ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಕೊಟ್ಟ ಬಂಪರ್ ಆಫರ್

|
Google Oneindia Kannada News

ಬೆಂಗಳೂರು, ಜೂ. 18: ಕೊರೊನಾ ಸೋಂಕು ನಡುವೆಯೂ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಮಾಡುವುದಾಗಿ ಪ್ರಕಟಿಸಿರುವ ಶಿಕ್ಷಣ ಇಲಾಖೆ ಇದೀಗ ವಿದ್ಯಾರ್ಥಿಗಳ ಶ್ರೇಣಿ, ಮೌಲ್ಯಮಾಪನ, ಉತ್ತೀರ್ಣಕ್ಕೆ ಅನುಸರಿಸುವ ಮಾನದಂಡದ ಮಹತ್ವದ ಅಂಶಗಳನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳಿಗೆ ಯಾವ ರೀತಿ ರ್‍ಯಾಂಕ್ ಕೊಡಲಾಗುತ್ತದೆ. ಆಂತರಿಕ ಮೌಲ್ಯಮಾಪನದ ಅಂಕಗಳನ್ನು ಯಾವ ರೀತಿ ಪರಿಗಣಿಸಲಾಗುತ್ತದೆ. ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣ ಆಗುವುದು ನಿಜವೇ ಎಂಬ ಎಲ್ಲಾ ಗೊಂದಲಗಳಿಗೆ ಶಿಕ್ಷಣ ಇಲಾಖೆ ತೆರೆ ಎಳೆದಿದೆ.

ವಿದ್ಯಾರ್ಥಿಗಳೇ ಗಮನಿಸಿ: ಎಸ್ಎಸ್ಎಲ್‌ಸಿ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟವಿದ್ಯಾರ್ಥಿಗಳೇ ಗಮನಿಸಿ: ಎಸ್ಎಸ್ಎಲ್‌ಸಿ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ

ಪರೀಕ್ಷೆಗೆ ಹಾಜರಾದರೆ ಉತ್ತೀರ್ಣ ಪಕ್ಕಾ

ಪರೀಕ್ಷೆಗೆ ಹಾಜರಾದರೆ ಉತ್ತೀರ್ಣ ಪಕ್ಕಾ

ಜುಲೈ 18 ರಂದು ಎಸ್ಎಸ್ ಎಲ್ ಸಿ ಪರೀಕ್ಷೆ ನಡೆಯಲಿದೆ. 8.75 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಇವರಲ್ಲಿ ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಲಾಗುತ್ತದೆ. ಶಾಲೆ ಕೊಡುವ ಮೌಲ್ಯಾಂಕನ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಗಳಿಸುವ ಅಂಕಗಳನ್ನು ಆಧರಿಸಿ ನಾಲ್ಕು ಗ್ರೇಡ್ ನೀಡಲಾಗುತ್ತದೆ. ಅದರಲ್ಲಿ ಶಾಲಾ ಮೌಲ್ಯಾಂಕನ ಆಧರಿಸಿ ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಪರೀಕ್ಷಾ ವಿಭಾಗದ ನಿರ್ದೇಶಕರು ಹೊರಡಿರುವ ಸುತ್ತೋಲೆಯಲ್ಲಿ ಉಲ್ಲೇಕಿಸಿದ್ದಾರೆ.

ಹೀಗಾಗಿ ಎಸ್ಎಸ್ಎಲ್ ಸಿ ಪರೀಕ್ಷೆಯ ಅನುತ್ತೀರ್ಣ ಕುರಿತು ಎದ್ದಿದ್ದ ಗೊಂದಲಗಳಿಗೆ ಶಿಕ್ಷಣ ಇಲಾಖೆ ತೆರೆ ಎಳೆದಿದೆ. ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನ ಅಂಕ ಹಾಗೂ ಪರೀಕ್ಷೆಯಲ್ಲಿ ಗಳಿಸಿದ ಅಂಕ ಪರಿಗಣಿಸಲಾಗುತ್ತದೆ. ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಕನಿಷ್ಠ ಅಂಕ ನೀಡಿ ಪಾಸು ಮಾಡಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.

ಅಗ್ರ ಶೇಣಿಗೂ ಅವಕಾಶ

ಅಗ್ರ ಶೇಣಿಗೂ ಅವಕಾಶ

ಇನ್ನು ಪರೀಕ್ಷೆಗೆ ಈಗಾಗಲೇ ಪೂರ್ಣ ಪ್ರಮಾಣದಲ್ಲಿ ತಯಾರಿ ನಡೆಸಿರುವ ವಿದ್ಯಾರ್ಥಿಗಳು ಅಗ್ರ ಶ್ರೇಯಾಂಕ ಪಡೆಯಲು ಅವಕಾಶ ನೀಡಲಾಗಿದೆ. ವಿಷಯಕ್ಕೆ 40 ಪ್ರಶ್ನೆಗಳಂತೆ ಒಟ್ಟು ಆರು ವಿಷಯಗಳಿಗೆ 240 ಬಹು ಆಯ್ಕೆ ಪ್ರಶ್ನೆ ಕೇಳಲಾಗುತ್ತದೆ. ಅದರಲ್ಲಿ ಪ್ರತಿ ಪ್ರಶ್ನೆಗೆ ಎರಡು ಅಂಕ ನಿಗದಿ ಪಡಿಸಿದೆ. ಅದರ ಪ್ರಕಾರ 480 ಅಂಕಗಳಿಗೆ ಪರಿವರ್ತನೆ ಮಾಡಿ ಶಾಲೆಗಳು ಕೊಟ್ಟಿರುವ ಆಂತರಿಕ ಮೌಲ್ಯಾಂಕನ ( 20 ಅಂಕ) ಪರಿಗಣಿಸಿ ಎಂದಿನಂತೆ 625 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ.

ವಿದ್ಯಾರ್ಥಿಗಳು ತಪ್ಪು ಉತ್ತರ ಆಯ್ಕೆ ಮಾಡಿದರೆ ನಕಾರಾತ್ಮಕ ಅಂಕ ಕಡಿತವಿಲ್ಲ. ಸರಿ ಉತ್ತರ ಬರೆಯುವ ಪ್ರತಿ ಪ್ರಶ್ನೆಗೆ ಎರಡು ಅಂಕಗಳನ್ನು ನೀಡಲಾಗುತ್ತದೆ. ಇದರ ಆಧಾರದ ಮೇಲೆ ವಿದ್ಯಾರ್ಥಿಗಳು ಗಳಿಸಿದ ಅಂಕ ಆಧರಿಸಿ ಶ್ರೇಯಾಂಕ ನೀಡಲಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಸುತ್ತೋಲೆಯಲ್ಲಿ ಉಲ್ಲೇಖಿಸಿದೆ. ವಿದ್ಯಾರ್ಥಿಗಳು ಗಳಿಸುವ ಅಂಕಗಳು, ಶಿಕ್ಷಣ ಇಲಾಖೆ ನೀಡುವ ಶ್ರೇಯಾಂಕದ ವಿವರ ಇಲ್ಲಿದೆ ನೋಡಿ.

ಶೇ. 90 ರಿಂದ 100 ಅಂಕ ಗಳಿಸಿದರೆ A+

ಶೇ. 80 ರಿಂದ 89 ಅಂಕ ಗಳಿಸಿದರೆ A ಶ್ರೇಣಿ

ಶೇ. 60 ರಿಂದ 79 ಅಂಕ ಗಳಿಸಿದರೆ B ಶ್ರೇಣಿ

ಶೇ. 35 ರಿಂದ 59 ಅಂಕ ಗಳಿಸಿದರೆ c ಶ್ರೇಣಿ

ಆತಂಕ ಬೇಡ ಸದ್ಯಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಲ್ಲ: ಸಚಿವ ಸುರೇಶ್ ಕುಮಾರ್!ಆತಂಕ ಬೇಡ ಸದ್ಯಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಲ್ಲ: ಸಚಿವ ಸುರೇಶ್ ಕುಮಾರ್!

ಪುನರಾವರ್ತಿತ ವಿದ್ಯಾರ್ಥಿಗಳಿಗೂ ಬಹು ಆಯ್ಕೆ ಪ್ರಶ್ನೆ ಪತ್ರಿಕೆ

ಪುನರಾವರ್ತಿತ ವಿದ್ಯಾರ್ಥಿಗಳಿಗೂ ಬಹು ಆಯ್ಕೆ ಪ್ರಶ್ನೆ ಪತ್ರಿಕೆ

ಇನ್ನು ಈ ಹಿಂದೆ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳು, ಅನುತ್ತೀರ್ಣ ವಿಷಯಕ್ಕೆ ಸಂಬಂಧಿಸಿದಂತೆ ಬಹು ಆಯ್ಕೆಯ 40 ಪ್ರಶ್ನೆಗಳುಳ್ಳ ಪ್ರಶ್ನೆ ಪತ್ರಿಕೆ ನೀಡಲಾಗುತ್ತದೆ. ನಲವತ್ತು ಪ್ರಶ್ನೆಗಳಿಗೆ ನೂರು ಅಂಕ ಎಂದೇ ಪರಿಗಣಿಸಿ ಮೌಲ್ಯಮಾಪನ ಆಧರಿಸಿ ಪರೀಕ್ಷೆ ಫಲಿತಾಂಶ ನೀಡಲಾಗುತ್ತದೆ. ಇಲ್ಲಿ ಪುನರಾವರ್ತಿತ ವಿದ್ಯಾರ್ಥಿಗಳು ಕನಿಷ್ಠ ಅಂಕ ಗಳಿಸಿದರೆ ಮಾತ್ರ ಉತ್ತೀರ್ಣ ಮಾಡಲಾಗುತ್ತದೆ. ಅನುತ್ತೀರ್ಣ ವಿದ್ಯಾರ್ಥಿಗಳಿಗೂ ಮೌಲ್ಯಾಂಕನ ಪರಿಗಣಿಸಿ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದ್ದು, ಪುನರಾವರ್ತಿತ ವಿದ್ಯಾರ್ಥಿಗಳಿಗೆ ಪಾಸ್ ಆಗುವ ಸುವರ್ಣ ಅವಕಾಶ ಕಲ್ಪಿಸಿದೆ.

ಮರು ಎಣಿಕೆ, ಮರು ಮೌಲ್ಯಮಾಪನ, ಛಾಯಾಪ್ರತಿ ಇಲ್ಲ

ಮರು ಎಣಿಕೆ, ಮರು ಮೌಲ್ಯಮಾಪನ, ಛಾಯಾಪ್ರತಿ ಇಲ್ಲ

ಪ್ರಸಕ್ತ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಕಡಿಮೆ ಅಂಕ ಬಂತು ಅಂತ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕುವಂತಿಲ್ಲ. ಛಾಯಾಪ್ರತಿ ಪಡೆಯಲು ಆಸ್ಪದ ನೀಡಿಲ್ಲ. ಮೌರು ಎಣಿಕೆಗೂ ಆಸ್ಪದ ನೀಡಿಲ್ಲ. ಈ ಆದೇಶ ಪ್ರಸಕ್ತ ಸಾಲಿನ ಪರೀಕ್ಷೆಗೆ ಮಾತ್ರ ಅನ್ವಯವಾಗಲಿದೆ. ಹೀಗಾಗಿ ವಿದ್ಯಾರ್ಥಿಗಳ ಅಂಕಕ್ಕಾಗಿ ನಡೆಸುವ ಗುದ್ದಾಟಕ್ಕೆ ಶಿಕ್ಷಣ ಇಲಾಖೆ ಬ್ರೇಕ್ ಹಾಕಿದೆ.

ಫೇಲ್ ಮಾಡದ ಮೇಲೆ ಎಸ್ಎಸ್ಎಲ್ ಸಿ ಪರೀಕ್ಷೆ ಯಾಕೆ ಶಿಕ್ಷಣ ಸಚಿವರೇ ?ಫೇಲ್ ಮಾಡದ ಮೇಲೆ ಎಸ್ಎಸ್ಎಲ್ ಸಿ ಪರೀಕ್ಷೆ ಯಾಕೆ ಶಿಕ್ಷಣ ಸಚಿವರೇ ?

ಗೈರು ಹಾಜರಾದವರಿಗೆ ಮರು ಪರೀಕ್ಷೆ

ಗೈರು ಹಾಜರಾದವರಿಗೆ ಮರು ಪರೀಕ್ಷೆ

ಇನ್ನು ಈಗಾಗಲೇ ಎಸ್ಎಸ್ಎಲ್‌ಸಿಗೆ ದಾಖಲಾಗದ ಪರೀಕ್ಷೆಗೆ ನೋಂದಣಿ ಮಾಡಲಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಅವಕಾಶವಿಲ್ಲ. ಜತೆಗೆ ಕೊರೊನಾ ಪಾಸಿಟೀವ್ ಬಂದು ಪರೀಕ್ಷೆಗೆ ಗೈರು ಹಾಜರಾದವರಿಗೆ ಪೂರಕ ಪರೀಕ್ಷೆ ನಡೆಸಲಾಗುತ್ತದೆ. ಪೂರಕ ಪರೀಕ್ಷೆ ಮೂಲಕ ಅವಕಾಶ ವಂಚಿತ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಪರೀಕ್ಷೆ ನಡೆಸುವುದಾಗಿ ಶಿಕ್ಷಣ ಇಲಾಖೆ ಪ್ರಕಟಿಸಿದೆ.

Recommended Video

ಜೆಡಿಎಸ್ ನಂತೆಯೇ ರಾಕ್ಷಸ ಕುಟುಂಬ ರಾಜಕಾರಣ ಬಿಜೆಪಿಯಲ್ಲೂ ಇದೆ | Oneindia Kannada
ಜು. 18 ರಂದು ಪರೀಕ್ಷೆ ಸಮಗ್ರ ಚಿತ್ರಣ

ಜು. 18 ರಂದು ಪರೀಕ್ಷೆ ಸಮಗ್ರ ಚಿತ್ರಣ

ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ತಲಾ 40 ಪ್ರಶ್ನೆಗಳು ಒಳಗೊಂಡ 120 ಪ್ರಶ್ನೆ ಪತ್ರಿಕೆಯನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಮೂರು ವಿಷಯಕ್ಕೆ ಪ್ರತ್ಯೇಕ ವಿವರವುಳ್ಳ ಒಂದೇ ಒಎಂಆರ್ ಶೀಟ್ ನೀಡಲಾಗುತ್ತದೆ. ಸರಿಯಾದ ಉತ್ತರ ಆಯ್ಕೆ ಮಾಡಿ ವಿದ್ಯಾರ್ಥಿಗಳು ಶೇಡಿಂಗ್ ಮಾಡಬೇಕು. ಒಂದ ಪ್ರಶ್ನೆಗೆ ಎರಡು ಕಡೆ ಶೇಡಿಂಗ್ ಮಾಡಬಾರದು. ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆಗಳನ್ನು ಒಳಗೊಂಡ ಭಾಷಾ ವಿಷಯಕ್ಕೆ ಒಂದು ಪ್ರಶ್ನೆ ಪತ್ರಿಕೆ ನೀಡಲಾಗುತ್ತದೆ. ತಲಾ 40 ಬಹು ಆಯ್ಕೆ ಪ್ರಶ್ನೆಗಳಿರುತ್ತವೆ. ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಮೂರು ತಾಸು ಕಾಲಾವಕಾಶ ನೀಡಲಾಗಿದೆ.


ಆದರೆ ವಿದ್ಯಾರ್ಥಿಗಳು ಒಎಂಆರ್ ಶೀಟ್‌ನಲ್ಲಿ ವಿವರ ತುಂಬುವಾಗ, ಪರೀಕ್ಷಾ ಪರಿವೀಕ್ಷಕರ ಬಳಿ ಸ್ಪಷ್ಟನೆ ಪಡೆದು ತುಂಬಬೇಕು. ಕಂಪ್ಯೂಟರ್ ಆಧಾರಿತ ಮೌಲ್ಯಮಾಪನ ಆಗುವ ಕಾರಣದಿಂದ ಸ್ವಲ್ಪ ಯಾಮಾರಿದರೂ ಸಮಸ್ಯೆಯಾಗಲಿದೆ. ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯೇ N. 95 ಮಾಸ್ಕ್ ವಿತರಿಸಲಿದೆ. ಒಂದು ಡೆಸ್ಕ್ ಗೆ ಒಬ್ಬ ವಿದ್ಯಾರ್ಥಿಯಂತೆ ಕೊಠಡಿಗೆ 12 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.

English summary
The Education department clarification about the SSLC exam ranking and result.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X