ಕೊಡಗು ಜಿಲ್ಲಾಧಿಕಾರಿಯಾಗಿ ಶ್ರೀವಿದ್ಯಾ ನೇಮಕ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 13: ಕರ್ನಾಟಕ ಸರ್ಕಾರ 9 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಬುಧವಾರ ಮಧ್ಯಾಹ್ನ (ಡಿಸೆಂಬರ್ 13) ಆದೇಶ ಹೊರಡಿಸಿದೆ.

ಬಾಗಲಕೋಟೆ, ಕೊಡಗಿಗೆ ಹೊಸ ಜಿಲ್ಲಾಧಿಕಾರಿಗಳ ನೇಮಕವಾಗಿದೆ, ಕಲಬುರಗಿಯ ಪಾಲಿಕೆ ಆಯುಕ್ತ ಸುನೀಲ್ ಕುಮಾರ್ ವರ್ಗಾವಣೆ ಪ್ರಮುಖವಾಗಿದೆ.

2010 ಬ್ಯಾಚಿನ ಕೇರಳ ಮೂಲದ ಕರ್ನಾಟಕ ಐಎಎಸ್ ಅಧಿಕಾರಿ ಶ್ರೀವಿದ್ಯಾ ಪಿ. ಐ ಅವರು ಕೊಡಗಿನ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಸದ್ಯ ಮೂಲ ಸೌಕರ್ಯ ಅಭಿವೃದ್ಧಿ ವಿಭಾಗದಲ್ಲಿ ಉಪ ಕಾರ್ಯದರ್ಶಿಯಾಗಿರುವ ಶ್ರೀವಿದ್ಯಾ ಅವರು ಈ ಮುಂಚೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಕಾರ್ಯ ನಿರ್ವಹಿಸಿದ್ದರು.

Sreevidya is new DC of Kodagu Check out IAS transfer updates

ವರ್ಗಾವಣೆಯಾದ ಅಧಿಕಾರಿಗಳು:
ಅಧಿಕಾರಿಗಳ ಹೆಸರು- ಎಲ್ಲಿಂದ -ಎಲ್ಲಿಗೆ?

* ಮೇಘಣ್ಣವರ್ ಪಿ.ಎ ಬಾಗಲಕೋಟೆ ಡಿಸಿ ಸ್ಥಾನದಿಂದ ಪ್ರಾದೇಶಿಕ ಆಯುಕ್ತರು, ಮೈಸೂರು.
* ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಾ ಕೊಡಗು ಡಿಸಿ ಸ್ಥಾನದಿಂದ ಹಟ್ಟಿ ಗೋಲ್ಡ್ ಕಂಪನಿ ಲಿಮಿಟೆಡ್ ನ ಬೆಂಗಳೂರು ಕಚೇರಿಯ ನಿರ್ದೇಶಕ ಸ್ಥಾನ
* ಶ್ರೀಮತಿ ಸುಷ್ಮಾ ಗೊಡ್ಬೊಲೆ, ರಾಷ್ಟ್ರೀಯ ಗ್ರಾಮೀಣ ಅಭಿವೃದ್ದಿ ಮಿಷನ್ ನಿಂದ ಮುನ್ಸಿಪಲ್ ವ್ಯವಹಾರ ಜಂಟಿ ನಿರ್ದೇಶಕಿ(ಆಡಳಿತ)
* ಶ್ರೀವಿದ್ಯಾ ಪಿ.ಐ ಅವರು ಮೂಲ ಸೌಕರ್ಯ ಅಭಿವೃದ್ಧಿ ವಿಭಾಗದಲ್ಲಿ ಉಪ ಕಾರ್ಯದರ್ಶಿ ಸ್ಥಾನದಿಂದ ಜಿಲ್ಲಾಧಿಕಾರಿ ಕೊಡಗು.

* ವಿನೋತ್ ಪ್ರಿಯ ಆರ್, ರಿಯಲ್ ಎಸ್ಟೇಟ್ ರೆಗ್ಯುಲೆಟರಿ ಅಥಾರಿಟಿ, ವಸತಿ ಇಲಾಖೆಯಿಂದ ಬೆಂಗಳುರು ನಗರ ಜಿಲ್ಲೆ ವಿಶೇಷ ಜಿಲ್ಲಾಧಿಕಾರಿಯಾಗಿ ನೇಮಕ.
* ಶಾಂತರಾಮ್ ಕೆ.ಜಿ, ತುಮಕೂರು ಜಿಲ್ಲೆ ಸಿಇಒ ಸ್ಥಾನದಿಂದ ಬಾಗಲಕೋಟೆ ಜಿಲ್ಲಾಧಿಕಾರಿ
* ಪೊಮ್ಮಲ ಸುನೀಲ್ ಕುಮಾರ್ ಕಲಬರಗಿ ಪಾಲಿಕೆ ಆಯುಕ್ತ ಸ್ಥಾನದಿಂದ ಕರ್ನಾಟಕ ಮುನ್ಸಿಪಲ್ ಡೇಟಾ ಸೊಸೈಟಿ ಸುಧಾರಣೆ ವಿಭಾಗದ ಜಂಟಿ ನಿರ್ದೇಶಕ.
* ಅನ್ನೀಸ್ ಕಣ್ಮಣಿ ಜಾಯ್ ಕರ್ನಾಟಕ ಭವನ, ನವದೆಹಲಿ ಸ್ಥಾನಿಕ ಆಯುಕ್ತ ಸ್ಥಾನದಿಂದ ತುಮಕೂರು ಜಿಲ್ಲಾ ಪಂಚಾಯಿತಿ ಸಿಇಒ.
* ಅನಿರುಧ್ ಶ್ರವಣ್ ಅವರು ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯಿಂದ ಸುಷ್ಮಾ ಗೋಡ್ಬೊಲೆ ಹೊಂದಿದ್ದ ಹುದ್ದೆಗೆ ನೇಮಕ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka government has transferred 9 IAS officers including Sreevidya P.I to Kodagu as Deputy Commissioner vice Richard Vincent D'Souza.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ