ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ಯಾಕ್ಸಿ ಪ್ರಯಾಣ ದರ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ

|
Google Oneindia Kannada News

ಬೆಂಗಳೂರು, ಏಪ್ರಿಲ್ 1: ರಾಜ್ಯಾದ್ಯಂತ ಟ್ಯಾಕ್ಸಿ ದರ ಪರಿಷ್ಕರಣೆ ಮಾಡಿ ಗುರುವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಟ್ಯಾಕ್ಸಿ ಪ್ರಯಾಣ ದರ ಹೆಚ್ಚಳ ಮಾಡುವಂತೆ ಟ್ಯಾಕ್ಸಿ ಮಾಲೀಕರು ಈಚೆಗೆ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರು.

ಸರ್ಕಾರದ ನಿರ್ಲಕ್ಷ್ಯಕ್ಕೆ KSTDC ಕ್ಯಾಬ್ ಚಾಲಕ ಸಾವು: ಎಚ್‌ಡಿಕೆ ಆರೋಪಸರ್ಕಾರದ ನಿರ್ಲಕ್ಷ್ಯಕ್ಕೆ KSTDC ಕ್ಯಾಬ್ ಚಾಲಕ ಸಾವು: ಎಚ್‌ಡಿಕೆ ಆರೋಪ

ಈ ಬೇಡಿಕೆಯನ್ನು ಪರಿಗಣಿಸಿರುವ ಸರ್ಕಾರ ಟ್ಯಾಕ್ಸಿ ಪ್ರಯಾಣ ದರ ಏರಿಕೆ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದೆ.

ಲಾಕ್‌ಡೌನ್‌ ನಂತರ ಬಾಡಿಗೆ ದರ ಕಡಿಮೆಯಿದ್ದು, ಟ್ಯಾಕ್ಸಿ ಹಾಗೂ ಕ್ಯಾಬ್‌ಗಳಿಗೆ ಪ್ರಸ್ತುತ ಒಂದು ಕಿ.ಮೀ.ಗೆ 24 ರೂ. ದರ ನಿಗದಿ ಮಾಡಬೇಕು ಎಂದು ಬುಧವಾರವಷ್ಟೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಚಾಲಕರು ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಒತ್ತಾಯಿಸಿದ್ದರು.

ಟ್ಯಾಕ್ಸಿ ಚಾಲಕರೊಬ್ಬರು ಏರ್‌ಪೋರ್ಟ್ ಸಮೀಪ ಟ್ಯಾಕ್ಸಿಯಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿ ಮೃತಪಟ್ಟಿದ್ದರು. ಆನಂತರ ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಟ್ಯಾಕ್ಸಿಗಳನ್ನು ಓಡಿಸದೇ ಇರಲು ಚಾಲಕರ ಸಂಘ ನಿರ್ಧಾರ ಮಾಡಿ, ಒಂದು ಕಿ.ಮೀಗೆ 24 ರೂ. ನಿಗದಿಪಡಿಸಿ ಚಾಲಕರ ಜೀವ ಉಳಿಸಿ ಎಂದು ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ಬೆನ್ನಲ್ಲೇ ಟ್ಯಾಕ್ಸಿ ಪ್ರಯಾಣ ದರ ಏರಿಸಲಾಗಿದೆ.

ವಿವಿಧ ಸ್ವರೂಪದ ಟ್ಯಾಕ್ಸಿಗಳ ಪ್ರಯಾಣ ದರ ಏರಿಕೆ ಮಾಡಿದ್ದು, ಈಗಾಗಲೇ ತೈಲ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಟ್ಯಾಕ್ಸಿ ದರವೂ ದುಬಾರಿಯಾಗಲಿದೆ. ಎ, ಬಿ, ಸಿ ಹಾಗೂ ಡಿ ಎಂದು ವಿಭಾಗಗಳನ್ನು ಮಾಡಿ ದರ ಪರಿಷ್ಕರಣೆ ಮಾಡಲಾಗಿದೆ. ಈ ಕುರಿತ ವಿವರ ಮುಂದಿದೆ...

State Government Increased Taxi Travel Price

ಎ ವರ್ಗ (15 ಲಕ್ಷ ರೂ ಮೇಲ್ಪಟ್ಟ ವಾಹನ)- ಕನಿಷ್ಠ 27 ರೂ ಹಾಗೂ ಗರಿಷ್ಠ 54ರೂ ದರ ಪರಿಷ್ಕರಣೆ. ನಿಗದಿತ ಪ್ರಯಾಣ ದರ 150 ರೂ
ಬಿ ವರ್ಗ (10-16 ಲಕ್ಷ ರೂ ವಾಹನ)- ಕನಿಷ್ಠ 24 ರೂ ಹಾಗೂ ಗರಿಷ್ಠ 48 ರೂ
ಸಿ ವರ್ಗ (5 ಲಕ್ಷದಿಂದ 10 ಲಕ್ಷ ರೂ ವಾಹನ) -ಕನಿಷ್ಠ 21 ರೂ ಹಾಗೂ ಗರಿಷ್ಠ 42 ರೂ
ಡಿ ವರ್ಗ (5 ಲಕ್ಷದ ವಾಹನ) -ಕನಿಷ್ಠ 18 ರೂ ಹಾಗೂ ಗರಿಷ್ಠ 3 ರೂ, ನಿಗದಿತ ದರ 75 ರೂ

Recommended Video

#BreakingNews: ಕೊರೋನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ಮತ್ತೆ ಟಫ್ ರೂಲ್? | Oneindia Kannada

ಸಮಯದ ಆಧಾರದಲ್ಲಿ ಮಾಡುತ್ತಿದ್ದ ದರ ವಸೂಲಿಗೆ ಬ್ರೇಕ್ ಹಾಕಲಾಗಿದ್ದು, ಕಿ.ಮೀ. ಆಧಾರದಲ್ಲಿ ಪ್ರಯಾಣಿಕರಿಗೆ ದರ ನಿಗದಿ ಮಾಡಲಾಗುವುದು. ಕಾಯುವಿಕೆ ದರ 20 ನಿಮಿಷಗಳವರೆಗೆ ಉಚಿತವಾಗಿದ್ದು, ನಂತರ ಪ್ರತಿ 15 ನಿಮಿಷಗಳಿಗೆ 10 ರೂ ನಿಗದಿ ಮಾಡಿರುವುದಾಗಿ ತಿಳಿದುಬಂದಿದೆ.

English summary
State government issued order to increase taxi travel price all over state,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X