• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಮುಲುಗೆ 7 ಕ್ಷೇತ್ರಗಳ ಉಸ್ತುವಾರಿ: ದಲಿತ ಮತ ಸೆಳೆಯಲು ಬಿಜೆಪಿ ತಂತ್ರ

|
   ಶ್ರೀರಾಮುಲುಗೆ ಹೊಸ ಜವಾಬ್ದಾರಿ ವಹಿಸಿದ ಬಿಜೆಪಿ..! | Oneindia Kannada

   ಬೆಂಗಳೂರು, ಫೆಬ್ರವರಿ 23: ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ದೊಡ್ಡ ಸಂಖ್ಯೆಯ ದಲಿತರನ್ನು ಪಕ್ಷದೆಡೆಗೆ ಸೆಳೆಯಲು ಬಿಜೆಪಿಯು ತಂತ್ರ ರೂಪಿಸಿದ್ದು, ಏಳು ಲೋಕಸಭಾ ಕ್ಷೇತ್ರಗಳ ಉಸ್ತುವಾರಿಯನ್ನು ಬಿಜೆಪಿಯ ದಲಿತ ನಾಯಕ ರಾಮುಲು ಅವರ ಹೆಗಲಿಗೆ ಹೇರಿದೆ.

   ಕಾಂಗ್ರೆಸ್‌ಗೆ ಹೋಲಿಸಿದರೆ ಬಿಜೆಪಿಗೆ ದಲಿತ ಮತದಾರರು ಕಡಿಮೆ ರಾಜ್ಯದಲ್ಲಿಯಂತೂ ದಲಿತ ಸಂಘಟನೆಗಳು ವಿವಿಧ ಕಾರಣಗಳಿಗೆ ಬಿಜೆಪಿಯನ್ನು ವಿರೋಧಿಸುತ್ತಲೇ ಬಂದಿವೆ. ಅದರಲ್ಲಿ ಅನಂತ್‌ಕುಮಾರ್ ಹೆಗಡೆ ಅವರ ಸಂವಿಧಾನ ಬದಲಾವಣೆ ಹೇಳಿಕೆ ಪ್ರಮುಖವಾದುದು.

   ಆದರೆ ಈ ಬಾರಿ ಚುನಾವಣೆಯಲ್ಲಿ ದಲಿತರನ್ನು ಪಕ್ಷದೆಡೆಗೆ ಸೆಳೆಯುವ ಉದ್ದೇಶದಿಂದಾಗಿ ಬಿಜೆಪಿಯ ಪ್ರಭಾವಿ ದಲಿತ ನಾಯಕ ಶ್ರೀರಾಮುಲು ಅವರಿಗೆ ಬರೋಬ್ಬರಿ ಏಳು ಲೋಕಸಭಾ ಕ್ಷೇತ್ರಗಳ ಉಸ್ತುವಾರಿಯನ್ನು ನೀಡಲಾಗಿದೆ.

   ಶ್ರೀರಾಮುಲು ಕಂಡರೆ ಕಾಂಗ್ರೆಸ್ ಪಕ್ಷದವರು ನಡಗುತ್ತಾರೆ!: ಹೀಗೆ ಹೇಳಿದ್ದು ಯಾರು ಗೊತ್ತೇ?

   ಮೀಸಲು ಕ್ಷೇತ್ರಗಳಾದ ವಿಜಯಪುರ(ಎಸ್​ಸಿ), ಬಳ್ಳಾರಿ(ಎಸ್​ಟಿ), ಕಲ್ಬುರ್ಗಿ(ಎಸ್​ಸಿ), ರಾಯಚೂರು(ಎಸ್​​ಟಿ), ಚಿತ್ರದುರ್ಗ(ಎಸ್​ಸಿ), ಚಾಮರಾಜನಗರ(ಎಸ್​ಸಿ) ಹಾಗೂ ಕೋಲಾರ(ಎಸ್​ಸಿ) ಕ್ಷೇತ್ರಗಳನ್ನು ರಾಮುಲು ಅವರ ಸುಪರ್ದಿಗೆ ನೀಡಲಾಗಿದ್ದು, ಏಳರಲ್ಲಿ ಐದರಲ್ಲಿ ಗೆಲ್ಲುವ ಗುರಿ ಹೊಂದಲಾಗಿದೆ.

   ಬಿಜೆಪಿಯ ದಲಿತ ಮುಖ ರಾಮುಲು

   ಬಿಜೆಪಿಯ ದಲಿತ ಮುಖ ರಾಮುಲು

   ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿ ಭಾರಿ ಪ್ರಮಾಣದಲ್ಲಿ ದಲಿತ ಮತದಾರರನ್ನು ತಮ್ಮತ್ತ ಸೆಳೆಯಲು ರಾಮುಲು ಯಶಸ್ವಿಯಾಗಿದ್ದರು. ಅಲ್ಲದೆ ಪ್ರಸ್ತುತ ರಾಜ್ಯ ಬಿಜೆಪಿಯಲ್ಲಿ ರಾಮುಲು ಅವರಷ್ಟು ಪ್ರಭಾವಿ ದಲಿತ ನಾಯಕರು ಮತ್ತೊಬ್ಬರಿಲ್ಲ ಹಾಗಾಗಿ ಅವರನ್ನು ಬಿಜೆಪಿ ಹೆಚ್ಚಿಗೆ ನೆಚ್ಚಿಕೊಂಡಿದೆ.

   20 ಸೀಟು ಗೆದ್ದರೆ ಗದ್ದುಗೆಯ ಮೇಲೆ ಯಡಿಯೂರಪ್ಪ : ಶಾ ಅಭಯಹಸ್ತ

   ಬಳ್ಳಾರಿ ಉಪಚುನವಣೆಯಲ್ಲಿ ಮುಗ್ಗರಿಸಿದ್ದ ರಾಮುಲು

   ಬಳ್ಳಾರಿ ಉಪಚುನವಣೆಯಲ್ಲಿ ಮುಗ್ಗರಿಸಿದ್ದ ರಾಮುಲು

   ಕಳೆದ ಲೋಕಸಭೆ ಉಪಚುನಾವಣೆಯಲ್ಲಿ ಸ್ವತಃ ತಮ್ಮ ಸಹೋದರಿಯನ್ನು ತಮ್ಮದೇ ಕ್ಷೇತ್ರ ಬಳ್ಳಾರಿಯಲ್ಲಿ ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳಲು ರಾಮುಲು ವಿಫರಾಗಿದ್ದರು. ಹಾಗಾಗಿ ಬಿಜೆಪಿ ಈಗ ರಾಮುಲು ಅವರಿಗೆ ಜವಾಬ್ದಾರಿ ನೀಡಿರುವುದು ಕಠಿಣವಾದ ನಿರ್ಣಯ ಎನ್ನಲಾಗಿದೆ.

   ಮತ್ತೆ ಆಪರೇಷನ್ ಕಮಲ: ಸುಳಿವು ನೀಡಿದ ಯಡಿಯೂರಪ್ಪ

   ರಾಜ್ಯದ ಪ್ರಭಾವಶಾಲಿ ದಲಿತ ಬಿಜೆಪಿ ಮುಖಂಡ

   ರಾಜ್ಯದ ಪ್ರಭಾವಶಾಲಿ ದಲಿತ ಬಿಜೆಪಿ ಮುಖಂಡ

   ರಾಜ್ಯ ರಾಜಕಾರಣದಲ್ಲಿ ಪ್ರಭಾವಶಾಲಿ ದಲಿತ ಮುಖಂಡರ ಕೊರತೆ ಬಿಜೆಪಿ ಇದ್ದ ಕಾರಣದಿಂದಲೇ ರಾಮುಲು ಅವರನ್ನು ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ತರಲಾಗಿದೆ ಎಂಬ ಮಾತುಗಳೂ ಇವೆ. ಅದರಂತೆ ಈಗ ಪಕ್ಷವು ಜವಾಬ್ದಾರಿ ನೀಡಿದ್ದು, ರಾಮುಲು ಅವರು ಅದನ್ನು ಹೇಗೆ ನಿಭಾಯಿಸುತ್ತಾರೆ ಎಂದು ಕಾದು ನೋಡಬೇಕಿದೆ.

   ಸುಮಲತಾ ಅಂಬರೀಶ್‌ ಪಕ್ಷೇತರವಾಗಿ ಸ್ಪರ್ಧಿಸಿದರೂ ಕಾಂಗ್ರೆಸ್‌ ಬೆಂಬಲ?

   ಏಳರಲ್ಲಿ ಆರು ಕಾಂಗ್ರೆಸ್‌ ಮಡಿಲಲ್ಲಿವೆ

   ಏಳರಲ್ಲಿ ಆರು ಕಾಂಗ್ರೆಸ್‌ ಮಡಿಲಲ್ಲಿವೆ

   ರಾಮುಲು ಅವರಿಗೆ ನೀಡಲಾಗಿರುವ ಏಳು ಕ್ಷೇತ್ರಗಳಲ್ಲಿ ಆರರಲ್ಲಿ ಕಾಂಗ್ರೆಸ್‌ ಸಂಸದರು ಇದ್ದಾರೆ. ವಿಜಯಪುರ ಕ್ಷೇತ್ರದಲ್ಲಿ ಮಾತ್ರವೇ ಬಿಜೆಪಿ ಕಳೆದ ಬಾರಿ ಗೆದ್ದಿದೆ. ಬಳ್ಳಾರಿಯಲ್ಲಿ ಕಾಂಗ್ರೆಸ್‌ನ ಉಗ್ರಪ್ಪ, ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ , ರಾಯಚೂರು ಬಿ,ವಿ.ನಾಯಕ್ ಕಾಂಗ್ರೆಸ್, ಚಿತ್ರದುರ್ಗ ಬಿ.ಎನ್.ಚಂದ್ರಪ್ಪ ಕಾಂಗ್ರೆಸ್, ಚಾಮರಾಜನಗರದಲ್ಲಿ ಕಾಂಗ್ರೆಸ್‌ನ ಆರ್.ಧೃವನಾರಾಯಣ್ , ಕೋಲಾರ ಕೆ.ಎಚ್.ಮುನಿಯಪ್ಪ ಅವರು ಕಳೆದ ಬಾರಿ ಗೆದ್ದಿದ್ದಾರೆ.

   lok-sabha-home

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   BJP made Sriramalu in charge for seven reservation lok sabha constituency for upcoming elections. Ramulu will handle Vijayapura, Kolar, Kalburgi, Chitradurga, Chamarajnagar, Rayachuru, Bellari constituencies.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more