• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀನಿವಾಸ ಗೌಡ ವಿರುದ್ಧ ಎಸ್‌.ಆರ್.ವಿಶ್ವನಾಥ್‌ರಿಂದ ಹಕ್ಕುಚ್ಯುತಿ ಮಂಡನೆ

|

ಬೆಂಗಳೂರು, ಜುಲೈ 19 : ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ಚರ್ಚೆ ವೇಳೆ ಆಪರೇಷನ್ ಕಮಲದ ವಿಚಾರ ಪ್ರಸ್ತಾಪವಾಗಿದೆ. ಬಿಜೆಪಿ ಶಾಸಕರ ವಿರುದ್ಧ ಆರೋಪ ಮಾಡಿರುವ ಜೆಡಿಎಸ್‌ನ ಶ್ರೀನಿವಾಸ ಗೌಡ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡಲು ತೀರ್ಮಾನಿಸಲಾಗಿದೆ.

ಯಲಹಂಕ ಕ್ಷೇತ್ರದ ಶಾಸಕ ಬಿಜೆಪಿ ಶಾಸಕ ಎಸ್. ಆರ್. ವಿಶ್ವನಾಥ್ ಸ್ಪೀಕರ್ ರಮೇಶ್ ಕುಮಾರ್‌ಗೆ ವಿಧಾನಸಭೆಯ ಕಾರ್ಯ ವಿಧಾನ ಹಾಗೂ ನಿಯಮ 192ರ ಅಡಿಯಲ್ಲಿ ಹಕ್ಕುಚ್ಯುತಿ ಮಂಡನೆಗೆ ಅವಕಾಶ ಕೋರಿದ್ದಾರೆ.

ಹಕ್ಕು ಚ್ಯುತಿ ಎಂದರೇನು?, ಪ್ರಮುಖ ಅಂಶಗಳು

ಶುಕ್ರವಾರ ವಿಧಾನಸಭೆಯ ಅಧಿವೇಶನದಲ್ಲಿ ಮಖ್ಯಮಂತ್ರಿಗಳು ಮಂಡಿಸಿದ್ದ ಪ್ರಸ್ತಾಪದ ಮೇಲೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ ಎಸ್. ಆರ್. ವಿಶ್ವನಾಥ್ ಅವರು ಬಿಜೆಪಿ ಸೇರಿದರೆ 5 ಕೋಟಿ ಹಣವನ್ನು ನೀಡುವುದಾಗಿ ಆಮಿಷವೊಡ್ಡಿದ್ದರು ಎಂದು ಆರೋಪಿಸಿದರು.

ರೆಬಲ್ ಶಾಸಕರಿಗೆ ವಿಪ್ ಜಾರಿ ವಿಚಾರ : ಸುಪ್ರೀಂಗೆ ಮೆಟ್ಟಿಲೇರಿದ ಕಾಂಗ್ರೆಸ್‌

ಈ ವಿಚಾರಕ್ಕೆ ಸಂಬಂಧಿಸಿದಂತೆ ಕೋಲಾರ ಶಾಸಕರ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಅವಕಾಶ ನೀಡಬೇಕು ಎಂದು ಎಸ್. ಆರ್. ವಿಶ್ವನಾಥ್ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದ ವಿವರ ಇಲ್ಲಿದೆ.....

ವಿಶ್ವಾಸಮತ ಯಾಚನೆಗೆ ಸಿಎಂಗೆ ಹೊಸ ಡೆಡ್‌ಲೈನ್ ನೀಡಿದ ರಾಜ್ಯಪಾಲರು

ಹಿಂದೆಯೂ ವಿಚಾರ ಪ್ರಸ್ತಾಪಿಸಿದ್ದರು

ಹಿಂದೆಯೂ ವಿಚಾರ ಪ್ರಸ್ತಾಪಿಸಿದ್ದರು

ತಮ್ಮ ಪತ್ರದಲ್ಲಿ ಶಾಸಕ ಎಸ್. ಆರ್. ವಿಶ್ವನಾಥ್, ಸದರಿ ಶಾಸಕರು ಇದೇ ವಿಚಾರವನ್ನು ಈ ಹಿಂದೆಯೂ ಪ್ರಸ್ತಾಪಸಿದ್ದರು. "ನನಗೆ 30 ಕೋಟಿ ರೂ. ಆಮಿಷವೊಡ್ಡಿದ್ದರು. ನಾನು ಬಾತ್‌ ರೂಂಗೆ ಹೋಗಿದ್ದಾಗ ಬಿಜೆಪಿ ಮುಖಂಡರು ನನ್ನ ಮನೆಯಲ್ಲಿ 5 ಕೋಟಿ ರೂ.ಗಳನ್ನು ಇಟ್ಟು ಹೋಗಿದ್ದರು" ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಆಗ ಸರ್ಕಾರ ಈ ಬಗ್ಗೆ ಎಸಿಬಿ ತನಿಖೆಗೆ ಸೂಚನೆ ನೀಡಿತ್ತು.

ಎಸಿಬಿ ವಿಚಾರಣೆ ನಡೆದಿತ್ತು

ಎಸಿಬಿ ವಿಚಾರಣೆ ನಡೆದಿತ್ತು

ಎಸಿಬಿ ಅಧಿಕಾರಿಗಳು ಸದರಿ ಶಾಸಕರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದ್ದರು. ಆ ಪ್ರಕಾರ ಹಲವು ಬಾರಿ ವಿಚಾರಣೆಗೆ ಹಾಜರಾದ ಶಾಸಕರು ಅಂತಿಮವಾಗಿ ದಿನಾಂಕ 18/3/2019ರಂದು ವಿಚಾರಣೆಗೆ ಹಾಜರಾಗಿ "ಮಾಧ್ಯಮಗಳ ಮುಂದೆ ನಾನು ಸುಳ್ಳು ಹೇಳಿಕೆ ನೀಡಿದ್ದೆ ಎಂದು ಎಸಿಬಿ ಅಧಿಕಾರಿಗಳ ಮುಂದೆ ಅಧಿಕೃತವಾಗಿ ಹೇಳಿಕೆ ದಾಖಲಿಸಿರುತ್ತಾರೆ" ಎಂದು ತಿಳಿದುಬಂದಿದೆ.

ಏಕಾಏಕಿ ಮತ್ತೆ ಆರೋಪ

ಏಕಾಏಕಿ ಮತ್ತೆ ಆರೋಪ

ಎಸಿಬಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದ ಶಾಸಕರು ಇಂದು ಅಧಿವೇಶನದಲ್ಲಿ ಏಕಾಏಕಿ ನನ್ನ ಮೇಲೆ ಆರೋಪ ಮಾಡಿದ್ದಾರೆ. ಯಾವುದೇ ದಾಖಲೆ ಇಲ್ಲದೆ ನನ್ನ ಮೇಲೆ ಸುಳ್ಳು ಆರೋಪ ಮಾಡುವ ಮೂಲಕ ನನ್ನ ಘನತೆಗೆ ಮತ್ತು ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಿದ್ದಾರೆ.

ನನ್ನ ಹಕ್ಕಿಗೆ ಚ್ಯುತಿ ಬಂದಿದೆ

ನನ್ನ ಹಕ್ಕಿಗೆ ಚ್ಯುತಿ ಬಂದಿದೆ

ಶಾಸಕರು ಅಧಿವೇಶನದಲ್ಲೇ ಈ ರೀತಿ ನನ್ನ ಘನತೆಗೆ ಮತ್ತು ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಿರುತ್ತಾರೆ. ಶಾಸಕರು ಅಧಿವೇಶನದಲ್ಲೇ ಈ ರೀತಿ ಯಾವುದೇ ಆಧಾರ ಇಲ್ಲದೆ ಸುಳ್ಳು ಆರೋಪಗಳನ್ನು ಮಾಡಿರುವುದರಿಂದ ಶಾಸಕನಾಗಿ ನನ್ನ ಹಕ್ಕಿಗೆ ಚ್ಯುತಿ ಬಂದಿದೆ. ಅಧಿವೇಶನದಲ್ಲಿ ನಾನು ಶಾಸಕನಾಗಿ ನನ್ನ ಕರ್ತವ್ಯಗಳನ್ನು ಪಾಲಿಸಲು ಇದರಿಂದ ನಿರ್ಬಂಧಿಸಿದಂತಾಗಿದೆ. ಆದ್ದರಿಂದ, ಸದರಿ ಕೋಲಾರ ಶಾಸಕರ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಅವಕಾಶ ನೀಡಬೇಕೆಂದು ಕೋರುತ್ತೇನೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Yelahanka BJP MLA S.R.Vishvanath will go for privilege motion against Kolar JDS MLA Srinivas Gowda who alleged that as part of Operation Kamala BJP leaders including Vishvanath had lured him by offering Rs 5 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more