ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ, ಇನ್ನು ಮುಂದೆ ಸಿಗಲಿದೆ ಹೆಚ್ಚಿನ ಸಂಬಳ

By Manjunatha
|
Google Oneindia Kannada News

ಬೆಂಗಳೂರು, ಜೂನ್ 23: ಕಳೆದ ಸರ್ಕಾರದ ಅವಧಿಯಲ್ಲಿ ಘೋಷಿಸಿದ್ದ ವೇತನ ಪರಿಷ್ಕರಣೆ ಇನ್ನೂ ನೌಕರರ ಕೈಸೇರದೆ ಕಾಯುತ್ತಿದ್ದ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಜುಲೈ ಒಂದರಿಂದ ಪರಿಷ್ಕೃತ ವೇತನವನ್ನು ಪಡೆಯಲಿದ್ದಾರೆ.

ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಆರನೇ ವೇತನ ಆಯೋಗದ ಶಿಫಾರಸ್ಸನ್ನು ಯಥಾವತ್ತು ಜಾರಿ ಮಾಡುವುದಾಗಿ ಹೇಳಿದ್ದರು. ಕೆಲವೇ ದಿನಗಳಲ್ಲಿ ತುಟ್ಟಿ ಭತ್ಯೆ 13% ಮತ್ತು ಮೂಲ ವೇತನ 30% ಹೆಚ್ಚಳಕ್ಕೆ ಹೆಚ್ಚಾಗುತ್ತದೆ ಎಂದಿದ್ದರು. ಆದರೆ ಈ ವರೆಗೆ ಈ ಹೆಚ್ಚಳ ಆಗಿರಲಿಲ್ಲ.

ಸ್ವಾತಂತ್ರ್ಯೋತ್ಸವ ದಿನದಂದು ಮೋದಿಯಿಂದ 5 ದೊಡ್ಡ ಘೋಷಣೆ!ಸ್ವಾತಂತ್ರ್ಯೋತ್ಸವ ದಿನದಂದು ಮೋದಿಯಿಂದ 5 ದೊಡ್ಡ ಘೋಷಣೆ!

ಕಳೆದ ಏಪ್ರಿಲ್ ಒಂದರಿಂದಲೇ ಪರಿಷ್ಕೃತ ವೇತನ ಜಾರಿಯಾಗಿದೆಯಾದರೂ ಈವರೆಗೆ ಸರ್ಕಾರಿ ನೌಕರರ ಖಾತೆಗೆ ಹಣ ವರ್ಗಾವಣೆ ಆಗಿರಲಿಲ್ಲ. ಆದರೆ ಜುಲೈ ಒಂದರಿಂದ ಸರ್ಕಾರಿ ನೌಕರರಿಗೆ ಪರಿಷ್ಕೃತ ಸಂಬಳ ಜಮೆ ಆಗಲಿದ್ದು ಜೊತೆಗೆ ಏಪ್ರಿಲ್‌ ತಿಂಗಳೀಂದ ಬಾಕಿ ಉಳಿದಿದ್ದ ಸಂಬಳದ ಪಾವತಿಯೂ ನಗದು ರೂಪದಲ್ಲೇ ಆಗಲಿದೆ.

state sovernment employees will get more salary from July

ಆದರೆ ಬದಲಾದ ಪರಿಸ್ಥಿತಿಯಿಂದಾಗಿ 43% ಹೆಚ್ಚಾಗಬೇಕಿದ್ದ ತುಟ್ಟಿ ಭತ್ಯೆ ಮತ್ತು ಮೂಲ ವೇತನ 30% ಅಷ್ಟೆ ಹೆಚ್ಳವಾಗುತ್ತಿದೆ. ಆರನೇ ವೇತನ ಆಯೋಗದ ಶಿಫಾರಸ್ಸು ಜಾರಿಗೆ ತರಲು 10,500 ಕೋಟಿಗಳ ವೆಚ್ಚ ಆಗಲಿದ್ದು, ರೈತರ ಸಾಲಮನ್ನಾ ಕೂಡ ಮಾಡಬೇಕಿರುವ ಕಾರಣ ವೇತನ ಹೆಚ್ಚಳವನ್ನು ಕಡಿಮೆ ಮಾಡಲಾಗಿದೆ.

ಪರಿಷ್ಕೃತ ವೇತನ ಜಾರಿಗೆ ಚುನಾವಣಾ ಆಯೋಗ ಒಪ್ಪಿಗೆ ಪರಿಷ್ಕೃತ ವೇತನ ಜಾರಿಗೆ ಚುನಾವಣಾ ಆಯೋಗ ಒಪ್ಪಿಗೆ

ಬಜೆಟ್‌ನಲ್ಲಿ ಘೋಷಣೆ ಆದಾಗ್ಯೂ ಜಾರಿಗೆ ಬರಲು ತಡವಾದಾಗ ರಾಜ್ಯ ಸರ್ಕಾರಿ ನೌಕರರ ಒತ್ತಡ ಹೆಚ್ಚಾದ ಕಾರಣ ಸಂಪುಟದಲ್ಲೂ ಆ ಬಗ್ಗೆ ಚರ್ಚೆ ಮಾಡಿ ವರದಿಯನ್ನು ಅಂಗೀಕಾರ ಮಾಡಲಾಯಿತು ಮತ್ತು ಹಣಕಾಸು ಇಲಾಖೆಯ ಅನುಮತಿಯನ್ನೂ ಪಡೆಯಲಾಗಿದೆ. ಜುಲೈ ತಿಂಗಳಲ್ಲಿ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳ ಬಾಕಿ ಉಳಿದಿರುವ ಹೆಚ್ಚುವರಿ ವೇತನ ಕೈಸೇರಲಿದ್ದು ದೊಡ್ಡ ಮೊತ್ತದ ಹಣ ಖಾತೆಗಳಿಗೆ ಜಮಾವಣೆ ಆಗಲಿದೆ.

English summary
State government employees will get more salary from July. Finance department approved the salary hike proposel of government so employees will get more salary from this month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X