ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ನೆಪ: ಅಧಿವೇಶನ ಮೊಟಕುಗೊಳಿಸಿದ ರಾಜ್ಯ ಬಿಜೆಪಿ ಸರ್ಕಾರ!

|
Google Oneindia Kannada News

ಬೆಂಗಳೂರು, ಸೆ. 21: ಹಲವು ವೈಶಿಷ್ಟ್ಯಗಳಿಗೆ ಇಂದಿನಿಂದ ಆರಂಭವಾದ ರಾಜ್ಯ ವಿಧಾನ ಮಂಡಲ ಅಧಿವೇಶನ ಸಾಕ್ಷಿಯಾಯ್ತು. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಎಲ್ಲ ಸದಸ್ಯರು ಮಾಸ್ಕ್, ಫೇಸ್‌ ಶೀಲ್ಡ್ ಧರಿಸಿ ಬಂದಿದ್ದು ಒಂದೆಡೆಯಾದರೆ, ಸದಸ್ಯರ ಆಸನಗಳ ಮಧ್ಯೆ ಪಾರದರ್ಶಕ ಗಾಜನ್ನು ಹಾಕುವ ಮೂಲಕ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಅನುವಾಗುವಂತೆ ವಿಧಾನಸಭೆ ಸಚಿವಾಲಯ ವ್ಯವಸ್ಥೆ ಮಾಡಿದ್ದು ಮತ್ತೊಂದು ವಿಶೇಷ. ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರು ಸದಸ್ಯರ ಸುರಕ್ಷತಾ ದೃಷ್ಟಿಯಿಂದ ಎಲ್ಲ ಕ್ರಮಗಳನ್ನು ಕೈಗೊಂಡಿದ್ದರೂ, ರಾಜ್ಯ ಬಿಜೆಪಿ ಸರ್ಕಾರ ಅಧಿವೇಶನವನ್ನು ಮೊಟಕುಗೊಳಿಸಲು ತೀರ್ಮಾನಿಸಿದೆ.

ಹೌದು, ಕೊರೊನಾ ವೈರಸ್ ಆತಂಕದ ಮಧ್ಯೆ ಮೊಟ್ಟ ಎಲ್ಲ ಚಟುವಟಿಕೆಗಳು ನಡೆಯಲು ಅವಕಾಶ ಮಾಡಿಕೊಟ್ಟಿರುವ ರಾಜ್ಯ ಬಿಜೆಪಿ ಸರ್ಕಾರ ಅಧಿವೇಶನ ಮುಂದುವರೆಸಲು ಮಾತ್ರ ಹಿಂದೇಟು ಹಾಕುತ್ತಿದೆ. ಕೊರೊನಾ ವೈರಸ್ ಹರಡುವ ನೆಪದೊಂದಿಗೆ ವಿಧಾನ ಮಂಡಲ ಅಧಿವೇಶನವನ್ನು 10 ದಿನಗಳ ಬದಲಿಗೆ 5 ದಿನಗಳಿಗೆ ಮೊಟಕುಗೊಳಿಸಲು ತೀರ್ಮಾನಿಸಿದೆ. ಇವತ್ತು ವಿಧಾನಸೌಧದಲ್ಲಿ ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಸರ್ಕಾರ ತನ್ನ ಈ ನಿರ್ಧಾರವನ್ನು ಪ್ರಕಟಿಸಿದ್ದು, ವಿರೋಧ ಪಕ್ಷಗಳ ತೀವ್ರ ಆಕ್ಷೇಪದ ಮಧ್ಯೆಯೂ ಅಧಿವೇಶನ ಮೊಟಕುಗೊಳಿಸಲು ತೀರ್ಮಾನ ಮಾಡಲಾಗಿದೆ.

ಕೊರೊನಾ ಬಂದರೆ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದಂತೆ: ಸಿದ್ದರಾಮಯ್ಯಕೊರೊನಾ ಬಂದರೆ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದಂತೆ: ಸಿದ್ದರಾಮಯ್ಯ

ಮೂರೇ ದಿನಕ್ಕೆ ಮುಗಿಸಲು ಮುಂದಾಗಿದ್ದ ಸರ್ಕಾರ

ಮೂರೇ ದಿನಕ್ಕೆ ಮುಗಿಸಲು ಮುಂದಾಗಿದ್ದ ಸರ್ಕಾರ

ಕಲಾಪ ಸಲಹಾ ಸಮಿತಿ ಸಭೆ ಬಳಿಕ ವಿಧಾನಸೌಧದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು, ಮೂರೇ ದಿನಕ್ಕೆ ಅಧಿವೇಶನ ಮೊಟಕುಗೊಳಿಸಬೇಕೆಂದು ಸರ್ಕಾರದವರು ಕೇಳಿದರು. ಅದರೆ ನಾವು ಅಧಿವೇಶನ ಮೊಟಕುಗೊಳಿಸಲು ಒಪ್ಪಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ರವಿವಾರದವರೆಗೆ ಮಾಡಿ ಎಂದು ಅಭಿಪ್ರಾಯ ಬಂತು. ಆದರೆ ಶನಿವಾರದವರಗೆ ಮಾಡೋಣ ಎಂದು ತೀರ್ಮಾನ ಆಯ್ತು. ಕೊರೊನಾ ಹಿನ್ನೆಲೆ ಅಧಿವೇಶನ ಮೊಟಕುಗೊಳಿಸಲಾಗುತ್ತಿದೆ. ಈಗಾಗಲೇ 90 ಜನ ಸಿಬ್ಬಂದಿಗೆ ಕೋವಿಡ್ ದೃಢಪಟ್ಟಿದೆ , ಹೀಗಾಗಿ ಕಲಾಪ ಶನಿವಾರ ಮುಗಿಸಲು ನಿರ್ದಾರ ಮಾಡಲಾಗಿದೆ. ಅಷ್ಟರೊಳಗೆ ಎಲ್ಲಾ ವಿಷಯಗಳ ಬಗ್ಗೆಯೂ ನಾವು ಸದನದಲ್ಲಿ ಚರ್ಚಿಸುತ್ತೇವೆ ಎಂದು ಡಿಕೆಶಿ ಹೇಳಿದ್ದಾರೆ.

ಜನವಿರೋಧಿ ವಿಧೇಯಕಗಳಿಗೆ

ಜನವಿರೋಧಿ ವಿಧೇಯಕಗಳಿಗೆ

ಅಧಿವೇಶನವನ್ನು ಮೂರೇ ದಿನಗಳಿಗೆ ಮುಕ್ತಾಯ ಮಾಡಲು ಹೊರಟಿದ್ದರು. ಆದರೆ ಹೆಚ್ಚು ದಿನಗಳ ಕಾಲ ಕಲಾಪ ನಡೆಯಬೇಕು ಎಂದು ನಾವು ಒತ್ತಾಯ ಮಾಡಿದ್ದೇವೆ. ಕೊನೆಗೆ ಶನಿವಾರದವರಗೆ ಅಂದರೆ 5 ದಿನಗಳ ಕಾಲ ಕಲಾಪ ನಡೆಸಲು ಸರ್ಕಾರ ಒಪ್ಪಿದೆ ಎಂದು ವಿಧಾನಸೌಧದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಎಪಿಎಂಸಿ ಕಾಯಿದೆ, ಕಾರ್ಮಿಕ ಕಾಯಿದೆ, ಭೂಸುಧಾರಣಾ ಕಾಯಿದಿಗೆಳಿಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದಿದ್ದಾರೆ. ಅವೆಲ್ಲವುಗಳ ಬಗ್ಗೆ ಸದನದಲ್ಲಿ ಗಂಭೀರ ಚರ್ಚೆ ಆಗಬೇಕಿದೆ. ನಾವು ಈ ಎಲ್ಲವುಗಳ ಕುರಿತು ಗಂಭೀರ ಚರ್ಚೆ ಮಾಡಲಿದ್ದೇವೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ನಿಮಗೆ ಬೇಕಾದ ತಿದ್ದುಪಡಿ ವಿಧೇಯಗಳ ಕುರಿತು ಮಾತನಾಡಿ ಎಂದು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಹೇಳಿದ್ದಾರೆ.

ಜನವಿರೋಧಿ ವಿಧೇಯಕಗಳ ಮಂಡನೆಗೆ ವಿರೋಧ

ಜನವಿರೋಧಿ ವಿಧೇಯಕಗಳ ಮಂಡನೆಗೆ ವಿರೋಧ

ನಾವು ವಿಧೇಯಕಗಳನ್ನು ಮಂಡನೆ ಮಾಡುತ್ತೇವೆ ಎಂದಿದ್ದಾರೆ. ಆದರೆ ಅದಕ್ಕೆ ನಾವು ಒಪ್ಪಿಗೆ ಕೊಟ್ಟಿಲ್ಲ. 40 ಕಾನೂನುಗಳಿಗೆ ತಿದ್ದುಪಡಿ ಮಾಡಿದ್ದಾರೆ. ಅವುಗಳ ಬಗ್ಗೆ ಸಮಗ್ರ ಚರ್ಚೆ ಆಗಬೇಕು. ಹೀಗಾಗಿ ಕಲಾಪವನ್ನು ಹೆಚ್ಚು ದಿನ ನಡೆಸುವಂತೆ ಒತ್ತಾಯಿಸಿದ್ದೇವೆ. ಅವರು ಇನ್ನೂ ಬೇಗ ಮುಗಿಸಲು ಹೊರಟಿದ್ದರು. ಕಾನೂನುಗಳಿಗೆ ಜನವಿರೋಧಿ ತಿದ್ದುಪಡಿಗಳನ್ನು ಮಾಡಿದ್ದಾರೆ. ಅವುಗಳನ್ನು ನಾವು ವಿರೋಧಿಸಿದ್ದೇವೆ ಎಂದಿದ್ದಾರೆ.

ಹಲವು ಜನವಿರೋಧಿ ತಿದ್ದುಪಡಿಗಳನ್ನು ವಿರೋಧಿಸಿ ಜನರು ಬೀದಿಗೆ ಇಳಿದಿದ್ದಾರೆ. ರೈತರು ಭೂಸುಧಾರಣಾ ಕಾನೂನಿಗೆ ತಿದ್ದುಪಡಿ ಮಾಡಿರುವುದನ್ನು ವಿರೋಧಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರೈತರ ಪ್ರತಿಭಟನೆ ವಿಚಾರ

ರೈತರ ಪ್ರತಿಭಟನೆ ವಿಚಾರ

ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ಬಗ್ಗೆ ಧರಣಿ ನಡೆಯುತ್ತಿದೆ ಎಂದು ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯ ಸಿದ್ದರಾಮಯ್ಯ ಹೇಳಿದ್ದಾರೆ. ಅಧಿಕಾರಿಗಳು ರೈತರ ಪ್ರತಭಟನೆಯತ್ತ ತಿರುಗಿಯೂ ನೋಡಿಲ್ಲ. ರೈತರು ಪ್ರತಿಭಟನೆ ಮಾಡುತ್ತಿರುವುದು ಸರಿಯಾಗಿದೆ. ಭೂಸುಧಾರಣಾ ಕಾಯಿದೆಗೆ ತಿದ್ದುಪಡಿ ಬೇಡ ಎಂದಿದ್ದಾರೆ. ಜೊತೆಗೆ ಎಪಿಎಂಸಿ ಕಾನೂನಿಗೆ ತಿದ್ದುಪಡಿಯನ್ನೂ ವಿರೋಧಿಸಿದ್ದಾರೆ. ಈ ಎಲ್ಲವುಗಳ ಬಗ್ಗೆ ಅವರು ಧರಣಿ ಮಾಡುತ್ತಿದ್ದಾರೆ. ನಾವು ರೈತರ ಪ್ರತಿಭಟನೆಗೆ ಬೆಂಬಲ ನೀಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ಕೊಟ್ಟಿದ್ದಾರೆ.

Recommended Video

Corona ಲಸಿಕೆ ಭಾರತದಲ್ಲಿ ಉತ್ಪಾದನೆ ಆದ ಬಳಿಕ ಇರುವ ಸವಾಲುಗಳೇನು ? | Oneindia Kannada
ಜನಪ್ರತಿನಿಧಿಗಳಿಗೆ ಮಾತ್ರ ರಿಯಾಯತಿ?

ಜನಪ್ರತಿನಿಧಿಗಳಿಗೆ ಮಾತ್ರ ರಿಯಾಯತಿ?

ಕೊರೊನಾ ವೈರಸ್ ತೀವ್ರವಾಗಿದ್ದಾಗಲೇ ಮದ್ಯದ ಅಂಗಡಿಗಳನ್ನು ತೆರೆದು ಮಾರಾಟ ಮಾಡಲು ಸರ್ಕಾರ ಅನುವು ಮಾಡಿಕೊಟ್ಟಿದೆ. ಉಳಿದೆಲ್ಲ ಚಟುವಟಿಕೆಗಳು ನಡೆಯುವಂತೆ ರಾಝ್ಯ ಬಿಜೆಪಿ ಸರ್ಕಾರ ಉತ್ತೇಜನ ಕೊಟ್ಟಿದೆ.

ಲಾಕ್‌ಡೌನ್ ಸಂಕಷ್ಟ ಉಪಯೋಗಿಸಿಕೊಂಡು ಜನವಿರೋಧಿ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಆದರೆ ಆ ಕಾನುನುಗಳ ಬಗ್ಗೆ ಮಾತನಾಡಲು ಮಾತ್ರ ಅವಕಾಶ ಮಾಡಿಕೊಡುತ್ತಿಲ್ಲ. ಇದು ಜನ ವಿರೋಧಿ ನೀತಿ ಎಂದು ಜನರು ಆರೋಪಿಸುತ್ತಿದ್ದಾರೆ.

English summary
The state BJP government has curtailed the assembly session for 5 days under the pretext of coronavirus. In the meantime, the first day of the assembly session was filled with many specialties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X