ಮೇ 10ರಂದು ಕರ್ನಾಟಕ ಎಸ್ಎಸ್ಎಲ್ ಸಿ ಫಲಿತಾಂಶ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಏಪ್ರಿಲ್ 15: ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ನಿರ್ಣಾಯಕ ಪರೀಕ್ಷೆಗಳಲ್ಲೊಂದಾದ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಮೇ 10 ರಂದು ಹೊರಬೀಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ. [ಪ್ರತಿಯೊಬ್ಬ ವಿದ್ಯಾರ್ಥಿ ಓದಲೇಬೇಕಾದ ಲೇಖನವಿದು]

ಏಪ್ರಿಲ್ 14 ರಂದು, ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸೂಕ್ತ ಮುನ್ನೆಚ್ಚರಿಕೆಯಿಂದಾಗಿ ಈ ಬಾರಿ ಪರೀಕ್ಷಾ ಅಕ್ರಮವನ್ನು ತಡೆಯುವಲ್ಲಿ ಸರ್ಕಾರ ಸಂಪೂರ್ಣ ಯಶಸ್ವಿಯಾಗಿದ್ದು, ಮೌಲ್ಯ ಮಾಪನ ಕಾರ್ಯವೂ ಯಾವುದೇ ಸಮಸ್ಯೆಯಿಲ್ಲದೆ ನಡೆಯಲಿದೆ ಎಂದರು.[ಚಿಂತೆ ಬೇಡ, SSLC ಜೀವನ ಬದಲಿಸುವ ನಿರ್ಣಾಯಕ ಮಜಲಲ್ಲ]

SSLC results will be declared on May 10th: Tanveer Sait

ಮಾರ್ಚ್ 30 ರಿಂದ ಏಪ್ರಿಲ್ 12 ರ ವರೆಗೂ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆದಿದ್ದು, ಏಪ್ರಿಲ್ 20 ರಿಂದ ಮೌಲ್ಯಮಾಪನ ಆರಂಭವಾಗಲಿದೆ. ಈ ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಂಥ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂಬುದು ಸಮಾಧಾನದ ಸಂಗತಿ.[SSLC ಪರೀಕ್ಷೆ ಮುಕ್ತಾಯ, ಏ 20ರಿಂದ ಮೌಲ್ಯಮಾಪನ ಶುರು]

ಪರೀಕ್ಷಾ ಫಲಿತಾಂಶಕ್ಕೆ ಈ ವೆಬ್ ಸೈಟ್ ಕ್ಲಿಕ್ ಮಾಡಿ

ಹೆಚ್ಚಿನ ಮಾಹಿತಿಗೆ ಕರ್ನಾಟಕ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್ ಸೈಟ್ ನೋಡಿ

ಒಟ್ಟು 2770 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ರಾಜ್ಯದ 225 ಕೇಂದ್ರಗಳಲ್ಲಿ, 68,567 ಶಿಕ್ಷಕರಿಂದ ಉತ್ತರಪತ್ರಿಕೆಯ ಮೌಲ್ಯಮಾಪನ ನಡೆಯಲಿದೆ. ಈ ಬಾರಿ 8.77 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ 4.69 ಲಕ್ಷ ಬಾಲಕರು ಹಾಗೂ 4.07 ಲಕ್ಷ ಬಾಲಕಿಯರಿದ್ದಾರೆ. [SSLC ಪರೀಕ್ಷೆಗೆ ಇಂದು ಮಂಗಳ, ಕಾಲೇಜಿಗೆ ದಾರಿ ಯಾವುದಯ್ಯ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The results for Karnataka SSLC Examination will be declared on May 10th, Tanveer sait, minister for Primary and secondary education told. 8.77 students wrote SSLC examinations in Karnataka from March 30th to April 12th.
Please Wait while comments are loading...