ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸಿಎಂ ಮಾಡದ್ದಕ್ಕೆ ಶ್ರೀರಾಮುಲು, ಈಶ್ವರಪ್ಪ ಬೆಂಬಲಿಗರು ಹೀಗಂದ್ರು?

|
Google Oneindia Kannada News

Recommended Video

ಶ್ರೀರಾಮುಲು, ಈಶ್ವರಪ್ಪಗೆ ಟಾಂಗ್ ಕೊಟ್ಟ ಯಡಿಯೂರಪ್ಪ..? | Oneindia Kannada

ಬೆಂಗಳೂರು, ಆಗಸ್ಟ್ 27: ಶ್ರೀರಾಮುಲು, ಈಶ್ವರಪ್ಪ ಅವರನ್ನು ಉಪಮುಖ್ಯಮಂತ್ರಿ ಮಾಡದಿದ್ದಕ್ಕೆ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದೆಡೆ ಸಿಟಿ ರವಿ, ಆರ್‌ ಅಶೋಕ್, ಜಗದೀಶ್ ಶೆಟ್ಟರ್ ಹಾಗೂ ವಿ ಸೋಮಣ್ಣ ಖಾತೆ ಹಂಚಿಕೆ ಕುರಿತು ಅಸಮಾಧಾನ ಹೊರಹಾಕುತ್ತಿದ್ದದೆ ಇನ್ನೊಂದೆಡೆ ಶ್ರೀರಾಮುಲು, ಈಶ್ವರಪ್ಪ ಬೆಂಬಲಿಗರು ಕೂಡ ತಮ್ಮ ಅಸಮಾಧಾನ ತೋರ್ಪಡಿಸುತ್ತಿದ್ದಾರೆ.

ಸಚಿವ ಸ್ಥಾನಕ್ಕೆ ರಾಜೀನಾಮೆ: ಅಡ್ಡಗೋಡೆ ಮೇಲೆ ದೀಪ ಇಟ್ಟ ಸಿ.ಟಿ ರವಿಸಚಿವ ಸ್ಥಾನಕ್ಕೆ ರಾಜೀನಾಮೆ: ಅಡ್ಡಗೋಡೆ ಮೇಲೆ ದೀಪ ಇಟ್ಟ ಸಿ.ಟಿ ರವಿ

ಸಿ ಟಿ ರವಿ ಮಾತನಾಡಿ, ಇವತ್ತು ನನಗೆ ಮಂತ್ರಿಸ್ಥಾನ ಕೊಟ್ಟಿದ್ದಾರೆ. ನಾನು ಅದನ್ನು ಕೇಳಿರಲಿಲ್ಲ. ಆಕಾಂಕ್ಷಿಯೂ ಆಗಿರಲಿಲ್ಲ. ಇಂತದ್ದೇ ಖಾತೆ ಬೇಕು ಎಂದು ಕೂಡ ಇನ್ನೊಂದೆಡೆ ಮುಖ್ಯಮಂತ್ರಿಯವರ ಬಳಿ ಬೇಡಿಕೆ ಇಟ್ಟಿರಲಿಲ್ಲ.

ಕೆಲವು ಸಂಗತಿಗಳನ್ನು ಕಾಲವೇ ನಿರ್ಣಯ ಮಾಡುತ್ತದೆ. ಆ ಕಾಲ ಬಂದಾಗ ಎಲ್ಲವನ್ನೂ ಹೇಳುತ್ತೇನೆ. ನನಗೆ ನನ್ನ ಪಕ್ಷದ ಇತಿಮಿತಿ ಗೊತ್ತು. ಎಲ್ಲವನ್ನೂ ಬಹಿರಂಗವಾಗಿ ಹೇಳಲು ಇದು ಸೂಕ್ತ ಕಾಲವಲ್ಲ ಎಂದು ತಿಳಿಸಿದರು.

ಹಿರಿಯರಿಗೆ ಸಿಗದ ಡಿಸಿಎಂ ಹುದ್ದೆ: ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ?ಹಿರಿಯರಿಗೆ ಸಿಗದ ಡಿಸಿಎಂ ಹುದ್ದೆ: ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ?

ಸರ್ಕಾರಿ ಕಾರನ್ನು ವಾಪಸ್​ ಕಳಿಸಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಪ್ರತಿದಿನ ಸರ್ಕಾರಿ ಕಾರನ್ನು ವಾಪಸ್​ ಕಳಿಸುತ್ತೇನೆ. ಎಂದಿನಂತೆ ಇಂದೂ ಕಳಿಸಿದ್ದು, ಆ ಬಗ್ಗೆ ಬೇರೆ ಅರ್ಥ ಬೇಡ ಎಂದು ಹೇಳಿದ್ದಾರೆ.

 ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅಸಮಾಧಾನ

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅಸಮಾಧಾನ

ಕಳೆದ ಬಾರಿಯ ಬಿಜೆಪಿ ಸರ್ಕಾರದಲ್ಲಿ ಡಿಸಿಎಂ ಸ್ಥಾನ ಪಡೆದಿದ್ದ ಕೆ.ಎಸ್.ಈಶ್ವರಪ್ಪ ಅವರಿಗೆ ಈ ಬಾರಿ ನಿರಾಸೆಯಾಗಿದೆ. ಈಶ್ವರಪ್ಪಗೆ ಡಿಸಿಎಂ ಪೋಸ್ಟ್ ನೀಡದ್ದಕ್ಕೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅಸಮಾಧಾನ ಹೊರಹಾಕಿದೆ.

 ಡಿಸಿಎಂ ಪಟ್ಟ ಕೇಳದವರಿಗೆ ಹುದ್ದೆ ನೀಡಲಾಗಿದೆ

ಡಿಸಿಎಂ ಪಟ್ಟ ಕೇಳದವರಿಗೆ ಹುದ್ದೆ ನೀಡಲಾಗಿದೆ

ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ. ಶ್ರೀರಾಮುಲು ಅವರೇ ದಯಮಾಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಕೇವಲ ಶಾಸಕರಾಗಿ ಮುಂದುವರೆಯಿರಿ. ಇಡೀ ವಾಲ್ಮೀಕಿ, ಎಸ್ಸಿ, ಎಸ್ಟಿ, ಓಬಿಸಿ ಸಮುದಾಯ ನಿಮ್ಮ ಬೆಂಬಲಕ್ಕಿದೆ ಎಂದು ಬೆಂಬಲ ಸೂಚಿಸಿದ್ದಾರೆ.

ಶ್ರೀರಾಮುಲು ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ಹೊರಹಾಕಿದ್ದಾರೆ. ಶ್ರೀರಾಮುಲು ಒಬ್ಬರೇ ಡಿಸಿಎಂ ಹುದ್ದೆ ಬೇಡಿದ್ದರು. ಆದರೆ ಡಿಸಿಎಂ ಪಟ್ಟ ಕೇಳದವರಿಗೆ ನೀಡಲಾಗಿದೆ. 80ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಶ್ರೀರಾಮುಲು ಪ್ರಚಾರ ಮಾಡಿದ್ದಾರೆ.

ಖಾತೆ ಹಂಚಿಕೆ ಫೈನಲ್, ಇಲ್ಲಿದೆ ಅಧಿಕೃತ ಪಟ್ಟಿಖಾತೆ ಹಂಚಿಕೆ ಫೈನಲ್, ಇಲ್ಲಿದೆ ಅಧಿಕೃತ ಪಟ್ಟಿ

 ಇಂಧನ ಖಾತೆ ಕೇಳಿದರೆ ಈಶ್ವರಪ್ಪಗೆ ಗ್ರಾಮೀಣಾಭಿವೃದ್ಧಿ ನೀಡಿದ್ದಾರೆ

ಇಂಧನ ಖಾತೆ ಕೇಳಿದರೆ ಈಶ್ವರಪ್ಪಗೆ ಗ್ರಾಮೀಣಾಭಿವೃದ್ಧಿ ನೀಡಿದ್ದಾರೆ

ಅಲ್ಲದೆ ಈಶ್ವರಪ್ಪರಿಗೆ ಡಿಸಿಎಂ ಹುದ್ದೆ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ಭಾರೀ ಹೊಡೆತ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇಂಧನ ಖಾತೆ ಕೇಳಿದ್ದ ಈಶ್ವರಪ್ಪಗೆ ಗ್ರಾಮೀಣಾಭಿವೃದ್ಧಿ ಖಾತೆ ನೀಡಿದ್ದಾರೆ. ಈ ಮೂಲಕ ಹಿಂದುಳಿದ ವರ್ಗಕ್ಕೆ ಅಪಮಾನ ಮಾಡಿದ್ದಾರೆಂದು ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಸಿಎಂ ಯಡಿಯೂರಪ್ಪ ಅವರ ವಿರುದ್ಧ ಅಭಿಮಾನಿಗಳ ಆಕ್ರೋಶ

ಸಿಎಂ ಯಡಿಯೂರಪ್ಪ ಅವರ ವಿರುದ್ಧ ಅಭಿಮಾನಿಗಳ ಆಕ್ರೋಶ

ಈ ಜಾತಿ ರಾಜಕಾರಣ ಹೆಚ್ಚು ದಿನ ನಡೆಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧವೂ ಶ್ರೀರಾಮುಲು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ಯಡಿಯೂರಪ್ಪ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿರುವ ಅಭಿಮಾನಿಗಳು, ವಾಲ್ಮೀಕಿ ಸಮುದಾಯಕ್ಕೆ ಕೇವಲ ಒಂದು ಸಚಿವ ಸ್ಥಾನವನ್ನು ನೀಡಿದ್ದೀರಿ.

English summary
Supporters have expressed outrage that Sriramulu and Eshwarappa had not been made the Deputy Chief Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X