ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

SSLC Exam: ಮಾ.28ರಿಂದ ಎಸ್ಎಸ್ಎಲ್‌ಸಿ ಮುಖ್ಯ ಪರೀಕ್ಷೆ ಆರಂಭ: ಸಂಪೂರ್ಣ ವಿವರ

|
Google Oneindia Kannada News

ಬೆಂಗಳೂರು, ಮಾರ್ಚ್ 26: ಮಾರ್ಚ್ 28ರ ಸೋಮವಾರದಿಂದ ಎಸ್ಎಸ್ಎಲ್‌ಸಿ ಮುಖ್ಯ ಪರೀಕ್ಷೆ ಪ್ರಾರಂಭವಾಗಲಿದ್ದು, ಏಪ್ರಿಲ್ 11ರವರೆಗೆ ನಡೆಯಲಿದೆ. ಈಗಾಗಲೇ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ಎಸ್ಎಸ್ಎಲ್‌ಸಿ ಮುಖ್ಯ ಪರೀಕ್ಷೆಗೆ ರಾಜ್ಯದಲ್ಲಿ ಒಟ್ಟು 15,387 ಶಾಲೆಗಳಿಂದ 8,73,8846 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ 4,52,732 ಗಂಡುಮಕ್ಕಳು, 4,21,110 ಹೆಣ್ಣುಮಕ್ಕಳು ಮತ್ತು 4 ವಿದ್ಯಾರ್ಥಿಗಳು ತೃತೀಯ ಲಿಂಗಿಗಳಿದ್ದಾರೆ. ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು 5,307 ಇದ್ದಾರೆ.

Karnataka SSLC Exam 2022 : ವಿದ್ಯಾರ್ಥಿ ಮತ್ತು ಪರೀಕ್ಷಾ ಕೇಂದ್ರಗಳಿಗೆ ಮಾರ್ಗಸೂಚಿ ಬಿಡುಗಡೆKarnataka SSLC Exam 2022 : ವಿದ್ಯಾರ್ಥಿ ಮತ್ತು ಪರೀಕ್ಷಾ ಕೇಂದ್ರಗಳಿಗೆ ಮಾರ್ಗಸೂಚಿ ಬಿಡುಗಡೆ

* ಪರೀಕ್ಷೆಗೆ ನೋಂದಾಯಿಸಿರುವ ಶಾಲೆಗಳು
ಸರ್ಕಾರಿ- 5,717
ಅನುದಾನಿತ- 3412
ಅನುದಾನರಹಿತ- 6258

Karnataka SSLC Exam 2022 To Begin From March 28 Over 8 Lakh Students To Appear, Check details

* ಪರೀಕ್ಷೆಗೆ ನೋಂದಾಯಿಸಿರುವ ವಿದ್ಯಾರ್ಥಿಗಳ ವಿವರ
ಸರ್ಕಾರಿ- 3,76,685
ಅನುದಾನಿತ- 2,23,032
ಅನುದಾನರಹಿತ- 2,74,129

* ಒಟ್ಟು ಪರೀಕ್ಷಾ ಕೇಂದ್ರಗಳ ವಿವರ
ಸರ್ಕಾರಿ- 1,357
ಅನುದಾನಿತ- 1,109
ಅನುದಾನರಹಿತ- 978

ಸಾಮಾನ್ಯ ಪರೀಕ್ಷಾ ಕೇಂದ್ರಗಳು- 3275
ಖಾಸಗಿ ಪರೀಕ್ಷಾ ಕೇಂದ್ರಗಳು- 169

Karnataka SSLC Exam 2022 To Begin From March 28 Over 8 Lakh Students To Appear, Check details

* ಪರೀಕ್ಷಾ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸುವ ವಿವಿಧ ಸ್ಥರದ ಅಧಿಕಾರಿಗಳು/ಶಿಕ್ಷಕರು/ಸಿಬ್ಬಂದಿ ವಿವರ
ಒಟ್ಟು ಪರೀಕ್ಷಾ ಕೊಠಡಿಗಳು- 45,289
ಮುಖ್ಯಅಧೀಕ್ಷಕರು- 3,444
ಉಪ ಮುಖ್ಯಧೀಕ್ಷಕರು- 377
ಪ್ರಶ್ನೆಪತ್ರಿಕೆ ಅಭಿರಕ್ಷಕರು- 3,444
ಕೊಠಡಿ ಮೇಲ್ವಿಚಾರಕರು- 49,817
ಸ್ಥಾನಿಕ ಜಾಗೃತ ದಳದವರು- 3,444
ಮೊಬೈಲ್ ಸ್ವಾಧೀನಾಧಿಕಾರಿಗಳು- 3,444
ಆರಕ್ಷಕರು - 3,444
ಪ್ರಶ್ನೆಪತ್ರಿಕೆ ವಿತರಣೆಗೆ ಮಾರ್ಗಗಳ ಸಂಖ್ಯೆ- 1,266

ರಾಜ್ಯದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ, ಆದರೆ...ರಾಜ್ಯದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ, ಆದರೆ...

ಪರೀಕ್ಷಾ ವೇಳಾಪಟ್ಟಿ
* ಮಾರ್ಚ್ 28ರ ಸೋಮವಾರ; ಕನ್ನಡ, ತೆಲಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಶ್, ಇಂಗ್ಲೀಶ್ (ಎನ್‌ಸಿಇಆರ್‌ಟಿ), ಸಂಸ್ಕೃತ.
* ಮಾರ್ಚ್ 29ರ ಮಂಗಳವಾರ ಯಾವುದೇ ಪರೀಕ್ಷೆ ಇಲ್ಲ.
* ಮಾರ್ಚ್ 30ರ ಬುಧವಾರ; ದ್ವಿತೀಯ ಭಾಷೆ ಇಂಗ್ಲೀಶ್, ಕನ್ನಡ
* ಮಾರ್ಚ್ 31ರ ಯಾವುದೇ ಪರೀಕ್ಷೆ ಇರುವುದಿಲ್ಲ.
* ಏಪ್ರಿಲ್ 1ರಂದು ಎಲಿಮೆಂಟ್ಸ್ ಆಫ್ ಮೆಕಾನಿಕಲ್ & ಎಲೆಕ್ಟ್ರಿಕಲ್ ಇಂಜಿನಿಯರಿಂಗ್ -2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್‌ ಇಂಜಿನಿಯರಿಂಗ್, ಎಲಿಮೆಂಟ್ಸ್‌ ಆಫ್ ಕಂಪ್ಯೂಟರ್ ಸೈನ್ಸ್, ಅರ್ಥಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.
* ಏಪ್ರಿಲ್ 4ರಂದು ಗಣಿತ, ಸಮಾಜ ಶಾಸ್ತ್ರ ಪರೀಕ್ಷೆ ನಡೆಯಲಿದೆ.
* ಏಪ್ರಿಲ್ 6ರ ಬುಧವಾರ ಸಮಾಜ ವಿಜ್ಞಾನ ಪರೀಕ್ಷೆ ಇದೆ.
* ಏಪ್ರಿಲ್ 8 ಹಿಂದಿ, ಕನ್ನಡ, ಇಂಗ್ಲೀಶ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು. ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋ ಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್‌ ನೆಸ್.
* ಏಪ್ರಿಲ್ 11ರಂದು ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ/ ಹಿಂದೂಸ್ತಾನಿ ಸಂಗೀತ

Karnataka SSLC Exam 2022 To Begin From March 28 Over 8 Lakh Students To Appear, Check details

ಸಲಹೆ- ಮಾರ್ಗಸೂಚಿಗಳು
* ವಿದ್ಯಾರ್ಥಿಗಳ ಅಂತಿಮ ಪ್ರವೇಶ ಪತ್ರಗಳನ್ನು ದಿನಾಂಕ; 16-03-2022ರಂದು ಪ್ರೌಢ ಶಿಕ್ಷಣ ಮಂಡಳಿಯಿಂದ ಬಿಡುಗಡೆ ಮಾಡಲಾಗಿದೆ.

* ವಿದ್ಯಾರ್ಥಿಗಳಿಗೆ ಯಾವುದೇ ವಿಷಯದಲ್ಲಿ ಗೊಂದಲವಿದ್ದಲ್ಲಿ ಸ್ಪಂದಿಸಿ ಪರಿಹಾರ ಕಂಡುಹಿಡಿಯುವ ಹಾಗೂ ಭಯರಹಿತವಾಗಿ ಪರೀಕ್ಷೆ ಬರೆಯಲು ಆತ್ಮಸ್ಥೈರ್ಯ ತುಂಬುವ ಸದುದ್ದೇಶದಿಂದ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗಿದೆ.

* ಸದರಿ ಸಹಾಯವಾಣಿ ಕೇಂದ್ರದಲ್ಲಿ ನುರಿತ ವಿಷಯಾಧಾರಿತ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

* ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಲು ಕ್ರಮವಹಿಸಲಾಗಿದೆ.

* ಪ್ರಸ್ತುತ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ದಾಖಲಾಗುತ್ತಿದೆ. ಆದಾಗ್ಯೂ ವಿದ್ಯಾರ್ಥಿಗಳ ಹಾಗೂ ಪರೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳುವ ಎಲ್ಲಾ ಶಿಕ್ಷಕರು/ ಅಧಿಕಾರಿಗಳು/ ಸಿಬ್ಬಂದಿಯವರ ಸುರಕ್ಷತಾ ದೃಷ್ಟಿಯಿಂದ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ಹೊರಡಿಸಲಾಗಿದ್ದು, ಅದರಂತೆ ಕ್ರಮ ವಹಿಸಲಾಗಿತ್ತಿದೆ.

* ಕೆಎಸ್‌ಆರ್‌ಟಿಸಿ/ ಬಿಎಂಟಿಸಿ ಸಂಸ್ಥೆಯಿಂದ ಪಡೆದಿರುವ ವಿದ್ಯಾರ್ಥಿ ಪಾಸ್ ಅಥವಾ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರವೇಶ ಪತ್ರವನ್ನು ಪರಿಗಣಿಸಿ ಪರೀಕ್ಷಾ ಕೇಂದ್ರಕ್ಕೆ ಕೆಎಸ್‌ಆರ್‌ಟಿಸಿ/ ಬಿಎಂಟಿಸಿ ಬಸ್‌ನಲ್ಲೇ ಉಚಿತವಾಗಿ ಪ್ರಯಾಣಿಸಲು ಅನುಮತಿಸಲಾಗಿದೆ.

* ಮೌಲ್ಯಮಾಪನ ಕಾರ್ಯವು ದಿನಾಂಕ 21-04-2022ರಿಂದ 34 ಜಿಲ್ಲೆಗಳಲ್ಲಿನ 234 ಮೌಲ್ಯಮಾಪನ ಕೇಂದ್ರಗಳಲ್ಲಿ ನಡೆಯಲಿವೆ. ಸದರಿ ಕಾರ್ಯಕ್ಕೆ 60,000 ಶಿಕ್ಷಕರನ್ನು ನಿಯೋಜಿಸಲಾಗುವುದು.

English summary
Karnataka SSLC Exam 2022: The Karnataka Secondary Education Examination Board (KSEEB) is all set to conduct SSLC board exams for class 10 students across the state from March 28. over 8 lakh students to take exam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X