ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮ್ಮಿಶ್ರ ಸರ್ಕಾರದ ವಿಶ್ವಾಸಮತ : ಶುಕ್ರವಾರ ಸದನದಲ್ಲಿ ನಡೆಯುವುದೇನು?

By Gururaj
|
Google Oneindia Kannada News

Recommended Video

ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಹುಮತ ಸಾಬೀತಿಗೆ ಮೇ 25ರಂದು ಕರ್ನಾಟಕ ವೇದಿಕೆ ಸಜ್ಜು

ಬೆಂಗಳೂರು, ಮೇ 24 : ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ಶುಕ್ರವಾರ ಬಹುಮತ ಸಾಬೀತು ಮಾಡಬೇಕಾಗಿದೆ. ರಾಜ್ಯದ ಜನರ ಕಣ್ಣು ಮತ್ತೊಮ್ಮೆ ವಿಧಾನಸೌಧದ ಮೇಲೆ ಬಿದ್ದಿದ್ದು ಸಮ್ಮಿಶ್ರ ಸರ್ಕಾರಕ್ಕೆ ಬಹುಮತ ಸಿಗಲಿದೆಯೇ? ಎಂದು ತಿಳಿಯಲು ಕಾತರರಾಗಿದ್ದಾರೆ.

ಶುಕ್ರವಾರ ಮಧ್ಯಾಹ್ನ 12 ಗಂಟೆ ಬಳಿಕ ವಿಧಾನಸಭೆಯ ಅಧಿವೇಶನ ಆರಂಭವಾಗಲಿದೆ. ನೂತನ ಸ್ಪೀಕರ್ ಆಯ್ಕೆ, ಬಹುಮತ ಸಾಬೀತು ಪ್ರಕ್ರಿಯೆ ನಡೆಯಲಿದೆ. 15 ದಿನಗಳಲ್ಲಿ 2ನೇ ಬಾರಿಗೆ ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ನಡೆಯಲಿದೆ.

ಗುರುವಾರದ ಬದಲು ಶುಕ್ರವಾರ ವಿಶ್ವಾಸ ಮತ ಯಾಚನೆಗುರುವಾರದ ಬದಲು ಶುಕ್ರವಾರ ವಿಶ್ವಾಸ ಮತ ಯಾಚನೆ

2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳಲ್ಲಿ ಜಯಗಳಿಸಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಸುಪ್ರೀಂಕೋರ್ಟ್ ಆದೇಶದಂತೆ ಮೇ 19ರಂದು ವಿಶ್ವಾಸಮತಯಾಚನೆ ನಡೆದಿತ್ತು. ಬಹುಮತ ಸಿಗದ ಕಾರಣ ಸರ್ಕಾರ ಪತನಗೊಂಡಿತ್ತು.

ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರುವ ಜೆಡಿಎಸ್ ಶಾಸಕರ ಪಟ್ಟಿಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರುವ ಜೆಡಿಎಸ್ ಶಾಸಕರ ಪಟ್ಟಿ

ಮೇ 23ರಂದು ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವಿಧಾನಸಭೆಯಲ್ಲಿ ಶುಕ್ರವಾರ ಅವರು ಬಹುಮತ ಸಾಬೀತು ಮಾಡಲಿದ್ದಾರೆ.

ವಿಶ್ವಾಸಮತ ಗೆದ್ದ ನಂತರ ಸಚಿವ ಸಂಪುಟ ರಚನೆ: ಪರಮೇಶ್ವರ್‌ವಿಶ್ವಾಸಮತ ಗೆದ್ದ ನಂತರ ಸಚಿವ ಸಂಪುಟ ರಚನೆ: ಪರಮೇಶ್ವರ್‌

ಮೊದಲು ಸ್ಪೀಕರ್ ಆಯ್ಕೆ

ಮೊದಲು ಸ್ಪೀಕರ್ ಆಯ್ಕೆ

ಶುಕ್ರವಾರ ಮೊದಲು ಕಲಾಪ ಆರಂಭವಾದ ಬಳಿಕ ಸ್ಪೀಕರ್ ಆಯ್ಕೆ ನಡೆಯಲಿದೆ. ಹಂಗಾಮಿ ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ಸ್ಪೀಕರ್ ಆಯ್ಕೆ ಚುನಾವಣೆಯನ್ನು ನಡೆಸಿಕೊಡಲಿದ್ದಾರೆ.

ಬಿಜೆಪಿಯಿಂದ ಸ್ಪೀಕರ್ ಸ್ಥಾನಕ್ಕೆ ಎಸ್.ಸುರೇಶ್ ಕುಮಾರ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದಿಂದ ಕೆ.ಆರ್.ರಮೇಶ್ ಕುಮಾರ್ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಕೂಟದ ಬಲ ಹೆಚ್ಚಿದ್ದು, ರಮೇಶ್ ಕುಮಾರ ಆಯ್ಕೆಯಾಗುವ ಸಾಧ್ಯತೆ ಇದೆ.

ಮೈತ್ರಿ ಸರ್ಕಾರಕ್ಕೆ ಅಗ್ನಿ ಪರೀಕ್ಷೆ

ಮೈತ್ರಿ ಸರ್ಕಾರಕ್ಕೆ ಅಗ್ನಿ ಪರೀಕ್ಷೆ

ಸ್ಪೀಕರ್ ಆಯ್ಕೆ ಬಳಿಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡುವರು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಭವಿಷ್ಯ ಬಹುಮತ ಸಾಬೀತಿನ ಮೇಲೆ ನಿರ್ಧರಿತವಾಗಿದೆ.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಳಿ ಬಹುಮತ ಸಾಬೀತು ಪಡಿಸುವಷ್ಟು ಬಲವಿದೆ. ಕಾಂಗ್ರೆಸ್‌, ಜೆಡಿಎಸ್‌ ಶಾಸಕರು ರೆಸಾರ್ಟ್‌ಗಳಲ್ಲಿ ಇದ್ದು, ಶುಕ್ರವಾರ ನೇರವಾಗಿ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ. ಬಿಜೆಪಿ ಬಳಿ 104 ಸದಸ್ಯ ಬಲವಿದೆ.

ವಿಧಾನಸೌಧದ ಬಲಾಬಲ

ವಿಧಾನಸೌಧದ ಬಲಾಬಲ

2018ರ ಚುನಾವಣೆಯ ಫಲಿತಾಂಶದ ಬಳಿಕ
ಬಿಜೆಪಿ - 104
ಕಾಂಗ್ರೆಸ್ 78
ಜೆಡಿಎಸ್ - 37 ಸದ್ಯ ಬಲ ಹೊಂದಿದೆ. (ಕುಮಾರಸ್ವಾಮಿ ರಾಮನಗರ ರಾಜೀನಾಮೆ)
ಇಬ್ಬರು ಪಕ್ಷೇತರ ಅಭ್ಯರ್ಥಿಗಳಿದ್ದಾರೆ.

ಬಿಜೆಪಿ ಬಲ 104, ಕಾಂಗ್ರೆಸ್-ಜೆಡಿಎಸ್ ಮೈತ್ರಿ 115 ಸೀಟುಗಳಾಗುತ್ತದೆ. ಬಹುಮತ ಸಾಬೀತು ಪಡಿಸಲು 111 ಮತಗಳು ಸಾಕು.

ಕಾಂಗ್ರೆಸ್ ಈಗಾಗಲೇ ಎಲ್ಲಾ 78 ಶಾಸಕರಿಗೆ ಕುಮಾರಸ್ವಾಮಿ ಅವರಿಗೆ ಮತ ಹಾಕುವಂತೆ ವಿಪ್ ಜಾರಿ ಮಾಡಿದೆ. ಜೆಡಿಎಸ್‌ ಮತ್ತು ಬಿಜೆಪಿ ಸಹ ಎಲ್ಲರೂ ಸದನಕ್ಕೆ ಹಾಜರಾಗಬೇಕು ಎಂದು ವಿಪ್ ಜಾರಿಗೊಳಿಸಿದೆ.

ಪ್ರವೇಶ ನಿಷೇಧ

ಪ್ರವೇಶ ನಿಷೇಧ

ವಿಶ್ವಾಸಮತ ಯಾಚನೆ ದಿನವಾದ ಶುಕ್ರವಾರ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡದ ಸರ್ಕಾರಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು, ನೌಕರರು ಹಾಗೂ ಇತರೆ ಸಿಬ್ಬಂದಿ ವರ್ಗದವರಿಗೆ ಅರ್ಧ ದಿನ ರಜೆ ಇರುತ್ತದೆ.

ಮಾಧ್ಯಮ ಪ್ರತಿನಿಧಿಗಳಿಗೆ (ಒಬ್ಬ ವರದಿಗಾರ ಒಬ್ಬ ಕ್ಯಾಮರಾ ಮನ್ ) ಸದನಕ್ಕೆ ಪ್ರವೇಶವಿರುತ್ತದೆ. ಗನ್ ಮ್ಯಾನ್, ಸಚಿವರ ಆಪ್ತ ಕಾರ್ಯದರ್ಶಿಗಳಿಗೆ ಪ್ರವೇಶವಿರುವುದಿಲ್ಲ.

English summary
The stage is set for the Congress-JD(S) alliance government floor test in Karnataka assembly on May 25, 2018. Chief Minister H.D.Kumaraswamy to prove majority on the floor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X