• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಾಸಕರ ಭವನಕ್ಕೆ ಇನ್ಮುಂದೆ ಪತ್ರಕರ್ತರು ಹೋಗುವಂತಿಲ್ಲ!

|

ಬೆಂಗಳೂರು, ಫೆ. 20: ಶಾಸಕರ ಭವನಕ್ಕೆ ಇನ್ಮುಂದೆ ಪತ್ರಕರ್ತರು ಹೋಗುವಂತಿಲ್ಲ. ಹೌದು, ಮಾಧ್ಯಮ ಪ್ರತಿನಿಧಿಗಳಿಗೆ ಶಾಸಕರ ಭವನ ಪ್ರವೇಶಕ್ಕೆ ಅವಕಾಶ ಕೊಡಬಾರದು ಎಂದು ಪೊಲೀಸರಿಗೆ ಶಾಸಕರ ಭವನದ ಅಧೀನ ಕಾರ್ಯದರ್ಶಿ ಆದೇಶ ಮಾಡಿದ್ದಾರೆ. ಮುದ್ರಣ ಹಾಗೂ ಟಿವಿ ಮಾಧ್ಯಮಗಳ ವರದಿಗಾರರು, ಪತ್ರಕರ್ತರಿಗೆ ಶಾಸಕರ ಭವನ ಒಳಗೆ ಪ್ರವೇಶಕ್ಕೆ ಅನುಮತಿ ಮಾಡಿಕೊಡಬಾರದು ಎಂದು ಶಾಸಕರ ಭವನದ ಪೊಲೀಸರಿಗೆ ಆದೇಶ ಮಾಡಲಾಗಿದೆ.

ಈಗಾಗಲೇ ಮುದ್ರಣ ಹಾಗೂ ಖಾಸಗಿ ಚಾನಲ್‌ಗಳ ಕ್ಯಾಮರಾಗಳಿಗೆ ವಿಧಾನಸಭೆ ಪ್ರವೇಶ ನಿಷೇಧಿಸಿ ರಾಜ್ಯ ಬಿಜೆಪಿ ಸರ್ಕಾರ ಆದೇಶ ಮಾಡಿದೆ. ಅದರ ಬೆನ್ನಲ್ಲೇ ಇದೀಗ ಶಾಸಕರ ಭವನಕ್ಕೂ ನಿರ್ಬಂಧ ಹೇರಿದೆ. ಈ ಹಿಂದೆ ಶಾಸಕರ ಕ್ಷೇತ್ರಗಳಿಂದ ಬರುವ ಸಾರ್ವಜನಿಕರಿಗೂ ಶಾಸಕರ ಭವನ ಪ್ರವೇಶ ನಿರ್ಬಂಧಿಸಿ ಆದೇಶ ಮಾಡಲಾಗಿತ್ತು. ಆದರೆ ಕೆಲವು ಶಾಸಕರು ತಮ್ಮ ಕ್ಷೇತ್ರದ ಜನರು ತಮ್ಮನ್ನು ಭೇಟಿಯಗಲು ಬರುತ್ತಾರೆ.

ಸದನಕ್ಕೆ ಸುಳ್ಳು ಹೇಳಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ

ಹೀಗಾಗಿ ಅವರನ್ನು ಶಾಸಕರ ಭವನ ಪ್ರವೇಶಕ್ಕೆ ಬರುವುದ್ನು ನಿರ್ಬಂಧಿಸಿದರೆ ತೊಂದರೆಯಾಗುತ್ತದೆ ಎಂದು ಸಂಬಂಧಿಸಿದವರ ಗಮನಕ್ಕೆ ತಂದಿದ್ದರು. ಆ ಮೇಲೆ ಸಾರ್ವಜನಿಕರು ತಮ್ಮ ಶಾಸಕರನ್ನು ಭೇಟಿ ಮಾಡಲು ಸಮಯಾವಕಾಶ ನಿಗದಿ ಮಾಡಲಾಗಿತ್ತು. ಇದೀಗ ಮಾಧ್ಯಮ ಪ್ರತಿನಿಧಿಗಳನ್ನು ಭೇಟಿ ಮಾಡಲು ಶಾಸಕರೇ ಶಾಸಕರ ಭವನದಿಂದ ಹೊರಬರಬೇಕಾಗಿದೆ.

ಶಾಸಕರ ಏಕಾಂತಕ್ಕೆ ಭಂಗವಾಗುತ್ತದೆ ಎಂದು ಮಾಧ್ಯಮ ನಿಷೇಧ!

ಶಾಸಕರ ಏಕಾಂತಕ್ಕೆ ಭಂಗವಾಗುತ್ತದೆ ಎಂದು ಮಾಧ್ಯಮ ನಿಷೇಧ!

ಶಾಸಕರು ತಮ್ಮಕ್ಷೇತ್ರಗಳಿಂದ ಬೆಂಗಳೂರಿಗೆ ಬಂದು ತಮ್ಮ ಕೆಲಸದ ಸಮಯದ ನಂತರ ಶಾಸಕರ ಭವನದಲ್ಲಿ ತಂಗುವುದು ಅವರ ಖಾಸಗಿ ಸಮಯವಾಗಿರುತ್ತದೆ. ಆ ಸಮಯದಲ್ಲಿ ಮಾಧ್ಯಮದವರು ಶಾಸಕರನ್ನು ಭೇಟಿ ಮಾಡಲು ಬಂದರೆ ಅದು ಶಾಸಕರ ಖಾಸಗಿತನಕ್ಕೆ ಅಡಚಣೆ ಉಂಟಾಗುತ್ತದೆ. ಹೀಗಾಗಿ ಪ್ರಿಂಟ್ ಮೀಡಿಯಾ ಹಾಗೂ ಎಲೆಕ್ಟ್ರಾನಿಕ್ ಮೀಡಿಯಾ ವರದಿಗಾರು ಹಾಗೂ ಕ್ಯಾಮರಾಮ್ಯಾನ್‌ಗಳಿಗೆ ಶಾಸಕರ ಭವನದ ಒಳಗೆ ಪ್ರವೇಶವನ್ನು ನೀಡಲು ಅವಕಾಶ ಇರುವುದಿಲ್ಲ. ಹೀಗಾಗಿ ಪತ್ರಕರ್ತರಿಗೆ ಶಾಸಕರ ಭವನ ಪ್ರವೇಶಕ್ಕೆ ಕೊಡಬಾರದು ಎಂದು ಶಾಸಕರ ಭವನದ ಪೊಲೀಸ್ ಇನ್ಸ್‌ಪೆಕ್ಟರ್ ಅವರಿಗೆ ಶಾಸಕರ ಭವನದ ಅಧೀನ ಕಾರ್ಯದರ್ಶಿ ಕೆ.ಎಸ್. ಗನೇಶ್ ಆದೇಶ ಮಾಡಿದ್ದಾರೆ.

ಶಾಸಕರೇ ಬಯಸಿದರೆ ಗೇಟ್ ಹೊರಗೆ ಬಂದು ಭೇಟಿ ಮಾಡಬಹುದು

ಶಾಸಕರೇ ಬಯಸಿದರೆ ಗೇಟ್ ಹೊರಗೆ ಬಂದು ಭೇಟಿ ಮಾಡಬಹುದು

ಯಾವುದೇ ಸಂದರ್ಭದಲ್ಲಿಯೂ ಮಾಧ್ಯಮದವರನ್ನು ಶಾಸಕರ ಭವನದ ಒಳಗೆ ಬಿಡಲೇಬಾರದು ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಆದರೆ, ಒಂದು ವೇಳೆ ಶಾಸಕರು ಮಾಧ್ಯಮದವರನ್ನು ಭೇಟಿ ಮಾಡಿ ಸಂದರ್ಶನ ನೀಡಬೇಕು ಎಂದುಕೊಂಡಲ್ಲಿ ಶಾಸಕರ ಭವನದ ಗೇಟಿನ ಹೊರಗಡೆ ಹೋಗಿ ವ್ಯವಸ್ಥೆ ಮಾಡಿಕೊಳ್ಳಬಹುದು ಎಂದು ನಿರ್ದೇಶನ ಕೊಡಲಾಗಿದೆ.

ವಿಧಾನಸಭೆ ಸಭಾಧ್ಯಕ್ಷರ ಸೂಚನೆಯಂತೆ ಆದೇಶ ಹೊರಡಿಸಲಾಗಿದೆ ಎಂದು ಕೆ.ಎಸ್. ಗಣೇಶ್ ಅವರು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ನೆರೆ ಪರಿಹಾರದಲ್ಲಿ ವೈಫಲ್ಯ: ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ

ಜನರು ಶಾಸಕರನ್ನು ಭೇಟಿ ಮಾಡಲು ನಿಗದಿತ ಸಮಯಾವಕಾಶ

ಜನರು ಶಾಸಕರನ್ನು ಭೇಟಿ ಮಾಡಲು ನಿಗದಿತ ಸಮಯಾವಕಾಶ

ಇನ್ನು ಕ್ಷೇತ್ರದ ಜನರು ತಮ್ಮ ಶಾಸಕರನ್ನು ಭೆಟಿ ಮಾಡಲು ಕಾಯಬೇಕಾಗಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಕಾಲಾವಕಾಶ ಕೊಡಲಾಗಿದೆ. ಇದಕ್ಕೂ ಮೊದಲು ಶಾಸಕರನ್ನು ಕಾಣಲು ಬರುತ್ತಿದ್ದ ಕ್ಷೇತ್ರದ ಜನರು ಶಾಸಕರ ಭವನದಲ್ಲಿಯೇ ವಾಸ್ತವ್ಯ ಮಾಡುತ್ತಿದ್ದರು. ಇದರಿಂದ ಶಾಸಕರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂದು ಸಾರ್ವಜನಿಕರು ಶಾಸಕರ ಭವನದಲ್ಲಿ ವಾಸ್ತವ್ಯ ಮಾಡುವುದನ್ನು ನಿರ್ಬಂಧಿಸಲಾಗಿತ್ತು. ಇದೀಗ ಮಾಧ್ಯಮದವರಿಗೆ ಪ್ರವೇಶವನ್ನೇ ನಿರ್ಬಂಧಿಸಲಾಗಿದೆ.

ವಿಧಾನಸಭೆಗೆ ಖಾಸಗಿ ಚಾನಲ್‌ಗಳ ಕ್ಯಾಮರಾ ನಿರ್ಬಂಧ

ವಿಧಾನಸಭೆಗೆ ಖಾಸಗಿ ಚಾನಲ್‌ಗಳ ಕ್ಯಾಮರಾ ನಿರ್ಬಂಧ

ಕಳೆದ 2019ರ ಅಕ್ಟೋಬರ್‌ ತಿಂಗಳಿನಿಂದ ಖಾಸಗಿ ಚಾನಲ್‌ಗಳ ಕ್ಯಾಮರಾಗಳಿಗೆ ವಿಧಾನಸಭೆ ಪ್ರವೇಶ ನಿರ್ಬಂಧಿಸಲಾಗಿದೆ. ಜೊತೆಗೆ ಮುದ್ರಣ ಮಾಧ್ಯಮದ ಛಾಯಾಗ್ರಾಹಕರಿಗೂ ನಿಷೇಧ ಹಾಕಲಾಗಿದ್ದು, ಸದನದ ಕಲಾಪಗಳ ಛಾಯಾಚಿತ್ರಗಳನ್ನು ವಿಧಾನಸಭೆ ಸಚಿವಾಲಯವೇ ಒದಗಿಸುತ್ತಿದೆ. ಅದರಿಂದಾಗಿ ದಶಕಗಳ ಸಾಂಪ್ರದಾಯಕ್ಕೆ ರಾಜ್ಯ ಬಿಜೆಪಿ ಸರ್ಕಾರ ಕೊನೆ ಹಾಡಿದ್ದು, ಕ್ಯಾಮರಾ ನಿರ್ಬಂಧಿಸುವ ನೂತನ ನೀತಿಯನ್ನು ಜಾರಿಗೆ ತಂದಿದೆ.

ಹಿಂದೆ ಬಿಜೆಪಿ ಸರ್ಕಾರದಲ್ಲಿ ಸಚಿವರುಗಳೇ ಕಲಾಪ ನಡೆಯುತ್ತಿದ್ದಾಗ ನೀಲಿಚಿತ್ರ ನೋಡಿದ್ದರಿಂದ ಇಡೀ ಬಿಜೆಪಿ ರಾಷ್ಟ್ರಮಟ್ಟದಲ್ಲಿ ಮುಜಗರಕ್ಕೆ ಒಳಗಾಗಿತ್ತು. ಹೀಗಾಗಿಯೇ ಖಾಸಗಿ ಚಾನಲ್‌ಗಳ ಕ್ಯಾಮರಾಗಳನ್ನು ಸದನದಿಂದ ಹೊರಗೆ ಹಾಕಿದ್ದಾರೆ ಎಂದು ರಾಜ್ಯದ ಜನರು ಮಾತನಾಡಿಕೊಂಡಿದ್ದರು. ಇದೀಗ ಶಾಸಕರ ಭವನಕ್ಕೆ ಮಾಧ್ಯಮ ಪ್ರತಿನಿಧಿಗಳಿಗೆ ನಿಷೇಧ ಹಾಕಿರುವುದು ಚರ್ಚೆ ಆಗುತ್ತಿದೆ.

English summary
The government has banned journalists from entering the legislature home. Legislators must come out of the legislature home and meet with journalists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X