ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯನ್ನ ಮತ್ತೆ ಅಧಿಕಾರಕ್ಕೆ ತರುತ್ತೇವೆ: ರೆಡ್ಡಿ ಬ್ರದರ್ಸ್

By Srinath
|
Google Oneindia Kannada News

ಬಳ್ಳಾರಿ, ಮಾರ್ಚ್5: ಬಿಎಸ್ಸಾರ್ ಕಾಂಗ್ರೆಸ್ ಸಂಸ್ಥಾಪಕ ಬಿ ಶ್ರೀರಾಮುಲು ಬಿಜೆಪಿಗೆ ಬಂದಾಯ್ತು. ಮತ್ತು ಇಂದು ಪ್ರಕಟವಾಗಿರುವ ಲೋಕಸಭಾ ಚುನಾವಣೆಗೆ ಬಳ್ಳಾರಿ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತವಾಗಿದೆ.

ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ( ಬಿಎಸ್ಸಾರ್ ಕಾಂಗ್ರೆಸ್) ಹಾಲಿ ಶಾಸಕ ಶ್ರೀರಾಮುಲು ಅವರು ಬಿಜೆಪಿ ಸೇರಿದ್ದು, ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದರ ಬಗ್ಗೆ ಕೆಎಂಎಫ್ ಅಧ್ಯಕ್ಷ ಜಿ ಸೋಮಶೇಖರ ರೆಡ್ಡಿ ಇಂದು ಬಳ್ಳಾರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಶ್ರೀರಾಮುಲು ಸಹ ಬಿಜೆಪಿ ಸೇರುವ ತಮ್ಮ ನಿರ್ಧಾರವನ್ನು ಇದೇ ಸಂದರ್ಭದಲ್ಲಿ ಬಹಿರಂಗಪಡಿಸಿದರು.

ಶ್ರೀರಾಮುಲು ಬಿಜೆಪಿಗೆ ಬಂದಾಯ್ತು, ಬಳ್ಳಾರಿಯಿಂದ ಕಣಕ್ಕೆ

ಶ್ರೀರಾಮುಲು ಬಿಜೆಪಿಗೆ ಬಂದಾಯ್ತು, ಬಳ್ಳಾರಿಯಿಂದ ಕಣಕ್ಕೆ

ಬಿಎಸ್ಸಾರ್ ಕಾಂಗ್ರೆಸ್ ವತಿಯಿಂದ ಇಂದು ಬಳ್ಳಾರಿಯಲ್ಲಿ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಪಾಲ್ಗೊಂಡು ಮಾತನಾಡಿದ ಗಾಲಿ ಸೋಮಶೇಖರ ರೆಡ್ಡಿ ಅವರು, ಬಿಜೆಪಿಯೊಂದಿಗೆ ಬಿಎಸ್ಸಾರ್ ಕಾಂಗ್ರೆಸ್ ಅಧಿಕೃತವಾಗಿ ವಿಲೀನವಾಗಿದೆ ಎಂದು ಪ್ರಕಟಿಸಿದರು.

ಸಮಾವೇಶದಲ್ಲಿ ರಾಮುಲು, ಸಂಸದೆ ಶಾಂತಾ ಭಾಗಿ

ಸಮಾವೇಶದಲ್ಲಿ ರಾಮುಲು, ಸಂಸದೆ ಶಾಂತಾ ಭಾಗಿ

ಸಮಾವೇಶದಲ್ಲಿ ಶ್ರೀರಾಮುಲು, ಸಂಸದೆ ಶಾಂತಾ ಸೇರಿದಂತೆ ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.

ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ: ರೆಡ್ಡಿ ಬ್ರದರ್ಸ್

ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ: ರೆಡ್ಡಿ ಬ್ರದರ್ಸ್

ಬಿಜೆಪಿ ಜತೆ ಬಿಎಸ್ಸಾರ್ ಕಾಂಗ್ರೆಸ್ ವಿಲೀನವಾಗಿರುವುದರಿಂದ ರಾಜಕೀಯದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗಲಿದೆ. ಲೋಕಸಭಾ ಚುನಾವಣೆಯನ್ನು ನಾವೆಲ್ಲ ಒಗ್ಗೂಡಿ ಎದುರಿಸಿ ಕೇಂದ್ರದಲ್ಲಿ ನಮ್ಮ ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಶ್ರೀರಾಮುಲುಗೆ ನಾಣು ಕೃತಜ್ಞ: ಸೋಮ ರೆಡ್ಡಿ

ಶ್ರೀರಾಮುಲುಗೆ ನಾಣು ಕೃತಜ್ಞ: ಸೋಮ ರೆಡ್ಡಿ

ರಾಜಕೀಯವಾಗಿ ನನ್ನನ್ನು ಶ್ರೀರಾಮುಲು ಅವರೇ ಬೆಳೆಸಿದ್ದಾರೆ. ಅದಕ್ಕೆ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಶ್ರೀರಾಮುಲು ಬಳ್ಳಾರಿಯ ಬಸವನ ಗುಡ್ಡದಂತೆ. ಅವರು ರಾಜಕೀಯವಾಗಿ ಅಗಾಧವಾಗಿ ಬೆಳೆದಿದ್ದಾರೆ ಎಂದು ಸೋಮಶೇಖರ ರೆಡ್ಡಿ ಬಣ್ಣಿಸಿದರು.

ರಾಮುಲು ಹೆಚ್ಚು ಮತಗಳಿಂದ ಗೆದ್ದು ಬರುತ್ತಾರೆ: ಸೋಮಶೇಖರ ರೆಡ್ಡಿ

ರಾಮುಲು ಹೆಚ್ಚು ಮತಗಳಿಂದ ಗೆದ್ದು ಬರುತ್ತಾರೆ: ಸೋಮಶೇಖರ ರೆಡ್ಡಿ

ಬಿಜೆಪಿ ಜತೆಗೆ ಬಿಎಸ್ಸಾರ್ ಕಾಂಗ್ರೆಸ್ ವಿಲೀನವಾಗಲು ನಮ್ಮ ಪಕ್ಷದ ಹೈಕಮಾಂಡ್ ಒಪ್ಪಿಗೆ ನೀಡಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶ್ರೀರಾಮುಲು ಅವರನ್ನು ನಮ್ಮ ಪಕ್ಷದಿಂದ ಬಳ್ಳಾರಿ ಕ್ಷೇತ್ರದಿಂದಲೇ ಸ್ಪರ್ಧೆಗಿಳಿಸುತ್ತೇವೆ. ಅವರು ಅತಿ ಹೆಚ್ಚು ಮತಗಳಿಂದ ಗೆದ್ದು ಬರುತ್ತಾರೆ ಎಂದೂ ಸೋಮಶೇಖರ ರೆಡ್ಡಿ ಭವಿಷ್ಯ ನುಡಿದರು.

English summary
Lok Sabha Election 2014- Sriramulu returns to BJP to contest Bellary LS Seat - Somashekar Reddy. KMF presdinet and BJP ex MLA Somashekar Reddy has clarified today in Bellary that Sriramulu will contest Bellary LS Seat on BJP ticket and win the elections with a huge margin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X