ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನನ್ನ ಪತ್ನಿ ಪ್ರಾಣಕಂಟಕಿ, ದಯವಿಟ್ಟು ಕಾಪಾಡಿ'

By Mahesh
|
Google Oneindia Kannada News

ಮೈಸೂರು, ಜ.7: ಇಲ್ಲಿನ ಮಹಿಳಾ ಪೊಲೀಸ್ ಠಾಣೆಗೆ ಬೋಗಾದಿ ಮೂಲದ ಅನಿವಾಸಿ ಭಾರತೀಯರೊಬ್ಬರು ಬಂದು 'ನನ್ನ ಪತ್ನಿ ಪ್ರಾಣಕಂಟಕಿಯಾಗಿದ್ದಾಳೆ. ನನಗೆ ಹಾಗೂ ನನ್ನ ಮಕ್ಕಳಿಗೆ ಆಕೆಯಿಂದ ಜೀವ ಬೆದರಿಕೆ ಇದೆ. ದಯವಿಟ್ಟು ರಕ್ಷಣೆ ಕೊಡಿ' ಎಂದು ದೂರು ನೀಡಿದ್ದಾರೆ. ಅನಿವಾಸಿ ಭಾರತೀಯ 44 ವರ್ಷದ ಸೆಂತೂರ್ ಪತಿ ದೂರು ಸ್ವೀಕರಿಸಿರುವ ಠಾಣಾಧಿಕಾರಿ ತನಿಖೆ ಕೈಗೊಂಡಿದ್ದಾರೆ.

ಮೈಸೂರಿನ ಬೋಗಾದಿ ಎರಡನೇ ಹಂತದ ನಿವಾಸಿ ಸೆಂತೂರ್ ಪತಿ ಅವರು ಸುಮಾರು 15ವರ್ಷಗಳ ಹಿಂದೆ, ಮೈಸೂರಿನ ಮೀನಾಕ್ಷಿ (35) ಅವರನ್ನು ಮದುವೆಯಾಗಿದ್ದಾರೆ. ಇಬ್ಬರದ್ದು ಪ್ರೇಮ ವಿವಾಹವಾಗಿತ್ತು. ದಂಪತಿಗೆ ಈಗ 12 ವರ್ಷ ಹೆಣ್ಣು ಮಗುವೊಂದಿದೆ. ಮದುವೆ ಸಂದರ್ಭದಲ್ಲಿ ಎರಡು ಕಡೆ ಖರ್ಚು ವೆಚ್ಚವನ್ನು ಸಂತೂರಪತಿ ಅವರೇ ಭರಿಸಿದ್ದಾರಂತೆ.

ಕೆಲಸದ ನಿಮಿತ್ತ ಕೆನಡಾಕ್ಕೆ ಸೆಂತೂರಪತಿ ಆಗಾಗ ಹೋಗಿ ಬರುತ್ತಿದ್ದರು. ಇತ್ತೀಚೆಗೆ ಯಾವುದೋ ಸಣ್ಣ ವಿಷಯಕ್ಕೆ ಪತ್ನಿಯನ್ನು ಪ್ರಶ್ನೆ ಮಾಡಿದ ಸಂತೂರ್ ಪತಿ ಅವರಿಗೆ ಸಿಕ್ಕ ಉತ್ತರ ಕೇಳಿ ತತ್ತರಿಸಿದ್ದಾರೆ. 'ತಾನು ಆತ್ಮಹತ್ಯೆ ಮಾಡಿಕೊಂಡು ನಿನ್ನನ್ನು ಜೈಲಿಗೆ ಕಳುಹಿಸುತ್ತೇನೆ ಅಥವಾ ವಿಷ ಹಾಕಿ ನಿನ್ನನ್ನು ಕೊಲ್ಲುತ್ತೇನೆ' ಎಂದು ಮೀನಾಕ್ಷಿ ಬೆದರಿಕೆ ಹಾಕಿದ್ದಾರೆ.

ಈಕೆ ನಡುವಳಿಕೆ ಪ್ರಶ್ನಿಸಿದ್ದರಿಂದಾಗಿ ಸಿಟ್ಟಿಗೆದ್ದ ತನ್ನ ಪತ್ನಿ, 'ತಾನು ಆತ್ಮಹತ್ಯೆ ಮಾಡಿಕೊಂಡು ನಿನ್ನನ್ನು ಜೈಲಿಗೆ ಕಳುಹಿಸುತ್ತೇನೆ ಅಥವಾ ವಿಷ ಹಾಕಿ ನಿನ್ನನ್ನು ಕೊಲ್ಲುತ್ತೇನೆ' ಎಂದು ಬೆದರಿಕೆ ಹಾಕುತ್ತಿದ್ದಾಳೆ. ಈಗಲೂ ಒಂದೇ ಮನೆಯಲ್ಲಿದ್ದರೂ ಎರಡು ಮೂರು ತಿಂಗಳಿಂದ ತಾನು ಮನೆಯಲ್ಲಿ ಊಟ ಮಾಡಿಲ್ಲ.

ಮಗು, ಪತಿ ಬೇಡ: ಮಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಅಪರಿಚಿತ ವ್ಯಕ್ತಿಯೊಂದಿಗೆ ಸುತ್ತಾಡುತ್ತಿದ್ದಾಳೆ. ನನ್ನ ಜತೆ ಹೆಚ್ಚು ಕಾಲ ಜಗಳವಾಡುವುದರಲ್ಲೇ ಕಳೆಯುತ್ತಾಳೆ. ಮೇಲಾಗಿ ಜೀವ ಬೆದರಿಕೆ ಒಡ್ಡಿದ್ದಾಳೆ ಎಂದು ಸೆಂತುರ್ ಪತಿ ದೂರಿದ್ದಾರೆ. ಮೀನಾಕ್ಷಿ ಹೆಸರಿನಲ್ಲಿ ಲಕ್ಷ ರೂ.ಚಿನ್ನಾಭರಣ, ದ್ವಿಚಕ್ರ ವಾಹನ, ಬ್ಯಾಂಕಿನಲ್ಲಿ ಅಗತ್ಯ ಹಣವನ್ನು ಪತ್ನಿ ಹೆಸರಲ್ಲಿ ಸಂತೂರ್ ಪತಿ ಠೇವಣಿ ಇಟ್ಟಿದ್ದರಂತೆ.

ಪುತ್ತೂರು, ಆನೇಕಲ್, ಬಾಳೆಹೊನ್ನೂರು, ಉಡುಪಿ, ಶಿವಮೊಗ್ಗ, ಚಿತ್ರದುರ್ಗ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ

ಅಪಘಾತಕ್ಕೆ ಪೊಲೀಸ್ ಪೇದೆ ಬಲಿ

ಅಪಘಾತಕ್ಕೆ ಪೊಲೀಸ್ ಪೇದೆ ಬಲಿ

ಪುತ್ತೂರು ಟ್ರಾಫಿಕ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ಕುಬೇರ(26) ಎಂಬವರು ಸೋಮವಾರ ದಾವಣಗೆರೆಯಲ್ಲಿ ನಡೆದ ರಸ್ತೆ ಅಪಘಾತ ವೊಂದರಲ್ಲಿ ಮೃತಪಟ್ಟಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಪನ ಹಳ್ಳಿ ತಾಲೂಕಿನ ಕೊಟ್ರಳ್ಳಿ ನಿವಾಸಿಯಾಗಿದ್ದ ಕುಬೇರ ಅವರು ಕಳೆದ ಒಂದು ವರ್ಷದಿಂದ ಪುತ್ತೂರು ಟ್ರಾಫಿಕ್ ಠಾಣೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜ್ವರ ಬಂದ ಹಿನ್ನೆಲೆಯಲ್ಲಿ ರಜೆ ಪಡೆದುಕೊಂಡು ತನ್ನ ಊರಿಗೆ ಹೋಗಿದ್ದ ಕುಬೇರ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ದಾವಣಗೆರೆಯ ಹೊನ್ನಾಳಿಯಲ್ಲಿ ರಸ್ತೆ ವಿಭಜಕಕ್ಕೆ ಬೈಕ್ ಢಿಕ್ಕಿ ಹೊಡೆದು ರಸ್ತೆಗೆಸೆಯಲ್ಪಟ್ಟು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಗಂಗಾವತಿಯಲ್ಲಿ ತಲೆಗೆ ಗುಂಡು

ಗಂಗಾವತಿಯಲ್ಲಿ ತಲೆಗೆ ಗುಂಡು

ವ್ಯಕ್ತಿಯೋರ್ವನಿಗೆ ನಾಡ ಪಿಸ್ತೂಲ್ ನಿಂದ ಗುಂಡು ಹೊಡೆದ ಪರಿಣಾಮ ತಲೆಗೆ ಗುಂಡೇಟು ತಗಲಿ ತೀವ್ರ ಗಾಯವಾದ ಘಟನೆ ಆರ್ಹಾಳ ಗ್ರಾಮದ ಹತ್ತಿರ ಸೋಮವಾರ ನಡೆದಿದೆ.

ಗಾಯಗೊಂಡವರನ್ನು ಯರಡೋಣ ಗ್ರಾಮದ ಚನ್ನನಗೌಡ(31) ಎಂದು ತಿಳಿದು ಬಂದಿದೆ. ಆರೋಪಿ ಹೊಸಳ್ಳಿ ನಿವಾಸಿ ಬಸವರಾಜ ಎಂಬವರು ವಡ್ಡರಹಟ್ಟಿಯಿಂದ ಕಾರಿನಲ್ಲಿ ಕರೆದುಕೊಂಡು ಹೋಗುವಾಗ ಆರ್ಹಾಳ ಹತ್ತಿ ಮುಂದೆ ಕುಳಿತಿದ್ದ ಚನ್ನನಗೌಡನಿಗೆ ನಾಡ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.

ತಲೆಗೆ ಗುಂಡು ತಗುಲಿದ್ದರಿಂದ ತೀವ್ರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ತಿಗೆ ಸಂಬಂಧಿಸಿದಂತೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಂಕರನಾರಾಯಣ : ಅಸ್ವಾಭಾವಿಕ ಮರಣ ಪ್ರಕರಣ

ಶಂಕರನಾರಾಯಣ : ಅಸ್ವಾಭಾವಿಕ ಮರಣ ಪ್ರಕರಣ

ಸದಾಶಿವ ಶೆಟ್ಟಿ(50) ವಾಸ: ಜಡ್ಡಿನಮನೆ ಕೊಡ್ಲಾಡಿ ಗ್ರಾಮ ಕುಂದಾಪುರ ತಾಲೂಕು ಇವರ ಮಗಳು ಶೀಲಾ (23) ಎಂಬುವವಳು ಕುಂದಾಪುರ ತಾಲೂಕು ವಂಡ್ಸೆ ಹೋಬಳಿಯ ಕೊಡ್ಲಾಡಿ ಗ್ರಾಮದ ಸದಾಶಿವ ಶೆಟ್ಟಿರವರ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಚಾ ಮಾಡಲು ಒಲೆಗೆ ಕಟ್ಟಿಗೆ ತುಂಬಿ ಕಟ್ಟಿಗೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಕಡ್ಡಿಯಿಂದ ಕೀರಿದಾಗ ಒಮ್ಮೇಲೆ ಬೆಂಕಿ ಹತ್ತಿಕೊಂಡು ಶೀಲಾಳು ಧರಿಸಿದ್ದ ನೈಟಿಗೆ ಬೆಂಕಿ ತಗುಲಿಕೊಂಡಿದೆ.

ಕೂಗಾಡುತ್ತಿದ್ದವಳನ್ನು ಮನೆಯ ಹೊರಗಡೆ ಇರುವ ಶೀಲಾಳ ದೊಡ್ಡಪ್ಪ, ಮಾಲತಿ, ಬಾಬಿ ಎಂಬುವವರು ಶೀಲಾಳ ಮೈಗೆ ಹತ್ತಿದ ಬೆಂಕಿಯನ್ನು ನಂದಿಸಿ ಸುಟ್ಟ ಗಾಯಕ್ಕೊಳಗಾದ ಶೀಲಾಳನ್ನು ಚಿಕಿತ್ಸೆಯ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಕುಂದಾಪುರ ಸರಕಾರಿ ಆಸ್ಪತ್ರೆಯ ವೈದ್ಯರು ಶೀಲಾಳನ್ನು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ.

ಶೀಲಾಳನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್‌ಲಾಕ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೆನ್ ಲಾಕ್ ಆಸ್ಪತ್ರೆಯ ವೈದ್ಯರು ಶೀಲಾಳನ್ನು ಒಳರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ ಆರಂಭಿಸಿರುತ್ತಾರೆ.

ಶೀಲಾಳು ವೈದ್ಯಕೀಯ ಚಿಕಿತ್ಸೆಯಲ್ಲಿರುತ್ತಾ ದಿನಾಂಕ 06/01/2014 ರಂದು ಸಂಜೆ 15:45 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುವುದಾಗಿದೆ. ಎಂಬುದಾಗಿ ಸದಾಶಿವ ಶೆಟ್ಟಿ ಇವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣಾ ಅಸ್ವಾಭಾವಿಕ ಮರಣ 01/2014 ಕಲಂ 174 ಸಿ.ಅರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

ರಸ್ತೆ ಅಪಘಾತ ಸಾವು [ ಶಿವಮೊಗ್ಗ ಗ್ರಾಮಾಂತರ ಠಾಣೆ]

ರಸ್ತೆ ಅಪಘಾತ ಸಾವು [ ಶಿವಮೊಗ್ಗ ಗ್ರಾಮಾಂತರ ಠಾಣೆ]

ಅಬ್ಬಲಗೆರೆಯಲ್ಲಿ ಪಿರ್ಯಾದಿ ಕೃಷ್ಣಪ್ಪ ವಾಸ ಅಬ್ಬಲಗೆರೆ ಇವರ ಹೆಂಡತಿ ಮುರುಗಮ್ಮ ಇವರು ಆರೋಪಿಗಳು ಆದ ಅಣ್ಣಪ್ಪ ಮತ್ತು ಪಾಪನಾಯ್ಕ ವಾಸ ಅಬ್ಬಲಗೆರೆ ಇವರಿಗೆ ಸೇರಿದ ಕೆ ಎ 14 ಟಿ ಎ 2513 ಟ್ರಾಕ್ಟರ್ನಲ್ಲಿ ಮೆಕ್ಕೆ ಜೋಳ ಹೊಡೆಯುತ್ತಿರುವಾಗ , ಮೃತಳ ಸೀರೆಯು ಟ್ರಾಕ್ಟರ್ ಇಂಜೀನಿಗೆ ಸಿಕ್ಕಿ ಮೃತಪಟ್ಟಿರುತ್ತಾಳೆ

ಬಾಳೆಹೊನ್ನೂರು : ಕೊಲೆ ಪ್ರಕರಣ

ಬಾಳೆಹೊನ್ನೂರು : ಕೊಲೆ ಪ್ರಕರಣ

ಬಾಳೆಹೊನ್ನುರು ಪೊಲೀಸ್‌ ಠಾಣೆ ಮೊ.ಸಂ.02/2014 - ಕಲಂ: 302 ಐಪಿಸಿ - ಜ.5ರಂದು ರಂದು ರಾತ್ರಿ 01-15 ಗಂಟೆಗೆ ಪಿರ್ಯಾದುದಾರಾದ ವಾಸು ಬಿನ್ ಲೇಟ್ ಸಿ,ಎಂ, ವೇಲಾಯುಧನ್(60), ಮಲೆಯಾಳಿ ಪೂಜಾರ್ ಜನಾಂಗ ಕೂಲಿ ಕೆಲಸ ವಾಸ ವಿವೇಕನಗರ ಬಾಳೆಹೊನ್ನೂರು ಟೌನ್ ನ,ರಾ,ಪುರ ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರು:

ಪಿರ್ಯಾದುದಾರ ತನ್ನ ಹಿರಿಯ ಮಗಳಾದ ಶ್ರೀಮತಿ ಪ್ರಭಾವತಿ ಸುಮಾರು 46 ವರ್ಷ ಇವಳನ್ನು ಈಗ್ಗೆ ಸುಮಾರು 26 ವರ್ಷಗಳ ಹಿಂದೆ ಕಡ್ಲೆಮಕ್ಕಿ ವಾಸಿ ಆರೋಪಿತನಾದ ವೆಂಕಟೇಶ್ ರವರಿಗೆ ವಿವಾಹ ಮಾಡಿಕೊಟ್ಟಿದ್ದು. ಅವರಿಗೆ 2 ಜನ ಗಂಡು ಮಕ್ಕಳಿರುತ್ತಾರೆ. ದಿನಾಂಕ:-04-01-2014 ರಂದು ರಾತ್ರಿ ಸುಮಾರು 10-00 ರಿಂದ 10-30 ಗಂಟೆಯ ನಡುವಿನ ವೇಳೆಯಲ್ಲಿ ಠಾಣಾ ವ್ಯಾಪ್ತಿಯ ಕಡ್ಲೆಮಕ್ಕಿ ಯಲ್ಲಿ ಆರೋಪಿತನಾದ ವೆಂಕಟೇಶನು ಅತೀಯಾಗಿ ಮದ್ಯಪಾನ ಮಾಡಿಕೊಂಡು ತನ್ನ ಮನೆಗೆ ಬಂದು ತನ್ನ ಹೆಂಡತಿ ಶ್ರೀಮತಿ ಪ್ರಭಾವತಿಯೊಂದಿಗೆ ವಿನಾಕಾರಣ ಜಗಳ ತೆಗೆದು ಮನೆಯಲ್ಲಿದ್ದ ಯಾವುದೋ ದೊಣ್ಣೆಯಿಂದ ಈ ದಿನ ನಿನ್ನನ್ನು ಕೊಲೆ ಮಾಡದೇ ಬಿಡುವುದಿಲ್ಲವೆಂದು ಹೇಳಿ ಉದ್ದೇಶಪೂರ್ವಕವಾಗಿ ಅವಳ ತಲೆಗೆ ಮೈಕೈಗೆ ಬಲವಾಗಿ ಹೊಡೆದಿದ್ದರಿಂದ ಅವಳಿಗೆ ತಲೆಗೆ ಮೈಕೈಗೆ ತೀವ್ರವಾಗಿ ಪೆಟ್ಟಾಗಿ ರಕ್ತಸ್ರಾವವಾಗಿದ್ದರಿಂದ ಶ್ರೀಮತಿ ಪ್ರಭಾವತಿಯು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ,

ಚಳ್ಳಕೆರೆ: ಅಸ್ವಾಭಾವಿಕ ಮರಣ ಪ್ರಕರಣ

ಚಳ್ಳಕೆರೆ: ಅಸ್ವಾಭಾವಿಕ ಮರಣ ಪ್ರಕರಣ

ಚಳ್ಳಕೆರೆ ತಾಲ್ಲೂಕಿನ ನೇರ್ಲಗುಂಟೆ ಗ್ರಾಮದ ವಾಸಿ ನಾಗರಾಜ(45) ಎಂಬ ರೈತನು ತನ್ನ ಕುಟುಂಬ ನಿರ್ವಹಣೆ ಮತ್ತು ಇತರೆ ಕೆಲಸ ಕಾರ್ಯಗಳಿಗಾಗಿ ಕೈ ಸಾಲ ಮಾಡಿಕೊಂಡಿದ್ದು, ಜಮೀನಿನಲ್ಲಿ ಬೆಳೆ ಸರಿಯಾಗಿ ಬರದಿರುವ ಕಾರಣ ಹೇಗೆ ಸಾಲ ತೀರಿಸುವುದು ಎಂದು ಜೀವನದಲ್ಲಿ ಜಿಗುಪ್ಪೆಗೊಂಡು ತನ್ನ ಜಮೀನಿನಲ್ಲಿರುವ ಹೊಂಗೆ ಮರಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುವ ಘಟನೆ ನಿನ್ನೆ ರಾತ್ರಿಯಿಂದ ಇಂದು ಬೆಳಗಿನ ಜಾವದ ಮಧ್ಯದಲ್ಲಿನ ಯಾವುದೋ ಸಮಯದಲ್ಲಿ ನಡೆದಿರುತ್ತದೆ. ಈ ಬಗ್ಗೆ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.

English summary
Karnataka Crime news Coverage : Mysore city woman Police station received a complaint from a Bogadi resident who alleged his wife is harassing him and not taking care of their children and Many more crime news from across the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X