ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ನಾಯಕತ್ವ ಬದಲಾವಣೆ ವಿಚಾರ: ಬಿಜೆಪಿ ನಾಯಕರು ಏನಂದ್ರು?

|
Google Oneindia Kannada News

ಬೆಂಗಳೂರು, ಮೇ 26: ಒಂದೊಡೆ ಕೊರೊನಾ ಸೋಂಕು ರಾಜ್ಯದಲ್ಲಿ ತಾಂಡವವಾಡುತ್ತಿದೆ, ಇನ್ನೊಂದೆಡೆ ರಾಜ್ಯದ ನಾಯಕತ್ವ ಬದಲಾವಣೆ ಮಾತು ಕೇಳಿಬರುತ್ತಿದೆ.

ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಾರೆ, ಅದಕ್ಕಾಗಿಯೇ ಜೂನ್ 5 ರಂದು ಶಾಸಕರ ಸಭೆ ಕರೆದಿದ್ದಾರೆ ಎನ್ನುವ ಗಾಳಿ ಸುದ್ದಿ ಹರಿದಾಡುತ್ತಿದೆ.

ನಾಯಕತ್ವ ಬದಲಾವಣೆ ಗಾಳಿ ಸುದ್ದಿ ಬೆನ್ನಲ್ಲೇ, ಬಿಜೆಪಿ ಶಾಸಕರ ಸಭೆ ಕರೆದ ಸಿಎಂ ಯಡಿಯೂರಪ್ಪನಾಯಕತ್ವ ಬದಲಾವಣೆ ಗಾಳಿ ಸುದ್ದಿ ಬೆನ್ನಲ್ಲೇ, ಬಿಜೆಪಿ ಶಾಸಕರ ಸಭೆ ಕರೆದ ಸಿಎಂ ಯಡಿಯೂರಪ್ಪ

ಆದರೆ ಬಿಜೆಪಿ ನಾಯಕರು ಯಾರೂ ಕೂಡ ಈ ಬಗ್ಗೆ ಮಾತನಾಡಲು ಇಷ್ಟ ಪಡುತ್ತಿಲ್ಲ, ಇದೆಲ್ಲಾ ಊಹಾಪೋಹ, ಕೊರೊನಾ ಸಂದರ್ಭದಲ್ಲಿ ಇವೆಲ್ಲಾ ಪ್ರಸ್ತುತ ಅಲ್ಲ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.

ಈ ವಿಚಾರದ ಕುರಿತು ಹಲವು ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ, ಏನು ಹೇಳಿದ್ದಾರೆ ಎಂದು ತಿಳಿಯಲು ಮುಂದೆ ಓದಿ..

 ಈ ವಿಚಾರ ಪ್ರಸ್ತುತ ಅಲ್ಲ

ಈ ವಿಚಾರ ಪ್ರಸ್ತುತ ಅಲ್ಲ

ಕೊರೊನಾ ಪಿಡುಗಿನ ಸಂದರ್ಭದಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಪ್ರಸ್ತುತ ಅಲ್ಲ ಎಂದು ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಭೀಕರವಾಗಿದೆ, ಈ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಪ್ರಸ್ತುತ ಅಲ್ಲ, ಸಿಎಂ ಖುರ್ಚಿ ಖಾಲಿ ಇಲ್ಲ, ಊಹಾಪೋಹಗಳ ಮಾತಿಗೆ ಪ್ರತಿಕ್ರಿಯೆ ನೀಡುವುದಿಲ್ಲ, ಶಾಸಕಾಂಗ ಸಭೆ ಕರೆದಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.
ಸಾಮಾನ್ಯರಿಗೆ ಅನುಕೂಲ ಆಗಲಿ ಎಂದು ಕೋವಿಡ್ ಕೇರ್ ಕೇಂದ್ರವನ್ನು ತೆರೆಯಲಾಗಿದೆ, ಮನೆಗಳಲ್ಲಿ ಐಸೊಲೇಟ್ ಆಗಲು ಅನುಕೂಲ ಇಲ್ಲದೇ ಇರುವವರು ಕೋವಿಡ್‌ ಕೇರ್‌ ಸೆಂಟರ್‌ಗೆ ಬರಬಹುದು ಎಂದಿದ್ದಾರೆ.

 ನಾಯಕತ್ವ ಬದಲಾವಣೆ ಸುದ್ದಿ ಅಧಿಕೃತವಲ್ಲ

ನಾಯಕತ್ವ ಬದಲಾವಣೆ ಸುದ್ದಿ ಅಧಿಕೃತವಲ್ಲ

ನಾಯಕತ್ವ ಬದಲಾವಣೆಗೆ ಸಂಬಂಧಿಸಿದ ಯಾವುದೇ ಸುದ್ದಿ ಅಧಿಕೃತವಲ್ಲ, ಎಲ್ಲಾ ಊಹಾಪೋಹಗಳು, ಊಹಾಪೋಹಗಳಿಗೆ ಉತ್ತರ ಕೊಡಲಾಗುವುದಿಲ್ಲ, ಸಿಎಂ ಸ್ಥಾನಕ್ಕೆ ಯಾರ ಹೆಸರಿದೆಯೋ ಅವರನ್ನು ಕೇಳಿ ಎಂದು ಹೇಳಿದರು.

 ಯಡಿಯೂರಪ್ಪ ನಮ್ಮ ನಾಯಕರು

ಯಡಿಯೂರಪ್ಪ ನಮ್ಮ ನಾಯಕರು

ನನಗೆ ಯಡಿಯೂರಪ್ಪನವರೇ ಸರ್ವ ನಾಯಕರು. ಬೊಮ್ಮನಹಳ್ಳಿಯಲ್ಲಿ ಶಾಸಕ ಸತೀಶ್ ರೆಡ್ಡಿ ಹೇಳಿಕೆ. ನಾನು ದೆಹಲಿಗೆ ಹೋಗಿದ್ದೇನೆ ಎನ್ನುವುದು ಸುಳ್ಳು. ಸಿ.ಎಂ ಬದಲಾವಣೆ ವಿಚಾರದಲ್ಲಿ ನನ್ನ ಪಾತ್ರ ಇಲ್ಲ. ಯಡಿಯೂರಪ್ಪನವರು ಶಕ್ತಿವಂತರಾಗಿದ್ದಾರೆ. ಅವರೇ ನಮ್ಮ ಮುಖ್ಯಮಂತ್ರಿಗಳು. ನಾನು ನನ್ನ ಸ್ನೇಹಿತರೊಂದಿಗೆ ದೆಹಲಿಗೆ ಹೋಗಿದ್ದೇನೆ ಎನ್ನುವುದರಲ್ಲಿ ಸತ್ಯಾಂಶ ಇಲ್ಲ. ನಾನು ನನ್ನ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇನೆ. ಇದು ಕರೋನಾ ಸಂದರ್ಭ ಜನರ ಸಮಸ್ಯೆಗೆ ಹೇಳಬೇಕು. ಇಂತಹ ಸಮಯದಲ್ಲಿ ಸಿಎಂ ಬದಲಾವಣೆ ವಿಚಾರ ಸರಿಯಲ್ಲ. ನನ್ನ ಸ್ನೇಹಿತರು ಎಲ್ಲಾ ಶಾಸಕರು ಇದ್ದಾರೆ. ಅವರು ಡೆಲ್ಲಿಗೆ ಹೋದರೆ ನಾನು ಹೋಗಿದ್ದೇನೆ ಎನ್ನುವುದು ಎಷ್ಟು ಸರಿ??. ಮುಖ್ಯಮಂತ್ರಿ ಬದಲಾವಣೆ ವಿಚಾರ ನಮ್ಮ ಮುಂದೆ ಇಲ್ಲ. ಹಾಗೇನಾದರೂ ಇದ್ದರೆ ನಮ್ಮ ಹೈಕಮಾಂಡ್ ನೋಡಿಕೊಳ್ಳುತ್ತಾರೆ. ಯಡಿಯೂರಪ್ಪನವರು ಉತ್ತಮ ಆಡಳಿತವನ್ನು ನೀಡುತ್ತಿದ್ದಾರೆ ಎಂದು ಶಾಸಕ ಸತೀಶ್ ರೆಡ್ಡಿ ಹೇಳಿದ್ದಾರೆ.

 ಈ ಸಂದರ್ಭದಲ್ಲಿ ಬದಲಾವಣೆ ಬೇಡ ಎಂಬ ಮಾತು

ಈ ಸಂದರ್ಭದಲ್ಲಿ ಬದಲಾವಣೆ ಬೇಡ ಎಂಬ ಮಾತು

ಕೋವಿಡ್ ಸಂದರ್ಭದಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬೇಡ ಎನ್ನುವ ಮಾತು ಕೂಡ ಕೇಳಿಬಂದಿದೆ, ಕೊರೊನಾ ಕಡಿಮೆಯಾದ ಬಳಿಕ ಮತ್ತೆ ಚರ್ಚೆ ಏಳುವ ಸಾಧ್ಯತೆ ಇದೆ.

English summary
BJP Leaders Reactions On Speculations On Leadership Change In Karnataka,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X