ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕ ರಮೇಶ್ ಕುಮಾರ್‌ಗೆ ಸಚಿವರಾಗುವ ಭಾಗ್ಯ!

|
Google Oneindia Kannada News

ಬೆಂಗಳೂರು, ಡಿ. 12 : ಬೆಳಗಾವಿ ಅಧಿವೇಶನ ಮುಗಿದ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಸಂಪುಟ ವಿಸ್ತರಣೆಯಾದರೆ, ಹಿರಿಯ ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ಸಂಪುಟ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.

ಆಡಳಿತ ಪಕ್ಷದ ಶಾಸಕರಾಗಿದ್ದರೂ ರಮೇಶ್ ಕುಮಾರ್ ವಿರೋಧ ಪಕ್ಷದಂತೆ ಸರ್ಕಾರವನ್ನು ಟೀಕಿಸುತ್ತಾರೆ. ಸದನದಲ್ಲಿ ಮಾತನಾಡಲು ನಿಂತರೆ ಸರ್ಕಾರದ ಲೋಪದೋಷಗಳನ್ನು ಪಟ್ಟಿ ಮಾಡಿ ವಿವರಣೆ ಮೂಲಕ ಹೇಳುತ್ತಾ, ಇಕ್ಕಟ್ಟಿಗೆ ಸಿಲುಕಿಸುತ್ತಾರೆ. [ಕಳಂಕಿತರು ಯಾರು? ಸ್ಪಷ್ಟನೆ ಕೇಳಿದ ರಮೇಶ್ ಕುಮಾರ್ ]

Ramesh Kumar

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರದಿಂದ ಆರಿಸಿಬಂದಿರುವ ರಮೇಶ್ ಕುಮಾರ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಕೂಗು ಹಿಂದೆಯೂ ಎದ್ದಿತ್ತು. ಆದರೆ, ಹೊಸದಾಗಿ ಸರ್ಕಾರ ರಚನೆ ಆದಾಗ ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್.ಹಿರೇಮಠ ಅವರು ರಮೇಶ್ ಕುಮಾರ್ ಭ್ರಷ್ಟರು ಎಂದು ದಾಖಲೆ ನೀಡಿದ್ದರು. [ರಮೇಶ್ ಕುಮಾರ್, ಹಿರೇಮಠ ಜಟಾಪಟಿ]

ಸದ್ಯ, ರಮೇಶ್ ಕುಮಾರ್ ಸಂಪುಟ ಸೇರಲಿದ್ದಾರೆ ಎಂಬ ಮಾತುಗಳು ಪುನಃ ಕೇಳಿಬಂದಿದ್ದು, ಹೈಕಮಾಂಡ್ ನಾಯಕರು ಅವರನ್ನು ದೆಹಲಿಗೆ ಬರುವಂತೆ ಸೂಚನೆ ನೀಡಿದ್ದಾರೆ, ರಮೇಶ್ ಕುಮಾರ್ ತೆರಳಿದ್ದಾರೆ ಎಂಬುದು ಪಕ್ಷದ ಮೂಲಗಳ ಮಾಹಿತಿ.

ಈಗಾಗಲೇ ನಿಗಮ ಮಂಗಳಿ ನೇಮಕ ಪ್ರಕ್ರಿಯೆಯನ್ನು ಕಾಂಗ್ರೆಸ್ ಪೂರ್ಣಗೊಳಿಸಿದ್ದು, ಖಾಲಿ ಇರುವ ನಾಲ್ಕು ಸಚಿವ ಸ್ಥಾನಗಳನ್ನು ಭರ್ತಿ ಮಾಡುವತ್ತ ಗಮನಹರಿಸಿದೆ. ಬೆಳಗಾವಿ ಅಧಿವೇಶನ ಮುಗಿದ ಬಳಿಕ ಸಂಪುಟ ವಿಸ್ತರಣೆ ಎಂದು ಸಿಎಂ ಸಿದ್ದರಾಮಯ್ಯ ಈಗಾಗಲೇ ಘೋಷಣೆ ಮಾಡಿದ್ದಾರೆ.

ಕೋಲಾರ ಜಿಲ್ಲೆಯ ಯಾರಿಗೂ ಸಚಿವ ಸ್ಥಾನ ನೀಡದಿರುವ ಹಿನ್ನಲೆಯಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡುವಾಗ ರಮೇಶ್ ಕುಮಾರ್ ಅವರಿಗೆ ಅವಕಾಶ ದೊರೆಯಬಹುದು ಎಂಬುದು ಸದ್ಯದ ಲೆಕ್ಕಾಚಾರ. ಅಂದಹಾಗೆ ಖಾಲಿ ಇರುವ ನಾಲ್ಕರಲ್ಲಿ ಒಂದು ಸ್ಥಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆಕಾಂಕ್ಷಿಯಾಗಿದ್ದಾರೆ. ಉಳಿದ ಮೂರು ಸ್ಥಾನದ ಮೇಲೆ ಆರಕ್ಕೂ ಹೆಚ್ಚು ಶಾಸಕರು ಕಣ್ಣೀಟ್ಟಿದ್ದಾರೆ.

English summary
The Congress leaders in Kolar district were disappointed that none of the MLAs from Kolar got ministerial berths. But now Srinivasapur MLA K.R. Ramesh Kumar may get minister post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X