ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

SSLC ಫಲಿತಾಂಶ 2022: ಸಾಮಾನ್ಯ ಮಕ್ಕಳ ದಾಖಲೆ ಪುಡಿಗಟ್ಟಿದ ದಿವ್ಯಾಂಗ ಮಕ್ಕಳು!

|
Google Oneindia Kannada News

ಬೆಂಗಳೂರು, ಮೇ. 19: ರಾಜ್ಯದಲ್ಲಿ 2021-22 ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಸಾಮಾನ್ಯ ವಿದ್ಯಾರ್ಥಿಗಳಿಗೆ ಹೋಲಿಸಿದರೆ, ದಿವ್ಯಾಂಗ ವಿದ್ಯಾರ್ಥಿಗಳು (ದೃಷ್ಟಿ ದೋಷ ಉಳ್ಳವರ ವರ್ಗಕ್ಕೆ ಸೇರಿದವರು) ಹೆಚ್ಚಿನ ಸಾಧನೆ ಮಾಡಿದ್ದಾರೆ!

ಅಚ್ಚರಿಯಾದರೂ ಸತ್ಯ. ಬೆಂಗಳೂರಿನಲ್ಲಿ ಗುರುವಾರ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಫಲಿತಾಂಶದ ವಿವರಗಳನ್ನು ಪ್ರಕಟಿಸಿದರು. ಪ್ರಸಕ್ತ ಸಾಲಿನಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ತೆಗೆದುಕೊಂಡಿದ್ದ ಸಾಮಾನ್ಯ ವಿದ್ಯಾರ್ಥಿಗಳು ಶೇ. 85 ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ. ದಿವ್ಯಾಂಗ ಮಕ್ಕಳು ಅದರಲ್ಲೂ ದೃಷ್ಟಿ ದೋಷ ಉಳ್ಳವರ ವರ್ಗಕ್ಕೆ ಸೇರಿದ ಮಕ್ಕಳು ಶೇ. 91 ರಷ್ಟು ವಿದ್ಯಾರ್ಥಿಗಳು ಪಾಸಾಗುವ ಮೂಲಕ ಸಾಮಾನ್ಯ ವಿದ್ಯಾರ್ಥಿಗಳ ದಾಖಲೆಗಳನ್ನು ಪುಡಿ ಮಾಡಿದ್ದಾರೆ.

Karnataka SSLC Result 2022: 625 ಕ್ಕೆ 625 ಅಂಕ ಗಳಿಸಿದ 145 ವಿದ್ಯಾರ್ಥಿಗಳು!Karnataka SSLC Result 2022: 625 ಕ್ಕೆ 625 ಅಂಕ ಗಳಿಸಿದ 145 ವಿದ್ಯಾರ್ಥಿಗಳು!

ಎಸ್ಎಸ್ಎಲ್ ಸಿ ಪರೀಕ್ಷೆ ತೆಗೆದುಕೊಂಡಿದ್ದ ಸಾಮಾನ್ಯ ವಿದ್ಯಾರ್ಥಿಗಳು ನೂರಕ್ಕೆ ಸರಾಸರಿ 85 ಮಂದಿ ಉತ್ತೀರ್ಣರಾಗಿದ್ದಾರೆ. ಆದರೆ, ದಿವ್ಯಾಂಗ ವಿದ್ಯಾರ್ಥಿಗಳಲ್ಲಿ (ದೃಷ್ಟಿ ದೋಷ ಉಳ್ಳವರ ವರ್ಗಕ್ಕೆ ಸೇರಿದವರು) 100 ಕ್ಕೆ 91 ಮಂದಿ ಉತ್ತೀರ್ಣರಾಗಿದ್ದಾರೆ. ಈ ಮೂಲಕ ಎಸ್ಎಸ್ಎಲ್ ಸಿ ಫಲಿತಾಂಶದಲ್ಲಿ (ಸಾಮಾನ್ಯ ವರ್ಗದ ಬಾಲಕರ ಸಾಧನೆ 100 ಕ್ಕೆ 80, ಸಾಮಾನ್ಯ ವರ್ಗದ ಬಾಲಕಿಯರು 100 ಕ್ಕೆ 90 ) ದಾಖಲೆ ಸೃಷ್ಟಿಸಿದ್ದಾರೆ.

Karnataka SSLC Result 2022: Blind Students Secured 91 Percent Result

ಎಸ್ಎಸ್ಎಲ್ ಸಿ ಪರೀಕ್ಷೆ ತೆಗೆದುಕೊಂಡಿದ್ದ ದೃಷ್ಟಿದೋಷ ಉಳ್ಳವರ ವರ್ಗಕ್ಕೆ ಸೇರಿದ ವಿಕಲಾಚೇತನ 634 ವಿದ್ಯಾರ್ಥಿಗಳ ಪೈಕಿ 577 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಮೂಲಕ ಶೇ. 91 ರಷ್ಟು ಪ್ರಮಾಣದ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಒಟ್ಟಾರೆ ವಿವಿಧ ಸಾಮರ್ಥ್ಯವುಳ್ಳ ಒಟ್ಟು 4667 ವಿದ್ಯಾರ್ಥಿಗಳು ಎಸ್ಎಸ್ಎಲ್ ಸಿ ಪರೀಕ್ಷೆ ತೆಗೆದುಕೊಂಡಿದ್ದರು. ಅದರಲ್ಲಿ ಒಟ್ಟು 3762 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉತ್ತೀರ್ಣರಾದ ಶೇಕಡವಾರು ಫಲಿತಾಂಶ 80. 61 ರಷ್ಟು ಸಾಧನೆ ಮಾಡಿದ್ದಾರೆ.

Karnataka SSLC Result 2022: Blind Students Secured 91 Percent Result

ವಿಕಲಚೇತನ ವರ್ಗದ ಮಕ್ಕಳು: ಹಾಜರಿ ಉತ್ತೀರ್ಣ ಫಲಿತಾಂಶ ಶೇ.

ಮಾನಸಿಕ ಅಸ್ವಸ್ಥ ವರ್ಗ 731 487 66.48

ದೃಷ್ಟಿದೋಷ ಉಳ್ಳವರು 634 577 91.01

ಶ್ರವಣದೋಷ ಉಳ್ಳವರು 950 799 84.11

ಡೈಸ್ಲೇಕ್ಸಿಯಾ 10 9 90

ದಿವ್ಯಾಂಗ ಮಕ್ಕಳು 1184 955 80.66

ಎಲ್ಲಾ ವರ್ಗಕ್ಕೆ ಸೇರಿದವರು 4667 3762 80.61

Recommended Video

Navjot Singh Sidhu ಗೆ 1 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ ಸುಪ್ರೀಂ ಕೋರ್ಟ್ | Oneindia Kannada

English summary
Karnataka SSLC Result 2022 : Blind Students beat normal students result percentage, secured 91 Percent Result.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X