ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

SSLC ಫಲಿತಾಂಶ: ಶೇ. 100 ಹಾಗೂ ಶೂನ್ಯ ಫಲಿತಾಂಶ ಪಡೆದ ಶಾಲೆಗಳು

|
Google Oneindia Kannada News

ಬೆಂಗಳೂರು, ಆಗಸ್ಟ್ 10: ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಇಂದು ಪ್ರಕಟವಾಗಿದೆ. ಒಟ್ಟು ಶೇ. 71.80ರಷ್ಟು ಫಲಿತಾಂಶ ಹೊರಬಿದ್ದಿದೆ.501 ಸರ್ಕಾರಿ ಶಾಲೆಗಳು ಶೇ.100 ರಷ್ಟು ಫಲಿತಾಂಶವನ್ನು ಪಡೆದುಕೊಂಡಿದೆ. ಕಳೆದ ಬಾರಿ 293 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿದ್ದವು.

Recommended Video

SSLC Results : Chikkaballapura ರಾಜ್ಯಕ್ಕೆ ಫರ್ಸ್ಟ್ | Oneindia Kannada

ಈಬಾರಿ ರಾಜ್ಯದ 4 ಶಾಲೆಗಳು ಶೂನ್ಯಫಲಿತಾಂಶ ಪಡೆದಿವೆ. ಆದರೆ ಕಳೆದ ಬಾರಿ ಶೂನ್ಯ ಫಲಿತಾಂಶ ಪಡೆದ ಶಾಲೆಗಳ ಸಂಖ್ಯೆಯೂ ಶೂನ್ಯವೇ ಆಗಿತ್ತು. ಈ ಸಲ 139 ಅನುದಾನಿತ ಶಾಲೆಗಳು ಶೇ.100 ರಷ್ಟು ಫಲಿತಾಂಶ ಪಡೆದಿವೆ, ಕಳೆದ ಬಾರಿ 130 ಶಾಲೆಗಳು ಪಡೆದಿತ್ತು. ಈ ಬಾರಿ 11 ಅನುದಾನಿತ ಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ. ಕಳೆದ ಬಾರಿ 09 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿದ್ದವು.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟ

910 ಅನುದಾನ ರಹಿತ ಶಾಲೆಗಳು ಶೇ. 100 ರಷ್ಟು ಫಲಿತಾಂಶವನ್ನು ಗಳಿಸಿವೆ. ಕಳೆದ ಬಾರಿ 903 ಶಾಲೆಗಳು ಗಳಿಸಿದ್ದವು. 47 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ. ಕಳೆದ ಬಾರಿ 37 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿದ್ದವು.

SSLC Result 2020: The List Of 100 And Zero Percent Obtained Schools

ರಾಜ್ಯದಲ್ಲಿ ಒಟ್ಟಾರೆ 1550 ಶಾಲೆಗಳು ಶೇ.100 ರಷ್ಟು ಫಲಿತಾಂಶ ಪಡೆದಿವೆ. 62 ಶಾಲೆಗಳು ಶೂನ್ಯ ಫಲಿತಾಂಶ ಗಳಿಸಿವೆ.52,219 ಮೌಲ್ಯಮಾಪಕರು ಸುಮಾರು 8 ಲಕ್ಷ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಿದ್ದಾರೆ. ಜುಲೈ 14 ರಿಂದ ಮೌಲ್ಯಮಾಪನ ಆರಂಭವಾಗಿತ್ತು. ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ ಲಾಕ್‌ಡೌನ್ ಇದ್ದ ಕಾರಣ ಎರಡು ದಿನ ತಡವಾಗಿ ಆರಂಭವಾಗಿತ್ತು.

ಎಸ್‌ಎಸ್‌ಎಲ್‌ಸಿ; 501 ಶಾಲೆಗಳಲ್ಲಿ ಶೇ 100ರಷ್ಟು ಫಲಿತಾಂಶ ಎಸ್‌ಎಸ್‌ಎಲ್‌ಸಿ; 501 ಶಾಲೆಗಳಲ್ಲಿ ಶೇ 100ರಷ್ಟು ಫಲಿತಾಂಶ

71.80 ಶೇಕಡಾವಾರು ಫಲಿತಾಂಶವಾಗಿದೆ. ಕಳೆದ ವರ್ಷ 73.70 ಫಲಿತಾಂಶವಾಗಿತ್ತು. 5,82,316 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಶಾಲೆಗಳ ಫಲಿತಾಂಶ ಶೇ. 72.79 ಅಷ್ಟಿದೆ. ಅನುದಾನಿತ ಶಾಲೆಗಳು 70.60, ಶೇ. 82.31, 2,28,734 ಅನುತ್ತೀರ್ಣ ರಾಗಿದ್ದಾರೆ.

ಬಾಲಕರು ಶೇ.66.41 ಉತ್ತೀರ್ಣರಾಗಿದ್ದಾರೆ 77.74 ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದಾರೆ, 625 ಅಂಕಕ್ಕೆ 625 ಅಂಕ ಪಡದವರು 6 ಜನರ, ಕಳೆದ ಬಾರಿ ಇಬ್ಬರು ತೆಗೆದುಕೊಂಡಿದ್ದರು.

English summary
Karnataka Secondary Education Examination Board (KSEEB) is declared SSLC result 2020 . Here is the list of 100 And Zero Percent Results Obtained Schools.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X