ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಚುನಾವಣಾ ಕಾವು: ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ಇಂದು ಪ್ರಕಟ

|
Google Oneindia Kannada News

ಬೆಂಗಳೂರು, ನವೆಂಬರ್ 30: ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯಿತಿ ಚುನಾವಣೆಗಳಿಗೆ ಇಂದು ದಿನಾಂಕ ನಿಗದಿಪಡಿಸುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯದಲ್ಲಿ ಸ್ಥಳೀಯ ಮಟ್ಟದಲ್ಲಿ ರಾಜಕೀಯ ಪಕ್ಷಗಳ ಚಟುವಟಿಕೆಗಳು ಇಂದಿನಿಂದಲೇ ಚುರುಕುಗೊಳ್ಳಲಿದೆ.

ಚುನಾವಣಾ ಆಯೋಗವು ಸೋಮವಾರ ಬೆಳಿಗ್ಗೆ 11.30ರ ವೇಳೆಗೆ ಗ್ರಾಮ ಪಂಚಾಯಿತಿ ಚುನಾವಣೆಯ ದಿನಾಂಕ ಪ್ರಕಟಿಸಲಿದೆ. ಹೀಗಾಗಿ ದಿನಾಂಕ ಪ್ರಕಟವಾದ ಸಂದರ್ಭದಿಂದಲೇ ರಾಜ್ಯದಾದ್ಯಂತ ನೀತಿ ಸಂಹಿತೆ ಜಾರಿಗೆ ಬರಲಿದೆ. ಹೀಗಾಗಿ ಎಲ್ಲ ಹೊಸ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯ ಕಾರ್ಯಕ್ರಮಗಳು ಸ್ಥಗಿತಗೊಳ್ಳಲಿದೆ.

ಗ್ರಾಮ ಪಂಚಾಯಿತಿ ಚುನಾವಣೆ; ಜೆಡಿಎಸ್ ಮಹತ್ವದ ನಡೆ ಗ್ರಾಮ ಪಂಚಾಯಿತಿ ಚುನಾವಣೆ; ಜೆಡಿಎಸ್ ಮಹತ್ವದ ನಡೆ

ಒಟ್ಟು ಎರಡು ಹಂತಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ರಾಜ್ಯಾದ್ಯಂತ ಸುಮಾರು 6,021 ಗ್ರಾಮ ಪಂಚಾಯಿತಿಗಳಲ್ಲಿ 85,000ಕ್ಕೂ ಅಧಿಕ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಕಳೆದ ಎರಡು ತಿಂಗಳಲ್ಲಿ ರಾಜ್ಯದ 33 ಗ್ರಾಮ ಪಂಚಾಯಿತಿಗಳನ್ನು ನಗರ ಸ್ಥಳೀಯ ಸಂಸ್ಥೆಗಳಿಗೆ ಉನ್ನತೀಕರಿಸಲಾಗಿದೆ. ಮುಂದನ ಎರಡು ವರ್ಷಗಳಲ್ಲಿ ಇನ್ನೂ ನೂರು ಗ್ರಾಮ ಪಂಚಾಯಿತಿಗಳು ಉನ್ನತೀಕರಣಗೊಳ್ಳಲಿವೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಮುಂದಿನ ವರ್ಷ ನಡೆಯುವ ಸಾಧ್ಯತೆ ಇದೆ. ಮುಂದೆ ಓದಿ.

ಗ್ರಾಮ ಪಂಚಾಯತ್ ಚುನಾವಣೆ ಕುರಿತು ಶಿರಸಿಯಲ್ಲಿ ಡಿಕೆಶಿ ಮಹತ್ವದ ಹೇಳಿಕೆ!ಗ್ರಾಮ ಪಂಚಾಯತ್ ಚುನಾವಣೆ ಕುರಿತು ಶಿರಸಿಯಲ್ಲಿ ಡಿಕೆಶಿ ಮಹತ್ವದ ಹೇಳಿಕೆ!

ಎಲ್ಲೆಲ್ಲಿ ಎಷ್ಟು?

ಎಲ್ಲೆಲ್ಲಿ ಎಷ್ಟು?

ಆರು ಗ್ರಾಮ ಪಂಚಾಯಿತಿಗಳು ಬೆಂಗಳೂರು ನಗರಕ್ಕೆ ಸೇರ್ಪಡೆಯಾದರೆ, ಐದು ಬೆಳಗಾವಿ ಮತ್ತು ತಲಾ ಮೂರು ಗ್ರಾಮ ಪಂಚಾಯಿತಿಗಳು ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳ ನಗರ ಪ್ರದೇಶಗಳಿಗೆ ಸೇರ್ಪಡೆಯಾಗಿವೆ. ಇನ್ನುಳಿದ ಪಂಚಾಯಿತಿಗಳು ಇತರೆ ಏಳು ಜಿಲ್ಲೆಗಳಲ್ಲಿ ನಗರ ವಲಯಕ್ಕೆ ಸೇರ್ಪಡೆಗೊಂಡಿವೆ. ಹೀಗಾಗಿ ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಹಲವು ಬದಲಾವಣೆಗಳು ಉಂಟಾಗಲಿವೆ.

ಗ್ರಾ.ಪಂ ಸಂಖ್ಯೆ 5,976ಕ್ಕೆ ಇಳಿಕೆ

ಗ್ರಾ.ಪಂ ಸಂಖ್ಯೆ 5,976ಕ್ಕೆ ಇಳಿಕೆ

2018ರಲ್ಲಿ ಕರ್ನಾಟಕದಲ್ಲಿ 6,021 ಗ್ರಾಮ ಪಂಚಾಯಿತಿಗಳಿದ್ದವು. ಈಗ ಗ್ರಾಮ ಪಂಚಾಯಿತಿಗಳ ಉನ್ನತೀಕರಣದಿಂದ ಪಂಚಾಯಿತಿಗಳ ಸಂಖ್ಯೆ 5,976ಕ್ಕೆ ಇಳಿಯಲಿದೆ. ಈ ಕಾರಣದಿಂದ ಅನೇಕ ಗ್ರಾಮ ಪಂಚಾಯಿತಿಗಳು ಪ್ರಸಕ್ತ ಚುನಾವಣೆಯಿಂದ ಹೊರಗುಳಿಯಲಿವೆ.

ಮುಂದಿನ ವರ್ಷ ಜನಗಣತಿಯೂ ಶುರು

ಮುಂದಿನ ವರ್ಷ ಜನಗಣತಿಯೂ ಶುರು

ಇದುವರೆಗೂ ಪ್ರತಿ ವರ್ಷ ಸರಾಸರಿ 2-3 ಗ್ರಾಮ ಪಂಚಾಯಿತಿಗಳನ್ನು ಉನ್ನತೀಕರಿಸಲಾಗುತ್ತಿತ್ತು. ಆದರೆ ಈ ಬಾರಿ ಅತ್ಯಧಿಕ ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಮುಂಬರುವ ಪಂಚಾಯಿತಿ ಚುನಾವಣೆ ಮತ್ತು 2021ರ ಜನಗಣತಿ ಮುಂದಿನ ವರ್ಷದ ಆರಂಭದಿಂದಲೇ ಶುರುವಾಗಲಿದೆ. ಈ ಕಾರಣದಿಂದ ಗ್ರಾಮ ಒಂಚಾಯಿತಿ ಮಟ್ಟದಿಂದ ಅಭಿವೃದ್ಧಿ ಹೊಂದಿರುವ 33 ಪಂಚಾಯಿತಿಗಳನ್ನು ಈಗಾಗಲೇ ಮೇಲ್ದರ್ಜೆಗೆ ಏರಿಸಲಾಗಿದೆ.

ರಾಜಕೀಯ ಪಕ್ಷಗಳ ಚಟುವಟಿಕೆ

ರಾಜಕೀಯ ಪಕ್ಷಗಳ ಚಟುವಟಿಕೆ

ಕಳೆದ ತಿಂಗಳು ಉಪ ಚುನಾವಣೆಯ ಕಾದಾಟವನ್ನು ಕಂಡಿದ್ದ ರಾಜ್ಯದಲ್ಲಿ ಇಂದಿನಿಂದಲೇ ಗ್ರಾಮ ಪಂಚಾಯಿತಿ ಚುನಾವಣೆಯ ಚಟುವಟಿಕೆಗಳು ಬಿರುಸಾಗಲಿವೆ. ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷವಾರು ಅಭ್ಯರ್ಥಿಗಳ ಪೈಪೋಟಿ ಅಲ್ಲ ಎಂದಿದ್ದರೂ, ಪರೋಕ್ಷವಾಗಿ ಇದು ರಾಜಕೀಯ ಪಕ್ಷಗಳ ಕಾದಾಟ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಲಿದ್ದು, ತಳಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಇದು ಮುಖ್ಯವಾಗಲಿದೆ.

English summary
Karnataka State Election Commission is likely to declare Grama Panchayat elections today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X