• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

SSLC ಫಲಿತಾಂಶ: 625/625 ಗಳಿಸಿದ ವಿದ್ಯಾರ್ಥಿಗಳ ವಿವರ

|

ಬೆಂಗಳೂರು, ಆಗಸ್ಟ್ 10: 2019-20ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಇಂದು ಪ್ರಕಟವಾಗಿದೆ.

   SSLC Results : Chikkaballapura ರಾಜ್ಯಕ್ಕೆ ಫರ್ಸ್ಟ್ | Oneindia Kannada

   6 ಮಂದಿ ವಿದ್ಯಾರ್ಥಿಗಳು ಶೇ. 100ರಷ್ಟು ಫಲಿತಾಂಶ ಪಡೆದಿದ್ದಾರೆ. ಅಂದರೆ 625ಕ್ಕೆ 625 ಅಂಕವನ್ನು ಗಳಿಸಿದ್ದಾರೆ.ನಾಗಸಂದ್ರದ ಸೇಂಟ್ ಮೇರಿಸ್ ಹೈಸ್ಕೂಲಿನ ಚಿರಾಯು ಕೆಎಸ್ ಅವರು 625ಕ್ಕೆ 625 ಅಂಕಗಳನ್ನು ಗಳಿಸಿದ್ದಾರೆ. ಬೆಂಗಳೂರಿನ ಪೂರ್ಣ ಪ್ರಜ್ಞಾ ಎಜುಕೇಷನ್ ಸೆಂಟರ್‌ನ ನಿಖಿಲೇಶ್ ಎನ್ ಮರಳಿ, ಹುಬ್ಬಳ್ಳಿಯ ಸತ್ಯಸಾಯಿ ಸರಸ್ವತಿ ಇಂಗ್ಲಿಷ್ ಮೀಡಿಯಂ ಬಾಯ್ಸ್ ಹೈಸ್ಕೂಲ್ ಮಾರದೇವನಹಳ್ಳಿಯ ಧೀರಜ್ ರೆಡ್ಡಿ ಎಂಪಿ, ಸುಳ್ಯದ ಕುಮಾರಸ್ವಾಮಿ ಇಂಗ್ಲಿಷ್ ಮೀಡಿಯಮ್ ಹೈಸ್ಕೂಲಿನ ಅನುಷ್ ಎಎಲ್, ಚಿಕ್ಕಮಗಳೂರಿನ ಸೇಂಟ್ ಜೋಸೆಫ್ ಕಾನ್ವೆಂಟ್ ಗರ್ಲ್ಸ್‌ ಹೈಸ್ಕೂಲಿನ ತನ್ಮಯಿ ಐಪಿ ಪೂರ್ಣ ಅಂಕ ಗಳಿಸಿದ್ದಾರೆ.

   ಉತ್ತರ ಕನ್ನಡದ ಸಿದ್ದಾಪುರದ ಪ್ರಶಾಂತಿ ಇಂಗ್ಲಿಷ್ ಮೀಡಿಯಮ್ ಹೈಸ್ಕೂಲ್‌ನ ಅನಿರುಧ್ ಸುರೇಶ್ ಗುತ್ತೀಕಾರ್ ಹಾಗೂ ಬೆಂಗಳೂರು ರಾಜಾಜಿನಗರದ ವಿವಿಎಸ್ ಸರ್ದಾರ್ ಪಟೇಲ್ ಇಂಗ್ಲಿಷ್ ಹೈಸ್ಕೂಲ್ ನ ಅಮೋಘ್ ಜಿಕೆ 625ಕ್ಕೆ 624 ಅಂಕಗಳನ್ನು ಪಡೆದಿದ್ದಾರೆ.

   ಪ್ರಥಮ ಭಾಷೆ ಕನ್ನಡದಲ್ಲಿ 125 ಅಂಕವನ್ನು 8995 ಮಂದಿ ಗಳಿಸಿದ್ದಾರೆ. ದ್ವಿತೀಯ ಭಾಷೆ ಇಂಗ್ಲಿಷ್‌ ನಲ್ಲಿ 100 ಅಂಕವನ್ನು 6044 ಮಂದಿ ವಿದ್ಯಾರ್ಥಿಗಳು ಗಳಿಸಿದ್ದಾರೆ. ತೃತೀಯ ಭಾಷೆ ಇಂಗ್ಲಿಷ್‌ನಲ್ಲಿ 100ಕ್ಕೆ ನೂರು ಅಂಕವನ್ನು 21,745 ವಿದ್ಯಾರ್ಥಿಗಳು, ಗಣಿತದಲ್ಲಿ ನೂರಕ್ಕೆ ನೂರು ಅಂಕವನ್ನು 1796 ವಿದ್ಯಾರ್ಥಿಗಳು, ವಿಜ್ಞಾನದಲ್ಲಿ ನೂರು ಅಂಕವನ್ನು 910 ವಿದ್ಯಾರ್ಥಿಗಳು, ಸಮಾಜ ವಿಜ್ಞಾನದಲ್ಲಿ ನೂರು ಅಂಕವನ್ನು 417 ವಿದ್ಯಾರ್ಥಿಗಳು ಗಳಿಸಿದ್ದಾರೆ.

   52,219 ಮೌಲ್ಯಮಾಪಕರು ಸುಮಾರು 8 ಲಕ್ಷ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಿದ್ದಾರೆ. ಜುಲೈ 14 ರಿಂದ ಮೌಲ್ಯಮಾಪನ ಆರಂಭವಾಗಿತ್ತು. ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ ಲಾಕ್‌ಡೌನ್ ಇದ್ದ ಕಾರಣ ಎರಡು ದಿನ ತಡವಾಗಿ ಆರಂಭವಾಗಿತ್ತು.

   71.80 ಶೇಕಡಾವಾರು ಫಲಿತಾಂಶವಾಗಿದೆ. ಕಳೆದ ವರ್ಷ 73.70 ಫಲಿತಾಂಶವಾಗಿತ್ತು. 5,82,316 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಶಾಲೆಗಳ ಫಲಿತಾಂಶ ಶೇ. 72.79 ಅಷ್ಟಿದೆ. ಅನುದಾನಿತ ಶಾಲೆಗಳು 70.60, ಶೇ. 82.31, 2,28,734 ಅನುತ್ತೀರ್ಣ ರಾಗಿದ್ದಾರೆ.

   English summary
   Karnataka Secondary Education Examination Board (KSEEB) is declared SSLC result. Here is the list of Students Who Scored 625/625.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X