ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಡಗೀತೆಯ ಅವಧಿ ಅಂತಿಮ: 2.30 ನಿಮಿಷಗಳಲ್ಲಿ ಪೂರ್ಣಗೊಳಿಸಲು ನಿರ್ಧಾರ

|
Google Oneindia Kannada News

ಬೆಂಗಳೂರು, ಸೆ. 24: ಕರ್ನಾಟಕ ಸರ್ಕಾರವು ನಾಡಗೀತೆಯ ಅವಧಿಯನ್ನು ಅಂತಿಮಗೊಳಿಸಿದೆ. 'ಜಯ ಭಾರತ ಜನನಿಯ ತನುಜಾತೆ' ಹಾಡಲು ತಜ್ಞರು ಶಿಫಾರಸು ಮಾಡಿದ್ದು, ಅದನ್ನು 2.30 ನಿಮಿಷಗಳಲ್ಲಿ ಪೂರ್ಣಗೊಳಿಸಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಹೇಳಿದರು.

ಈ ಹಿಂದೆ ನಾಡಗೀತೆ ವಿಶೇಷವಾಗಿ ಅದರ ರಾಗ ಮತ್ತು ಅದನ್ನು ಪೂರ್ಣಗೊಳಿಸಬೇಕಾದ ಅವಧಿಯ ಬಗ್ಗೆ ಚರ್ಚೆಗಳು ನಡೆದಿದ್ದವು. ಆದರೆ ಸರ್ಕಾರವು ಯಾವುದೇ ಅಂತಿಮ ತೀರ್ಮಾನ ಅಥವಾ ನಿರ್ಧಾರಕ್ಕೆ ಬಂದಿರಲಿಲ್ಲ. ಹಾಗಾಗಿ ಸೆಪ್ಟೆಂಬರ್ 9ರಂದು ಸಾಹಿತ್ಯ ವ್ಯಕ್ತಿಗಳು ಮತ್ತು ಸಂಗೀತ ತಜ್ಞರ ಒಂದು ಸಮಿತಿಯನ್ನು ರಚಿಸಲಾಗಿತ್ತು.

ಮೈಸೂರಿನ ಲೀಲಾವತಿ ಮತ್ತು ಸಾಹಿತಿ ಡಾ. ದೊಡ್ಡರಂಗೇಗೌಡ ಅವರನ್ನೊಳಗೊಂಡ ಸಮಿತಿಗೆ ರಾಗ ಮತ್ತು ಅವಧಿಯ ಬಗ್ಗೆ 15 ದಿನಗಳಲ್ಲಿ ವರದಿ ಸಲ್ಲಿಸಲು ಕೇಳಲಾಗಿತ್ತು. ಸಮಿತಿಯ ಶಿಫಾರಸ್ಸಿನ ಮೇರೆಗೆ 'ಜಯ ಭಾರತ ಜನನಿಯ ತನುಜಾತೆ' ಹಾಡನ್ನು 2.30 ನಿಮಿಷಗಳಲ್ಲಿ ಪೂರ್ಣಗೊಳಿಸಬಹುದು ಎಂದು ಸಚಿವರು ತಿಳಿಸಿದ್ದಾರೆ.

State Anthem Duration Final: Decision to complete in 2.30 minutes

ಪ್ರಸ್ತುತ ನಾಡಗೀತೆಯಾದ 'ಜಯ ಭಾರತ ಜನನಿಯ ತನುಜಾತೆ..' ಈ ಹಾಡನ್ನು ಖ್ಯಾತ ಕವಿ ಕುವೆಂಪು ಬರೆದಿದ್ದು, ಇದನ್ನು 2004ರಲ್ಲಿ ಅಧಿಕೃತವಾಗಿ ರಾಜ್ಯ ಗೀತೆಯಾಗಿ ಘೋಷಿಸಲಾಯಿತು. ಇದನ್ನು ಎಲ್ಲಾ ಸರ್ಕಾರಿ ಸಮಾರಂಭಗಳಲ್ಲಿ ಮತ್ತು ಶಾಲೆಗಳಲ್ಲಿ ಪ್ರತಿದಿನ ಹಾಡಲಾಗುತ್ತದೆ.

ನಾಡಗೀತೆಯನ್ನು ವಿವಿಧ ಶೈಲಿಗಳಲ್ಲಿ ಮತ್ತು ರಾಗಗಳಲ್ಲಿ ಹಾಡಲಾಗುತ್ತಿದ್ದು, ಇದು ದೀರ್ಘವಾಗಿದೆ ಎಂದು ಪರಿಗಣಿಸಲಾಗಿತ್ತು. ಇದರ ಅವಧಿಯನ್ನು ಕಡಿಮೆ ಮಾಡಲು ಮತ್ತು ಹಾಡುವ ಶೈಲಿಯಲ್ಲಿ ಏಕರೂಪತೆಯನ್ನು ತರಲು ನಿರಂತರ ಬೇಡಿಕೆ ಇಡಲಾಗಿತ್ತು.

2019ರಲ್ಲಿ ಕನ್ನಡ ಸಾಹಿತ್ಯ ಪರಿಷತ್ (ಕೆಎಸ್‌ಪಿ) ಎರಡು ನಿಮಿಷ ಮೂವತ್ತು ಸೆಕೆಂಡುಗಳ ಅವಧಿಯನ್ನು ಮಿತಿಗೊಳಿಸುವ ಪ್ರಸ್ತಾಪವನ್ನು ಮಾಡಿತು. ಅದೇ ರೀತಿ 2014 ರಲ್ಲಿ ಚನ್ನವೀರ ಕಣವಿ ಸಮಿತಿಯಿಂದ ಅವಧಿಯನ್ನು ಒಂದು ನಿಮಿಷ 30 ಸೆಕೆಂಡುಗಳಿಗೆ ಇಳಿಸುವ ಪ್ರಸ್ತಾಪವನ್ನು ಇಟ್ಟಿದ್ದನ್ನು ನೆನಪಿಸಿಕೊಳ್ಳಬಹುದು.

ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ 'ಜಯಭಾರತ ಜನನಿಯ ತನುಜಾತೆ'ಗೆ ಸಂಗೀತ ವಿದುಷಿ ಎಚ್.ಆರ್. ಲೀಲಾವತಿ ಅಧ್ಯಕ್ಷತೆಯ ಸಮಿತಿ ಶಿಫಾಸಿನಂತೆ ಕಾಲಾವಧಿ ಅಂತಿಮಗೊಳಿಸಲಾಗಿದೆ. ಮೈಸೂರು ಅನಂತ ಸ್ವಾಮಿಯವರ ರಾಗ ಸಂಯೋಜನೆ ಮತ್ತು 2 ನಿಮಿಷ 30 ಸೆಕೆಂಡ್‌ಗಳ ಕಾಲಾವಧಿಯನ್ನು ಅಂತಿಮಗೊಳಿಸಿ ರಾಜ್ಯ ಸರ್ಕಾರ ನಿರ್ಧಾರವನ್ನು ಕನ್ನಡ ಸಾಹಿತ್ಯ ಪರಿಷತ್ತು ಸ್ವಾಗತಿಸಿದೆ.

'ಜಯಭಾರತ ಜನನಿಯ ತನುಜಾತೆ' ಕವಿತೆಯನ್ನು 1971ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ರಾಷ್ಟ್ರಕವಿ ಕುವೆಂಪು ಅವರ ಸಮ್ಮತಿ ಪಡೆದು ಎಲ್ಲಾ ಕಾರ್ಯಕ್ರಮಗಳಲ್ಲೂ ಹಾಡಿಸಿತ್ತು. ಈ ಮೂಲಕ ಪ್ರಸ್ತುತ ಗೀತೆಯನ್ನು ನಾಡಗೀತೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಘೋಷಣೆ ಮಾಡಿತ್ತು. ಮುಂದೆ ಕರ್ನಾಟಕ ಸರಕಾರ 2004ರ ಜನವರಿ 6ರಂದು ಜಯಭಾರತ ಜನನಿಯ ತನುಜಾತೆ ಈ ಹಾಡನ್ನು ಅಧಿಕೃತ ನಾಡಗೀತೆಯೆಂದು ಸರ್ಕಾರ ಘೋಷಿಸಿತ್ತು.

ನಾಡಗೀತೆಯನ್ನು ಯಾವ ಧಾಟಿಯಲ್ಲಿ ಹಾಡಬೇಕು ಎನ್ನುವ ಕುರಿತು ಇದುವರೆಗೂ ಕ್ರಮವಾಗಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ, ವಸಂತ ಕನಕಾಪುರ, ಡಾ. ಚೆನ್ನವೀರ ಕಣವಿ ಮತ್ತು ಡಾ.ಎಚ್.ಆರ್.ಲಿಲಾವತಿ ಅವರ ನೇತ್ರತ್ವದಲ್ಲಿ ನಾಲ್ಕು ಸಮಿತಿಗಳನ್ನು ಕಾಲಕಾಲಕ್ಕೆ ನೇಮಿಸಿ ವರದಿ ಪಡೆಯಲಾಗಿತ್ತು. ಆದರೆ ಧಾಟಿ ಅಂತಿಮ ಗೊಳಿಸಿರಲಿಲ್ಲ

English summary
Karnataka govt has finalised duration of StateAnthem. Jaya Bharatha Jananiya Tanujaathe that can be completed in 2.30 mins said Kannada & Culture Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X