಪ್ರವರ್ಗದಲ್ಲಿ ಮೀಸಲಾತಿ ಕೋರಿದ್ದು, ಅದರ ಕುರಿತು ಪರಿಶೀಲಿಸುವಂತೆ ಹಿಂದುಳಿದ ವರ್ಗಗಳ ಆಯೋಗಕ್ಕೆ ತಿಳಿಸಲಾಗಿದೆ. ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಳದ ಕುರಿತು ಪರಿಶೀಲಿಸಿ ನ್ಯಾ. ನಾಗಮೋಹನದಾಸ್ ವರದಿ ನೀಡಿದ್ದಾರೆ.

 State Govt Forms Three Members High Level Committee To Consider Reservation Demands

ಮೀಸಲಾತಿ ಬೇಡಿಕೆ; ಈಶ್ವರಪ್ಪ ವಿರುದ್ಧ ಸ್ವ ಪಕ್ಷದವರ ಮುನಿಸು! ಮೀಸಲಾತಿ ಬೇಡಿಕೆ; ಈಶ್ವರಪ್ಪ ವಿರುದ್ಧ ಸ್ವ ಪಕ್ಷದವರ ಮುನಿಸು!

Recommended Video

ಚಾಮುಂಡೇಶ್ವರಿ, ನಂಜುಡೇಶ್ವರನ ದರ್ಶನ ಪಡೆದ ಹೆಚ್ಡಿಕೆ | Oneindia Kannada

ಕುರುಬ ಸಮುದಾಯವು ಎಸ್‌ಟ ಪ್ರವರ್ಗಕ್ಕೆ ಸೇರಿಸುವಂತೆ ಮನವಿ ಮಾಡಿದ್ದಾರೆ. ವೀರಶೈವ ಲಿಂಗಾಯತರು ಮತ್ತು ಒಕ್ಕಲಿಗ ಸಮುದಾಯದವರು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಪಟ್ಟಿಯಲ್ಲಿ ಸೇರಿಸುವಂತೆ ಕೋರಿದ್ದಾರೆ. ಹಾಗೆಯೇ ಇತರೆ ಕೆಲವು ಸಮುದಾಯಗಳು ಸಹ ಮೀಸಲಾತಿಯ ವಿವಿಧ ಬೇಡಿಕೆಗಳನ್ನು ಇರಿಸಿವೆ. ಹೀಗಾಗಿ ಇವುಗಳ ಬಗ್ಗೆ ಪರಿಶೀಲಿಸಿ ವರದಿ ನೀಡಲು ತ್ರಿಸದಸ್ಯ ಸಮಿತಿ ರಚಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಈ ಸಮಿತಿಗೆ ಮೀಸಲಾತಿ ಅಧ್ಯಯನ ನಡೆಸಿ ವರದಿ ನೀಡಲು ಸಮಯ ಗಡುವು ನಿಗದಿ ಮಾಡಿಲ್ಲ.

English summary
Karnataka state government has formed a three members high level committee headed by former justice Subhash Adi to examine the demands on reservation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X