ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ನೀಡಿದ್ದ ಭದ್ರತೆ ಹಿಂಪಡೆದ ರಾಜ್ಯ ಸರ್ಕಾರ

|
Google Oneindia Kannada News

ಬೆಂಗಳೂರು, ಜನವರಿ 30: ಮಾಜಿ ಸಚಿವರುಗಳಾಗಿದ್ದ ಕೆಲವು ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ನೀಡಲಾಗಿದ್ದ ಭದ್ರತೆಯನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.

ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ 'ಬಿ' ಭದ್ರತಾ ಶ್ರೇಣಿ ಹೊಂದಿದ್ದ 27 ಮಂದಿಯ ಭದ್ರತೆಯನ್ನು ರಾಜ್ಯ ಸರ್ಕಾರ ಹಿಂಪಡೆದಿದ್ದು, ಅದೇ ಅವಧಿಯಲ್ಲಿ ಸಚಿವರಾಗಿದ್ದ 'ಎ' ಭದ್ರತಾ ಶ್ರೇಣಿ ಹೊಂದಿದ್ದವರ ಭದ್ರತೆಯನ್ನು ಹಾಗೆಯೇ ಮುಂದುವರೆಸಲಾಗಿದೆ.

ಬಿಜೆಪಿ ಸೋತಿದ್ದಕ್ಕೆ ಹೀಗೆಲ್ಲಾ ಮಾಡುತ್ತಿದೆಯಾ: ಇದೇ 'ಮಹಾ' ಪ್ರಶ್ನೆ?ಬಿಜೆಪಿ ಸೋತಿದ್ದಕ್ಕೆ ಹೀಗೆಲ್ಲಾ ಮಾಡುತ್ತಿದೆಯಾ: ಇದೇ 'ಮಹಾ' ಪ್ರಶ್ನೆ?

ಡಾ.ಜಿ.ಪರಮೇಶ್ವರ್‌ಗೆ ಝೆಡ್ ಪ್ಲಸ್ ಜೊತೆಗೆ ಪೈಲೆಟ್, ಎಚ್.ಡಿ.ರೇವಣ್ಣಗೆ ಝೆಡ್ ಶ್ರೇಣಿ, ಡಿ.ಕೆ.ಶಿವಕುಮಾರ್‌ ಅವರಿಗೆ ವೈ ಪ್ಲಸ್ ಜೊತೆಗೆ ಎಸ್ಕಾರ್ಟ್, ಕೆ.ಜಿ.ಜಾರ್ಜ್‌ ಗೆ ವೈ ಶ್ರೇಣಿ ಜೊತೆಗೆ ಎಸ್ಕಾರ್ಟ್, ಎಂ.ಬಿ.ಪಾಟೀಲ್‌ ಗೆ ಝೆಡ್ ಪ್ಲಸ್ ಪೈಲೆಟ್ ಭದ್ರತೆ ಇತ್ತು. ಇವರು ಎ ಭದ್ರತಾ ಶ್ರೇಣಿಯಲ್ಲಿದ್ದವರಾಗಿದ್ದರು. ಇವರ ಭದ್ರತೆ ಹಾಗೆಯೇ ಮುಂದುರೆಯಲಿದೆ.

State Government Cancels Security For Some Former Ministers

ಸಚಿವ ಈಶ್ವರಪ್ಪ ಗೆ ಜೀವ ಬೆದರಿಕೆ: ಭದ್ರತೆಗೆ ಮನವಿಸಚಿವ ಈಶ್ವರಪ್ಪ ಗೆ ಜೀವ ಬೆದರಿಕೆ: ಭದ್ರತೆಗೆ ಮನವಿ

'ಬಿ' ಭದ್ರತಾ ಶ್ರೇಣಿಯಲ್ಲಿದ್ದ ಮಾಜಿ ಸಚಿವರಾದ ಬಂಡೆಪ್ಪ ಕಾಶಂಪುರ್, ಜಿ.ಟಿ.ದೇವೇಗೌಡ, ಡಿ.ಸಿ.ತಮ್ಮಣ್ಣ, ಕೃಷ್ಣಭೈರೇಗೌಡ, ಎಂ.ಸಿ.ಮನಗೂಳಿ, ಎನ್.ಎಚ್.ಶಿವಶಂಕರ ರೆಡ್ಡಿ, ಶ್ರೀನಿವಾಸ್, ರಮೇಶ್ ಜಾರಕಿಹೊಳಿ, ವೆಂಕಟರಾವ್ ನಾಡಗೌಡ, ಪ್ರಿಯಾಂಕ್‍ಖರ್ಗೆ, ಸಿ.ಎಸ್.ಪುಟ್ಟರಾಜು, ಯು.ಟಿ.ಖಾದರ್, ಸಾ.ರಾ.ಮಹೇಶ್, ಎನ್.ಮಹೇಶ್, ಶಿವಾನಂದ ಪಾಟೀಲ್, ವೆಂಕಟರಮಣಪ್ಪ, ರಾಜಶೇಖರ್ ಪಾಟೀಲ್, ಸಿ.ಪುಟ್ಟರಂಗ ಶೆಟ್ಟಿ, ಆರ್.ಶಂಕರ್, ಜಯಮಾಲ, ಆರ್.ಬಿ.ತಿಮ್ಮಾಪುರ, ತುಕಾರಾಂ.ಇ, ರಹೀಂ ಖಾನ್, ಸತೀಶ್ ಜಾರಕಿಹೊಳಿ, ಪಿ.ಟಿ.ಪರಮೇಶ್ವರ್ ನಾಯಕ್ ಮತ್ತು ಜಮೀರ್ ಅಹಮ್ಮದ್ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂಪಡೆಯಲಾಗಿದೆ.

ವಿಐಪಿ ಭದ್ರತಾ ತಂಡದಿಂದ ಎನ್‌ಎಸ್‌ಜಿ ಔಟ್: ಕೇಂದ್ರದಿಂದ ಮತ್ತೊಂದು ಮಹತ್ವದ ನಿರ್ಧಾರವಿಐಪಿ ಭದ್ರತಾ ತಂಡದಿಂದ ಎನ್‌ಎಸ್‌ಜಿ ಔಟ್: ಕೇಂದ್ರದಿಂದ ಮತ್ತೊಂದು ಮಹತ್ವದ ನಿರ್ಧಾರ

ಭದ್ರತೆ ಹಿಂಪಡೆದಿರುವ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದು, ಆದೇಶವೂ ತಕ್ಷಣದಿಂದ ಜಾರಿ ಆಗಲಿದೆ ಎಂದು ತಿಳಿಸಿದ್ದಾರೆ.

English summary
State government took back security to 21 former ministers who had b stage category security. A stage security to former ministers will be continued.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X