ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Karnataka SSLC Result 2022: ಮೇ. 19 ಕ್ಕೆ ಪರೀಕ್ಷೆ ಫಲಿತಾಂಶ ಪ್ರಕಟ

|
Google Oneindia Kannada News

ಬೆಂಗಳೂರು, ಮೇ. 17: ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಮೇ. 19 ರಂದು ಮಧ್ಯಾಹ್ನ 1 ಗಂಟೆ ವೇಳೆಗೆ ಹೊರ ಬೀಳಲಿದೆ. ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು 2021-22 ನೇ ಶೈಕ್ಷಣಿಕ ಸಾಲಿನ ಫಲಿತಾಂಶವನ್ನು ಪ್ರಕಟ ಮಾಡಲಿದ್ದು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ.

ಪ್ರತಿ ಸೆಕೆಂಡಿಗೆ ಇಬ್ಬರ ಫಲಿತಾಂಶ ಸಂದೇಶ: ರಾಜ್ಯದಲ್ಲಿಎಸ್ಎಸ್ಎಲ್‌ಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ಫಲಿತಾಂಶ ಪ್ರಕಟವಾಗಲಿದೆ. ಪ್ರತಿ ಸೆಕೆಂಡಿಗೆ ಇಬ್ಬರಿಗೆ ಫಲಿತಾಂಶದ ವಿವರ ಮೊಬೈಲ್‌ಗೆ ರವಾನೆಯಾಗಲಿದೆ. ಮೇ. 19 ಸಂಜೆ ವೇಳೆಗೆ ಫಲಿತಾಂಶದ ವಿವರಗಳು ವಿದ್ಯಾರ್ಥಿಗಳ ಮೊಬೈಲ್ ಗಳಿಗೆ ಹೋಗಲಿದೆ.

ವೆಬ್ ತಾಣದಲ್ಲಿ ಪ್ರಕಟ: ಎಸ್ಎಸ್ಎಲ್‌ಸಿ ಫಲಿತಾಂಶ ಕುರಿತು ಅಧಿಕೃತ ವೆಬ್ ತಾಣ https://sslc.karnataka.gov.in/ ಹಾಗೂ https://karresults.nic.in/ ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಅಧಿಕೃತವಾಗಿ ಫಲಿತಾಂಶ ಪ್ರಕಟವಾದ ಕೂಡಲೇ ವೆಬ್ ತಾಣದಲ್ಲಿ ಫಲಿತಾಂಶ ಪ್ರಕಟವಾಗಲಿದೆ.

SSLC result on May 19 know how to check on official website

ಸರ್ಕಾರದ ಈ ಅಧಿಕೃತ ವೆಬ್ ತಾಣದಲ್ಲಿ ವಿದ್ಯಾರ್ಥಿಗಳ ಹಾಲ್ ಟಿಕೆಟ್ ನಂಬರ್ ಹಾಕಿದರೆ ಸಾಕು ವಿಷಯವಾರು ಫಲಿತಾಂಶ ಹಾಗೂ ಗಳಿಸಿದ ಒಟ್ಟು ಅಂಕದ ವಿವರ ಪ್ರಕಟವಾಗಲಿದೆ. ಒಂದೇ ಸಲ ವಿದ್ಯಾರ್ಥಿಗಳು ಫಲಿತಾಂಶದ ವಿವರ ನೋಡುವ ಕಾರಣಕ್ಕೆ ಕೆಲವೊಮ್ಮೆ ಫಲಿತಾಂಶ ತೋರಿಸದಿದ್ದರೂ, ವಿದ್ಯಾರ್ಥಿಗಳು ತಾಳ್ಮೆ ಕಳೆದುಕೊಳ್ಳಬಾರದು. ಮಿಗಿಲಾಗಿ ಮೇ. 20 ರಂದೇ ಫಲಿತಾಂಶದ ವಿವರಗಳು ಆಯಾ ಶಾಲೆಗಳಿಗೆ ರವಾನೆಯಾಗಲಿದೆ.

8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು: ಕೋವಿಡ್ ನಡುವೆಯೂ ಕರ್ನಾಟಕದಲ್ಲಿ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ ಎಸ್ಎಸ್ಎಲ್‌ಸಿ ಮುಖ್ಯ ಪರೀಕ್ಷೆಗೆ 8.73 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಮಾ. 28 ರಿಂದ ಏ. 11 ರ ವರೆಗೆ ಪರೀಕ್ಷೆ ನಡೆದಿತ್ತು. ಹದಿನೈದು ಸಾವಿರ ಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಫಲಿತಾಂಶದ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಇನ್ನೆರಡು ದಿನದಲ್ಲಿ ಸಮಗ್ರ ವಿವರ ಲಭ್ಯವಾಗಲಿದೆ.

SSLC result on May 19 know how to check on official website

ಮೌಲ್ಯಮಾಪನ ವಿಳಂಬ: ಎಸ್ಎಸ್ಎಲ್‌ಸಿ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಸಾವಿರಾರು ಶಿಕ್ಷಕರು ಗೈರು ಹಾಜರಾಗಿದ್ದರು. ಈಗಾಗಿ ಫಲಿತಾಂಶ ಪ್ರಕಟದಲ್ಲಿ ಸ್ವಲ್ಪ ವಿಳಂಬವಾಗಿದೆ. ಮೌಲ್ಯಮಾಪನ ಪೂರ್ಣ ಮುಗಿಸಿದ್ದು, ಫಲಿತಾಂಶದ ವಿವರಗಳನ್ನು ಸಹ ಅಧಿಕೃತ ವೆಬ್ ತಾಣಕ್ಕೆ ಅಪ್ಲೋಡ್ ಮಾಡಲಾಗಿದೆ. ಇನ್ನು ಶಿಕ್ಷಣ ಸಚಿವರು ಅಧಿಕೃತವಾಗಿ ಕರ್ನಾಟಕ ರಾಜ್ಯದ ಫಲಿತಾಂಶ ಪ್ರಕಟಿಸಿದ ಕೂಡಲೇ ವೆಬ್ ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಫಲಿತಾಂಶದಲ್ಲಿ ಯಾವುದೇ ತಾಂತ್ರಿಕ ದೋಷ ಕಾಣದಂತೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪರೀಕ್ಷಾ ಮಂಡಳಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

English summary
Karnataka SSLC Result 2022 on may 19: how to check SSLC Result in official website know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X