ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

SSLC Result 2022: ಕೂಲಿ ಕೆಲಸದಾಕೆಯ ಮಗ ಅಮಿತ್ ಮಾದರ್ ರಾಜ್ಯಕ್ಕೆ ಪ್ರಥಮ

|
Google Oneindia Kannada News

ಬೆಂಗಳೂರು, ಮೇ 19: ಆ ಬಾಲಕ ಕೂಲಿ ಕೆಲಸದಾಕೆಯ ಮಗ. ತಂದೆಯ ನೆನಪೇ ಇಲ್ಲ. ತಾಯಿಯ ಆರೈಕೆ ಮತ್ತು ಜತನದಲ್ಲಿ ಬೆಳೆದು, ಸರ್ಕಾರಿ ಶಾಲೆಯಲ್ಲಿಯೇ ಓದಿ ಈಗ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದಾನೆ.

ವಿಜಯಪುರ ಜಿಲ್ಲೆ, ವಿಜಯಪುರ ಗ್ರಾಮಾಂತರ ತಾಲ್ಲೂಕಿನ ಜುಮನಾಳ ಎಂಬ ಗ್ರಾಮದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಅಮಿತ್ ಮಾದರ್‌ಗೆ ಗುರುವಾರ ಅಚ್ಚರಿ ಕಾದಿತ್ತು. 2022ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ 145 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಗಳಿಸಿದ್ದರು. ಅದರಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿ 21 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಗಳಿಸಿದ್ದರು. ಅದರಲ್ಲಿ ಅಮಿತ್ ಮಾದರ್ ಟಾಪರ್ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಣೆ ನೀಡಿದೆ. ಇದರ ಬೆನ್ನಲ್ಲೆ ಆಮಿತ್ ಸಂಖ್ಯೆಗೆ ಶಿಕ್ಷಕರು, ಜಿಲ್ಲಾ ಶಿಕ್ಷಣಾಧಿಕಾರಿಗಳು ಕರೆ ಮಾಡಿ ವಿಷಯ ತಿಳಿಸಿದಾಗ ಅಮಿತ್ ಕುಟುಂಬ ಅತೀವ ಆನಂದ ವ್ಯಕ್ತಪಡಿಸಿದೆ.

Karnataka SSLC Result 2022: ಫಲಿತಾಂಶ ನೋಡುವುದು ಹೇಗೆ? Karnataka SSLC Result 2022: ಫಲಿತಾಂಶ ನೋಡುವುದು ಹೇಗೆ?

ತಾಯಿಯೇ ಆಧಾರ:

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವ ಅಮಿತ್‌ಗೆ ತಾಯಿಯೇ ಸರ್ವಸ್ವ. ಹುಟ್ಟಿದ ಕೆಲವೇ ತಿಂಗಳುಗಳಲ್ಲಿ ತಂದೆಯನ್ನು ಕಳೆದುಕೊಂಡಿದ್ದ. ಅಂದಿನಿಂತ ತಾಯಿಯ ಆರೈಕೆಯಲ್ಲಿಯೇ ಬೆಳೆದು ಬಂದಿದ್ದಾನೆ. ಈತನ ತಾಯಿ ಮಾದೇವಿ ಜುಮನಾಳ ಗ್ರಾಮದಲ್ಲಿ ಕೂಲಿ ಮಾಡಿ ಮಕ್ಕಳನ್ನು ಸಾಕುತ್ತಿದ್ದಾಳೆ. ಮಾದೇವಿಗೆ ಅಮಿತ್ ಸಹಿತ ಮೂವರು ಮಕ್ಕಳು. ತಾನು ಕೂಲಿ ಮಾಡಿದರೂ ಸರಿ ಮಕ್ಕಳು ವಿದ್ಯಾವಂತರಾಗಬೇಕು ಎಂದು ದಿನಕ್ಕೆ 200 ರೂಪಾಯಿ ಕೂಲಿ ಸಿಕ್ಕರೂ ಸಹ ಮಕ್ಕಳನ್ನು ಓದಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಹಿರಿಯ ಮಗಳು ಪದವಿ ಅಂತಿಮ ವರ್ಷದಲ್ಲಿ, ಎರಡನೇ ಮಗ ಪದವಿ ಪ್ರಥಮ ವರ್ಷ ಓದುತ್ತಿದ್ದರೆ, ಈಗ ಅಮಿತ್ ಎಸ್‌ಎಸ್‌ಎಲ್‌ಸಿ ಮುಗಿಸಿ ರಾಜ್ಯಕ್ಕೆ ಪ್ರಥಮ ಬರುವ ಮೂಲಕ ತಾಯಿಯ ಶ್ರಮವನ್ನು ಸಾರ್ಥಕ ಮಾಡಿದ್ದಾನೆ.

Karnataka SSLC Result 2022: Daily wage labour Son got 1st Rank

ಶಾಲೆಯಲ್ಲಿ ಬಹಳ ಚೂಟಿ ಹುಡುಗ:

ಅಮಿತ್‌ ಮಾದಾರ್ ತನ್ನ ವಯಸ್ಸಿಗೂ ಮೀರಿದಂತೆ ಯೋಚನೆ ಮಾಡುತ್ತಿದ್ದ. ಬಾಲ್ಯದ ಎಲ್ಲ ಹುಡುಗಾಟಗಳನ್ನು ಬದಿಗಿರಿಸಿ ಓದಿನಲ್ಲಿಯೇ ತಲ್ಲೀನ ಆಗುತ್ತಿದ್ದನಂತೆ. ದಿನಕ್ಕೆ 8-10 ತಾಸು ಓದುತ್ತಿದ್ದ. ಅವನ ಶ್ರಮ ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ ಎಂದು ಆತನ ಸಹೋದರಿ ಹೇಳಿದ್ದಾರೆ.

Karnataka SSLC Result 2022: Daily wage labour Son got 1st Rank

"ಲಾಕ್‌ಡೌನ್ ವೇಳೆ ಶಾಲೆಗಳಿಗೆ ರಜೆ ನೀಡಿದ್ದ ಸಂದರ್ಭದಲ್ಲಿಯೂ ಸಹ ಸ್ಮಾರ್ಟ್‌ಫೋನ್ ಹೊಂದಿಸಿಕೊಂಡು ಶಿಕ್ಷಕರಿಗೆ ವಿಡಿಯೋ ಕರೆಗಳನ್ನು ಮಾಡುವ ಮೂಲಕ ಪಾಠಗಳನ್ನು ಕೇಳಿಸಿಕೊಳ್ಳುತ್ತಿದ್ದ. ತಾನೇ ಮುಂದೆ ನಿಂತು ಎಲ್ಲ ಸ್ನೇಹಿತರನ್ನು ಸೇರಿಸಿ ವಾಟ್ಸ್ಆ್ಯಪ್ ಗ್ರೂಪ್ ರಚಿಸಿ ಶಿಕ್ಷರನ್ನು ಪಾಠ ಮಾಡುವಂತೆ ದುಂಬಾಲು ಬೀಳುತ್ತಿದ್ದ," ಎಂದು ಆತನ ಹೈಸ್ಕೂಲ್ ಶಿಕ್ಷಕ ಪಿ.ಎ. ರುದ್ರಪ್ಪಗೌಡರ 'ಒನ್ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ.

Recommended Video

Heavy Rain in Karnataka: ಕರ್ನಾಟಕದಲ್ಲಿ ಭಾರೀ ಮಳೆ , ಶಾಲೆಗಳಿಗೆ ರಜೆ | Oneindia Kannada

English summary
Karnataka SSLC Result 2022: Daily wage woman labour Son Amit Madar got 1st Rank in 10th class exam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X