ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಡಲಿನ ಸೆಳೆತಕ್ಕೆ ಸಿಕ್ಕು ವಿದ್ಯಾರ್ಥಿಗಳ ದುರ್ಮರಣ

By Mahesh
|
Google Oneindia Kannada News

ಮಂಗಳೂರು, ಡಿ.16: ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಿದ್ದ ವಿದ್ಯಾರ್ಥಿಗಳಿ ಸಮುದ್ರ ಪಾಲಾಗಿರುವ ದಾರುಣ ಘಟನೆ ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಮೂವರು ಮೃತ ಯುವಕರನ್ನು ಬೆಂಗಳೂರಿನ ನಿವಾಸಿಗಳಾದ ಸೋಮಶೇಖರ (30), ರೂಪೇಶ್(20) ಮತ್ತು ಗೌತಮ್(21) ಎಂದು ಗುರುತಿಸಲಾಗಿದೆ.

ಜಯನಗರದ ಟೆಂಪೋ ಟ್ರಾವೆಲ್ಸ್ ವಾಹನದಲ್ಲಿ ಸುಮಾರು 15 ಜನರಿದ್ದ ಸ್ನೇಹಿತರ ತಂಡ ಶನಿವಾರ ವಿವಿಧೆಡೆ ಪ್ರವಾಸ ಹೊರಟು ಸೋಮವಾರ ಬೆಳಗ್ಗೆ ಉಡುಪಿ ತಾಲೂಕಿನ ಮಲ್ಪೆ ಸಮುದ್ರ ತೀರಕ್ಕೆ ಬಂದಿದೆ. ಈ ವೇಳೆ ಸಮುದ್ರದಲ್ಲಿ ಸ್ನೇಹಿತರೊಂದಿಗೆ ಈಜಾಡುತ್ತಿದ್ದ ರೂಪೇಶ್ ಮತ್ತು ಗೌತಮ್ ಜೋರಾಗಿ ಬಂದ ಅಲೆಯ ರಭಸಕ್ಕೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಸೋಮಶೇಖರ್ ಅವರ ಮೃತ ದೇಹ ಥೊಟ್ಟಂ ಬೀಚ್ ನಲ್ಲಿ ಸಿಕ್ಕಿದೆ ದಿಲೀಪ್ ಎಂಬುವನ ಸ್ಥಿತಿ ಗಂಭೀರವಾಗಿದ್ದು, ತಕ್ಷಣ ಈತನನ್ನು ಉಡುಪಿ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರೂಪೇಶ್ ಹಾಗೂ ಗೌತಮ್ ಬಾಬು ಅವರು ಬನಶಂಕರಿಯ ಶ್ರೀಕೃಷ್ಣ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ರೂಪೇಶ್ ಅವರು ಬೆಂಗಳೂರಿನ ವಸಂತಪುರ ನಿವಾಸಿಯಾಗಿದ್ದು, ಅವರ ತಂದೆ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗೌತಮ್ ಅವರುಕತ್ರಿಗುಪ್ಪೆ ನಿವಾಸಿ ವಕೀಲರೊಬ್ಬರ ಮಗ ಎಂದು ತಿಳಿದು ಬಂದಿದೆ.

ಇಬ್ಬರು ಸ್ನೇಹಿತರನ್ನು ಕಳೆದುಕೊಂಡ ಇನ್ನುಳಿದ ಸ್ನೇಹಿತರು ಭಾರವಾದ ಹೃದಯದಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಮೃತ ಯುವಕರ ಮನೆ ಮುಂದೆ ಸ್ನೇಹಿತರು, ಸುತ್ತಮುತ್ತಲ ನಿವಾಸಿಗಳು, ಸಂಬಂಧಿಕರು ಜಮಾಯಿಸಿದ್ದಾರೆ. ಮಲ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ತುಮಕೂರು, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ...

ಕುಂದಾಪುರ

ಕುಂದಾಪುರ

ಪಿರ್ಯಾದಿದಾರ ಸುರೇಶ ತಂದೆ ಮಹಾಲಿಂಗ ವಾಸ ಜನತಾ ಹೌಸ್ ವಕ್ವಾಡಿ ಗ್ರಾಮ ಎಂಬವರ ತಂದೆ ಸುಮಾರು 56 ವರ್ಷ ಪ್ರಾಯದ ಮಹಾಲಿಂಗ ಎಂಬುವರು ಸುಮಾರು ವರ್ಷಗಳಿಂದ ವಿಪರಿತ ಶರಾಬು ಸೇವಿಸುವ ಚಟ ಹೊಂದಿದ್ದು ಇದೇ ಕಾರಣಕ್ಕೆ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದು ಈ ಬಗ್ಗೆ ಚಿಕಿತ್ಸೆ ಕೊಡಿಸಿದ್ದರು ಸಹ ಚಿಕಿತ್ಸೆ ಫಲಕಾರಿಯಾಗದೇ ಮಾನಸಿಕವಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 15/12/13 ರಂದು ಸಂಜೆ ಮನೆಯ ಹಿಂಬದಿಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಸುರೇಶ ರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 60/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಚಿಕ್ಕಮಗಳೂರು

ಚಿಕ್ಕಮಗಳೂರು

ಮೂಡಿಗೆರೆ ಪೊಲೀಸ್ ಠಾಣೆ ಮೊ.ಸಂ.166/2013 - ಕಲಂ: 457 380 ಐಪಿಸಿ - ಮೂಡಿಗೆರೆ ಪೊಲೀಸ್ ಠಾಣಾ ಸರಹದ್ದಿನ ಮುತ್ತಿಗೆಪುರ ಗ್ರಾಮದಲ್ಲಿರುವ ಮುದ್ರೆಮನೆ ಕಾಫಿ ಕ್ಯೂರರ್ಸ್ ನಲ್ಲಿರುವ ಗೋಡೋನ್ ಗಳಲ್ಲಿ ಐ.ಸಿ.ಐ.ಸಿ.ಐ ಬ್ಯಾಂಕ್ ಚಿಕ್ಕಮಗಳೂರು ರವರು ಕಾಫಿ ಬೀಜವನ್ನು ಶೇಖರಣೆ ಮಾಡುತ್ತಿದ್ದು, ಭದ್ರತಾ ಸಿಬ್ಬಂದಿಯಾಗಿ ನೇಮಕ ಮಾಡಿದ್ದ ಆರೋಪಿ ಮಂಜುನಾಥ ಮುದ್ರೆಮನೆ ಕಾಫಿ ಕ್ಯೂರರ್ಸ್ ಗೆ ಸೇರಿದ ಗೋಡೋನ್ ಗೆ ರಾತ್ರಿ ವೇಳೆಯಲ್ಲಿ ಪ್ರವೇಶಿಸಿ ಗೋಡೋನ್ ನಲ್ಲಿದ್ದ 15,000-00 ರೂ ಮೌಲ್ಯದ ಸುಮಾರು 100 ಕೆ.ಜಿ. ಕಾಫಿ ಬೀಜವನ್ನು ಕಳುವು ಮಾಡಿಕೊಂಡು ಹೋಗಿರುತ್ತಾನೆ ಎಂದು ಉಮೇಶ್ ಮ್ಯಾನೇಜರ್‌ ಮುದ್ರೆಮನೆ ಕಾಫಿ ಕೂರರ್ಸ್ ಇವರು ದೂರು ನೀಡಿದ್ದು ದೂರಿನ ಮೇರೆಗೆ ಈ ಪ್ರ.ವ.ವರದಿ.

ತುಮಕೂರು : ಅಮೃತೂರು ಪೊಲೀಸ್ ಠಾಣಾ

ತುಮಕೂರು : ಅಮೃತೂರು ಪೊಲೀಸ್ ಠಾಣಾ

ಮೊ.ನಂ:- 213/2013 ಕಲಂ:- 302 ಐ.ಪಿ.ಸಿ ಪಿರ್ಯಾದಿ ಸಿ ರಾಮಕೃಷ್ಣ ಬಿನ್ ಎಂ ಚಿಕ್ಕಣ್ಣ, ನಂದಿನಿ ಲೇಔಟ್ ಬೆಂಗಳೂರು ನೀಡಿದ ದೂರು: ಪಿರ್ಯಾದಿ ಮಗ ಎಸ್ ಆರ್ ಚಂದ್ರಶೇಖರ್ ಇವನು ಸುಮಾರು ಮೂರು ವರ್ಷಗಳಿಂದ ಈ ಗ್ರಾಮದಲ್ಲಿ ವಾಸವಾಗಿದ್ದನು.

ನನ್ನ ಹೆಂಡತಿಯ ಅಕ್ಕ ಜಯಮ್ಮನವರಿಂದ ನಿನ್ನೆಮಗನನ್ನು ಮಹಲಿಂಗನಿಂದ ಕೊಲೆಯಾಗಿದ್ದೆನೆ ಎಂಬ ವಿಷಯ ಗೊತ್ತಾಯಿತು. ಮಹಲಿಂಗನ ಮನೆಯ ಮುಂದೆ ಶವವಿತ್ತು. ಮನೆಯ ಒಳಗೆ ರಕ್ತ ಚೆಲ್ಲಿತು ಗ್ರಾಮಸ್ಥರನ್ನು ವಿಚಾರ ಮಾಡಲಾಗಿ ಮಹಲಿಂಗನ ತಂಗಿ ಪವಿತ್ರಳ ವಿಚಾರದಲ್ಲಿ ಸಣ್ಣಪುಟ್ಟ ಗಲಾಟೆ ನೆಡೆಯುತ್ತಿತ್ತು. ಚಂದ್ರಶೇಖರ್ ಮಹಲಿಂಗನ ಮನೆಗೆ ಹೋಗಿದ್ದಾಗ ಮಹಲಿಂಗ ಯಾವುದೋ ಆಯುಧದಿಂದ ನನ್ನ ಮಗನ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತಗಾಯ ಮಾಡಿ ಅವನು ಸತ್ತ ಮೇಲೆ ಶವವನ್ನು ಮನೆಯ ಅಂಗಳಕ್ಕೆ ತಂದು ಮಲಗಿಸಿ ತಲೆ ಮರೆಸಿಕೊಂಡು ಹೋಗಿರುತ್ತಾನೆ.

 ಗ್ರಾಮಾಂತರ ಠಾಣೆ ಶಿಕಾರಿಪುರ : ಅಪಘಾತ ಪ್ರಕರಣ

ಗ್ರಾಮಾಂತರ ಠಾಣೆ ಶಿಕಾರಿಪುರ : ಅಪಘಾತ ಪ್ರಕರಣ

ಪಿರ್ಯಾದಿ ಕುಮಾರ್ ಬಿನ್ ರಾಮಪ್ಪ 47 ವರ್ಷ, ಮತ್ತು ಭೀಮ್ಮಪ್ಪನಿಗೆ ಹಾಗೂ ಸುರೇಶ್ ರವರಿಗೆ ಖಾಯಿಲೆಗಳು ಇದ್ದು ಇವರಿಗೆ ಸಾಗರ ತಾ. ನರಸಿಪುರ ಗ್ರಾಮದಲ್ಲಿ ನಾಟಿ ಔಷಧಿ ಕೊಡಿಸುವ ಸಲುವಾಗಿ ಕೆ.ಎ-25 ಝಡ್ 8454 ಕಾರಿನಲ್ಲಿ ಶಿಕಾರಿಪುರ ರಸ್ತೆಯಲ್ಲಿ ಬರುತ್ತಿರುವಾಗ ಯಾವುದೋ ಒಂದು ಟ್ರ್ಯಾಕ್ಟರ್ ನ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಿಸಿಕೊಂಡು ಬಂದು ಕಾರಿನ ಮುಂಭಾಗಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ಮಂಜುನಾಥ ಮತ್ತು ಭೀಮ್ಮಪ್ಪ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾರೆ ಇತರೆ 3 ಜನರಿಗೆ ರಕ್ತಗಾಯಗಾಳಾಗಿದ್ದು ಶಿಕಾರಿಪುರ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದೆ.


English summary
Karnataka Crime news Coverage : In a tragic incident, three students from Bangalore met watery grave at Malpe beach here on Monday(Dec. 16).The deceased have been identified as Roopesh, Gautam Babu and Somashekar from Sri Krishna College, Banashankari and Many more crime news from across the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X