ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವವಿದ್ಯಾಲಯಗಳಲ್ಲೂ ನಾಡಗೀತೆ ಹಾಡುವುದು ಕಡ್ಡಾಯ

|
Google Oneindia Kannada News

ಬೆಂಗಳೂರು. ಡಿ. 3 : ಇನ್ನು ಮುಂದೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯ. ನಾಡಗೀತೆಯನ್ನು ವಿವಿಗಳಲ್ಲೂ ಕಡ್ಡಾಯ ಮಾಡಬೇಕು ಎಂದು ಉನ್ನತ ಶಿಕ್ಷಣ ಪರಿಷತ್‌ ನಿರ್ಣಯ ಕೈಗೊಂಡಿದೆ.

ಪ್ರತಿ ದಿನ ತರಗತಿಗಳನ್ನು ನಾಡಗೀತೆ ಮೂಲಕ ಆರಂಭಿಸಬೇಕು ಎಂದು ಪರಿಷತ್ ತಿಳಿಸಿದೆ. ಸೋಮವಾರ ನಡೆದ ಪರಿಷತ್ ಸಭೆಯಲ್ಲಿ ವಿವಿಧ ವಿವಿಗಳ ಕುಲಪತಿಗಳು ಭಾಗವಹಿಸಿದ್ದರು. ಇಲ್ಲಿಯವರೆಗೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಮಾತ್ರ ನಾಡಗೀತೆ ಕಡ್ಡಾಯವಾಗಿತ್ತು.[ನಾಡಗೀತೆ ಕತ್ತರಿ ಪ್ರಯೋಗಕ್ಕೆ ಭುಗಿಲೆದ್ದ ಆಕ್ರೋಶ]

karnataka

ನಾಡಗೀತೆ ಕತ್ತರಿ ವಿವಾದ ಏನಾಯ್ತು?
ರಾಜ್ಯ ಸರ್ಕಾರದ ನಾಡಗೀತೆ ಕತ್ತರಿ ಪ್ರಯೋಗಕ್ಕೆ ಮುಂದಾಗಿದ್ದಾಗ ಸಾಹಿತಿಗಳು, ಚಿಂತಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಇನ್ನು ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ. ರಾಜ್ಯದ ಹಿರಿಯ ಸಾಹಿತಿಗಳು, ಕವಿಗಳ ಅಭಿಪ್ರಾಯ ಪಡೆದು, ಎಲ್ಲರ ಹಿತಾಸಕ್ತಿ ಗಮನದಲ್ಲಿರಿಸಿಕೊಂಡು ಮುಂದಿನ ಹೆಜ್ಜೆ ಇಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.[ನಾಡಗೀತೆಗೆ ಕತ್ತರಿ ಪ್ರಯೋಗ ವಾಗಲಿದೆಯೇ?]

ಏಕರೂಪದ ಆಂತರಿಕ ಮೌಲ್ಯಮಾಪನ
ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಏಕರೂಪದ ಆಂತರಿಕ ಮೌಲ್ಯ­ಮಾಪನ ಪದ್ಧತಿ ಜಾರಿಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ಎಲ್ಲ ಕಾಲೇಜುಗಳು 30 ಅಂಕಗಳನ್ನು ಆಂತರಿಕ ಮೌಲ್ಯಮಾಪನಕ್ಕೆ ಮೀಸಲಿಡ­ಲಿವೆ. ಉಳಿದ 70 ಅಂಕಗಳಿಗೆ ಪರೀಕ್ಷೆ­ ನಡೆಯಲಿದೆ. ಈ ಪದ್ಧತಿ ಜಾರಿ ತರುವಂತೆ ಬೆಂಗಳೂರು ವಿವಿ ಕುಲಪತಿ ಪ್ರೊ. ತಿಮ್ಮೇಗೌಡ ನೇತೃತ್ವದ ಸಮಿತಿ ಶಿಫಾರಸು ಮಾಡಿತ್ತು.

ಪ್ರತಿ ಸೆಮಿಸ್ಟರ್‌ನಲ್ಲಿ ಎರಡು ಪರೀಕ್ಷೆ
ಪ್ರತಿ ಸೆಮಿಸ್ಟರ್‌ನಲ್ಲಿ ಎರಡು ಕಿರು ಪರೀಕ್ಷೆ­ಗಳನ್ನು ನಡೆಸಲು ಸಮಿತಿ ಶಿಫಾರಸು ಮಾಡಿತ್ತು. ಇದಕ್ಕೆ 20 ಅಂಕಗಳು ಮೀಸಲಿಡಲಾ­ಗಿದ್ದರೆ, ಉಳಿದ 10 ಅಂಕಗಳು ಉಪನ್ಯಾಸ ಅಥವಾ ಪ್ರಬಂಧ ಮಂಡನೆಯಿಂದ ಸಿಗಲಿವೆ. ನಿರ್ದಿಷ್ಟ ವಿಷಯದ ಅಡಿಯಲ್ಲಿ ಉಪ ವಿಷಯಗಳನ್ನು ಪ್ರಮುಖ ವಿಷಯಕ್ಕೆ ಸರಿ ಸಮನಾಗಿ ಪರಿಗಣಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ. (ಉದಾಹರಣೆಗೆ, ಎಂಎಸ್ಸಿ ಕೆಮಿಸ್ಟ್ರಿ (ಇನ್‌ ಆರ್ಗಾನಿಕ್‌) ವಿಷಯವನ್ನು 'ಎಂಎಸ್ಸಿ ಕೆಮಿಸ್ಟ್ರಿ' ಎಂದೇ ಪರಿಗಣಿಸುವುದು).

ಇತರ ಪ್ರಮುಖ ನಿರ್ಣಯಗಳು

  • ಪದವಿ ಕಾಲೇಜುಗಳಲ್ಲಿ ಐಚ್ಛಿಕ ವಿಷಯವಾಗಿ ದೈಹಿಕ ಶಿಕ್ಷಣ
  • ಎಂಬಿಎ ಕೋರ್ಸ್‌ಗಳ ಗುಣಮಟ್ಟ ತಪಾಸಣೆಗೆ ಸಮಿತಿ
  • ಕೃತಿಚೌರ್ಯದ ಪತ್ತೆಗೆ ಸಮಿತಿ
  • ಉತ್ತರಪತ್ರಿಕೆ ಮೌಲ್ಯಮಾಪಕರ ಸಂಭಾವನೆಗೆ ಏಕರೂಪದ ಮಾರ್ಗದರ್ಶಿ ಸೂತ್ರ
  • ವಿದೇಶಿ ವಿದ್ಯಾರ್ಥಿಗಳಿಗೆ ಏಕರೂಪದ ಶುಲ್ಕ
  • ವಿವಿಗಳಲ್ಲಿ ವೃತ್ತಿಪರ ಕೋರ್ಸ್‌, ಬ್ರೈಲ್‌ ಲಿಪಿ ಕೇಂದ್ರ ಆರಂಭ
English summary
Karnataka higher education committee took a decision towards State anthem (naada geete). Collage students must sing state anthem and it is mandatory for all university's.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X