ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

SSLC Result; ಪರೀಕ್ಷೆ ಬರೆದ ಮಕ್ಕಳೆಲ್ಲಾ ಪಾಸ್

|
Google Oneindia Kannada News

ಬೆಂಗಳೂರು,ಆಗಸ್ಟ್‌ 09: 2021ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ನೂತನ ಶಿಕ್ಷಣ ಸಚಿವ ನಾಗೇಶ್ ಫಲಿತಾಂಶ ಘೋಷಣೆ ಮಾಡಿದ್ದಾರೆ. ಮಧ್ಯಾಹ್ನ 3.30ಕ್ಕೆ ಪತ್ರಿಕಾ ಗೋಷ್ಠಿ ನಡೆಸಿದ ಅವರು ಫಲಿತಾಂಶ ಪ್ರಕಟಗೊಳಿಸಿದ್ದಾರೆ.

ಇದೇ ಮೊದಲ ಬಾರಿ ಶೇ 99.09% ರಷ್ಟು ಫಲಿತಾಂಶ ಬಂದಿದೆ. ಮೊದಲ ಬಾರಿ 8.74 ಲಕ್ಷ ವಿದ್ಯಾರ್ಥಿಗಳು ಪಾಸ್‌ ಆಗಿರುವುದಾಗಿ ಮಾಹಿತಿ ನೀಡಿದ್ದಾರೆ. 4.70 ಲಕ್ಷ ವಿದ್ಯಾರ್ಥಿಗಳು ಪಾಸ್ ಆಗಿದ್ದು, 4.1 ಲಕ್ಷ ವಿದ್ಯಾರ್ಥಿನಿಯರು ಎಸ್ಎಸ್ಎಲ್ ಸಿ ಉತ್ತೀರ್ಣರಾಗಿದ್ದಾರೆ.

ಎ + (90-100 ಮಾರ್ಕ್ಸ್) 1,28, 931 ಮಂದಿ, 16.52%
ಎ ಗ್ರೇಡ್ (80-89 ಮಾರ್ಕ್ಸ್) 2,50,317 ಮಂದಿ, 32.07%
ಬಿ ಗ್ರೇಡ್ (60-79 ಮಾರ್ಕ್ಸ್) 2,87,684 ಮಂದಿ, 13.86%
ಸಿ ಗ್ರೇಡ್ (35-59 ಮಾರ್ಕ್ಸ್) 1,13,610 ಮಂದಿ, 14.55%
ಸಿ ಗ್ರೇಡ್ ಅಂಕಗಳಲ್ಲಿ 9% ಮಂದಿಗೆ ಗ್ರೇಸ್ ಅಂಕ ನೀಡಿ ಪಾಸ್ ನೀಡಲಾಗಿದೆ.

625/625 ಪಡೆದವರು 157 ವಿದ್ಯಾರ್ಥಿಗಳು
623/625- 287 ವಿದ್ಯಾರ್ಥಿಗಳು
622/625- 2 ವಿದ್ಯಾರ್ಥಿಗಳು
621/625- 449 ವಿದ್ಯಾರ್ಥಿಗಳು
620/625- 28 ವಿದ್ಯಾರ್ಥಿಗಳು

ಭಾಷಾವಾರು ಪಾಸಾದವರು
ಪ್ರಥಮ ಭಾಷೆ 125/125 ಪಡೆದವರು 25,302 ವಿದ್ಯಾರ್ಥಿಗಳು
ದ್ವಿತೀಯ ಭಾಷೆ 100/100 ಪಡೆದವರು 36,628 ವಿದ್ಯಾರ್ಥಿಗಳು
ತೃತಿಯ ಭಾಷೆ 100/100 ಪಡೆದವರು 36,776 ವಿದ್ಯಾರ್ಥಿಗಳು
ಗಣಿತ ನೂರಕ್ಕೆ ನೂರು 6321

ಈ ಬಾರಿ ಕೊರೊನಾ ಆತಂಕದ ನಡುವೆಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಡೆಸುವಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ಯಶ್ವಸಿಯಾಗಿತ್ತು. 2 ದಿನಗಳ ಕಾಲ ಆರು ವಿಷಯಗಳ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಈ ಬಾರಿ 8.76 ಲಕ್ಷ ವಿದ್ಯಾರ್ಥಿಗಳು ಎಸ್ಎಸ್ಎಲ್ ಸಿ ಪರೀಕ್ಷೆ ಬರೆದಿದ್ದರು. ಒಎಂಆರ್ ಉತ್ತರ ಪತ್ರಿಕೆಗಳನ್ನು ಬಳಸಲಾಗಿತ್ತು. ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಪರಿಚಯಿಸಲಾಗಿತ್ತು. ಈ ಒಎಂಆರ್ ಶೀಟ್ ಡಿಜಿಟಲ್ ಸ್ಕ್ಯಾನಿಂಗ್‌ಗೆ ಕಳುಹಿಸಿ ನಂತರ ಮೌಲ್ಯಮಾಪನ ಮಾಡಿ ಫಲಿತಾಂಶ ಪ್ರಕಟಿಸಲಾಗಿದೆ.

Karnataka SSLC Result 2021 Declared; Direct Link and Steps to Check results here

ನಾಳೆ ಬೆಳಿಗ್ಗೆ ಒಳಗೆ ಎಲ್ಲರಿಗೂ ಫಲಿತಾಂಶ

ನಾಳೆ ಬೆಳಿಗ್ಗೆ ಒಳಗೆ ಎಲ್ಲರಿಗೂ ಫಲಿತಾಂಶ

ಈ ಕ್ಷಣದಿಂದ ಮಕ್ಕಳ ಫಲಿತಾಂಶ ವೆಬ್‌ಸೈಟ್‌ಗೆ ಸೈಟ್‌ಗೆ ಅಪ್‌ಲೋಡ್ ಆಗುತ್ತದೆ. ನಾಳೆ ಬೆಳಿಗ್ಗೆ ಒಳಗೆ ಎಲ್ಲರಿಗೂ ಫಲಿತಾಂಶ ಗೊತ್ತಾಗಲಿದೆ
ಎಸ್ ಎಂ ಎಸ್ ಮೂಲಕವೂ ಫಲಿತಾಂಶ ತಲುಪಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.

 ಫಲಿತಾಂಶ ಪರಿಶೀಲನೆ ನಡೆಸುವುದು ಹೇಗೆ?

ಫಲಿತಾಂಶ ಪರಿಶೀಲನೆ ನಡೆಸುವುದು ಹೇಗೆ?

* ಪರೀಕ್ಷಾ ಫಲಿತಾಂಶ ವಿದ್ಯಾರ್ಥಿಗಳ ಮೊಬೈಲ್‌ಗೆ ರವಾನೆ ಮಾಡಲಾಗುವುದು.
* ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್‌ಸೈಟ್ (http://kseeb.kar.nic.in) ಅಥವಾ karresult.nic.inಗೆ ಭೇಟಿ ನೀಡಿ ಅಲ್ಲಿ ಫಲಿತಾಂಶಗಳನ್ನು ಪರಿಶೀಲನೆ ಮಾಡಬಹುದು.
* ವೆಬ್‌ಸೈಟ್‌ನಲ್ಲಿ ತೆರೆದುಕೊಂಡ ಪುಟದಲ್ಲಿ ವಿದ್ಯಾರ್ಥಿಗಳು ರಿಜಿಸ್ಟರ್ ಸಂಖ್ಯೆ ಹಾಗೂ ಜನ್ಮ ದಿನಾಂಕ ಮಾಹಿತಿ ಒದಗಿಸಿ ಕ್ಲಿಕ್ ಮಾಡಿದರೆ ಫಲಿತಾಂಶದ ಮಾಹಿತಿ ದೊರೆಯುತ್ತದೆ.

 ಎರಡು ದಿನಗಳಲ್ಲಿ ಪರೀಕ್ಷೆ ಮುಗಿಸಿದ್ದ ಇಲಾಖೆ

ಎರಡು ದಿನಗಳಲ್ಲಿ ಪರೀಕ್ಷೆ ಮುಗಿಸಿದ್ದ ಇಲಾಖೆ

ಕೊರೊನಾ ಆತಂಕದ ನಡುವೆ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಜುಲೈ 19 ಹಾಗೂ 22ರಂದು ಎರಡೇ ದಿನಗಳಲ್ಲಿ ಪರೀಕ್ಷೆಯನ್ನು ನಡೆಸಿತ್ತು. ಒಂದು ದಿನದಲ್ಲಿ ಮೂರು ಪರೀಕ್ಷೆಗಳಂತೆ ಎರಡು ದಿನಗಳಲ್ಲಿ ಆರು ವಿಷಯಗಳ ಪರೀಕ್ಷೆಯನ್ನು ನಡೆಸಲಾಗಿತ್ತು. ಪ್ರತಿ ವಿಷಯಕ್ಕೆ 40 ಅಂಕಗಳ ಪ್ರಶ್ನೆಗಳನ್ನು ನೀಡಲಾಗಿತ್ತು. ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಪರಿಚಯಿಸಲಾಗಿತ್ತು.

Recommended Video

Siddaramaiah ಮೇಲೆ ಆಕ್ರೋಶ ಹೊರ ಹಾಕಿದ ಈಶ್ವರಪ್ಪ | Oneindia Kannada
 ಪರೀಕ್ಷೆಗೆ ಶೇ 99.65ರಷ್ಟು ಹಾಜರಾತಿ

ಪರೀಕ್ಷೆಗೆ ಶೇ 99.65ರಷ್ಟು ಹಾಜರಾತಿ

"ಯಾವುದೇ ಮಕ್ಕಳು ಗೈರು ಆಗದೇ ಶೇ 99.65ರಷ್ಟು ಹಾಜರಾತಿಯೊಂದಿಗೆ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಕಳೆದ ಬಾರಿಯ ವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದ ಮಕ್ಕಳಿಗಿಂತ ಹೆಚ್ಚಿನ ಸಂಖ್ಯೆಯ ಮಕ್ಕಳು ಹಾಜರಾಗಿದ್ದಾರೆ. ಮಕ್ಕಳ ಶೇಕಡಾವಾರು ಹಾಜರಾತಿಯೂ ಈ ಬಾರಿ ಹೆಚ್ಚಾಗಿದೆ" ಎಂದು ಶಿಕ್ಷಣ ಮಂಡಳಿ ಮಾಹಿತಿ ನೀಡಿದೆ. 4,885 ಪರೀಕ್ಷಾ ಕೇಂದ್ರ, 73, 064 ಪರೀಕ್ಷಾ ಕೊಠಡಿಯಲ್ಲಿ ಕೋವಿಡ್ 19 ಮಾರ್ಗಸೂಚಿಗೆ ಅನುಸಾರವಾಗಿ ಪರೀಕ್ಷೆ ಆಯೋಜನೆ ಮಾಡುವಲ್ಲಿ ಸುಮಾರು 1.19 ಲಕ್ಷ ಸಿಬ್ಬಂದಿ ಯಶಸ್ವಿಯಾಗಿದ್ದರು.

English summary
KSEEB Karnataka SSLC Class 10th Result 2021 has been declared by the Board now. Candidates can check their result via karresult.nic.in,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X