ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್-19: ಬಾಡಿಗೆ ಹಾಸಿಗೆ ಖರೀದಿಗೆ ಸರ್ಕಾರದ ಆದೇಶ!

|
Google Oneindia Kannada News

ಬೆಂಗಳೂರು, ಜು. 15: ಕೊನೆಗೂ ಕೋವಿಡ್ ಆರೈಕೆ ಕೇಂದ್ರಗಳಿಗೆ ಬೇಕಾಗಿರುವ ಹಾಸಿಗೆಗಳನ್ನು ಖರೀದಿ ಮಾಡಲು ಸರ್ಕಾರ ಮುಂದಾಗಿದೆ. ಆ ಮೂಲಕ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ನೆಪದಲ್ಲಿ ನೂರಾರು ಕೋಟಿ ರೂಪಾಯಿಗಳು ಭ್ರಷ್ಟರ ಜೇಬು ಸೇರುವುದಕ್ಕೆ ಸರ್ಕಾರ ಕಡಿವಾಣ ಹಾಕಿದೆ. ಬೆಂಗಳೂರು ಹೊರವಲಯದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ ಸೇರಿದಂತೆ ಒಟ್ಟು 20 ಸಾವಿರ ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರಗಳು ಸ್ಥಾಪನೆಯಾಗುತ್ತಿವೆ. BIECರಲ್ಲಿ ಈಗಾಗಲೇ 10,100 ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರ ಸ್ಥಾಪಿಸಲಾಗಿದೆ.

Recommended Video

Drone Prathap ಆಯ್ತು ಈಗ ಕೆರೆ ಕಾಮೇಗೌಡರ ಸರದಿ | Oneindia Kannada

ಆದರೆ BIEC ಕೋವಿಡ್ ಆರೈಕೆ ಕೇಂದ್ರದಲ್ಲಿ ಬಳಕೆ ಮಾಡಿರುವ ಹಾಸಿಗೆಗಳನ್ನು ಖರೀದಿ ಬದಲು ಬಾಡಿಗೆ ರೂಪದಲ್ಲಿ ಪಡೆಯಲು ಸರ್ಕಾರ ಈ ಹಿಂದೆ ತೀರ್ಮಾನ ಮಾಡಿತ್ತು. ಆದರೆ ಸಾರ್ವಜನಿಕವಾಗಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಬಾಡಿಗೆ ಬದಲು ಹಾಸಿಗೆಗಳನ್ನು ಖರೀದಿ ಮಾಡಲು ಸರ್ಕಾರ ಮುಂದಾಗಿದೆ.

ರಾಜ್ಯ ಸರ್ಕಾರದ ಮತ್ತೊಂದು ಯಡವಟ್ಟು, 10100 ಬಾಡಿಗೆ ಬೆಡ್‌ಗಳು!ರಾಜ್ಯ ಸರ್ಕಾರದ ಮತ್ತೊಂದು ಯಡವಟ್ಟು, 10100 ಬಾಡಿಗೆ ಬೆಡ್‌ಗಳು!

ಬೆಡ್‌ ಖರೀದಿಗೆ ಆದೇಶ

ಬೆಡ್‌ ಖರೀದಿಗೆ ಆದೇಶ

ಬಿಐಇಸಿ ಕೋವಿಡ್ ಕೇರ್ ಸೆಂಟರ್‌ನಲ್ಲಿ ಅಗತ್ಯ ವಸ್ತುಗಳನ್ನು ಬಾಡಿಗೆ ಪಡೆಯುವ ಬದಲು ಖರೀದಿ ಮಾಡಲು ರಾಜ್ಯ ಸರ್ಕಾರ ಸೂಚಿಸಿದೆ. ಕಾಟ್, ಬೆಡ್, ಬ್ಲಾಂಕೆಟ್, ಪ್ಲಾಸ್ಟಿಕ್ ಕುರ್ಚಿ ಸೇರಿದಂತೆ ಅಗತ್ಯ ವಸ್ತುಗಳನ್ನು ಬಾಡಿಗೆ ಪಡೆಯುವುದರಿಂದ ಅನವಶ್ಯಕ ವೆಚ್ಚವಾಗುವುದನ್ನು ಸರ್ಕಾರ ತಡೆದಿದೆ. ಬಾಡಿಗೆ ಬದಲು ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಅಗತ್ಯವಿರುವ 7.32 ಕೋಟಿ ರೂಪಾಯಿಗಳನ್ನು ತಕ್ಷಣವೇ ಪೂರೈಕೆದಾರರಿಗೆ ಪಾವತಿಸಲು ಬಿಬಿಎಂಪಿ ಆಯುಕ್ತರಿಗೆ ರಾಜ್ಯ ಸರ್ಕಾರ ಸೂಚಿಸಿದೆ.

ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಸ್ಥಾಪನೆ ಮಾಡಲಾಗಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ಅವತ್ಯವಿರುವ ವಸ್ತುಗಳನ್ನು ವಿವಿಧ ಸಂಸ್ಥೆಗಳಿಂದ ಪ್ರತಿ ದಿನಕ್ಕೆ 800 ರೂಪಾಯಿಗಳ ದರದಲ್ಲಿ ಬಾಡಿಗೆ ಪಡೆಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ನಿರ್ಧಾರ ಮಾಡಿದ್ದರು. ಇದರಿಂದ ಒಂದು ತಿಂಗಳಿಗೆ ಅಂದಾಜು 24 ಕೋಟಿ ರೂಪಾಯಿಗಳ ವೆಚ್ಚವಾಗುವ ಸಂಭವವಿತ್ತು.

ಪೂರೈಕೆದಾರರೊಂದಿಗೆ ಸಮಾಲೋಚನೆ

ಪೂರೈಕೆದಾರರೊಂದಿಗೆ ಸಮಾಲೋಚನೆ

ಪ್ರತಿ ಹಾಸಿಗೆಗೆ ಬೇಕಾದ ವಸ್ತುಗಳ ಪೈಕಿ 6 ವಸ್ತುಗಳಾದ ಮಂಚ, ಬೆಡ್, ಫ್ಯಾನ್, ಬಕೇಟ್, ಮಗ್, ಡಸ್ಟ್‍ಬಿನ್‍ಗಳನ್ನು ಪ್ರತಿ ಸೆಟ್‌ಗೆ 7,500 ರೂಪಾಯಿಗಳ ಮೊತ್ತದಲ್ಲಿ ಖರೀದಿ ಮಾಡಲು ಬಿಬಿಎಂಪಿ ತೀರ್ಮಾನ ಮಾಡಿದೆ. ಇದರಿಂದ ಪ್ರಸ್ತುತ ತಯಾರಿಯಲ್ಲಿರುವ 6,500 ಬೆಡ್‌ಗಳಿಗೆ ಬೇಕಾಗಿರುವ ಈ ವಸ್ತುಗಳನ್ನು 4.87 ಕೋಟಿ ರೂಪಾಯಿಗಳ ಮೊತ್ತದಲ್ಲಿ ಖರೀದಿಸಲು ತೀರ್ಮಾನಿಸಲಾಗಿದೆ.

ನೆಲ ಹಾಸಿಗೆ ಸಲುವಾಗಿ ವಿನೈಲ್ ಫ್ಲೋರಿಂಗ್‍ನ್ನು ಪ್ರತಿ ಚದರ ಅಡಿಗೆ 31 ರೂಪಾಯಿಗಳ ದರದಲ್ಲಿ ಖರೀದಿಸಲು ತೀರ್ಮಾನಿಸಿದ್ದು, ಇದರಿಂದ ಒಟ್ಟು 7.9 ಲಕ್ಷ ಚದರ ಅಡಿಗೆ 2.45 ಕೋಟಿ ರೂಪಾಯಿಗಳಷ್ಟು ವೆಚ್ಚವಾಗಲಿದೆ.

ಪುನರ್ಬಳಕೆಯಾಗದ 19 ವಸ್ತುಗಳನ್ನು ಪ್ರತಿ ಸೆಟ್‌ಗೆ ಪ್ರತಿ ತಿಂಗಳಿಗೆ 6,500 ರೂಪಾಯಿಗಳ ಮೊತ್ತದಲ್ಲಿ ಬಾಡಿಗೆ ಪಡೆಯಲು ತೀರ್ಮಾನಿಸಿರುತ್ತಾರೆ. ಇದರಿಂದ ಪ್ರಸ್ತುತ ತಯಾರಿಯಲ್ಲಿರುವ 6,500 ಹಾಸಿಗೆಗಳಿಗೆ 19 ವಸ್ತುಗಳನ್ನು ಒಂದು ತಿಂಗಳಿಗೆ 4.23 ಕೋಟಿ ರೂಪಾಯಿಗಳ ಮೊತ್ತದಲ್ಲಿ ಬಾಡಿಗೆ ಪಡೆಯಲು ತೀರ್ಮಾನಿಸಲಾಗಿದೆ.

ಬಾಡಿಗೆ ಪಡೆದಿದ್ದ ಬಿಬಿಎಂಪಿ

ಬಾಡಿಗೆ ಪಡೆದಿದ್ದ ಬಿಬಿಎಂಪಿ

BIEC ಕೋವಿಡ್ ಕೇರ್ ಸೆಂಟರ್‌ನಲ್ಲಿ ಕಬ್ಬಿಣದ ಕಾಟ್ ಸೇರಿದಂತೆ ಹಾಸಿಗೆ ಸೆಟ್‌ಗೆ ಪ್ರತಿದಿನಕ್ಕೆ 800 ರೂ. ಗಳ ಬಾಡಿಗೆ ಆಧಾರದ ಮೇಲೆ ತರಲು ತೀರ್ಮಾನ ಮಾಡಿ ಸರಬರಾಜು ಮಾಡುವವರಿಗೆ ಕೊಟೇಶನ್ ಕೊಡಲಾಗಿತ್ತು. ಹಾಗೆ ಬಾಡಿಗೆ ಪಡೆದರೆ, ಪ್ರತಿ ಹಾಸಿಗೆ ಸೆಟ್‌ಗೆ 800 ರೂಪಾಯಿಗಳ ದಿನ ಬಾಡಿಗೆಯಂತೆ ಒಟ್ಟು 10 ಸಾವಿರ ಹಾಸಿಗೆಳಿಗೆ ದಿನಕ್ಕೆ 80 ಲಕ್ಷ ರೂಪಾಯಿಗಳಷ್ಟು ಬಾಡಿಗೆ ಆಗುತ್ತದೆ. ಒಂದು ತಿಂಗಳಿಗೆ ಬಾಡಿಗೆ ರೂಪದಲ್ಲಿ 24 ಕೋಟಿ ರೂಪಾಯಿಗಳನ್ನು ಕೊಡಬೇಕು.

ರಾಜ್ಯ ಸರ್ಕಾರ ಮುಂದಿನ 3 ರಿಂದ 6 ತಿಂಗಳುಗಳ ಕಾಲ ಈ ಕೋವಿಡ್ ಕೇರ್ ಸೆಂಟರ್ ನಡೆಸಲು ತೀರ್ಮಾನ ಮಾಡಿದೆ. ಹೀಗಾಗಿ 72 ರಿಂದ 144 ಕೋಟಿ ರೂಪಾಯಿಗಳನ್ನು ಕೇವಲ ಹಾಸಿಗೆಗಳಿಗೆ ಬಾಡಿಗೆ ರೂಪದಲ್ಲಿ ಹಣವನ್ನು ಸರ್ಕಾರ ಭರಿಸಬೇಕಾಗುತ್ತದೆ. ಉಸ್ತುವಾರಿ ಹೊತ್ತಿರುವ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಇದೆಲ್ಲವನ್ನೂ ವಿವರಿಸಿ ಕಳೆದ ಜುಲೈ 3 ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಅದಾದ ಮೇಲೆ ಮಾಧ್ಯಮಗಳಲ್ಲಿ ಬಾಡಿಗೆ ಬೆಡ್‌ಗಳ ವರದಿ ಪ್ರಕಟವಾಗುವ ಮೂಲಕ ಸರ್ಕಾರಕ್ಕೆ ಮುಜುಗರವಾಗಿತ್ತು.

ಪತ್ರ ಬರೆದಿದ್ದ IAS ಅಧಿಕಾರಿ

ಪತ್ರ ಬರೆದಿದ್ದ IAS ಅಧಿಕಾರಿ

ಒಂದು ಕಬ್ಬಿಣದ ಕಾಟು, ಎರಡು ಫೂಮ್ ಮೆಟ್ರೆಸ್, 3 ಸೆಟ್‌ ಬೆಡ್‌ಶೀಟ್‌ಗಳು, ಒಂದು ತಲೆದಿಂಬು, ಬ್ಲಾಂಕೆಟ್, ಟಾಲೆವ್ ಹಾಗೂ ಒಂದು ಪ್ಲಾಸ್ಟಿಕ್ ಚೇರ್‌ನ್ನು ಒಂದು ಸೆಟ್ ಹಾಸಿಗೆ ಹೊಂದಿದೆ. ಇಷ್ಟು ಹಾಸಿಗೆ ಸೆಟ್‌ನ್ನು ಮುಂದಿನ ಮೂರರಿಂದ ಆರು ತಿಂಗಳುಗಳಿಗೆ ಬಾಡಿಗೆ ಪಡೆದುಕೊಳ್ಳಲಾಗಿದೆ. ಆದರೆ ಒಂದು ಸೆಟ್‌ ಹಾಸಿಗೆಯನ್ನು ಈಗಿನ ಮಾರುಕಟ್ಟೆ ದರದಲ್ಲಿ 7 ಸಾವಿರ ರೂಪಾಯಿಗಳಲ್ಲಿ ಖರೀದಿ ಮಾಡಬಹುದು ಎಂದು ಹಿರಿಯ IAS ಅಧಿಕಾರಿಯೊಬ್ಬರು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದರು.


ಕೇವಲ 10 ಕೋಟಿ ರೂಪಾಯಿಗಳಲ್ಲಿ ಅಗತ್ಯವಿರುವ ಎಲ್ಲ 10 ಸಾವಿರ ಹಾಸಿಗೆ ಸೆಟ್‌ಗಳನ್ನು ಖರೀದಿ ಮಾಡಬಹುದು ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದರು. ಆದರೆ ಅವರ ಸಲಹೆ ಹೊರತಾಗಿಯೂ ಬಾಡಿಗೆ ರೂಪದಲ್ಲಿಯೇ ಹಾಸಿಗೆ ಸೆಟ್‌ ಪಡೆಯಲು ಬಿಬಿಎಂಪಿ ಮುಂದಾಗಿತ್ತು.

English summary
The state government has asked for the purchase of essential items at the BIEC Covid Care Center instead of renting them. The government has prevented unnecessary costs from renting essential items including cot, bed, blanket and plastic chair. The state government has instructed the BBMP commissioners to immediately pay the suppliers Rs 7.32 crore required to buy essential items instead of rent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X