ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಇಂದಿನಿಂದ (ಜೂ.27) ಪ್ರಾರಂಭ

|
Google Oneindia Kannada News

ಬೆಂಗಳೂರು, ಜೂ.27:ಇಂದಿನಿಂದ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಪ್ರಾರಂಭವಾಗಲಿದೆ. ಸೋಮವಾರದಿಂದ ಪರೀಕ್ಷೆ ಪ್ರಾರಂಭವಾಗಲಿದ್ದು ಕೋವಿಡ್ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಬರೆದವರ ಪೈಕಿ ಶೇ.85 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಇನ್ನುಳಿದ ಶೇ.15 ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಗೆದ್ದವರಿಗೇ ಒಂದೇ ಅವಕಾಶ ಸೋತವರಿಗೆ ಮತ್ತೊಂದು ಅವಕಾಶ ಎನ್ನುವಂತೆ ವಿದ್ಯಾರ್ಥಿಗಳಿಗೆ ಇಂದಿನಿಂದ ಪೂರಕ ಪರೀಕ್ಷೆ ಎದುರಾಗಿದೆ. ಈಗಾಗಲೇ ಶಾಲೆಗಳು ಎಸ್ಎಸ್ಎಲ್‌ಸಿ ಪ್ರವೇಶಪತ್ರವನ್ನು ಡೌನ್ ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ವಿತರಿಸಿದ್ದಾರೆ.

ಎಸ್‌ಎಸ್‌ಎಲ್‌ಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ದರಾಗಿ ಉತ್ತೀರ್ಣರಾದರೇ ಎಲ್ಲ ವಿದ್ಯಾರ್ಥಿಗಳಂತೆಯೇ 2022-23ನೇ ಸಾಲಿನಲ್ಲಿ ಕಾಲೇಜಿಗೆ ಸೇರಿಕೊಳ್ಳಬಹುದಾಗಿದೆ. ಇದರಿಂದಾಗಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಸಿದ್ದರಾಗಿ ಪರೀಕ್ಷೆ ಬರೆದು ಉತ್ತೀರ್ಣರಾಗಬೇಕು. ಮೊದಲ ದಿನ ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ/ಹಿಂದೂಸ್ಥಾನಿ ಸಂಗೀತ ಪರೀಕ್ಷೆಗಳು ನಡೆಯಲಿವೆ.

423 ಪರೀಕ್ಷಾ ಕೇಂದ್ರಗಳು ನಿಗದಿ

423 ಪರೀಕ್ಷಾ ಕೇಂದ್ರಗಳು ನಿಗದಿ

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗೆ ಒಟ್ಟು 94,649 ವಿದ್ಯಾರ್ಥಿಗಳು ನೊಂದಣಿಯನ್ನು ಮಾಡಿಕೊಂಡಿದ್ದಾರೆ. CCERR- 72,715, CCEPR-21,507, NSR-400, NSPR-27 ವಿದ್ಯಾರ್ಥಿಗಳು ಜೂನ್ 2022ರ ಪೂರಕ ಪರೀಕ್ಷೆಗೆ ನೊಂದಣಿಯನ್ನು ಮಾಡಿಕೊಂಡಿದ್ದಾರೆ. ಇನ್ನು ಪರೀಕ್ಷಾ ಕೇಂದ್ರಗಳು 423 ನಿಗದಿ ಮಾಡಲಾಗಿದೆ. ಸರ್ಕಾರಿ 181, ಅನುದಾನಿತ 151, ಅನುದಾನ ರಹಿತ 91ಕೇಂದ್ರಗಳಲ್ಲಿ ಪರೀಕ್ಷೆಯು ನಡೆಯಲಿದೆ.

ಬಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ

ಬಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ

ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಲು ಸೂಚನೆಯನ್ನು ನೀಡಲಾಗಿದೆ. ಮಾಸ್ಕ್ ,ಸ್ಯಾನೆಟೈಸರ್ ಬಳಸುವಂತೆ ವಿದ್ಯಾರ್ಥಿಗಳಿಗೂ ಸೂಚನೆಯನ್ನು ನೀಡಲಾಗಿದೆ. ಇನ್ನು ವಿದ್ಯಾರ್ಥಿಗಳು ಕೆಎಸ್ಆರ್‌ಟಿಸಿ ಸೇರಿದಂತೆ ಇತರೆ ನಿಗಮಗಳ ಬಸ್‌ನಲ್ಲಿ ಪ್ರವೇಶಪತ್ರವನ್ನು ತೋರಿಸಿ ಪ್ರಯಾಣವನ್ನು ಮಾಡಬಹುದಾಗಿದೆ. ಇನ್ನು ಪರೀಕ್ಷಾ ಕೇಂದ್ರಗಳ ಸುತ್ತಲಿನ ಸೈಬರ್ ಕೇಂದ್ರಗಳು ಮತ್ತು ಜೆರಾಕ್ಸ್ ಕೇಂದ್ರಗಳನ್ನು ಮುಚ್ಚುವಂತೆ ಪೊಲೀಸ್ ಇಲಾಖೆ ನಿಷೇದಾಜ್ಞೆಯನ್ನು ಹೇರಿಕೆ ಮಾಡಿದೆ.

ಸೋಮವಾರದಿಂದ ಪೂರಕ ಪರೀಕ್ಷೆ

ಸೋಮವಾರದಿಂದ ಪೂರಕ ಪರೀಕ್ಷೆ

ದಿನಾಂಕ 27.06.2022(ಸೋಮವಾರ) - ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ/ಹಿಂದೂಸ್ಥಾನಿ ಸಂಗೀತ.

ದಿನಾಂಕ 28.06.2022(ಮಂಗಳವಾರ) -ಪ್ರಥಮ ಭಾಷೆ (ಕನ್ನಡ, ತೆಲುಗು,ಹಿಂದಿ,ಮರಾಠಿ,ಉರ್ದು, ಇಂಗ್ಲೀಷ್, ಸಂಸ್ಕೃತ)

ದಿನಾಂಕ 29.06.2022(ಬುಧವಾರ) - ದ್ವಿತೀಯ ಭಾಷೆ(ಇಂಗ್ಲಿಷ್,ಕನ್ನಡ)

ದಿನಾಂಕ 30.06.2022(ಗುರುವಾರ) - ಸಮಾಜ ವಿಜ್ಞಾನ

ದಿನಾಂಕ 01.07.2022(ಶುಕ್ರವಾರ) - ತೃತೀಯ ಭಾಷೆ (ಹಿಂದಿ, ಕನ್ನಡ ಇಂಗ್ಲೀಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು)

ಎನ್.ಎಸ್.ಕ್ಯೂ.ಎಫ್ ಪರೀಕ್ಷಾ ವಿಷಯಗಳು(ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್‌ನೆಸ್)

ದಿನಾಂಕ 02.07.2022(ಶನಿವಾರ) ಎಲಿಮೆಂಟ್ ಆಫ್ ಮೆಕಾನಿಕಲ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್-2,ಇಂಜಿನಿಯರ್ ಗ್ರಾಫಿಕ್ಸ್-2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್, ಅರ್ಥಶಾಸ್ತ್ರ

ದಿನಾಂಕ 03.07.2022(ಭಾನುವಾರ) ರಜೆ ದಿನ

ದಿನಾಂಕ 04.07.2022(ಸೋಮವಾರ) ಗಣಿತ, ಸಮಾಜ ಶಾಸ್ತ್ರ

ಜುಲೈ ಕೊನೆ ಅಥವ ಆಗಸ್ಟ್ ನಲ್ಲಿ ಫಲಿತಾಂಶ

ಜುಲೈ ಕೊನೆ ಅಥವ ಆಗಸ್ಟ್ ನಲ್ಲಿ ಫಲಿತಾಂಶ

ಜೂನ್ 2022ರ ಪೂರಕ ಪರೀಕ್ಷೆಯು ಜೂನ್ 27ಕ್ಕೆ ಪ್ರಾರಂಭವಾಗಿ ಜುಲೈ 04ಕ್ಕೆ ಮುಕ್ತಾಯವಾಗಲಿದೆ. ಪರೀಕ್ಷೆಯನ್ನು ಬರೆದ ಬಳಿಕ ವಿದ್ಯಾರ್ಥಿಗಳು ಕಾಯುವುದು ಫಲಿತಾಂಶಕ್ಕೆ. ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನವೂ ಜುಲೈ 11 ರಿಂದ ಪ್ರಾರಂಭವಾಗಲಿದೆ. ಈ ಸಲ ಕೇವಲ 94 ಸಾವಿರ ವಿದ್ಯಾರ್ಥಿಗಳಿದ್ದು ಮೌಲ್ಯಮಾಪನ ಕಾರ್ಯವು ವೇಗವಾಗಿ ಮುಗಿಯಲಿದೆ. ಜುಲೈ ಕೊನೆ ವಾರದಲ್ಲಿ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಫಲಿತಾಂಶವನ್ನು ನೀಡುವ ಮೂಲಕ ಕಾಲೇಜಿಗೆ ಸೇರುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಿಕ್ಷಣ ಇಲಾಖೆ ಆಲೋಚಿಸಿದೆ.

Recommended Video

Kapil Dev ನಂತರ ಟೀಮ್ ಇಂಡಿಯಾಗೆ ಜಸ್ಪ್ರೀತ್ ಬುಮ್ರಾ ನಾಯಕ | *Cricket | OneIndia Kannada

English summary
27th june on-wards Karnataka SSLC Supplementary Exam 2022: How many student register for exam details and Time Table; Here is the Karnataka SSLC Supplementary Exam 2022 schedule, exam from June 27 to July 4. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X