• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಯಲ್ಲಿ ವಾಮಾಚಾರ ಬೆದರಿಕೆ!

|

ಬೆಂಗಳೂರು, ಮೇ. 5: ''ಪಾಸ್ ಮಾಡಲಿಲ್ಲ ಅಂದ್ರೆ ಗಣಿತ ಪೇಪರ್ ವ್ಯಾಲ್ಯುವೇಷನ್ ಮಾಡಿದವರ ಕೈಗೆ ಏನಾದ್ರು ಹಿಡೀಲಿ. ಅಥವಾ ಅವ್ರ ಮನೆಯಲಿದ್ದವರು ಸಾಯಲಿ ಸತ್ತು ಹೋಗಲಿ ಎಂದು ಮಾಟ ಮಾಡಿಸುವೆ....''

ಹೌದು... ವಿಧಾನ ಸೌಧ, ಕಾಂಗ್ರೆಸ್ ಕಚೇರಿ ಎಂದು ಸುತ್ತಾಡುತ್ತಿದ್ದ ವಾಮಾಚಾರ ಎಸ್ ಎಸ್ ಎಲ್ ಸಿ ಉತ್ತರ ಪತ್ರಿಕೆಗೂ ಕಾಲಿಟ್ಟಿದೆ! ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆ ನೋಡುತ್ತಿದ್ದವರೂ ವಾಮಾಚಾರದ ಬೆದರಿಕೆಯನ್ನು ಎದುರಿಸಬೇಕಾಗಿದೆ.

ಇದನ್ನೆಲ್ಲ ನೋಡಿದರೆ ಎಸ್ ಎಸ್ ಎಲ್ ಸಿ ಉತ್ತರ ಪತ್ರಿಕೆಗಳ ತುಂಬಾ ಈ ಬಾರಿ ಉತ್ತರಗಳಿಗಿಂತ ಜಾಸ್ತಿ ಚಿಕನ್ ಸಾಂಬಾರ್ ಮಾಡುವ ಬಗೆ, ಬೆದರಿಕೆ, ಮಾಟ ಮಾಡಿಸುವುದು ಇವೇ ಹೆಚ್ಚಾಗಿದೆಯಾ ಎಂದೆನಿಸಿದರೂ ಅತಿಶಯೋಕ್ತಿಯಲ್ಲ.[ಎಸ್ ಎಸ್ ಎಲ್ ಸಿ ಉತ್ತರ ಪತ್ರಿಕೆಯಲ್ಲಿ ಚಿಕನ್ ಸಾಂಬಾರ್!]

ಚಿಕನ್ ಸಾಂಬಾರ್ ಮಹಾಶಯನ ಉತ್ತರ ಕೇಳಿ ದಂಗಾಗಿದ್ದವರಿಗೆ ಇದೀಗ ಮಾಟ ಮಂತ್ರದ ಉತ್ತರವು ಸಿಕ್ಕಿದೆ. ನೀವು ನನ್ನನ್ನು ಪಾಸ್ ಮಾಡದಿದ್ದರೆ ಮಾಟ ಮಾಡಿಸುತ್ತೇನೆ ಎಂಬುದು ಗಣಿತದ ಪ್ರಶ್ನೆಯೊಂದಕ್ಕೆ ಬರೆದ ಉತ್ತರ.

ಈ ಪುಣ್ಯಾತ್ಮ ಬರೆದಿರುವ ಉತ್ತರವನ್ನು ಒಮ್ಮೆ ಓದಿಕೊಂಡು ಬರೋಣ ಬನ್ನು,, "ಪಾಸ್ ಮಾಡಲಿಲ್ಲ ಅಂದ್ರೆ ಗಣಿತ ಪೇಪರ್ ವ್ಯಾಲ್ಯುವೇಷನ್ ಮಾಡಿದವರ ಕೈಗೆ ಏನಾದ್ರು ಹಿಡೀಲಿ. ಅಥವಾ ಅವ್ರ ಮನೆಯಲಿದ್ದವರು ಸಾಯಲಿ ಸತ್ತು ಹೋಗಲಿ ಅಂದು ಮಾಟ ಮಾಡಿಸುವೆ. ಸಾರ್ ನಾನು ಎಲ್ಲವನ್ನು ಚೆನ್ನಾಗಿ ಬರೆಯುತ್ತೇನೆ ಓದುತ್ತೇನೆ. ಆದ್ರೆ ಸರ್ ಗಣಿತ ಒಂದೇ ಸಬ್ಜೆಕ್ಟ್ ಕಸ್ಟ ಸಾರ್. ಈಗ ನನಗೆ ಡೌಟ್ ಇರೋದು ಗಣಿತ ಒಂದರಲ್ಲೆ ಸಾರ್. ನನ್ನ ಅಣ್ಣ ಅಕ್ಕ ಎಲ್ಲರೂ ಕಾಲೇಜಿಗೆ ಹೋಗುತ್ತಿದ್ದಾರೆ. ನನಗೂ ಕಾಲೇಜಿಗೆ ಹೋಗುವ ಆಸೆ ಇದೆ. ಅಣ್ಣ, ಅಕ್ಕ, ತಂದೆ ಎಲ್ಲರ ಹತ್ರ ಗಣಿತ ಫೇಲ್ ಅಂತ ಹೇಳಿದ್ರೆ ಬೈತಾರೆ. ನನಗೆ ಎಲ್ಲರ ಕೈಲಿ ಬೈಸಿಕೊಳ್ಳಲು ಆಗೊಲ್ಲ. ಆದ್ದರಿಂದ ನಾನು ಫೇಲ್ ಆದ್ರೆ ಯಾರಿಗೂ ಗೊತ್ತಾಗದಂತೆ ನೇಣು ಹಾಕಿಕೊಳ್ಳುತ್ತೇನೆ. ವಿಷ ತಗೋತೀನಿ ಇದೊಂದು ಪಾಸ್ ಮಾಡಿ ಸಾರ್" ಅಬ್ಬಬ್ಬಾ ಎಂಥ ಉತ್ತರ. ಇದನ್ನು ಓದಿದ ಉಪನ್ಯಾಸಕ ಮಾತ್ರ ನಿರುತ್ತರ! [ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆ ಫಲಿತಾಂಶ ಯಾವಾಗ]

ಗಣೀತ ವಿಷಯವೇ ಹಾಗೆಯೇ? ಸುಮ್ಮನೆ ಅಭ್ಯಾಸ ಮಾಡದೇ ಪರೀಕ್ಷೆಗೆ ಹಾಜರಾದರೆ ಇದಕ್ಕಿಂದ ಘನಂದಾರಿ ಉತ್ತರ ಬರೆಯಲು ಯಾರಿಂದ ತಾನೇ ಸಾಧ್ಯ. ಇದು ಕೇವಲ ಗಣಿತವೊಂದಕ್ಕೆ ಸಂಬಂಧಿಸಿದ ಸಂಗತಿಯಲ್ಲ ಸಮಾಜ ವಿಜ್ಞಾನ, ಇಂಗ್ಲಿಷ್ ಪತ್ರಿಕೆಗಳಲ್ಲೂ ಇಂಥ ತರೇವಾರಿ ಸಂಗತಿಗಳನ್ನು ಕಾಣಬಹುದಾಗಿದೆ.

1857 ರ ದಂಗೆಯ ಪರಿಣಾಮಗಳನ್ನು ಬರೆಯಿರಿ ಎಂದರೆ , ಇಬ್ಬರು ಮಕ್ಕಳು ಪರಸ್ಪರ ಮಾಡಿಕೊಂಡಿದ್ದ ಗಲಾಟೆಯನ್ನು ಚೆಂದವಾಗಿ ಆದರೆ ಅರ್ಥವಿಲ್ಲದಂತೆ ಬರೆದವನಿಗೆ ಎಷ್ಟು ಅಂಕ ನೀಡಬೇಕು?

ಹಿಂದೆಯೂ ಇಂಥ ಉತ್ತರಗಳು ಬರುತ್ತಿದ್ದವೆನೋ ಆದರೆ ಗೊತ್ತಾಗುತ್ತಿರಲಿಲ್ಲ ಅಷ್ಟೇ ಎಂದು ಅಂದುಕೊಳ್ಳಬೇಕು. ಸಾಮಾಜಿಕ ಜಾಲತಾಣಗಳು ಸದಾ ಕ್ರಿಯಾಶೀಲವಾಗಿರುವುದರಿಂದ ತಕ್ಷಣಕ್ಕೆ ಗೊತ್ತಾಗುತ್ತಿದೆ. ಹಿಂದೆ ಇಂಥ ಉತ್ತರಗಳನ್ನು ಮೌಲ್ಯಮಾಪಕರಷ್ಟೇ ಓದಿ ನಕ್ಕು ಸುಮ್ಮನಾಗುತ್ತಿದ್ದರು. ಆದರೂ ಮಕ್ಕಳ ಮನಸ್ಸಿನ ಮೇಲೆ ವಾಮಾಚಾರ ಪರಿಣಾಮ ಬೀರಿದ ರೀತಿ ಮಾತ್ರ ಆತಂಕ್ಕೆ ಕಾರಣವಾಗುವ ಸಂಗತಿ.

ಈ ರೀತಿ ಉತ್ತರ ಪತ್ರಿಕೆ ಬಹಿರಂಗಕ್ಕೆ ಕಾರಣರಾದವರನ್ನು ಹಿಡಿದು ಶಿಕ್ಷಿಸಲಾಗುವುದು. ಇಂಥ ಸಂಗತಿಗಳನ್ನು ಬಹಿರಂಗ ಮಾಡುವುದು ಕಾನೂನು ರೀತಿಯಲ್ಲಿ ಅಪರಾಧವಾಗುತ್ತದೆ ಎಂದು ಪ್ರೌಢ ಶಿಕ್ಷಣ ಮಂಡಳಿ ತಿಳಿಸಿದೆ.

English summary
SSLC candidates pinning currency notes to their answer-scripts, penning heart-wringing pleas, dropping threats, offering inducements or indulging in claptrap is not new. Several such answer-scripts have gone viral on WhatsApp in the past few days, exposing blatant violation of the ban on mobile phones inside evaluation centres.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more