ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾ ಸ್ಫೋಟ: ಇನ್ನೂ ಪತ್ತೆಯಾಗದ ಇಬ್ಬರು ಕನ್ನಡಿಗರು

|
Google Oneindia Kannada News

ಬೆಂಗಳೂರು, ಏಪ್ರಿಲ್ 22: ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಕನ್ನಡಿಗರ ಸಂಖ್ಯೆ ಆರಕ್ಕೆ ಏರಿದೆ ಎನ್ನಲಾಗಿದೆ. ಕೆಲವು ಶವಗಳ ಗುರುತು ಸಿಗದ ಕಾರಣ, ಈ ಸಂಖ್ಯೆ ಹೆಚ್ಚುವ ಸಾಧ್ಯತೆಯೂ ಇದೆ.

ಪ್ರವಾಸಕ್ಕೆಂದು ತೆರಳಿದ್ದ ಏಳು ಮಂದಿಯಲ್ಲಿ ಐವರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಬಂದಿದೆ. ಈ ಐವರು ಮಾತ್ರ ಶ್ಯಾಂಗ್ರಿಲಾ ಹೋಟೆಲ್‌ನಲ್ಲಿದ್ದರು. ಆದರೆ, ನಾಲ್ಕು ಮಂದಿಯ ಗುರುತು ಪತ್ತೆಯಾಗಿದೆ. ಇನ್ನೊಬ್ಬರ ಶವ ಯಾರದ್ದೆಂದು ಗೊತ್ತಾಗಿಲ್ಲ. ಉಳಿದ ಇಬ್ಬರು ಕನ್ನಡಿಗರು ಎಲ್ಲಿದ್ದಾರೆ ಎಂಬ ಸುಳಿವು ಕೂಡ ದೊರೆತಿಲ್ಲ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಶ್ರೀಲಂಕಾದಲ್ಲಿ ಎಷ್ಟು ಮಂದಿ ಕನ್ನಡಿಗರಿದ್ದಾರೆ ಎಂಬ ಮಾಹಿತಿ ಇಲ್ಲ. ಹೆಚ್ಚಿನ ಪ್ರವಾಸಿಗರು ಅಲ್ಲಿ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮೃತರ ಸಂಬಂಧಿಕರು ಅಲ್ಲಿಗೆ ತೆರಳುತ್ತಿದ್ದಾರೆ. ಇನ್ನಿಬ್ಬರು ಕನ್ನಡಿಗರು ಏನಾಗಿದ್ದಾರೆ ಎನ್ನುವುದು ತಿಳಿದಿಲ್ಲ. ಅಲ್ಲಿನ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದೇವೆ. ರಾಯಭಾರ ಕಚೇರಿ ಅಧಿಕಾರಿ ರಮೇಶ್ ಬಾಬು ಅಲ್ಲಿನ ಮಾಹಿತಿ ನೀಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ತಿಳಿಸಿದ್ದಾರೆ.

ಶ್ರೀಲಂಕಾದಲ್ಲಿ ಜೆಡಿಎಸ್ ಮುಖಂಡರ ನಾಪತ್ತೆ, ಸಾವು: ಕುಮಾರಸ್ವಾಮಿ ಆಘಾತ ಶ್ರೀಲಂಕಾದಲ್ಲಿ ಜೆಡಿಎಸ್ ಮುಖಂಡರ ನಾಪತ್ತೆ, ಸಾವು: ಕುಮಾರಸ್ವಾಮಿ ಆಘಾತ

ಈ ನಡುವೆ ರಾಯಭಾರ ಕಚೇರಿಯೊಂದಿಗೆ ಸಮನ್ವಯ ಸಾಧಿಸುವ ಸಲುವಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಈ ಸಂಬಂಧ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

ನಾಲ್ವರ ಸಾವು ದೃಢ

ಕೊಲಂಬೋ ಸರಣಿ ಬಾಂಬ್ ಸ್ಫೋಟದ ಸಂದರ್ಭದಲ್ಲಿ ಕಾಣೆಯಾಗಿದ್ದ ರಾಜ್ಯದ ಏಳು ಜನರಲ್ಲಿ ನಾಲ್ಕು ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಇದು ಅತ್ಯಂತ ದುಃಖಕರ ಸಂಗತಿ. ಮೃತರನ್ನು ಲಕ್ಷ್ಮಣ ಗೌಡ ರಮೇಶ್, ಕೆ.ಎಂ. ಲಕ್ಷ್ಮೀನಾರಾಯಣ, ಎಂ. ರಂಗಪ್ಪ ಹಾಗೂ ಕೆ.ಜಿ. ಹನುಮಂತರಾಯಪ್ಪ ಎಂದು ಗುರುತಿಸಲಾಗಿದೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.

ಶ್ರೀಲಂಕಾ ಸರಣಿ ಬಾಂಬ್ ಸ್ಫೋಟ: ಇನ್ನಿಬ್ಬರು ಕನ್ನಡಿಗರು ಸಾವುಶ್ರೀಲಂಕಾ ಸರಣಿ ಬಾಂಬ್ ಸ್ಫೋಟ: ಇನ್ನಿಬ್ಬರು ಕನ್ನಡಿಗರು ಸಾವು

ಮೂವರು ಪತ್ತೆಯಾಗಿಲ್ಲ

ಹೆಚ್.ಶಿವಕುಮಾರ್, ಎ. ಮಾರೇಗೌಡ ಹಾಗೂ ಹೆಚ್. ಪುಟ್ಟರಾಜು ಅವರು ಇನ್ನೂ ಪತ್ತೆಯಾಗಿಲ್ಲ. ಮುಖ್ಯ ಕಾರ್ಯದರ್ಶಿಗಳ ಕಚೇರಿಯು ದೆಹಲಿ ಕರ್ನಾಟಕ ಭವನ ಹಾಗೂ ಮೃತರ ಹಾಗೂ ಕಾಣೆಯಾದವರ ಕುಟುಂಬಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಇವರೆಲ್ಲರೂ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರಾಗಿದ್ದು ಶ್ರೀಲಂಕಾ ಪ್ರವಾಸದಲ್ಲಿದ್ದರು ಎಂದು ತಿಳಿಸಿದ್ದಾರೆ.

ಏಳು ಮಂದಿ ಜೆಡಿಎಸ್ ಮುಖಂಡರು ಶ್ರೀಲಂಕಾದಲ್ಲಿ ನಾಪತ್ತೆ ? ಏಳು ಮಂದಿ ಜೆಡಿಎಸ್ ಮುಖಂಡರು ಶ್ರೀಲಂಕಾದಲ್ಲಿ ನಾಪತ್ತೆ ?

Array

ಅಘಾತ ಭರಿಸುವ ಶಕ್ತಿ ನೀಡಲಿ

ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬದ ಬೆಂಬಲಕ್ಕೆ ನಾವಿದ್ದು, ಭಗವಂತನು ಅವರಿಗೆ ಈ ಆಘಾತ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಶ್ರೀಲಂಕಾದಲ್ಲಿ ಇಲ್ಲಿ ತನಕ ಸಂಭವಿಸಿದ ಭೀಕರ ಸ್ಫೋಟಗಳು ಶ್ರೀಲಂಕಾದಲ್ಲಿ ಇಲ್ಲಿ ತನಕ ಸಂಭವಿಸಿದ ಭೀಕರ ಸ್ಫೋಟಗಳು

ಐದನೇ ಶವ ಗುರುತಿಸಲು ಪ್ರಯತ್ನ

ಮುಖ್ಯಕಾರ್ಯದರ್ಶಿಗಳು ಶ್ರೀಲಂಕಾದಲ್ಲಿನ ಭಾರತೀಯ ರಾಯಭಾರ ಕಚೇರಿಯ ಹೈಕಮಿಷನರ್ ಅವರೊಂದಿಗೆ ಮಾತನಾಡಿದ್ದಾರೆ.ರಾಜ್ಯದ ಪ್ರವಾಸಿಗರ ತಂಡವೊಂದು ಕ್ಯಾಂಡಿಯಿಂದ ಹಿಂದಿರುಗಲಿದೆ. ಪತ್ತೆಯಾಗಿರುವ 5ನೆ ಶವ ಗುರುತಿಸಲು ಅವರು ನೆರವಾಗುವರು. ಪತ್ತೆಯಾಗದ ಇನ್ನಿಬ್ಬರು ವ್ಯಕ್ತಿಗಳ ಮಾಹಿತಿ ದೊರೆತ ಕೂಡಲೇ ತಿಳಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಅಂಜುಮ್ ಪರ್ವೇಜ್ ನೋಡಲ್ ಅಧಿಕಾರಿ

ಶ್ರೀಲಂಕಾ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಅವರನ್ನು ನೋಡಲ್ ಅಧಿಕಾರಿಯಾಗಿ ಮುಖ್ಯ ಕಾರ್ಯದರ್ಶಿಗಳು ನೇಮಕ ಮಾಡಿದ್ದು ಅವರು ಶ್ರೀಲಂಕಾದಲ್ಲಿರುವ ಭಾರತೀಯ ರಾಯಭಾರ ಕಛೇರಿಯೊಂದಿಗೆ ಸಮನ್ವಯ ನಡೆಸುತ್ತಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

English summary
Sri Lanka Series bomb blast: Chief Minister HD Kumaraswamy said that, the chief secretary has spoken to High Commissioner of India in Sri Lanka. They will help to indentify the fifth body.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X