ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಔರಾದ್ಕರ್ ವರದಿಗೆ ಸರ್ಕಾರ ತಡೆ: ಪೊಲೀಸರ ಆಸೆಗೆ ತಣ್ಣೀರು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 17: ಸಂಬಳ ಹೆಚ್ಚಳವಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರಾಜ್ಯ ಪೊಲೀಸರಿಗೆ ನಿರಾಸೆಯಾಗಿದೆ. ಔರಾದ್ಕರ್ ವರದಿಗೆ ಸರ್ಕಾರ ತಡೆ ನೀಡಿದ್ದು, ಸಂಬಳ ಹೆಚ್ಚಳ ವಿಳಂಬ ಆಗಲಿದೆ.

ರಾಘವೇಂದ್ರ ಔರಾದ್ಕರ್ ವರದಿ ಜಾರಿಗೆ ತಂದು ರಾಜ್ಯ ಪೊಲೀಸರ ಸಂಬಳ ಹೆಚ್ಚಳ ಮಾಡಲಾಗುತ್ತದೆ. ಆಗಸ್ಟ್ 1 ರಿಂದಲೇ ಅನ್ವಯವಾಗುವಂತೆ ಸಂಬಳ ಹೆಚ್ಚಳ ಆಗುತ್ತದೆ ಎಂದು ಹೇಳಿದ್ದ ಸರ್ಕಾರ ಈಗ ವರದಿಗೆ ಅಂಕಿತ ಹಾಕಲು ಒಲ್ಲೆ ಎಂದಿದೆ.

ಔರಾದ್ಕರ್ ವರದಿ ಜಾರಿ: ಪೊಲೀಸರ ವೇತನ ಎಷ್ಟು ಹೆಚ್ಚಾಗಲಿದೆ?ಔರಾದ್ಕರ್ ವರದಿ ಜಾರಿ: ಪೊಲೀಸರ ವೇತನ ಎಷ್ಟು ಹೆಚ್ಚಾಗಲಿದೆ?

ಸಂಬಳ ಹೆಚ್ಚಳದ ನಿರೀಕ್ಷೆಯಲ್ಲಿದ್ದ ರಾಜ್ಯ ಪೊಲೀಸರಿಗೆ ಭಾರಿ ನಿರಾಸೆಯಾಗಿದ್ದು. ಮತ್ತೆ ಸಂಬಳ ಹೆಚ್ಚಳ ಯಾವಾಗ ಆಗುತ್ತದೆ ಎಂಬ ಬಗ್ಗೆ ಅನುಮಾನ ಮೂಡಲು ಆರಂಭಿಸಿದೆ.

State Government Put Stop On Police Salary Hike

ಕಳೆದ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ದಸರಾ ವೇಳೆಗೆ ರಾಜ್ಯ ಪೊಲೀಸರಿಗೆ ಉಡುಗೊರೆ ನೀಡುವುದಾಗಿ ಹೇಳಿದ್ದರು. ಅದರಂತೆ ಪೊಲೀಸ್ ಸಿಬ್ಬಂದಿ ವೇತನ ಪರೀಷ್ಕರಣೆಗೆ ಅಧಿಸೂಚನೆಯನ್ನೂ ಹೊರಡಿಸಲಾಗಿತ್ತು. ಆದರೆ ಆ ಸೂಚನೆಯನ್ನು ರದ್ದುಮಾಡಿ ಮತ್ತೊಂದು ಆದೇಶ ಹೊರಡಿಸಲಾಗಿದೆ.

ಕರ್ನಾಟಕ ಪೊಲೀಸರಿಗೆ ಶುಭ ಸುದ್ದಿ ನೀಡಿದ ಸರ್ಕಾರಕರ್ನಾಟಕ ಪೊಲೀಸರಿಗೆ ಶುಭ ಸುದ್ದಿ ನೀಡಿದ ಸರ್ಕಾರ

ಹಲವು ವರ್ಷಗಳಿಂದ ಪೊಲೀಸರು ವೇತನ ಪರೀಷ್ಕರಣೆಗಾಗಿ ಕಾಯುತ್ತಿದ್ದು, ಈ ಬಾರಿ ಬಾಗಿಲಿಗೆ ಬಂದು ವಾಪಸ್ ಹೋಗಿದೆ ಔರಾದ್ಕರ್ ವರದಿ. ಮತ್ತೆ ಯಾವಾಗ ವೇತನ ಪರೀಷ್ಕರಣೆ ಆಗುತ್ತದೆಯೋ ನೋಡಬೇಕಿದೆ.

English summary
Police salary hike stopped by state government. Government today pass order that Auradkar recommendation can not be implement now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X