ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

SSLC ಫಲಿತಾಂಶ: 1.22 ಲಕ್ಷ ವಿದ್ಯಾರ್ಥಿಗಳು ಫೇಲ್- ಜೂ. 26ರಿಂದ ಪೂರಕ ಪರೀಕ್ಷೆ

|
Google Oneindia Kannada News

ಬೆಂಗಳೂರು, ಮೇ. 19: ಕರ್ನಾಟಕದಲ್ಲಿ 2022 ನೇ ಸಾಲಿನಲ್ಲಿ ನಡೆದ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅನುತ್ತಿರ್ಣರಾದ ವಿದ್ಯಾರ್ಥಿಗಳ ಮರು ಮೌಲ್ಯಮಾಪನ ಹಾಗೂ ಪೂರಕ ಪರೀಕ್ಷೆಯ ದಿನಾಂಕವನ್ನು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಪ್ರಕಟಿಸಿದ್ದಾರೆ.

2022 ಜೂನ್ 26 ರಿಂದ 2022 ಜುಲೈ 04 ರಿಂದ ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆ ನಡೆಯಲಿದೆ. ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣವಾದ ವಿದ್ಯಾರ್ಥಿಗಳು ಮೇ. 20 ರಿಂದ ಮೇ. 30 ರೊಳಗೆ ಆನ್‌ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

Karnataka SSLC Result 2022: ಫಲಿತಾಂಶ ನೋಡುವುದು ಹೇಗೆ? Karnataka SSLC Result 2022: ಫಲಿತಾಂಶ ನೋಡುವುದು ಹೇಗೆ?

ಪೂರಕ ಪರೀಕ್ಷೆಗೆ ಸಂಬಂಧಿಸಿದಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಹಾಯವಾಣಿಯನ್ನು ತೆರೆದಿದೆ. ಪೋಷಕರು ಹಾಗೂ ವಿದ್ಯಾರ್ಥಿಗಳು ಈ ಕೆಳಕಂಡ ಸಂಖ್ಯೆಗಳಿಗೆ ಕರೆ ಮಾಡಿ ಇರುವ ಗೊಂದಲಗಳನ್ನು ಪರಿಹರಿಸಿಕೊಂಡು ಮಾಹಿತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. 080- 23310075, 23310076, 23562267 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.

Karnataka SSLC supplementary exam date / SSLC Supplementary exam : Fee, Last Date and How to Apply Online

2022 ನೇ ಸಾಲಿನಲ್ಲಿ ಎಸ್ಎಸ್ಎಸಿ ಪರೀಕ್ಷೆಯಲ್ಲಿ ಶೇ. 85 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ ಆಗಿದ್ದಾರೆ. ಬಾಲಕಿಯರು ಶೇ. 90. 29 ರಷ್ಟು ಉತ್ತೀರ್ಣರಾಗಿದ್ದು, ಬಾಲಕರು ಶೇ. 81,30 ರಷ್ಟು ಉತ್ತೀರ್ಣ ಆಗಿದ್ದಾರೆ.

Karnataka SSLC supplementary exam date / SSLC Supplementary exam : Fee, Last Date and How to Apply Online

ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಸಂಖ್ಯೆ 8,53, 436. ಇದರಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳ ಸಂಖ್ಯೆ 7,30,881. ಶೇ. 15 ರಷ್ಟು ವಿದ್ಯಾರ್ಥಿಗಳು ಅನುತ್ತಿರ್ಣರಾಗಿದ್ದು, ಅವರಿಗೆ ಇದೀಗ ಪೂರಕ ಪರೀಕ್ಷೆ ಅವಕಾಶ ನೀಡಿದ್ದು, ಇದರಲ್ಲಿ ಉತ್ತೀರ್ಣರಾದವರನ್ನೂ ಇದೇ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾದವರು ಎಂದೇ ಪರಿಗಣಿಸಲಾಗುತ್ತದೆ.

Recommended Video

Heavy Rain in Karnataka: ಕರ್ನಾಟಕದಲ್ಲಿ ಭಾರೀ ಮಳೆ , ಶಾಲೆಗಳಿಗೆ ರಜೆ | Oneindia Kannada

English summary
Karnataka SSLC supplementary exam date announced: June 26 to july 4th SSLC supplement exam know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X