ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಲ್ಲಾವಾರು SSLC 2021 ಫಲಿತಾಂಶ: ಬೆಂಗಳೂರು ಉತ್ತರ ಜಿಲ್ಲೆ ಪ್ರಥಮ

|
Google Oneindia Kannada News

ಬೆಂಗಳೂರು, ಆಗಸ್ಟ್ 9: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಸೋಮವಾರ (ಆ.09)ದಂದು ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಿದ್ದಾರೆ. ಈ ಬಾರಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಲಾಗಿದೆ.

ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (KSEEB) ಸಭಾಂಗಣದಲ್ಲಿ ಮಧ್ಯಾಹ್ನ 3.30ಕ್ಕೆ ನಡೆದ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಲಾಯಿತು. ಕೊರೊನಾವೈರಸ್ ಸಂಕಷ್ಟದ ನಡುವೆ ಪರೀಕ್ಷೆ ಯಶಸ್ವಿಯಾಗಲು ಕಾರಣರಾದ ವಿದ್ಯಾರ್ಥಿಗಳು, ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು.

ಶಿವಮೊಗ್ಗ; ಸರ್ಕಾರಿ ಶಾಲೆಯಲ್ಲಿ ಓದಿದ ಈತ ರಾಜ್ಯಕ್ಕೆ ಟಾಪರ್ ಶಿವಮೊಗ್ಗ; ಸರ್ಕಾರಿ ಶಾಲೆಯಲ್ಲಿ ಓದಿದ ಈತ ರಾಜ್ಯಕ್ಕೆ ಟಾಪರ್

"ಪರೀಕ್ಷೆ ಬರೆದ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್​ಸೈಟ್​ ಮೂಲಕ ವೀಕ್ಷಿಸಬಹುದಾಗಿದೆ. ಈ ಬಾರಿ ಎಲ್ಲಾ ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದು, ಫಲಿತಾಂಶದ ಬಗ್ಗೆ ಅಸಮಾಧಾನ ಹೊಂದಿದವರು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ," ಎಂದು ಸಚಿವ ಬಿ.ಸಿ. ನಾಗೇಶ್ ಹೇಳಿದರು.

Karnataka SSLC result 2021: Check District-wise Pass Grade

"ಜುಲೈ 19 ಹಾಗೂ 22ರಂದು ನಡೆಸಲಾದ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಈ ಬಾರಿ ಶೇ.99.9ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 4,885 ಪರೀಕ್ಷಾ ಕೇಂದ್ರ, 73, 064 ಪರೀಕ್ಷಾ ಕೊಠಡಿಯಲ್ಲಿ ಕೋವಿಡ್ 19 ಮಾರ್ಗಸೂಚಿಗೆ ಅನುಸಾರವಾಗಿ ಪರೀಕ್ಷೆ ಆಯೋಜನೆ ಮಾಡುವಲ್ಲಿ ಸುಮಾರು 1.19 ಲಕ್ಷ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಓರ್ವ ವಿದ್ಯಾರ್ಥಿನಿ ಗೈರಾಗಿದ್ದರಿಂದ ಅನುತ್ತೀರ್ಣರಾಗಿದ್ದಾರೆ,'' ಎಂದು ತಿಳಿಸಿದರು.

ಫಲಿತಾಂಶ ನೋಡುವುದು ಹೇಗೆ?:
ವಿದ್ಯಾರ್ಥಿಗಳ ಮೊಬೈಲ್ ನಂಬರ್ ಗಳಲ್ಲಿ ರಿಸಲ್ಟ್ ನೋಡಬಹುದು. ಅಥವಾ ಈ ವೆಬ್ ಸೈಟ್ ಗಳಲ್ಲಿ ಪಡೆದುಕೊಳ್ಳಬಹುದು.
www.kseeb.kar.nic.in ಹಾಗೂ www.karresults.nic.in ಫಲಿತಾಂಶ ಪ್ರಕಟ

ವೆಬ್‌ಸೈಟ್‌ನಲ್ಲಿ ತೆರೆದುಕೊಂಡ ಪುಟದಲ್ಲಿ ವಿದ್ಯಾರ್ಥಿಗಳು ರಿಜಿಸ್ಟರ್ ಸಂಖ್ಯೆ ಹಾಗೂ ಜನ್ಮ ದಿನಾಂಕ ಮಾಹಿತಿ ಒದಗಿಸಿ ಕ್ಲಿಕ್ ಮಾಡಿದರೆ ಫಲಿತಾಂಶದ ಮಾಹಿತಿ ದೊರೆಯುತ್ತದೆ.

1,28,931 ವಿದ್ಯಾರ್ಥಿಗಳು A+ ಗ್ರೇಡ್ ಪಡೆದುಕೊಂಡಿದ್ದು​, 2,50,317 ವಿದ್ಯಾರ್ಥಿಗಳು A ಗ್ರೇಡ್, 2,87,694 ವಿದ್ಯಾರ್ಥಿಗಳು B ಗ್ರೇಡ್​, 1,13,610 ವಿದ್ಯಾರ್ಥಿಗಳು C ಗ್ರೇಡ್​ ಪಡೆದುಕೊಂಡಿದ್ದಾರೆ. ಸಿ ಗ್ರೇಡ್ ಪಡೆದಿರುವ ಶೇ.9ರಷ್ಟು ವಿದ್ಯಾರ್ಥಿಗಳಿಗೆ ಕೃಪಾಂಕ (ಗ್ರೇಸ್​ ಮಾರ್ಕ್ಸ್​) ನೀಡಿ ಉತ್ತೀರ್ಣ ಮಾಡಲಾಗಿದೆ ಎಂದು ಸಚಿವರು ವಿವರಿಸಿದರು.

SSLC Result: 625ಕ್ಕೆ 625 ಅಂಕ ಪಡೆದವರೆಷ್ಟು?SSLC Result: 625ಕ್ಕೆ 625 ಅಂಕ ಪಡೆದವರೆಷ್ಟು?

ಯಾವ ಜಿಲ್ಲೆ ಟಾಪ್ ಸ್ಥಾನ?
ಬೆಂಗಳೂರು ಉತ್ತರ ಪ್ರಥಮ, ಬಳ್ಳಾರಿ ಕೊನೆ ಸ್ಥಾನ
2021ರ ಕರ್ನಾಟಕ ಎಸ್​ಎಸ್ಎಲ್​ಸಿ ಫಲಿತಾಂಶವು ಇಡೀ ರಾಜ್ಯದಲ್ಲಿ ಒಂದೇ ಪ್ರಮಾಣದಲ್ಲಿದೆ. ಶೇಕಡವಾರು ಫಲಿತಾಂಶ ನೀಡುವ ಪದ್ಧತಿಯನ್ನು ಕೈಬಿಟ್ಟು ಗ್ರೇಡ್ ನೀಡುವ ಪದ್ಧತಿ ಈಗಾಗಲೇ ಜಾರಿಯಲ್ಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳ ಫಲಿತಾಂಶವೂ A ಗ್ರೇಡ್ ಸಮಾನವಾಗಿದೆ. ಆದರೂ ಬೆಂಗಳೂರು ಉತ್ತರ ಪ್ರಥಮ ಸ್ಥಾನ, ಬೆಂಗಳೂರು ದಕ್ಷಿಣ ದ್ವಿತೀಯ ಹಾಗೂ ರಾಮನಗರ ಜಿಲ್ಲೆ ತೃತೀಯ ಸ್ಥಾನ ಪಡೆದುಕೊಂಡಿದೆ. ಈ ಬಾರಿ ಬಳ್ಳಾರಿ ಜಿಲ್ಲೆಗೆ ಕೊನೆಯ ಸ್ಥಾನ ಸಿಕ್ಕಿದೆ. ಕಳೆದ ಬಾರಿ 34ಶೈಕ್ಷಣಿಕ ಜಿಲ್ಲೆಗಳ ಪೈಕಿ 10 ಜಿಲ್ಲೆಗಳು ಮಾತ್ರ ಎ ಗ್ರೇಡ್ ಸ್ಥಾನ ಪಡೆದಿದ್ದವು.

Recommended Video

SSLC ರಿಸಲ್ಟ್ ನಲ್ಲಿ ಯಾವ ಜಿಲ್ಲೆ ಪ್ರಥಮ? 625ಕ್ಕೆ 625 ಅಂಕ ಪಡೆದವರೆಷ್ಟು? | Oneindia Kannada
SSLC ಜಿಲ್ಲಾವಾರು ಶ್ರೇಯಾಂಕ ಪಟ್ಟಿ 2021
ಕ್ರಮ ಸಂಖ್ಯೆ ಶೈಕ್ಷಣಿಕ ಜಿಲ್ಲೆ ಹೆಸರು ಗ್ರೇಡ್
01 ಬೆಂಗಳೂರು ಉತ್ತರ A
02 ಬೆಂಗಳೂರು ದಕ್ಷಿಣ A
03 ರಾಮನಗರ A
04 ಬೆಂಗಳೂರು ಗ್ರಾಮಾಂತರ A
05 ಚಿಕ್ಕಬಳ್ಳಾಪುರ A
06 ಕೋಲಾರ A
07 ಮಧುಗಿರಿ A
08 ತುಮಕೂರು A
09 ಚಾಮರಾಜನಗರ A
10 ಮೈಸೂರು A
11 ಮಂಡ್ಯ A
12 ಉಡುಪಿ A
13 ಮಂಗಳೂರು A
14 ಕೊಡಗು A
15 ದಾವಣಗೆರೆ A
16 ಚಿತ್ರದುರ್ಗ A
17 ಚಿಕ್ಕಮಗಳೂರು A
18 ಶಿವಮೊಗ್ಗ A
19 ಹಾಸನ A
20 ಹಾವೇರಿ A
21 ಗದಗ B
22 ಧಾರವಾಡ A
23 ಚಿಕ್ಕೋಡಿ A
24 ಬೆಳಗಾವಿ A
25 ಬಾಗಲಕೋಟೆ A
26 ವಿಜಯಪುರ A
27 ಶಿರಸಿ A
28 ಉತ್ತರ ಕನ್ನಡ A
29 ಯಾದಗಿರಿ A
30 ಕಲಬುರಗಿ A
31 ಕೊಪ್ಪಳ A
32 ರಾಯಚೂರು C
33 ಬೀದರ್ C
34 ಬಳ್ಳಾರಿ C

English summary
Karnataka SSLC result 2021: Check District-wise Pass Grade. Bengaluru North tops the list and Ballari at the bottom.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X