ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಣ ಇಲಾಖೆ ಎಡವಟ್ಟಿನಿಂದ ರಾಜ್ಯ ಪಠ್ಯ ಕ್ರಮ ಪುಸ್ತಕಗಳಿಗೆ ಎದುರಾಯ್ತು ಸಮಸ್ಯೆ

|
Google Oneindia Kannada News

ಬೆಂಗಳೂರು, ಆ. 23 : ರಾಜ್ಯದಲ್ಲಿ ಇಂದಿನಿಂದ 9 ಮತ್ತು 10 ನೇ ತರಗತಿಗೆ ಭೌತಿಕ ತರಗತಿಗಳು ಆರಂಭವಾಗಿವೆ. ಕೊರೊನಾ ಸುರಕ್ಷತೆ ಕುರಿತು ಮಾರ್ಗಸೂಚಿ ಅನ್ವಯ ಶಾಲೆಗಳನ್ನು ಪ್ರಾರಂಭಿಸಿದ್ದು, ಶೇ. 98 ರಷ್ಟು ಮಕ್ಕಳು ಶಾಲೆಗೆ ಹಾಜರಾಗಿದ್ದಾರೆ. ಸೆಪ್ಟೆಂಬರ್‌ನಿಂದ ಒಂದನೇ ತರಗತಿಯಿಂದ ಶಾಲೆಗಳನ್ನು ಪ್ರಾರಂಭ ಮಾಡುವ ಭರವಸೆಯನ್ನು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಅಂದುಕೊಂಡಂತೆ ಕೊರೊನಾ ಸೋಂಕು ಇದೇ ರೀತಿ ಇದ್ದರೆ ಮುಂದಿನ ಏಳು ದಿನದಲ್ಲಿ ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳು ಪ್ರಾರಂಭವಾಗಲಿವೆ. ಆದರೆ ಶಿಕ್ಷಣ ಇಲಾಖೆ ಮಾಡಿರುವ ಎಡವಟ್ಟಿನಿಂದ ಶಾಲೆಗೆ ಸೇರಿದ ಮಕ್ಕಳ ಓದಿಗೆ ದೊಡ್ಡ ತೊಡಕು ಎದುರಾಗಲಿದೆ.

ಶಿಕ್ಷಣ ಇಲಾಖೆ ಮಾಡಿದ ಎಡವಟ್ಟು ಏನು? ರಾಜ್ಯದಲ್ಲಿ ಕಳೆದ ವರ್ಷ ಕೊರೊನಾ ಮೊದಲು ಹಾಗು ಎರಡನೇ ಅಲೆಯ ಭೀಕರತೆ ಹೆಚ್ಚಾಗಿತ್ತು. ರಾಜ್ಯದಲ್ಲಿ ಶಾಲಾ ಕಾಲೇಜುಗಳ ಬಾಗಿಲು ತೆಗೆಯಲು ಶಿಕ್ಷಣ ಇಲಾಖೆ ಆಸ್ಪದ ನೀಡಲಿಲ್ಲ. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳ ಮಕ್ಕಳಿಗೆ ವಿದ್ಯಾಗಮ ಹಾಗೂ ಬಾನುಲಿಯಲ್ಲಿ ಪಾಠ ಕೇಳಲು ಅವಕಾಶ ಕೊಟ್ಟಿತ್ತು. ಪ್ರೌಢ ಶಿಕ್ಷಣ ಮಕ್ಕಳಿಗೆ ಆನ್‌ ಲೈನ್ ತರಗತಿಗಳಿಗೆ ಅವಕಾಶ ನೀಡಿತ್ತು.

ಶಾಲೆಗಳನ್ನು ತೆರೆಯಲು ಅವಕಾಶ ಸಿಗದ ಕಾರಣದಿಂದ ರಾಜ್ಯ ಪಠ್ಯ ಕ್ರಮದ ಶಾಲೆಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾದವು. ಸರ್ಕಾರದ ಪಠ್ಯ ಪುಸ್ತಕಗಳನ್ನು ಬಹುತೇಕ ಶಾಲೆಗಳು ಖರೀದಿ ಮಾಡಲೇ ಇಲ್ಲ. ಆನ್‌ಲೈನ್ ಆವೃತ್ತಿಯಲ್ಲಿದ್ದ ಪುಸ್ತಕಗಳನ್ನೇ ವಿತರಣೆ ಮಾಡಿದರು. ಹೀಗಾಗಿ ಕಳೆದ ವರ್ಷ ಮುದ್ರಣ ಮಾಡಿದ್ದ ಪಠ್ಯ ಪುಸ್ತಕಗಳನ್ನೇ ಶಾಲೆಗಳಿಗೆ ವಿತರಣೆ ಮಾಡಲು ತೀರ್ಮಾನಿಸಿತ್ತು. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಪಠ್ಯ ಕ್ರಮದ ಪುಸ್ತಕಗಳನ್ನು ಕಳೆದ ಒಂದು ವಾರದಿಂದ ವಿತರಣೆ ಮಾಡಲಾಗುತ್ತಿದೆ.

Karnataka state Board schools facing text book problems

ಆದರೆ, ಆತಂಕಕಾರಿ ವಿಚಾರ ಎಂದರೆ ಇನ್ನೆರಡು ಮೂರು ದಿನದಲ್ಲಿ ಪುಸ್ತಕಗಳ ವಿತರಣೆ ಸಂಪೂರ್ಣ ಮುಗಿಯಲಿದೆ. ಎಲ್ಲರಿಗೂ ಎಲ್ಲಾ ಪಠ್ಯ ಪುಸ್ತಕ ಸಿಗುವುದಿಲ್ಲ.

ಪಠ್ಯ ಪುಸ್ತಕಗಳಿಗೆ ಸಮಸ್ಯೆ: ರಾಜ್ಯ ಪಠ್ಯ ಕ್ರಮದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಪಠ್ಯ ಪುಸ್ತಕಗಳನ್ನು ಒಂದು ವಾರದಿಂದ ವಿತರಣೆ ಮಾಡಲಾಗುತ್ತದೆ. ಎಲ್ಲಾ ಶಾಲೆಗಳು ಹಣ ಪಾವತಿ ಮಾಡಿ ಡಿಸಿ ಬಿಲ್ ಸಂಬಂಧಪಟ್ಟ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಲಿದ್ದಾರೆ. ಆದರೆ ಪೂರ್ಣ ಪ್ರಮಾಣದ ಪಠ್ಯ ಪುಸ್ತಕಗಳೂ ಸಿಗುತ್ತಿಲ್ಲ. ಕಳೆದ ವರ್ಷಕ್ಕೆ ಪೂರೈಕೆ ಆಗಿದ್ದ ಪುಸ್ತಕಗಳನ್ನು ಈಗಾಗಲೇ ವಿತರಣೆ ಮಾಡಿ ಆಗಿದೆ. ಇದೀಗ ಪೂರ್ಣ ಪ್ರಮಾಣದ ಪಠ್ಯ ಪುಸ್ತಕ ಕೊಡಿ ಎಂದು ಖಾಸಗಿ ಶಾಲೆಗಳು ದಂಬಾಲು ಬೀಳುತ್ತಿವೆ. ಇವರು ಪುಸ್ತಕಗಳನ್ನು ವಿತರಿಸಿದ್ದು, ಸುಮಾರು ಶೇ. 40 ರಷ್ಟು ಪಠ್ಯ ಪುಸ್ತಕಗಳು ಈ ವರ್ಷ ಸದ್ಯಕ್ಕೆ ಸಿಗುವುದು ಅನುಮಾನ. ಬಾಕಿ ಇರುವ ಪುಸ್ತಕಗಳನ್ನು ಮುದ್ರಣ ಮಾಡಿಕೊಡುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಲಾಗಿದೆ.

ಕಳೆದ ವರ್ಷ ಬಹುತೇಕ ಶಾಲೆಗಳು ಯಾರೂ ಪಠ್ಯ ಪುಸ್ತಕ ತೆಗೆದುಕೊಂಡು ಹೋಗಿರಲಿಲ್ಲ. ಬೆರಳೆಣಿಕೆ ಶಾಲೆಗಳು ಮಾತ್ರ ಪಠ್ಯ ಪುಸ್ತಕ ತೆಗೆದುಕೊಂಡು ಹೋಗಿದ್ದರಿಂದ ಪಠ್ಯ ಪುಸ್ತಕ ಮುದ್ರಣ ಗುತ್ತಿಗೆಯನ್ನು ನಿಲ್ಲಿಸಲಾಗಿತ್ತು. ಇದೀಗ ಶಾಲೆಗಳು ಪ್ರಾರಂಭದ ಮುನ್ಸೂಚನೆಯಿಂದ ರಾಜ್ಯದಲ್ಲಿ ಎಲ್ಲಾ ಶಾಲೆಗಳು ಪಠ್ಯ ಪುಸ್ತಕ ಕೊಡಿ ಎಂದು ಬರುತ್ತಿದ್ದಾರೆ. ಆದರೆ ಎಲ್ಲಾ ಪಠ್ಯ ಪುಸ್ತಕಗಳು ಲಭ್ಯವಿಲ್ಲ. ಕೆಲವು ವಿಷಯಗಳು ಅಗತ್ಯ ಇರುವಷ್ಟು ಇವೆ. ಕೆಲವು ವಿಷಯಗಳ ಕೊರತೆಯಿದೆ. ಹೀಗಾಗಿ ಹೊಸದಾಗಿ ಮುದ್ರಣ ಮಾಡಿ ಪೂರೈಕೆ ಮಾಡುವಂತೆ ಮುದ್ರಕರಿಗೆ ತಿಳಿಸಿದ್ದಾರೆ. ಇನ್ನೂ ಎರಡು ತಿಂಗಳು ಕಾಲಾವಕಾಶ ಆಗುತ್ತದೆ. ಇರುವ ಪಠ್ಯ ಪುಸ್ತಕಗಳನ್ನಷ್ಟೆ ವಿತರಣೆ ಮಾಡುತ್ತಿದ್ದೇವೆ ಎಂದು ಪಠ್ಯ ಪುಸ್ತಕ ವಿತರಣೆಯ ಅಧಿಕಾರಿಗಳು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

Karnataka state Board schools facing text book problems

ಮುಂದಿನ ವರ್ಷ ಇನ್ನೂ ಗೊಂದಲ :
ರಾಜ್ಯದಲ್ಲಿ ಈಗಾಗಲೇ ಪದವಿ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲಾಗಿದೆ. ಮುಂದಿನ ವರ್ಷದಿಂದ 1ನೇ ತರಗತಿ ಮಕ್ಕಳಿಗೆ ಪಠ್ಯ ಕ್ರಮ ಬದಲಾಗುವ ಸಾಧ್ಯತೆಯಿದೆ. ಆದರೆ ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರ ಪಠ್ಯ ಕ್ರಮ ಮುದ್ರಣ ಸಂಬಂಧ ಶಿಕ್ಷಣ ಇಲಾಖೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಉನ್ನತ ಶಿಕ್ಷಣ ಇಲಾಖೆಯಂತೆ ಹಳೇ ಪುಸ್ತಕಗಳನ್ನೇ ಕೊಟ್ಟು ಹೊಸ ಶಿಕ್ಷಣ ನೀತಿ ಜಾರಿ ಮಾಡಿದರೂ ಅಚ್ಚರಿ ಪಡಬೇಕಿಲ್ಲ. ಈ ವಿಚಾರದಲ್ಲಿ ಶಾಲಾ ವಲಯದಲ್ಲಿ ದೊಡ್ಡ ಗೊಂದಲ ಏರ್ಪಟ್ಟಿದೆ. ರಾಜ್ಯದಲ್ಲಿರುವ ಪಠ್ಯಕ್ರಮ ಕಳಪೆಯಿಂದ ಕೂಡಿದ್ದು, ಬದಲಾವಣೆ ಮಾಡುವಂತೆ ಕೇಂದ್ರ ಪಠ್ಯ ಪುಸ್ತಕ ಸಂಶೋಧನಾ ಸಂಸ್ಥೆ ರಾಜ್ಯಕ್ಕೆ ಸೂಚಿಸಿ ಏಳು ವರ್ಷಗಳಾದರೂ ಬದಲಾಗಲಿಲ್ಲ. ಹಳೇ ಪಠ್ಯ ಪುಸ್ತಕಗಳನ್ನೇ ಮುದ್ರಣ ಮಾಡುವಲ್ಲಿ ರಾಜ್ಯ ಪಠ್ಯ ಪುಸ್ತಕ ಮುದ್ರಣಾ ಸೊಸೈಟಿ ಮುಳಗಿದೆ. ಇದೀಗ ಹೊಸ ಶಿಕ್ಷಣ ನೀತಿ ಜಾರಿ ಹಿನ್ನೆಲೆಯಲ್ಲಿ ಪಠ್ಯ ಕ್ರಮ ಬದಲಿಸಲಿದೆಯಾ ಎಂಬ ಪ್ರಶ್ನೆ ಎದ್ದಿದೆ.

English summary
Due to corona virus infection, there is no textbook printing in the state: Karnataka state board schools facing text books problem in the state know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X