• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಮುಲುಗೆ 'ರೌಡಿ ಥರಹ ಇದ್ದೀಯಾ' ಎಂದಿದ್ರು ಸುಷ್ಮಾ ಸ್ವರಾಜ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 10: ವಿಧಾನಸಭೆ ಅಧಿವೇಶನದ ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಕ ನಿರ್ಣಯ ಅಂಗೀಕರಿಸುವ ವೇಳೆ ಮಾತನಾಡಿದ ಶ್ರೀರಾಮುಲು ಸುಷ್ಮಾ ಸ್ವರಾಜ್ ಅವರ ಕುರಿತು ಮಾತನಾಡುತ್ತಾ ಭಾವುಕರಾದರು.

ಸುಷ್ಮಾ ಸ್ವರಾಜ್ ಅವರನ್ನು ಅಮ್ಮ ಎಂದೇ ಸಂಭೋದಿಸಿದ ಶ್ರೀರಾಮುಲು, ಸುಷ್ಮಾ ಸ್ವರಾಜ್ ಹಾಗೂ ರಾಮುಲು ಅವರ ನಡುವೆ ಇದ್ದ ಸಲುಗೆಯ ಬಗ್ಗೆಯೂ ಮಾತನಾಡಿದರು.

LIVE: ರೇವಣ್ಣ ನನಗೂ ಒಂದು ನಿಂಬೆಹಣ್ಣು ಕೊಟ್ಟುಬಿಡು: ಸಿದ್ದರಾಮಯ್ಯLIVE: ರೇವಣ್ಣ ನನಗೂ ಒಂದು ನಿಂಬೆಹಣ್ಣು ಕೊಟ್ಟುಬಿಡು: ಸಿದ್ದರಾಮಯ್ಯ

ರಾಮುಲು ಅವರು ಲೋಕಸಭೆ ಚುನಾವಣೆಗೆ ಬಳ್ಳಾರಿಯಿಂದ ಸ್ಪರ್ಧೆ ಮಾಡಿದಾಗ ನಾನೂ ಚುನಾವಣೆಗೆ ಸ್ಪರ್ಧಿಸಿದ್ದೆ ಇಬ್ಬರೂ ಸೋತೆವು ನಾನು ಅಳುತ್ತಿದ್ದೆ ಆದರೆ ಅವರು ನನಗೆ ಧೈರ್ಯ ತುಂಬಿದರು ಮತ್ತು ನನ್ನನ್ನು ಮಗನೆಂದೇ ಸ್ವೀಕರಿಸಿದರು ಎಂದು ರಾಮುಲು ಹೇಳಿದರು.

'ನಾನಾಗ ಉದ್ದುದ್ದ ಕೂದಲು ಬಿಟ್ಟು ಒರಟಾಗಿದ್ದೆ, ಆದರೆ ತಾಯಿ ಸುಷ್ಮಾ ಸ್ವರಾಜ್ ನನ್ನನ್ನು ಬೈದರು, ''ನೋಡಲು ರೌಡಿ ರೀತಿ ಕಾಣುತ್ತಿದ್ದೀಯಾ, ಮೊದಲು ಕೂದಲು ಕತ್ತರಿಸಿಕೋ'' ಎಂದರು' ಎಂದು ನೆನಪು ಮಾಡಿಕೊಂಡರು.

ಜನಾರ್ದನ ರೆಡ್ಡಿ ಹಾಗೂ ತಮ್ಮನ್ನು ಬಹುವಾಗಿ ನಂಬಿದ್ದರು ಮತ್ತು ಮಕ್ಕಳೆಂದೇ ಪರಿಗಣಿಸಿದ್ದರು. ಬಳ್ಳಾರಿ ಚುನಾವಣೆ ಮುಗಿದ ನಂತರ ಸತತವಾಗಿ ಎಂಟು ವರ್ಷಗಳ ಕಾಲ ಅವರು ಬಳ್ಳಾರಿಗೆ ಲಕ್ಷ್ಮೀ ಪೂಜೆಗೆ ಆಗಮಿಸಿದ್ದರು ಎಂದರು.

English summary
Minister Sriramulu rememberd late Sushma Swaraj in assembly today. He said Sushma Swaraj once said him he looks like rowdy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X