ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಎಸ್‌ಎಲ್‌ಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 21 : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ. ನವೆಂಬರ್ 19ರೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

2020ರ ಮಾರ್ಚ್ 20ರಿಂದ ಏಪ್ರಿಲ್ 3ರ ತನಕ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ವೇಳಾಪಟ್ಟಿಗೆ ಆಕ್ಷೇಪಣೆಗಳಿದ್ದರೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕಚೇರಿಗೆ ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಅಂತಿಮ ವೇಳಾಪಟ್ಟಿ ಬಿಡುಗಡೆದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಅಂತಿಮ ವೇಳಾಪಟ್ಟಿ ಬಿಡುಗಡೆ

ತಾತ್ಕಾಲಿಕ ವೇಳಾಪಟ್ಟಿ ಅನ್ವಯ ಮಾರ್ಚ್ 20ರಂದು ಪ್ರಥಮ ಭಾಷೆ, 21ರಂದು ಅರ್ಥಶಾಸ್ತ್ರ ಇತರ ಕೋರ್ ವಿಷಯಗಳ ಪರೀಕ್ಷೆಗಳು ನಡೆಯಲಿವೆ.

15 ವರ್ಷಕ್ಕೆ ಕಾಲಿಟ್ಟವರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬಹುದು15 ವರ್ಷಕ್ಕೆ ಕಾಲಿಟ್ಟವರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬಹುದು

sslc

ಮಾರ್ಚ್ 22ರಂದು ಭಾನುವಾರವಾಗಿದ್ದು ಯಾವುದೇ ಪರೀಕ್ಷೆ ಇಲ್ಲ. ಮಾರ್ಚ್ 23ರಂದು ಸಮಾಜ ವಿಜ್ಞಾನ, 26ರಂದು ವಿಜ್ಞಾನ, ರಾಜ್ಯ ಶಾಸ್ತ್ರ, ಕರ್ನಾಟಕ ಸಂಗೀತ/ಹಿಂದೂಸ್ತಾನಿ ಸಂಗೀತ ಪರೀಕ್ಷೆ ನಡೆಯಲಿದೆ.

7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ: ಸರ್ಕಾರ ಏನು ಹೇಳುತ್ತೆ ಒಮ್ಮೆ ಕೇಳಿ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ: ಸರ್ಕಾರ ಏನು ಹೇಳುತ್ತೆ ಒಮ್ಮೆ ಕೇಳಿ

ಮಾರ್ಚ್ 30ರಂದು ಗಣಿತ, ಏಪ್ರಿಲ್ 1ರಂದು ದ್ವಿತೀಯ ಭಾಷೆ, ಏಪ್ರಿಲ್ 3ರಂದು ತೃತೀಯ ಭಾಷೆ, ಎನ್‌ಎಸ್‌ಕ್ಯೂಎಫ್ ಪರೀಕ್ಷೆಗಳು ನಡೆಯಲಿವೆ.

ಪ್ರಥಮ ಭಾಷೆಗೆ ಗರಿಷ್ಠ 100 ಅಂಕ, ಉಳಿದ ವಿಷಯಗಳಿಗೆ ಗರಿಷ್ಠ 80 ಅಂಕಗಳಂತೆ ಪರೀಕ್ಷೆ ನಡೆಯಲಿದೆ. ಆದರೆ, ಸಿಸಿಇ ಖಾಸಗಿ, ಪುನರಾವರ್ತಿತ ಮತ್ತಿತರ ಅಭ್ಯರ್ಥಿಗಳಿಗೆ ಮಾತ್ರ ಪ್ರಥಮ ಭಾಷೆಗೆ 125, ಇತರ ವಿಷಯಗಳಿಗೆ 100 ಅಂಕಗಳಂತೆ ಪರೀಕ್ಷೆ ನಡೆಯಲಿದೆ.

ದ್ವಿತೀಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಮಾರ್ಚ್ 4 ರಿಂದ 19 ತನಕ ಈ ಬಾರಿಯ ಪರೀಕ್ಷೆಗಳು ನಡೆಯಲಿವೆ.

ಎಸ್ಎಸ್ಎಲ್ಸಿ ತಾತ್ಕಾಲಿಕ ಪಟ್ಟಿ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ

English summary
Karnataka Secondary Education Examination Board announced tentative timetable for the SSLC exam 2020. Exams will start on March 20 and conclude on April 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X