ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಎಸ್‌ಎಲ್‌ಸಿ ಫಲಿತಾಂಶ 2022: ಯಾವ ಜಿಲ್ಲೆಗೆ ಯಾವ ಗ್ರೇಡ್..?

|
Google Oneindia Kannada News

ಬೆಂಗಳೂರು, ಮೇ19: ಎಸ್‌ಎಸ್ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ. ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾದ ಸಂದರ್ಭದಲ್ಲಿ ಸರ್ವೇ ಸಾಮಾನ್ಯವಾಗಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆಯನ್ನು ಬೆರೆದಿದಿದ್ದರು. ಎಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, ಅನುತ್ತೀರ್ಣರಾಗಿದ್ದಾರೆ. ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದವರು ಯಾರು ಎಂಬಿತ್ಯಾದಿ ಅಂಶವನ್ನು ಗಮನಿಸುತ್ತೇವೆ. ಅದೇ ರೀತಿ ಯಾವ ಜಿಲ್ಲೆ ಪ್ರಥಮ , ಯಾವ ಜಿಲ್ಲೆ ಕೊನೆ ಎಂಬುದರ ಪೈಪೋಟಿಯು ಜೋರಾಗಿ ನಡೆಯುತ್ತಿತ್ತು. ಆದರೆ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗಳನ್ನು ಗ್ರೇಡ್ ವೈಸ್ ನಲ್ಲಿ ವಿಭಾಗ ಮಾಡಲಾಗಿದೆ.

ಶೈಕ್ಷಣಿಕ ಜಿಲ್ಲೆಗಳ ಲೆಕ್ಕಾಚಾರದಲ್ಲಿ ಕರ್ನಾಟಕದಲ್ಲಿ 34 ಶೈಕ್ಷಣಿಕ ಜಿಲ್ಲೆ ಎಂದು ಕರೆಯಲಾಗುತ್ತದೆ. ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಮೊದಲೆಲ್ಲಾ ಉತ್ತೀರ್ಣದ ಶೇಕಡಾವಾರು ಲೆಕ್ಕಾಚಾರದಲ್ಲಿ ಸ್ಥಾನವನ್ನು ನಿಗದಿ ಮಾಡಲಾಗುತ್ತಿತ್ತು. ಮೊದಲ ಸ್ಥಾನವನ್ನು ಪಡೆಯಲು ಜಿಲ್ಲೆಗಳು ಪೈಪೋಟಿಗೆ ಬೀಳುತ್ತಿದ್ದವು. ಇದರಿಂದಾಗಿ ಪರೀಕ್ಷೆಯಲ್ಲಿ ಅಕ್ರಮ ನಡೆಯುತ್ತಿತ್ತು. ಪರೀಕ್ಷಾ ಕೇಂದ್ರಗಳಲ್ಲಿ ಫ್ರೀ ಬಿಡುವುದು. ಕೆಲವು ಪ್ರಶ್ನೆಗಳಿಗೆ ಉತ್ತರ ಹೇಳಿಕೊಡುವುದನ್ನು ಮಾಡುತ್ತಿದ್ದರು.

ಯಾವ ವಿದ್ಯಾರ್ಥಿಯು ಅನುತ್ತೀರ್ಣರಾಗದಂತೆ ನೋಡಿಕೊಳ್ಳುತ್ತ ತಮ್ಮ ಜಿಲ್ಲೆಯೇ ಟಾಪ್ ನಲ್ಲಿ ಇರುವಂತೆ ಗಮನವನ್ನು ಕೇಂದ್ರೀಕರಿಸುತ್ತಿದ್ದರು. ಇದರಿಂದಾಗಿ ಜಿಲ್ಲೆಯ ನಂಬರ್ ಸ್ಥಾನಮಾನವೇ ಬೇಡವೆಂದು ಗ್ರೇಡ್ ಪದ್ದತಿಯನ್ನು ಅಳವಡಿಸಲಾಗಿದೆ. ಗ್ರೇಡ್ ಅನ್ನು ಎ, ಬಿ, ಸಿ ಎಂದು ವಿಭಾಗಿಸಲಾಗಿದೆ.

'ಎ' ಗ್ರೇಡ್‌ನಲ್ಲಿರುವ ಜಿಲ್ಲೆಗಳು:

'ಎ' ಗ್ರೇಡ್‌ನಲ್ಲಿರುವ ಜಿಲ್ಲೆಗಳು:

ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮೀಣ, ಬೀದರ್, ಚಾಮರಾಜನಗರ,ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿಕ್ಕೋಡಿ, ಚಿತ್ರದುರ್ಗ, ದಾವಣಗೆರೆ,ದಾರವಾಡ, ಗದಗ, ಹಾಸನ, ಹಾವೇರಿ, ಕಲ್ಬರ್ಗಿ, ಕೊಡಗು ಕೋಲಾರ, ಕೊಪ್ಪಳ, ಮಧುಗಿರಿ, ಮಂಡ್ಯ, ಮಂಗಳೂರು, ಮೈಸೂರು, ರಾಯಚೂರು, ರಾಮನಗರ, ಶಿವಮೊಗ್ಗ, ಸಿರಸಿ, ತುಮಕೂರು, ಉಡುಪಿ, ಉತ್ತರಕನ್ನಡ, ವಿಜಯಪುರ ಸೇರಿ 32 ಜಿಲ್ಲೆಗಳು ಎ ಗ್ರೇಡ್ ಅನ್ನು ಪಡೆದುಕೊಂಡಿದೆ.

'ಬಿ' ಗ್ರೇಡ್‌ನಲ್ಲಿರುವ ಜಿಲ್ಲೆಗಳು

'ಬಿ' ಗ್ರೇಡ್‌ನಲ್ಲಿರುವ ಜಿಲ್ಲೆಗಳು

ಬೆಂಗಳೂರು ದಕ್ಷಿಣ ಮತ್ತು ಯಾದಗಿರಿ ಜಿಲ್ಲೆಗಳು ಬಿ ಗ್ರೇಡ್ ಪಡೆದುಕೊಂಡಿದ್ದು. ಶೈಕ್ಷಣಿಕ ಪರಿಭಾಷೆಯಲ್ಲಿ ಹೇಳುವುದಾರೆ ಈ ಎರಡು ಜಿಲ್ಲೆಗಳು ಫಲಿತಾಂಶದಲ್ಲಿ ಕ್ಷೀಣಿಸಿವೆ ಎಂದು ವಿಶ್ಲೇಷಿಸಲಾಗುತ್ತದೆ.

ಗ್ರೇಡ್ ವಿಭಾಗಿಸುವುದು ಹೇಗೆ?

ಗ್ರೇಡ್ ವಿಭಾಗಿಸುವುದು ಹೇಗೆ?

ಶೇಕಡವಾರುವಿನಲ್ಲಿ ಗುಣಮಟ್ಟವನ್ನು ಅಳೆಯಲಾಗಿತ್ತದೆ. ಶೇ 40 ಉತ್ತೀರ್ಣತೆಯ ಮಾನದಂಡ, ಶೇ 20ರಷ್ಟನ್ನು ಎಷ್ಟು ವಿದ್ಯಾರ್ಥಿಗಳು 60%ಗಿಂತ ಹೆಚ್ಚು ಅಂಕ ಗಳಿಸಿದ್ದಾರೆ ಎಂಬುದು ಶೇ 40 ಒಟ್ಟಾರೆ ವಿದ್ಯಾರ್ಥಿಗಳು ಗಳಿಸಿರುವ ಅಂಕದ ಮೇಲೆ ಎಲ್ಲವನ್ನು ಸೇರಿಸಿ ಶೇ 100ಕ್ಕೆ ಲೆಕ್ಕ ಮಾಡಿ ಗ್ರೇಡ್‌ಗಳನ್ನು ನೀಡಲಾಗುತ್ತದೆ.

ಗುಣಮಟ್ಟದ ವಿಚಾರದಲ್ಲಿ ಎ, ಬಿ. ಸಿ ನಿರ್ಧಾರ ಹೇಗೆ..?

ಗುಣಮಟ್ಟದ ವಿಚಾರದಲ್ಲಿ ಎ, ಬಿ. ಸಿ ನಿರ್ಧಾರ ಹೇಗೆ..?

ಶೇ 75 ರಿಂದ 100% ಪಡೆದಿದ್ದರೇ ಎ ಗ್ರೇಡ್

ಶೇ 60 ರಿಂದ 75% ರ ಒಳಗೆ ಪಡೆದಿದ್ದರೇ ಬಿ ಗ್ರೇಡ್

ಶೇ 60% ಕ್ಕಿಂತ ಕಡಿಮೆ ಪಡೆದಿದ್ದರೇ ಸಿ ಗ್ರೇಡ್ ಅನ್ನು ನೀಡಲಾಗುತ್ತದೆ. ಎಸ್ಎಸ್ಎಲ್‌ಸಿ ಪರೀಕ್ಷೆಯ 2022ರ ಫಲಿತಾಂಶದಲ್ಲಿ 34 ಶೈಕ್ಷಣಿಕ ಜಿಲ್ಲೆಗಳನ್ನು ಲೆಕ್ಕಚಾರ ಹಾಕಿ ಎ ಮತ್ತು ಬಿ ಎಂದು ಗುರುತಿಸಿ ಗ್ರೇಡ್ ನೀಡಲಾಗಿದೆ.

ಎ, ಬಿ, ಸಿ ಗ್ರೇಡ್ ಮಾನದಂಡ ಏಕೆ..?

ಎ, ಬಿ, ಸಿ ಗ್ರೇಡ್ ಮಾನದಂಡ ಏಕೆ..?

ರಾಜ್ಯದಲ್ಲಿ 34 ಶೈಕ್ಷಣಿಕ ಜಿಲ್ಲೆಗಳು ಇವೆ. ಪ್ರಥಮ , ದ್ವಿತೀಯ ಎಂದು ಜಿಲ್ಲೆಯನ್ನು ಗುರುತಿಸುವುದಿಲ್ಲ. ಎ, ಬಿ, ಸಿ ಗ್ರೇಡ್ ಎಂದು ನೀಡಲಾಗಿದೆ. ಎ ಗ್ರೇಡ್ ನಲ್ಲಿ 32 ಜಿಲ್ಲೆಗಳಿವೆ, ಬಿ ಗ್ರೇಡ್ ನಲ್ಲಿ ಕೇವಲ ಎರಡು ಜಿಲ್ಲೆಗಳಿವೆ. ಜಿಲ್ಲೆಗಳಲ್ಲಿನ ಆರೋಗ್ಯಕರವಲ್ಲದ ಸ್ಪರ್ಧೆ ಏರ್ಪಟ್ಟ ಕಾರಣದಿಂದ ಗ್ರೇಡ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.

English summary
Karnataka SSLC Examination Results Published. districts are divided on the basis of grade wise. Report on what percentage of points will be scored. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X