ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನುಕಂಪದ ನೌಕರಿ ನಿಯಮಕ್ಕೆ ತಿದ್ದುಪಡಿ: ಸರ್ಕಾರದಿಂದ ಅಧಿಸೂಚನೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 10: ಅನುಕಂಪದ ಆಧಾರದಲ್ಲಿ ಕುಟುಂಬದವರಿಗೆ ನೌಕರಿ ನೀಡುವ ನಿಯಮದಲ್ಲಿ ರಾಜ್ಯ ಸರ್ಕಾರ ಮಹತ್ವದ ಬದಲಾವಣೆ ಮಾಡಿದೆ. ಸರ್ಕಾರಿ ಹುದ್ದೆಯಲ್ಲಿರುವವರು ಮೃತಪಟ್ಟಾಗ ಅನುಕಂಪದ ಆಧಾರದಲ್ಲಿ ಅವರ ಅವಲಂಬಿತರನ್ನು ಸರ್ಕಾರಿ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುವ ಕುರಿತಾದ ಕರ್ನಾಟಕ ನಾಗರಿಕ ಸೇವಾ (ಅನುಕಂಪದ ಆಧಾರದಲ್ಲಿ ನೇಮಕಾತಿ) ನಿಯಮಗಳಿಗೆ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಈ ತಿದ್ದುಪಡಿ ಅನ್ವಯ ಸರ್ಕಾರಿ ನೌಕರರು ಅಕಾಲಿಕ ಮರಣಕ್ಕೆ ತುತ್ತಾದರೆ ಅವರ ಜತೆ ವಾಸವಿದ್ದ ವಿಧವಾ ಪತ್ನಿಗೆ ಅನುಕಂಪದ ಆಧಾರದಲ್ಲಿ ಹುದ್ದೆ ಪಡೆಯಲು ಅರ್ಹರಾಗಿರುತ್ತಾರೆ. ನೇಮಕಾತಿಗೆ ಅವರಿಗೆ ಅರ್ಹತೆ ಇಲ್ಲದೆ ಇದ್ದರೆ ಅಥವಾ ಅವರು ನೇಮಕಾತಿಯನ್ನು ಬಯಸದೆ ಇದ್ದರೆ ಅವರು ಮಗ ಅಥವಾ ಮಗಳನ್ನು ಈ ಹುದ್ದೆಗೆ ಸೂಚಿಸಬಹುದು.

ಮದುವೆಯಾಗಿರುವ ಹೆಣ್ಣು ಮಕ್ಕಳಿಗೂ ಅನುಕಂಪ ಆಧಾರಿತ ಸರ್ಕಾರಿ ನೌಕರಿ ಮದುವೆಯಾಗಿರುವ ಹೆಣ್ಣು ಮಕ್ಕಳಿಗೂ ಅನುಕಂಪ ಆಧಾರಿತ ಸರ್ಕಾರಿ ನೌಕರಿ

ಮೃತ ನೌಕರರು ಅವಿವಾಹಿತರಾಗಿದ್ದರೆ ಅವರ ತಂದೆ ಅಥವಾ ತಾಯಿ ಆಯ್ಕೆ ಮಾಡಿದ ಸಹೋದರ ಅಥವಾ ಸಹೋದರಿಯನ್ನು ಆ ಹುದ್ದೆಗೆ ನೇಮಿಸಲು ಅವಕಾಶವಿದೆ. ತಂದೆ, ತಾಯಿ ಕೂಡ ಮೃತಪಟ್ಟಿದ್ದರೆ ವಯಸ್ಸಿನ ಆಧಾರದಲ್ಲಿ ಹಿರಿಯ ಸಹೋದರ ಅಥವಾ ಸಹೋದರಿಗೆ ಅನುಕಂಪದ ಆಧಾರದ ಮೇಲೆ ಕೆಲಸ ನೀಡಬಹುದು.

State Government Issues Notification On Compassionate Employment Rules Amendment

ಹಾಗೆಯೇ ವಿವಾಹಿತ ಮಹಿಳಾ ನೌಕರರು ನಿಧನರಾದರೆ ಆಕೆಯ ವಿಧುರ ಪತಿ ಆಯ್ಕೆ ಮಾಡಿದ ಮಗ ಅಥವಾ ಮಗಳಿಗೆ ಉದ್ಯೋಗ ನೀಡಬಹುದು. ಮೃತ ಮಹಿಳೆಯ ಅವಲಂಬಿತ ಮಗ, ಮಗಳು ಅರ್ಹರಾಗಿಲ್ಲದೆ ಹೋದರೆ ಅಥವಾ ಅವರು ನೇಮಕಾತಿ ಬಯಸದೆ ಇದ್ದರೆ ವಿಧುರ ಪತಿಗೆ ಹುದ್ದೆ ನೀಡಬಹುದು. ಪತಿ ಮೊದಲೇ ಮೃತಪಟ್ಟಿದ್ದರೆ, ಮಕ್ಕಳ ವಯಸ್ಸಿಗೆ ಅನುಗುಣವಾಗಿ ಹುದ್ದೆ ನೀಡಬೇಕು ಎಂದು ತಿದ್ದುಪಡಿ ಮಾಡಲಾಗಿದೆ.

ಮಹಿಳಾ ಉದ್ಯೋಗಿ ಅವಿವಾಹಿತೆಯಾಗಿದ್ದು, ಮೃತಪಟ್ಟರೆ ಆಕೆಯೊಂದಿಗೆ ವಾಸವಿದ್ದ ಸಹೋದರ ಅಥವಾ ಸಹೋದರಿ ಹುದ್ದೆಗೆ ಅರ್ಹರಾಗುತ್ತಾರೆ. ಮಕ್ಕಳು ಅಪ್ರಾಪ್ತ ವಯಸ್ಸಿನವರಾಗಿದ್ದರೆ, ಎರಡು ವರ್ಷದೊಳಗೆ ಅವರು 18 ತುಂಬುವಂತಿದ್ದರೆ ಅವಕಾಶ ನೀಡಬಹುದು. 18 ತುಂಬಿದ ಬಳಿಕ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ಅರ್ಜಿ ಸಲ್ಲಿಸಲು ಎರಡು ವರ್ಷ ಕಾಲಾವಕಾಶ ನೀಡಬೇಕು ಎಂದು ಸೂಚಿಸಲಾಗಿದೆ.

Recommended Video

ಮಹಿಳೆಯರ ಐಡಿಯಾ ನೋಡಿದ್ರೆ ಟ್ರಾಫಿಕ್ ಪೊಲೀಸ್ ತಲೆ ತಿರುಗಿ ಬೀಳೋದು ಪಕ್ಕಾ | Oneindia Kannada

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಜನವರಿಯಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ವಿವಾಹಿತ ಹೆಣ್ಣುಮಕ್ಕಳಿಗೂ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಈ ಸಂಬಂಧ ಫೆ. 2ರಂದು ತಿದ್ದುಪಡಿ ನಿಯಮದ ಕರಡು ಪ್ರಕಟಿಸಲಾಗಿತ್ತು.

English summary
Karnataka government has issued notification on compassionate employment amendment rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X