ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕಷ್ಟದಲ್ಲಿರುವ ಮಾವು ಬೆಳೆಗಾರರ ನೆರವಿಗೆ ಸರ್ಕಾರ, ಬೆಂಬಲ ಬೆಲೆ ಹೆಚ್ಚಳ

By Nayana
|
Google Oneindia Kannada News

ಬೆಂಗಳೂರು, ಜು.9: ಮಾವುಗಳಿಗೆ ಬೆಂಬಲ ಬೆಲೆ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ, ಸೋಮವಾರ ನಡೆದ ಅಧಿವೇಶನಕ್ಕೂ ಮುನ್ನ ಸಚಿವ ಶಿವಶಂಕರರೆಡ್ಡಿಯವರು ಬೆಂಬಲ ಬೆಲೆ ಘೋಷಿಸಿದ್ದಾರೆ.

ರೈತರ ಪ್ರತಿಭಟನೆ ಬಿಸಿ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ ಹಣ್ಣುಗಳ ರಾಜ ಮಾವಿಗೆ ಬೆಂಬಲ ಬೆಲೆ ನೀಡಲು ನಿರ್ಧರಿಸಿದೆ. ಪ್ರತಿ ಕೆ.ಜಿಗೆ 2.5 ರೂ ಬೆಂಬಲ ಬೆಲೆ ನೀಡಲು ಸರ್ಕಾರ ತೀರ್ಮಾನಿಸಿದೆ. 2 ಸಾವಿರ ರೂ. ವರೆಗೆ ಬೆಂಬಲ ಬೆಲೆ ನೀಡಲು ಚಿಂತನೆ ನಡೆಸಿದೆ. ಈ ಸಂಬಂಧ ಅಧಿಕಾರಿಗಳ ಜತೆ ಸಭೆ ಕರೆದು ಚರ್ಚಿಸಲಾಗಿದೆ. ಸಭೆ ಬಳಿಕ ಕ್ವಿಂಟಾಲ್‌ಗೆ 2 ಸಾವಿರವರೆಗೂ ಬೆಂಬಲ ಬೆಲೆ ಘೋಷಣೆ ಮಾಡುವ ಸಾಧ್ಯತೆ ಇದೆ.

ರೈತರ ಸಾಲಮನ್ನಾ, ಕುಸಿದ ಮಾವಿನ ದರ : ಕಾವೇರಲಿದೆ ಅಧಿವೇಶನ ರೈತರ ಸಾಲಮನ್ನಾ, ಕುಸಿದ ಮಾವಿನ ದರ : ಕಾವೇರಲಿದೆ ಅಧಿವೇಶನ

ಇನ್ನೊಂದೆಡೆ ಸ್ಪೀಕರ್ ರಮೇಶ್‌ಕುಮಾರ್ ಅವರ ಸ್ವಕ್ಷೇತ್ರ ಶ್ರೀನಿವಾಸಪುರದಲ್ಲಿ ಸೋಮವಾರ ಮಾವು ಬೆಳೆಗಾರರು ಬಂದ್ ಕರೆ ನೀಡಿರುವುದು ಕೂಡ ಸರ್ಕಾರಕ್ಕೆ ತಲೆನೋವಾಗಲಿದೆ. ಕೇಂದ್ರ ಸರ್ಕಾರ ಮಾವು ಬೆಳೆಯುವ ಜಿಲ್ಲೆಗಳಿಗೆ ಮಾವುಗಳ ವೈಜ್ಞಾನಿಕ ಶೇಖರಣೆಗೆಂದೇ 100 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದಾರೆ.

State govt announces MSP Rs.2000 for mango

ಆದರೆ ರಾಮನಗರ ಹಾಗೂ ಕೋಲಾರದಂತಹ ಮಾವು ಬೆಳೆಗಾರರ ಜಿಲ್ಲೆಗಳಲ್ಲಿ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಐದು-ಹತ್ತು ರೂಪಾಯಿಗೆ ಕೆಜಿ ಮಾವು ಮಾರಾಟ ಮಾಡುವ ದರ ಕುಸಿತದಿಂದ ತತ್ತರಿಸಿರುವ ಮಾವು ಬೆಳೆಗಾರರು ಪ್ರತಿಭಟನೆ ಹಾದಿ ಹಿಡಿದಿದ್ದಾರೆ.

English summary
Agriculture minister N.H. Shivashankar Reddy announced minimum support price for mango as Rs.2000 per quintel and requested farmers to withdraw strike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X