ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಬುರಗಿಯಲ್ಲಿ ಆರನೇ ಸಚಿವ ಸಂಪುಟ ಸಭೆ

|
Google Oneindia Kannada News

ಕಲಬುರಗಿ, ನ.27 : ಕಲಬುರಗಿ ನಗರ ರಾಜ್ಯ ಸಚಿವ ಸಂಪುಟ ಸಭೆಗೆ ಸಿದ್ಧವಾಗಿದೆ. ನಗರದಲ್ಲಿ ಹಿಂದೆ ಐದು ಬಾರಿ ಸಚಿವ ಸಂಪುಟ ಸಭೆ ನಡೆದಿದ್ದು, ಈಗ ಆರನೇ ಬಾರಿ ಸಚಿವ ಸಂಪುಟ ಸಭೆ ನ.28ರ ಶುಕ್ರವಾರ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇಂದು ಸಂಜೆ ಕಲಬುರಗಿ ನಗರಕ್ಕೆ ಆಗಮಿಸಲಿದ್ದಾರೆ.

ಕಲಬುರಗಿ ಜಿಲ್ಲಾಡಳಿತ ಸಚಿವ ಸಂಪುಟ ಸಭೆಗೆ ಸಜ್ಜಾಗಿದೆ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಹೇಳಿದ್ದಾರೆ. ಸಂಪುಟ ಸಭೆಗಾಗಿ ಆಗಮಿಸುವ ಮುಖ್ಯಮಂತ್ರಿಗಳು ಹಾಗೂ ಸಂಪುಟದ ಎಲ್ಲ ಸಚಿವರ, ಮುಖ್ಯ ಕಾರ್ಯದರ್ಶಿ ಹಾಗೂ ಇತರ ಉನ್ನತ ಅಧಿಕಾರಿಗಳ ವಾಸ್ತವ್ಯಕ್ಕೆ ಅನುಕೂಲವಾಗುವಂತೆ ನಗರದಲ್ಲಿರುವ ಎಲ್ಲ ಸರ್ಕಾರಿ ಅತಿಥಿ ಗೃಹಗಳು ಮತ್ತು 12 ಪ್ರಮುಖ ಹೋಟೆಲ್‍ಗಳ ಒಟ್ಟು 180 ಕೋಣೆಗಳನ್ನು ಕಾಯ್ದಿರಿಸಲಾಗಿದೆ.

ಆಯಾ ಸಚಿವರಿಗೆ ಆಯಾ ಇಲಾಖೆಯ ಅಧಿಕಾರಿಗಳೇ ಲೈಜನಿಂಗ್ ಅಧಿಕಾರಿಯಾಗಿರುತ್ತಾರೆ. ಅದೇ ರೀತಿ ಪ್ರತಿ ಹೋಟೆಲ್ ಮತ್ತು ಅತಿಥಿ ಗೃಹಕ್ಕೂ ಓರ್ವ ಲೈಜನಿಂಗ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. [ಹಿಂದಿನ ಸಚಿವ ಸಂಪುಟ ಸಭೆ ಮುಖ್ಯಾಂಶಗಳು]

ಸಿಎಂ ಕಾರ್ಯಕ್ರಮ : ನ.28ರಂದು ಬೆಳಗ್ಗೆ 11 ಗಂಟೆಗೆ ಸಚಿವ ಸಂಪುಟ ಸಭೆ ಆರಂಭವಾಗಲಿದ್ದು, ಮಧ್ಯಾಹ್ನ 2 ಗಂಟೆಗೆ ಸಿಎಂ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿ ನಡೆಸಲಿದ್ದು, ಸಭೆಯ ವಿವರಗಳನ್ನು ನೀಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಕಲಬುರಗಿಯ ಕೆಸಿಟಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಮುಖ್ಯಮಂತ್ರಿಗಳು ಸುಮಾರು 115 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸುವ ಕಾರ್ಯಕ್ರಮವಿದೆ.

ಸಿಟಿ ಬಸ್ ವ್ಯವಸ್ಥೆ : ಕಲಬುರಗಿಯ ಕೆಸಿಟಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಮುಖ್ಯಮಂತ್ರಿಗಳು ಸುಮಾರು 115 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸುವ ಕಾರ್ಯಕ್ರಮವಿದ್ದು, ಇದಕ್ಕೆ ಸಾರ್ವಜನಿಕರು ಆಗಮಿಸಲು ಅನುಕೂಲವಾಗುವಂತೆ ಸಿಟಿ ಬಸ್ಸುಗಳ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ.

ಬಿಗಿ ಪೊಲೀಸ್ ಭದ್ರತೆ : ಸಚಿವ ಸಂಪುಟ ಸಭೆಗಾಗಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಹೇಳಿದ್ದಾರೆ. ಮಿನಿ ವಿಕಾಸಸೌಧ, ಕನ್ನಡಭವನ, ಜಿ.ಡಿ.ಎ.ಕಚೇರಿ ಆವರಣ, ಐವಾನ್-ಇ-ಶಾಹಿ ಅತಿಥಿಗೃಹ, ಕೆ.ಸಿ.ಟಿ. ಇಂಜಿನಿಯರಿಂಗ್ ಕಾಲೇಜು ಆವರಣ, ವಿಟಿಯು ಪ್ರಾದೇಶಿಕ ಕೇಂದ್ರದ ಆವರಣಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

Karnataka Cabinet meeting

ಇಬ್ಬರು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, 16 ಡಿವೈಎಸ್ಪಿ, 50 ಸಿಪಿಐ, 120 ಪಿಎಸ್ಐ, 200 ಎಎಸ್ಐ., 350 ಹೆಡ್ ಕಾನ್ಸ್‌ಟೇಬಲ್, 100 ಮಹಿಳಾ ಕಾನ್ಸ್‌ಟೇಬಲ್ ಗಳನ್ನು ನಿಯೋಜನೆ ಮಾಡಲಾಗಿದೆ. ಆರು ಕೆಎಸ್ಆರ್‌ಪಿ ಮತ್ತು ಹತ್ತು ಡಿಎಆರ್ ತುಕಡಿಗಳು ಇರಲಿವೆ.

ಮುಖ್ಯಮಂತ್ರಿಗಳಿಗೆ ಅಹವಾಲುಗಳನ್ನು ಸಲ್ಲಿಸಲಿರುವ ಸಾರ್ವಜನಿಕರು ಶುಕ್ರವಾರ ಮಧ್ಯಾಹ್ನ 1.30ರೊಳಗೆ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಆವರಣದಲ್ಲಿ ಹಾಜರಿರಬೇಕು. ಮುಖ್ಯಮಂತ್ರಿಗಳನ್ನು ಭೇಟಿಯಾಗಲಿರುವ ಸಾರ್ವಜನಿಕರು ನಿಯಂತ್ರಣ ಕೊಠಡಿಯ ದೂರವಾಣಿ ಸಂಖ್ಯೆ 08472-271103, 08472-278605 08472-278601ನ್ನು ಸಂಪರ್ಕಿಸಬಹುದು.

ಸಿಎಂ ಪ್ರವಾಸದ ವೇಳಾಪಟ್ಟಿ
* ನವೆಂಬರ್ 27 ರಂದು ಹೆಚ್‍ಎಎಲ್‌ನಿಂದ ವಿಶೇಷ ವಿಮಾನದ ಮೂಲಕ ಸಂಜೆ 7.15 ಗಂಟೆಗೆ ಬೀದರ್‌ಗೆ ಆಗಮನ
* ರಾತ್ರಿ 9 ಗಂಟೆಗೆ ಕಲಬುರಗಿ ನಗರಕ್ಕೆ ಆಗಮನ, ಐವಾನ್-ಇ-ಶಾಹಿ ಅತಿಥಿಗೃಹದಲ್ಲಿ ವಾಸ್ತವ್ಯ
* ನವೆಂಬರ್ 28 ರಂದು ಬೆಳಗ್ಗೆ 11 ಗಂಟೆಗೆ ಸಚಿವ ಸಂಪುಟ ಸಭೆ
* ಮಧ್ಯಾಹ್ನ 1.30 ಗಂಟೆಯಿಂದ 2 ಗಂಟೆಯವರೆಗೆ ಪತ್ರಿಕಾಗೋಷ್ಠಿ
* ಮಧ್ಯಾಹ್ನ 2 ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಸಾಂಕೇತಿಕ ಚಾಲನೆ
* ಮಧ್ಯಾಹ್ನ 2.15 ರಿಂದ 20 ನಿಮಿಷ ಕಾಲ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕಾರ
* ಮಧ್ಯಾಹ್ನ 3 ಗಂಟೆಗೆ ಕೆಸಿಟಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಕಾರ್ಯಕ್ರಮ
* ಸಂಜೆ 5 ಗಂಟೆಗೆ ವಿಟಿಯು ಪ್ರಾದೇಶಿಕ ಕಚೇರಿ ಮತ್ತು ಸ್ನಾತಕೋತ್ತರ ಕೇಂದ್ರ ಉದ್ಘಾಟನೆ
* ಸಂಜೆ 6 ಗಂಟೆಗೆ ರಸ್ತೆ ಮೂಲಕ ಬೀದರ್‌ಗೆ ಪ್ರಯಾಣ, ಅಲ್ಲಿಂದ ಬೆಂಗಳೂರಿಗೆ ವಾಪಸ್

English summary
Stage set Kalaburagi 6th Cabinet meeting. Karnataka Cabinet meeting will be held in Kalaburagi on November 28, Friday at 11 am. CM Siddaramaiah will arrived for the city on Thursday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X