ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ: ಬಾಲಕಿಯರೇ ಮೇಲುಗೈ

|
Google Oneindia Kannada News

ಬೆಂಗಳೂರು, ಅ.11: ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು ಸೋಮವಾರ ಪ್ರಕಟಿಸಲಾಗಿದ್ದು, ಒಟ್ಟಾರೆ ಶೇ.55.54ರಷ್ಟು ಫಲಿತಾಂಶ ಬಂದಿದೆ.

2020-21ನೇ ಸಾಲಿನ ಪೂರಕ ಪರೀಕ್ಷೆಯನ್ನು ಕಳೆದ ಸೆಪ್ಟೆಂಬರ್ 27 ಮತ್ತು 29ರಂದ ನಡೆಸಲಾಗಿತ್ತು. ಒಟ್ಟಾರೆ 53,155 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 29,522 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.55.54ರಷ್ಟು ಫಲಿತಾಂಶ ಬಂದದೆ. ಫಲಿತಾಂಶ ವಿವರಗಳನ್ನು ವೆಬ್‌ಸೈಟ್ (http://karresults.nic.in ಹಾಗೂ https:kseeb.karnataka.gov.in/sslcseptresults2021) ಪರಿಶೀಲಿಸಬಹುದು. ಫಲಿತಾಂಶದ ವಿವರಗಳನ್ನು ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್ ಸಂಖ್ಯೆಗಳಿಗೆ ಮಧ್ಯಾಹ್ನ 3 ಗಂಟೆಯ ನಂತರ ಕಳುಹಿಸಲಾಗುವುದು ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಣೆ ತಿಳಿಸಿದೆ.

ಹೆಣ್ಣುಮಕ್ಕಳೇ ಮೇಲುಗೈ

ಪ್ರತಿಬಾರಿಯಂತೆ ಪೂರಕ ಪರೀಕ್ಷೆಯಲ್ಲಿಯೂ ಸಹ ಬಾಲಕಿಯರೇ ಮೇಲುಗೈ ಪಡೆದಿದ್ದಾರೆ. 17,973 ವಿದ್ಯಾರ್ಥಿನಿರು ಪರೀಕ್ಷೆ ಬರೆದಿದ್ದರು. ಅದರಲ್ಲಿ 10,290 ವಿದ್ಯಾರ್ಥಿನಿಯರು ಉತ್ತೀರ್ಣರಾಗಿ ಶೇ.57.25 ರಷ್ಟು ಪಾಸಾಗಿದ್ದಾರೆ. ಬಾಲಕರು 35,182 ಮಂದಿ ಪರೀಕ್ಷೆ ಬರೆದಿದ್ದರು. ಅದರಲ್ಲಿ 19,232 ಮಂದಿ ಪಾಸಾಗಿ ಶೇ. 54.66 ಫಲಿತಾಶ ಪಡೆದದಿದ್ದಾರೆ.

Karnataka SSLC Supplementary Result 2021 Declared- Know Details

ಇನ್ನು ಶಾಲಾವಾರು ನೋಡಿದಾಗ ಸರ್ಕಾರಿ ಶಾಲೆಗಳಿಗೆ ಶೇ.58.05, ಅನುದಾನಿತ ಶಾಲೆಗಳಿಗೆ ಶೇ.54.08 ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಶೇ.50.7 ರಷ್ಟು ಫಲಿತಾಂಶ ಬಂದಿದೆ.

English summary
Karnataka SSLC Supplementary Result 2021 Declared
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X