ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾರರ ಪಟ್ಟಿಯಲ್ಲಿ 5 ಕೋಟಿ ಹೆಸರು: ಚುನಾವಣಾ ಆಯೋಗ

|
Google Oneindia Kannada News

ಬೆಂಗಳೂರು, ಜನವರಿ 16: ರಾಜ್ಯ ಚುನಾವಣಾ ಆಯೋಗವು ಲೋಕಸಭಾ ಚುನಾವಣೆ ಮತದಾರರ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. 2001ರ ಜನವರಿ 1ಕ್ಕೂ ಮೊದಲು ಜನಿಸಿರುವ ಎಲ್ಲರೂ ಮತದಾನಕ್ಕೆ ಅರ್ಹತೆ ಪಡೆಯಲಿದ್ದಾರೆ ಎಂದು ತಿಳಿಸಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, 2001ರ ಜನವರಿ 1ಕ್ಕೂ ಮೊದಲು ಜನಿಸಿರುವ ಎಲ್ಲರೂ ಮತ ಚಲಾಯಿಸುವ ಅರ್ಹತೆ ಪಡೆಯಲಿದ್ದಾರೆ. ಇನ್ನೂ ಸಮಯ ಇರುವುದರಿಂದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿ. ಮತದಾರರ ಪಟ್ಟಿ ಪರಿಶೀಲಿಸಿ ಹೆಸರು ಇದೆಯೋ ಇಲ್ಲವೇ ಪರಿಶೀಲಿಸಬೇಕು. ಜೊತೆಗೆ ಹೆಸರಿನಲ್ಲಿ ವ್ಯತ್ಯಾಸ, ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಜನವರಿ 25ರ ಬಳಿಕ ಹೊಸ ಮಾತದಾರರ ಕೈಸೇರಲಿದೆ ಗುರುತಿನ ಚೀಟಿ ಜನವರಿ 25ರ ಬಳಿಕ ಹೊಸ ಮಾತದಾರರ ಕೈಸೇರಲಿದೆ ಗುರುತಿನ ಚೀಟಿ

ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪಟ್ಟಿ ನೋಡಬಹುದು. ಚುನಾವಣೆಯಲ್ಲಿ ಮತದಾನ ಮಾಡಬೇಕಾದರೆ ಹೆಸರು ಪಟ್ಟಿಯಲ್ಲಿ ಇರಲೇಬೇಕು. ಈ ಹಿಂದೆ ಹೆಸರು ಇತ್ತು, ಮತದಾರರ ಗುರುತಿನ ಚೀಟಿ ಇದೆ ಎಂಬ ಕಾರಣಕ್ಕೆ ಮತಚಲಾಯಿಸಲು ಸಾಧ್ಯವಿಲ್ಲ. ಈಗಿನ ಪಟ್ಟಿಯಲ್ಲಿ ಹೆಸರು ಇರಲೇಬೇಕು.

state election commissioner Sanjeev Kumar revised voters list lok sabha elections

ತಮ್ಮ ಕುಟುಂಬದ ಹೆಸರು ಪರಿಶೀಲಿಸಿ, ಹೆಸರು ಸೇರಿಸಲು ಫಾರಂ 6 ಬಳಸಬೇಕು. ಖುದ್ದಾಗಿಯೇ ಅರ್ಜಿ ನೀಡಬೇಕು ಎಂದಿಲ್ಲ. ಆನ್ ಲೈನ್‌ನಲ್ಲಿ ಕೂಡ ರಿಜಿಸ್ಟ್ರೇಷನ್ ಮಾಡಬಹುದು. ಮನೆಗೆ ಬಂದು ಸ್ಥಳ ಪರಿಶೀಲನೆ ಮಾಡಿದ ನಂತರ ಆಯೋಗದ ಅಧಿಕಾರಿಗಳು ಪಟ್ಟಿಗೆ ಹೆಸರು ಸೇರ್ಪಡೆ ಮಾಡುತ್ತಾರೆ ಎಂದರು.

ಏಪ್ರಿಲ್ 2ನೇ ವಾರದಲ್ಲಿ ಸಾರ್ವತ್ರಿಕ ಚುನಾವಣೆ ಸಾಧ್ಯತೆ ಏಪ್ರಿಲ್ 2ನೇ ವಾರದಲ್ಲಿ ಸಾರ್ವತ್ರಿಕ ಚುನಾವಣೆ ಸಾಧ್ಯತೆ

2019 ರ ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಒಟ್ಟು 2,54,55,976 ಪುರುಷ ಮತದಾರರು, 2,48,46,488 ಮಹಿಳಾ ಮತದಾರರು, 4,718 ತೃತೀಯ ಲಿಂಗಿಗಳು ಸೇರಿ ಒಟ್ಟು 5,03,07,182 ಮತದಾರರಿದ್ದಾರೆ. ಇಪಿ ಅನುಪಾತ 71.7 ಮತ್ತು ಲಿಂಗಾನುಪಾತ 973 ಇದೆ ಎಂದು ಮಾಹಿತಿ ನೀಡಿದರು.

ಯುವ ಮತದಾರರ ಸಂಖ್ಯೆ ಹೆಚ್ಚಾಗಬೇಕಿದೆ. ಪಟ್ಟಿಗೆ ಸೇರ್ಪಡೆಗೊಳ್ಳಲು ತುಂಬಾ ಜನರು ಹೆಸರು ನೀಡಿಲ್ಲ. ಸದ್ಯ, 7.12 ಲಕ್ಷ ಯುವ ಮತದಾರರಿದ್ದಾರೆ. ಆದರೆ 15 ಲಕ್ಷಕ್ಕೆ ತಲುಪುವುದು ನಮ್ಮ ಗುರಿ ಎಂದರು.

state election commissioner Sanjeev Kumar revised voters list lok sabha elections

ಅಂಗವೈಕಲ್ಯವುಳ್ಳ ಮತದಾರರಿಗೆ ಈ ಬಾರಿ ಮನೆಯಿಂದ ಮತಗಟ್ಟೆಗೆ ತೆರಳಲು ವಾಹನ ವ್ಯವಸ್ಥೆ ಮಾಡಲಾಗುತ್ತದೆ. ವ್ಹೀಲ್ ಚೇರ್ ಇತ್ಯಾದಿ ಸೌಲಭ್ಯವೂ ಇದೆ. ಅಂಗವಿಕಲರು ಸೌಲಭ್ಯಕ್ಕೆ ಹೆಸರು ನೋಂದಣಿ ಮಾಡಿದರೆ ಅಂತಹವರಿಗೆ ಸಹಾಯ ಮಾಡಲು ಆಯೋಗ ಸಿದ್ಧವಿದೆ ಎಂದರು.

ಚುನಾವಣೆ ಆಯೋಗದ ವೆಬ್ ಸೈಟ್ ನಲ್ಲೇ 2 ಗಂಟೆ ಮಾಹಿತಿ ತಡ, ಏಕೆ ಗೊತ್ತಾ?ಚುನಾವಣೆ ಆಯೋಗದ ವೆಬ್ ಸೈಟ್ ನಲ್ಲೇ 2 ಗಂಟೆ ಮಾಹಿತಿ ತಡ, ಏಕೆ ಗೊತ್ತಾ?

ಮತದಾರರ ಗುರುತಿನ ಚೀಟಿಯಲ್ಲಿ ಭಾವಚಿತ್ರ ಇಲ್ಲದೇ ಇರುವವರು 1,25,715 ಇದ್ದಾರೆ. ಅವರ ಫೋಟೋ ಸಂಗ್ರಹಿಸಿ ತಿದ್ದುಪಡಿ ಮಾಡಲಾಗಿದೆ‌. ಆದರೂ 34,361 ಮಂದಿ ಇನ್ನೂ ಉಳಿದಿದ್ದಾರೆ. ಅವರು ಬೇರೆಡೆ ವಲಸೆ ಹೋಗಿದ್ದಾರೆ. ಅವರನ್ನೂ ಪಟ್ಟಿಗೆ ಸೇರಿಸುವ ಪ್ರಯತ್ನಕ್ಕೂ ಆಯೋಗ ಮುಂದಾಗಿದೆ ಎಂದು ತಿಳಿಸಿದರು.

English summary
State election commissioner Sanjeev Kumar on Wednesday released the revised list of voters. People who born withing January 1st, 2001 are eligible to enroll their name on the list, he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X