ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2020: 'ಶೂನ್ಯ' ಸಾಧನೆ ಮಾಡಿದ ಶಾಲೆಗಳ ವಿವರ

|
Google Oneindia Kannada News

ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 71.80ರಷ್ಟು ಫಲಿತಾಂಶ ಬಂದಿದೆ. 2018-19ನೇ ಸಾಲಿನಲ್ಲಿ ಶೇ 73.70 ಫಲಿತಾಂಶ ಬಂದಿತ್ತು. ಬಾಲಕರ ವಿಭಾಗದಲ್ಲಿ ಶೇ 66.41 ಮತ್ತು ಬಾಲಕಿಯರ ವಿಭಾಗದಲ್ಲಿ ಶೇ 77.74ರಷ್ಟು ಫಲಿತಾಂಶ ಬಂದಿದೆ.

Recommended Video

SSLC Results : Chikkaballapura ರಾಜ್ಯಕ್ಕೆ ಫರ್ಸ್ಟ್ | Oneindia Kannada

ನಗರವಾರು ಪ್ರದೇಶಗಳಲ್ಲಿ ಶೇ 73.41 ಹಾಗೂ ಗ್ರಾಮೀಣವಾರು ಪ್ರದೇಶದಲ್ಲಿ ಶೇ 77.18ರಷ್ಟು ಫಲಿತಾಂಶ ಪ್ರಕಟವಾಗಿದೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಇಲ್ಲಿವೆ ಮುಖ್ಯಾಂಶಗಳುಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಇಲ್ಲಿವೆ ಮುಖ್ಯಾಂಶಗಳು

ಒಟ್ಟು 62 ಶಾಲೆಗಳಲ್ಲಿ ಈ ವರ್ಷ ಶೂನ್ಯ ಫಲಿತಾಂಶ ಬಂದಿದೆ. ಇವುಗಳಲ್ಲಿ ನಾಲ್ಕು ಸರ್ಕಾರಿ ಶಾಲೆಗಳು, 11 ಅನುದಾನಿತ ಶಾಲೆಗಳು ಮತ್ತು 47 ಅನುದಾನರಹಿತ ಶಾಲೆಗಳು ಸೇರಿವೆ. ಈ ಶಾಲೆಗಳಲ್ಲಿನ ಯಾವ ವಿದ್ಯಾರ್ಥಿಯೂ ಉತ್ತೀರ್ಣರಾಗಿಲ್ಲ.

 Karnataka SSLC Results 2020: 62 Schools Scored 0% Passes

ಬೆಂಗಳೂರಿನ ಮೂರು ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಬೆಳಗಾವಿಯ ಶಹಾಪುರ ಜಿಲ್ಲೆಯ ಪಂಡಿತ್ ನೆಹರು ಜೂನಿಯರ್ ಕಾಲೇಜಿನ 31 ಮತ್ತು ಬೆಳಗಾವಿಯಲ್ಲಿನ ಬೆನೊನ್ ಸ್ಮಿತ್ ಜೂನಿಯರ್ ಕಾಲೇಜಿನ 30 ಮಂದಿ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳಲ್ಲಿ ಅಧಿಕ ಅಂಕ ಪಡೆದವರ ವಿವರಎಸ್‌ಎಸ್‌ಎಲ್‌ಸಿ ಪರೀಕ್ಷೆ: ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳಲ್ಲಿ ಅಧಿಕ ಅಂಕ ಪಡೆದವರ ವಿವರ

ಕಲಬುರ್ಗಿಯಲ್ಲಿನ ರಾಜಾಪುರದಲ್ಲಿರುವ ಬಿ. ಶ್ಯಾಮಸುಂದರ್ ಮೆಮೋರಿಯಲ್ ಹೈಸ್ಕೂಲ್‌ನಲ್ಲಿ 28 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಒಬ್ಬರೂ ಪಾಸಾಗಿಲ್ಲ. ಬಾಗಲಕೋಟೆಯ ಆದರ್ಶ್ ಹೈಸ್ಕೂಲ್‌ನಲ್ಲಿ 27, ಬೆಂಗಳೂರು ದಕ್ಷಿಣದ ಎಸ್‌ಎಲ್‌ಎನ್ ಹೈಸ್ಕೂಲಿನಲ್ಲಿ 26 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಎಲ್ಲರೂ ನಪಾಸಾಗಿದ್ದಾರೆ.

ಬೆಂಗಳೂರಿನ ಕೆಂಪೇಗೌಡ ನಗರದ ಕಾರ್ಪೋರೇಷನ್ ಬಾಲಕಿಯರ ಪ್ರೌಢಶಾಲೆ, ಕಲಬುರ್ಗಿಯ ಜೇವರ್ಗಿ ತಾಲೂಕಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕೇವಲ ಒಬ್ಬರು ಮಾತ್ರ ವಿದ್ಯಾರ್ಥಿ ಪರೀಕ್ಷೆ ಬರೆದಿದ್ದರು. ಕೊಡಗಿನ ಸೋಮವಾರ ಪೇಟೆಯ ಸರ್ಕಾರಿ ಪ್ರೌಢಶಾಲೆಯಿಂದ ಇಬ್ಬರು, ಬಾಗಲಕೋಟೆಯ ಸರ್ಕಾರಿ ಜೂನಿಯರ್ ಟೆಕ್ನಿಕಲ್ ಶಾಲೆ ಹಾಗೂ ಕಲಬುರ್ಗಿಯ ರತ್ನ ಸಾಗರ್ ಬಾಲಕಿಯ ಪ್ರೌಢಶಾಲೆಯಲ್ಲಿ ತಲಾ ಮೂವರು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಯಾರೂ ಉತ್ತೀರ್ಣರಾಗಿಲ್ಲ.

English summary
Karnataka SSLC Results 2020: 62 schools have scored 0% passes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X