ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾಗೆ 'ಸ್ಟೀಮ್' ರಾಮಬಾಣ: ವೈರಲ್ ಆದ ವೈದ್ಯರ ಹೇಳಿಕೆಯ ಸತ್ಯಾಸತ್ಯತೆ

|
Google Oneindia Kannada News

ಕೊರೊನಾ ವೈರಸ್ ದಾಳಿಯಿಂದ ಪಾರಾಗಲು ಮತ್ತು ಮನೆ ಔಷಧಿಯಿಂದಲೇ ಇದನ್ನು ಹೇಗೆ ತಡೆಯಬಹುದು ಎನ್ನುವುದರ ಬಗ್ಗೆ ವೈದ್ಯಲೋಕ ತಮ್ಮ ಸಲಹೆ/ಅಭಿಪ್ರಾಯವನ್ನು ಮಂಡಿಸುತ್ತಲೇ ಇದೆ.

ಇಂತಹ ಈ ಆರೋಗ್ಯ ಎಮರ್ಜೆನ್ಸಿಯ ಸಂದರ್ಭದಲ್ಲಿ ಖ್ಯಾತ ವೈದ್ಯರೊಬ್ಬರು ಆ ರೀತಿಯ ಸಲಹೆಯನ್ನು ಕೊಟ್ಟರು, ಈ ರೀತಿಯ ಸಲಹೆಯನ್ನು ಕೊಟ್ಟರು ಎನ್ನುವ ಸುದ್ದಿಗಳು ಸಾಮಾಜಿಕ ತಾಣದಲ್ಲಿ ಬಿಂದಾಸ್ ಆಗಿ ಹರಿದಾಡುತ್ತಿವೆ.

ಕೊವಿಡ್ 19: ಮೇ 22ರಂದು ವಿಶ್ವದಲ್ಲಿ ಎಷ್ಟು ಮಂದಿ ಚೇತರಿಕೆ?ಕೊವಿಡ್ 19: ಮೇ 22ರಂದು ವಿಶ್ವದಲ್ಲಿ ಎಷ್ಟು ಮಂದಿ ಚೇತರಿಕೆ?

ಅಂತದರಲ್ಲಿ ಒಂದು ಸಂದೇಶವೆಂದರೆ, ಸ್ಟೀಮ್ ತೆಗೆದುಕೊಂಡರೆ ಕೊರೊನಾ ವೈರಸ್ ನಿರ್ಮೂಲನೆ ಮಾಡಬಹುದು ಎನ್ನುವ ವೈದ್ಯರೊಬ್ಬರು ಸಲಹೆ. ಎಲ್ಲರೂ ಒಂದು ವಾರ ಸ್ಟೀಮ್ ಡ್ರೈವ್ ಅಭಿಯಾನವನ್ನು ಪ್ರಾರಂಭಿಸಿದರೆ, ಅದರಿಂದ ಶೀಘ್ರದಲ್ಲೇ ಸಾಂಕ್ರಾಮಿಕ ರೋಗವು ಮುಗಿಯುತ್ತದೆ ಎನ್ನುವ ಸಂದೇಶವಿತ್ತು.

ತಮಿಳುನಾಡಿನ ಮಧುರೈನ ವೈದ್ಯ ಡಾ.ಎನ್.ಎನ್.ಕಣ್ಣಪ್ಪನ್ ಹೆಸರಿನಲ್ಲಿ ಓಡಾಡುತ್ತಿರುವ ಮೆಸೇಜಿನ ಸತ್ಯಾಸತ್ಯತೆ ಪರೀಕ್ಷಿಸಿದಾಗ ಇದೊಂದು ಸುಳ್ಳು ಎನ್ನುವುದು ಸಾಬೀತಾಗಿದೆ. ಡಾ.ಕಣ್ಣಪ್ಪನ್ ಹೆಸರಿನಲ್ಲಿ ಓಡಾಡುತ್ತಿದ್ದ ಸಲಹೆ ಏನು?

ಜೀವವೈವಿಧ್ಯ ದಿನ: ಜೀವ ಸರಪಳಿ ಕೊಂಡಿಗೆ ಮನುಜನೇ ʼಕಿಡಿʼಜೀವವೈವಿಧ್ಯ ದಿನ: ಜೀವ ಸರಪಳಿ ಕೊಂಡಿಗೆ ಮನುಜನೇ ʼಕಿಡಿʼ

 ಬಿಸಿನೀರು ಕುಡಿಯುವುದು ನಿಮ್ಮ ಗಂಟಲಿಗೆ ಒಳ್ಳೆಯದು ಎನ್ನುವ ಸಂದೇಶ

ಬಿಸಿನೀರು ಕುಡಿಯುವುದು ನಿಮ್ಮ ಗಂಟಲಿಗೆ ಒಳ್ಳೆಯದು ಎನ್ನುವ ಸಂದೇಶ

ವೈದ್ಯರ ಹೆಸರಿನಲ್ಲಿ ಓಡಾಡುತ್ತಿದ್ದ ಸಲಹೆ ಹೀಗಿತ್ತು, "ಬಿಸಿನೀರು ಕುಡಿಯುವುದು ನಿಮ್ಮ ಗಂಟಲಿಗೆ ಒಳ್ಳೆಯದು. ಆದರೆ, ಈ ಕೊರೊನಾ ವೈರಸ್ ತನ್ನ ಮೂಗಿನ ಪರಾನಾಸಲ್ ಸೈನಸ್ ಹಿಂದೆ 3 ರಿಂದ 4 ದಿನಗಳವರೆಗೆ ಅಡಗಿಕೊಳ್ಳುತ್ತದೆ. ನಮ್ಮ ಕುಡಿಯುವ ಬಿಸಿನೀರು ಅಲ್ಲಿಗೆ ತಲುಪುವುದಿಲ್ಲ. 4 ರಿಂದ 5 ದಿನಗಳ ನಂತರ, ಪ್ಯಾರಾನಾಸಲ್ ಸೈನಸ್ ಹಿಂದೆ ಅಡಗಿರುವ ವೈರಸ್ ನಿಮ್ಮ ಶ್ವಾಸಕೋಶವನ್ನು ತಲುಪುತ್ತದೆ. ನಂತರ ನೀವು ಉಸಿರಾಡಲು ತೊಂದರೆ ಅನುಭವಿಸಲು ಪ್ರಾರಂಭಿಸುತ್ತೀರಿ".

 ಸ್ಟೀಮ್ ತೆಗೆದುಕೊಳ್ಳುವುದರಿಂದ ಕೋವಿಡ್ -19 ಅನ್ನು ಕೊಲ್ಲಬಹುದು

ಸ್ಟೀಮ್ ತೆಗೆದುಕೊಳ್ಳುವುದರಿಂದ ಕೋವಿಡ್ -19 ಅನ್ನು ಕೊಲ್ಲಬಹುದು

ಸ್ಟೀಮ್ ತೆಗೆದುಕೊಳ್ಳುವುದರಿಂದ ಕೋವಿಡ್ -19 ಅನ್ನು ಕೊಲ್ಲಬಹುದು. ಮೂಗು ಮತ್ತು ಬಾಯಿಯಿಂದ ಹಬೆ ತೆಗೆದುಕೊಂಡರೆ, ಕೊರೊನಾ ವೈರಸ್ ಅನ್ನು ನಿರ್ಮೂಲನೆ ಮಾಡಬಹುದು. ಎಲ್ಲರೂ ಒಂದು ವಾರ ಸ್ಟೀಮ್ ಡ್ರೈವ್ ಅಭಿಯಾನವನ್ನು ಪ್ರಾರಂಭಿಸಿದರೆ, ಆದರಿಂದ ಶೀಘ್ರದಲ್ಲೇ ಸಾಂಕ್ರಾಮಿಕ ರೋಗವು ಮುಗಿಯುತ್ತದೆ.

 ಸ್ಟೀಮ್ ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿಲ್ಲ

ಸ್ಟೀಮ್ ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿಲ್ಲ

ಒಂದು ವಾರ ಈ ಪ್ರಕ್ರಿಯೆಯನ್ನು ಪ್ರಾರಂಭಿಸಿ. ಬೆಳಗ್ಗೆ ಮತ್ತು ಸಂಜೆ ಬಿಸಿ ಹಬೆ, ಪ್ರತಿ ಬಾರಿ ಕೇವಲ 5 ನಿಮಿಷಗಳ ಕಾಲ ತೆಗೆದುಕೊಳ್ಳಿ. ನಾವೆಲ್ಲರೂ ಈ ಅಭ್ಯಾಸವನ್ನು ಒಂದು ವಾರ ತೀವ್ರವಾಗಿ ಅಳವಡಿಸಿಕೊಂಡರೆ. ಕೋವಿಡ್ -19 ಕಣ್ಮರೆಯಾಗುತ್ತದೆ. ಇದು ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿಲ್ಲ ಎಂದು ಡಾ. ಕಣ್ಣಪ್ಪನ್ ಸಲಹೆ ನೀಡಿದ್ದಾರೆ ಎನ್ನುವ ಸಂದೇಶ ಎಲ್ಲಡೆ ಹರಿದಾಡುತ್ತಿತ್ತು.

 ಡಾ.ಕಣ್ಣಪ್ಪನ್ ಅವರ ಜೊತೆ ದೂರವಾಣಿ ಸಂಭಾಷಣೆ, ಸ್ಪಷ್ಟನೆ

ಡಾ.ಕಣ್ಣಪ್ಪನ್ ಅವರ ಜೊತೆ ದೂರವಾಣಿ ಸಂಭಾಷಣೆ, ಸ್ಪಷ್ಟನೆ

ಈ ವಿಚಾರದ ಬಗ್ಗೆ ಮಾಧ್ಯಮ ಸಂಸ್ಥೆಯೊಂದು ಡಾ.ಕಣ್ಣಪ್ಪನ್ ಅವರ ಜೊತೆ ದೂರವಾಣಿ ಸಂಭಾಷಣೆ ನಡೆಸಿದೆ. ಆ ವೇಳೆ, ಅಂತಹ ಯಾವುದೇ ಪೋಸ್ಟ್ ಅನ್ನು ನಾನು ಹಾಕಲಿಲ್ಲ ಅಥವಾ ಅಂತಹ ಸಲಹೆಯನ್ನು ನಾನು ನೀಡಲಿಲ್ಲ ಎಂದು ಅವರು ಹೇಳಿದ್ದಾರೆ. ಹಾಗಾಗಿ, ವೈದ್ಯರ ಹೆಸರಿನಲ್ಲಿ ಓಡಾಡುತ್ತಿರುವ ಸಂದೇಶ ಸತ್ಯಕ್ಕೆ ದೂರವಾದದು.

Recommended Video

Karnatakaದಲ್ಲಿ ಈಗ ಎಲ್ಲೆಲ್ಲಿ , ಎಷ್ಟು ಲಸಿಕೆ ಉಳಿದಿದೆ ? | Oneindia Kannada

English summary
Starting a steam inhalation drive will not end the pandemic; Dr Kannappan viral post
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X