ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

SSLC ಮೇ 20ರೊಳಗೆ ಫಲಿತಾಂಶ: ಮೌಲ್ಯಮಾಪನಕ್ಕೆ ಗೈರು ಹಾಜರಾದವರ ವಿರುದ್ಧ ಶಿಸ್ತುಕ್ರಮ!

|
Google Oneindia Kannada News

ಬೆಂಗಳೂರು, ಮೇ 8: ಎಸ್ಎಸ್ಎಲ್ ಸಿ ಫಲಿತಾಂಶ ಮೌಲ್ಯಮಾಪನ ಪ್ರಕ್ರಿಯೆ ಮುಗಿದಿದ್ದು, ವಿದ್ಯಾರ್ಥಿಗಳ ಅಂಕಗಳನ್ನು ಕ್ರೋಢೀಕರಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮೇ. 20 ರೊಳಗೆ ಎಸ್ಎಸ್ಎಲ್‌ಸಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿದೆ.

ಎಸ್ಎಸ್ಎಲ್‌ಸಿ ಉತ್ತರ ಪತ್ರಿಕೆ ಮೌಲ್ಯಮಾಪನದಲ್ಲಿ ಪಾಲ್ಗೊಳ್ಳದೇ ಫಲಿತಾಂಶ ಪ್ರಕಟ ವಿಳಂಬಕ್ಕೆ ಕಾರಣವಾದ ಶಿಕ್ಷಕರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಪ್ರೌಢ ಶಿಕ್ಷಣ ಮಂಡಳಿ ಸೂಚನೆ ನೀಡಿದೆ.

ಫಲಿತಾಂಶ ಪೂರ್ಣ:

"ಎಸ್ಎಸ್ಎಲ್‌ಸಿ ಪರೀಕ್ಷೆ ಮಾ. 28 ರಂದು ಆರಂಭವಾಗಿತ್ತು. ಏಪ್ರಿಲ್ 11 ರಂದು ಪರೀಕ್ಷೆ ಪೂರ್ಣಗೊಂಡಿತ್ತು. ಅಂದುಕೊಂಡಂತೆ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡಿದ್ದರೆ ಮೇ 12 ರೊಳಗೆ ಫಲಿತಾಂಶ ಹೊರ ಬೀಳುತ್ತಿತ್ತು. ಮೌಲ್ಯಮಾಪನಕ್ಕೆ ನೊಂದಣಿ ಮಾಡಿದ್ದ ಬಹುತೇಕ ಶಿಕ್ಷಕರು ಮೌಲ್ಯಮಾಪನಕ್ಕೆ ಗೈರು ಹಾಜರಾಗಿದ್ದರು. ಹೀಗಾಗಿ ಮೌಲ್ಯ ಮಾಪನ ಪ್ರಕ್ರಿಯೆಯಲ್ಲಿ ಸ್ವಲ್ಪ ವಿಳಂಬವಾಗಿತ್ತು. ಹೀಗಾಗಿ ಎಸ್ಎಸ್ಎಲ್ ಸಿ ಪರೀಕ್ಷೆ ಮೇ 20 ರೊಳಗೆ ಪ್ರಕಟವಾಗಲಿದೆ," ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Karnataka: SSLC Result 2022 Likly to announce before May 20

ಮೌಲ್ಯಮಾಪನಕ್ಕೆ ಹೋಗದವರ ವಿರುದ್ಧ ಕ್ರಮ:

ಎಸ್ಎಸ್ಎಲ್ ಸಿ ಮೌಲ್ಯಮಾಪನಕ್ಕೆ ನೋಂದಣಿ ಮಾಡಿ ಗೈರು ಹಾಜರಾಗಿರುವ ಶಿಕ್ಷಕರ ವಿರುದ್ಧ ಕ್ರಮ ಜರುಗಿಸುವಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಉಪ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಈ ಕುರಿತು ಏ. 30 ರಂದು ಎಲ್ಲಾ ಡಿಡಿಪಿಐಗಳಿಗೆ ಸುತ್ತೋಲೆ ನೀಡಿದ್ದು, ಉತ್ತರ ಪತ್ರಿಕೆಗಳ ಮೌಲ್ಯಮಾಪನ ಶೈಕ್ಷಣಿಕ ಚುಟವಟಿಕೆ ಒಂದು ಭಾಗ. ಮೌಲ್ಯಮಾಪನಕ್ಕೆ ನೋಂದಣಿ ಮಾಡಿಕೊಂಡಿರುವ ಶಿಕ್ಷಕರು ಮೌಲ್ಯಮಾಪನದಲ್ಲಿ ಪಾಲ್ಗೊಂಡಿಲ್ಲ.

"ಈ ಕುರಿತು ಪೂರ್ವಾನುಮತಿಯನ್ನು ಪಡೆದಿಲ್ಲ. ಇದರಿಂದಾಗಿ ಎಸ್ಎಸ್ಎಲ್‌ಸಿ ಫಲಿತಾಂಶ ಮೌಲ್ಯಮಾಪನ ಕಾರ್ಯ ವಿಳಂಬವಾಗಿದ್ದು, ಫಲಿತಾಂಶ ವಿಳಂಬಕ್ಕೆ ಕಾರಣವಾಗಿರುತ್ತಾರೆ. ಇಂತಹ ಶಿಕ್ಷಕರ ಪಟ್ಟಿಯನ್ನು ತಯಾರಿಸಿ ಮೌಲ್ಯಮಾಪನಕ್ಕೆ ನೋಂದಣಿ ಮಾಡಿ ಗೈರು ಹಾಜರಾಗಿರುವ ಶಿಕ್ಷಕರ ಪಟ್ಟಿಯನ್ನು ತಯಾರಿಸಿ ಶಿಸ್ತು ಕ್ರಮ ಜರುಗಿಸಬೇಕು." ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷೆ ಮಂಡಳಿ ನಿರ್ದೆಶಕ ( ಪರೀಕ್ಷೆಗಳು) ಗೋಪಾಲಕೃಷ್ಣ ಅವರು ಸೂಚನೆ ನೀಡಿದ್ದಾರೆ. ಎಸ್ಎಸ್ಎಲ್‌ಸಿ ಉತ್ತರ ಪತ್ರಿಕೆ ಮೌಲ್ಯಮಾಪನದಲ್ಲಿ ಪಾಲ್ಗೊಳ್ಳದ ಶಿಕ್ಷಕರ ವಿರುದ್ಧ ಇದೀಗ ಶಿಸ್ತು ಕ್ರಮದ ಭೀತಿ ಎದುರಿಸುತ್ತಿದ್ದಾರೆ.

Karnataka: SSLC Result 2022 Likly to announce before May 20

ನಿರೀಕ್ಷಿತ ಪ್ರಮಾಣದಲ್ಲಿ ಶಿಕ್ಷಕರು ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಪಾಲ್ಗೊಳ್ಳದ ಕಾರಣ ಫಲಿತಾಂಶ ಪ್ರಕಟ ದಿನಾಂಕವನ್ನು ಅನಿವಾರ್ಯವಾಗಿ ಮುಂದೂಡಲಾಗಿದೆ. ಮೇ. 15 ರೊಳಗೆ ಫಲಿತಾಂಶ ಪ್ರಕಟವಾಗುವ ನಿರೀಕ್ಷೆಯಿತ್ತು. ಇದೀಗ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರೇ ಮೇ ಮೂರನೇ ವಾರದಲ್ಲಿ ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ.

Karnataka: SSLC Result 2022 Likly to announce before May 20

ಈಗಾಗಲೇ ಮೌಲ್ಯಮಾಪನ ಕಾರ್ಯ ಮುಗಿದಿದ್ದು, ಅಂಕಗಳ ಕ್ರೋಢೀಕರಣ ಮಾಡಲಾಗುತ್ತಿದೆ. ಇನ್ನೊಂದು ವಾರದಲ್ಲಿ ಫಲಿತಾಂಶ ಪ್ರಕಟಕ್ಕೆ ಪ್ರೌಢ ಶಿಕ್ಷಣ ಮಂಡಳಿ ಎಲ್ಲಾ ಕಾರ್ಯ ಮುಗಿಸಲಿದ್ದು, ಮೇ 20 ರಂದು ಫಲಿತಾಂಶ ಪ್ರಕಟಿಸಲು ತಯಾರಿ ನಡೆಸಿಕೊಳ್ಳುತ್ತಿದೆ ಎಂದು ಇಲಾಖೆಯ ಮೂಲಗಳು ಸ್ಪಷ್ಟಪಡಿಸಿವೆ.

English summary
2021-22 academic year SSLC Result will announce 3rd week of may: The Board of Secondary Education has instructed to take disciplinary action against the teachers for not participating in the SSLC answer paper evaluation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X